ಅಡುಗೆ ಮನೆಯಲ್ಲಿ ಅತಿ ಹೆಚ್ಚು ಬಳಕೆಯಾಗುವ ಎಲೆಕ್ಟ್ರಾನಿಕ್ ವಸ್ತುಗಳಲ್ಲಿ ಮಿಕ್ಸಿ, ಗ್ರೈಂಡರ್ ಸೇರಿದೆ. ಪ್ರತಿ ದಿನ ಚಟ್ನಿ, ಸಾಂಬಾರ್ ಸೇರಿದಂತೆ ಆಹಾರ ಪದಾರ್ಥಗಳನ್ನು ರುಬ್ಬಲು ಇದನ್ನು ಬಳಕೆ ಮಾಡ್ತೇವೆ. ನಿರಂತರವಾಗಿ ಇದನ್ನು ಬಳಸೋದ್ರಿಂದ ಮಿಕ್ಸಿ ಬ್ಲೇಡ್ ಮೊಂಡಾಗುತ್ತೆ. ಎಷ್ಟೇ ರುಬ್ಬಿದ್ರೂ ಆಹಾರ ಪದಾರ್ಥ ನುಣ್ಣಗಾಗೋದಿಲ್ಲ. ಇದ್ರಿಂದ ಮೋಟರ್ ಗೆ ಹೆಚ್ಚಿನ ಹೊರೆಯಾಗುವ ಜೊತೆಗೆ ನಿಮ್ಮ ಕೆಲ್ಸ ಕೂಡ ಲೇಟಾಗುತ್ತೆ. ಮಿಕ್ಸಿ ಜಾರ್ ಮೊಂಡಾಗ್ತಿದ್ದಂತೆ ಅದನ್ನು ನಾವೆಲ್ಲ ಮೆಕ್ಯಾನಿಕ್ ಬಳಿ ತೆಗೆದುಕೊಂಡು ಹೋಗ್ತೇವೆ. ಇಲ್ಲ ಜಾರ್ ಬದಲಿಸ್ತೇವೆ. ನಿಮ್ಮ ಮನೆ ಮಿಕ್ಸಿ ಜಾರ್ ಮೊಂಡಾಗಿದ್ರೆ ಟೆನ್ಷನ್ ಬೇಡ. ಮನೆಯಲ್ಲಿರುವ ಒಂದೇ ಒಂದು ಪದಾರ್ಥ ಬಳಸಿ ಜಾರ್ ಬ್ಲೇಡನ್ನು ಹರಿತಗೊಳಿಸ್ಬಹುದು.