How to Make Tasty Tea: ಟೀ ಮಾಡುವಾಗ ಹೆಚ್ಚು ಟೀಪುಡಿ ಸೇರಿಸುವುದರಿಂದ ರುಚಿ ಕಹಿಯಾಗುತ್ತದೆ. ತುಂಬಾ ಕಡಿಮೆ ಸೇರಿಸುವುದರಿಂದ ಅದರ ಬಣ್ಣ, ಪರಿಮಳ ಮತ್ತು ರುಚಿ ಎಲ್ಲವೂ ಕಡಿಮೆಯಾಗುತ್ತದೆ. ಆದ್ದರಿಂದ ಟೀ ರುಚಿ ರುಚಿಯಾಗಿ ಬರಲು ಏನು ಮಾಡಬೇಕು ನೋಡೋಣ...
ಭಾರತೀಯರಿಗೆ ಟೀ ಬಗ್ಗೆ ಇರುವ ವ್ಯಾಮೋಹವನ್ನ ಬಿಡಿಸಿ ಹೇಳಬೇಕಿಲ್ಲ. ಹೆಚ್ಚು ಕಡಿಮೆ ಪ್ರತಿಯೊಬ್ಬರೂ ತಮ್ಮ ದಿನವನ್ನು ಒಂದು ಕಪ್ ಬಿಸಿ ಟೀಯೊಂದಿಗೆ ಪ್ರಾರಂಭಿಸುವುದು. ಆದರೆ ಇಲ್ಲೊಂದು ವಿಶೇಷವಿದೆ. ಅದೇನೆಂದರೆ ಒಬ್ಬೊಬ್ಬರು ಒಂದೊಂದು ರೀತಿ ಸ್ಟೈಲ್‌ನಲ್ಲಿ ಟೀ ಮಾಡ್ತಾರೆ. ಕೆಲವರು ಸ್ಟ್ರಾಂಗ್ ಆಗಿ, ಮತ್ತೆ ಕೆಲವರು ಮೈಲ್ಡ್ ಆಗಿ, ಹಾಲಿನ ಫ್ಲೇವರ್ ಬಾಯಿಗೆ ಸಿಗುವ ಹಾಗೆ.. ಇನ್ನೂ ಅನೇಕರು ನಿರ್ದಿಷ್ಟ ವ್ಯಕ್ತಿ ಮಾಡಿದ ಟೀ ಕುಡಿಯಲು ಮಾತ್ರ ಇಷ್ಟಪಡುವುದಾಗಿ ತಿಳಿಸುತ್ತಾರೆ.
26
ರುಚಿಯಾಗಿ ಬರಲ್ಲ
ಕೆಲವೊಮ್ಮೆ ನಾವು ಇನ್ನೊಬ್ಬರಂತೆ ಟೀ ಮಾಡಲು ಎಷ್ಟೇ ಪ್ರಯತ್ನಿಸಿದರೂ, ಅಷ್ಟು ರುಚಿಯಾಗಿ ಬರುವುದಿಲ್ಲ. ನೀವು ಈ ಪೈಕಿ ಒಬ್ಬರಾಗಿದ್ದರೆ ಟೀ ಸುವಾಸನೆ ಮತ್ತು ರುಚಿ ಅಡಗಿರುವುದೆಲ್ಲಿ ಎಂಬ ಸೀಕ್ರೆಟ್ ಹೇಳಲಿದ್ದೇವೆ. ನೀವೆಲ್ಲಾ ಗಮನಿಸಿರುವ ಹಾಗೆ ಹಾಲಿಗೆ ಅಥವಾ ನೀರಿಗೆ ಹೆಚ್ಚು ಟೀ ಪುಡಿ ಸೇರಿಸುವುದರಿಂದ ಕಹಿಯಾಗುತ್ತದೆ. ಆದರೆ ತುಂಬಾ ಕಡಿಮೆ ಪೌಡರ್ ಸೇರಿಸುವುದರಿಂದ ಬಣ್ಣ, ಸುವಾಸನೆ ಮಂದವಾಗಬಹುದು. ಆದ್ದರಿಂದ, ಒಂದು ಕಪ್ ಟೀಗೆ ಎಷ್ಟು ಟೀ ಪೌಡರ್ ಬಳಸಬೇಕು ಎಂಬುದನ್ನು ನೋಡೋಣ.
36
ಒಂದು ಕಪ್ ಟೀ ಮಾಡುವಾಗ
ಒಂದು ಕಪ್ ಟೀ ಪರ್‌ಫೆಕ್ಟ್ ಆಗಿ ಬರಬೇಕೆಂದರೆ ಒಂದು ಕಪ್ ನೀರು ಅಥವಾ ಹಾಲಿಗೆ ಒಂದು ಟೀಚಮಚ (ಸುಮಾರು ಎರಡು ಗ್ರಾಂ) ಟೀ ಪೌಡರ್ ಸಾಮಾನ್ಯವಾಗಿ ಸೂಕ್ತವೆಂದು ಪರಿಗಣಿಸಲಾಗುತ್ತದೆ. ಇದರಿಂದ ಟೀ ತುಂಬಾ ಸ್ಟ್ರಾಂಗ್ ಅಥವಾ ತುಂಬಾ ಮೈಲ್ಡ್ ಆಗಿರುವುದಿಲ್ಲ ಎಂದು ಕನ್‌ಫರ್ಮ್ ಮಾಡಿಕೊಳ್ಳಬಹುದು. ನೀವು ಸ್ವಲ್ಪ ಹೆಚ್ಚು ಪರಿಮಳವನ್ನು ಬಯಸಿದರೆ ಒಂದೂವರೆ ಟೀ ಚಮಚ ಸೇರಿಸಬಹುದು. ಆದರೆ ಮತ್ತೆ ಹೆಚ್ಚು ಸೇರಿಸುವುದಕ್ಕೆ ಹೋಗಬೇಕಿಲ್ಲ.
ವಿವಿಧ ರೀತಿಯ ಟೀಪೌಡರ್‌ಗೆ ತಕ್ಕಂತೆ ಪ್ರಮಾಣವು ಸ್ವಲ್ಪ ಬದಲಾಗಬಹುದು. ಉದಾಹರಣೆಗೆ, ಅಸ್ಸಾಂ ಟೀ ಹೆಚ್ಚು ರುಚಿಯನ್ನು ಹೊಂದಿರುತ್ತದೆ, ಆದ್ದರಿಂದ ಸ್ವಲ್ಪ ಕಡಿಮೆ ಟೀ ಪೌಡರ್ ಬೇಕಾಗುತ್ತವೆ. ಒಂದು ವೇಳೆ ನೀವು ಡಾರ್ಜಿಲಿಂಗ್ ಟೀ ಸೇವಿಸಿದರೆ, ಉತ್ಕೃಷ್ಟ ಪರಿಮಳಕ್ಕಾಗಿ ನೀವು ಸ್ವಲ್ಪ ಹೆಚ್ಚು ಸೇರಿಸಬಹುದು.
56
ಟೀಪುಡಿಯಲ್ಲಿ ಏನಿದೆ?
ಆರೋಗ್ಯದ ವಿಷಯಕ್ಕೆ ಬಂದರೆ, ಟೀ ಎಲೆಗಳಲ್ಲಿ ಕ್ಯಾಟೆಚಿನ್‌ಗಳು ಮತ್ತು ಥೀಫ್ಲಾವಿನ್‌ಗಳಂತಹ ಉತ್ಕರ್ಷಣ ನಿರೋಧಕಗಳು ಇರುತ್ತವೆ. ಇವು ದೇಹದಲ್ಲಿ ಉರಿಯೂತ ಮತ್ತು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ.
66
ಅಗತ್ಯಕ್ಕೆ ತಕ್ಕಂತೆ ಟೀ ಪೌಡರ್ ಬಳಸಿ
ಲೈಫ್ ಸೈನ್ಸಸ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ನಿಯಮಿತವಾಗಿ ಮತ್ತು ಮಿತವಾಗಿ ಚಹಾ ಕುಡಿಯುವುದರಿಂದ ಹೃದಯದ ಆರೋಗ್ಯ ಸುಧಾರಿಸುತ್ತದೆ, ಜೀರ್ಣಕ್ರಿಯೆ ಸುಧಾರಿಸುತ್ತದೆ ಮತ್ತು ಚಯಾಪಚಯ ಕ್ರಿಯೆ ಹೆಚ್ಚಾಗುತ್ತದೆ. ಆದರೆ ಹೆಚ್ಚು ಟೀ ಪುಡಿ ಸೇರಿಸಿ ಸೇವಿಸುವುದರಿಂದ ಕೆಫೀನ್ ಮತ್ತು ಟ್ಯಾನಿನ್ ಅಂಶ ಹೆಚ್ಚಾಗುತ್ತದೆ. ಇದು ಅಸಿಡಿಟಿ, ಚಡಪಡಿಕೆ ಮತ್ತು ನಿದ್ರಾಹೀನತೆಯಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ ಟೀ ತಯಾರಿಸುವಾಗ ಯಾವಾಗಲೂ ಅಗತ್ಯಕ್ಕೆ ತಕ್ಕಂತೆ ಟೀ ಪೌಡರ್ ಬಳಸಿ.