ಸಿಂಪಲ್ ಟಿಪ್ಸ್ ಫಾಲೋ ಮಾಡಿದ್ರೆ ಹತ್ತೇ ನಿಮಿಷದಲ್ಲಿ 5 ಕೆಜಿ ಬಟಾಣಿ ಸಿಪ್ಪೆ ತೆಗೀಬಹುದು

Published : Jan 11, 2026, 11:51 AM IST

Kitchen Hacks : ಆರೋಗ್ಯಕರ ಆಹಾರಗಳಲ್ಲಿ ಸೊಪ್ಪು, ಬಟಾಣಿ ಸೇರಿದೆ. ಮನೆಗೆ ತಂದ ಸೊಪ್ಪನ್ನು ಕ್ಲೀನ್ ಮಾಡೋದು ದೊಡ್ಡ ತಲೆನೋವಿನ ಕೆಲ್ಸ. ಅದೇ ರೀತಿ, ಬಟಾಣಿ ಸಿಪ್ಪೆ ಬಿಡಿಸೋದು ಕೂಡ ಸುಲಭವಲ್ಲ. ಆದ್ರೆ ಈ ಟಿಪ್ಸ್ ಫಾಲೋ ಮಾಡಿದ್ರೆ ನೀವು ಕೆಲವೇ ನಿಮಿಷದಲ್ಲಿ ಬಟಾಣಿ ಸಿಪ್ಪೆ ಬಿಡಿಸಬಹುದು.

PREV
17
ಸಿಪ್ಪೆ ತೆಗೆಯೋ ಟಿಪ್ಸ್

ಒಂದು ಕೆಜಿ ಬಟಾಣಿ ತಂದ್ರೆ ಅದ್ರ ಸಿಪ್ಪೆ ಬಿಡಿಸೋದ್ರಲ್ಲೇ ಟೈಂ ಹಾಳಾಗುತ್ತೆ. ಹಾಗಾಗಿ ಅನೇಕರು ರೆಡಿ ಬಟಾಣಿ ಮನೆಗೆ ತರ್ತಾರೆ. ಈ ರೆಡಿ ಬಟಾಣಿಗೆ ಬಣ್ಣ ಹಾಕಲಾಗುತ್ತೆ ಎನ್ನುವ ಆರೋಪವೊಂದಿದೆ. ಹಾಗಾಗಿ ಅದನ್ನು ತಂದು ತಿನ್ನೋವಾಗ ಭಯವೊಂದು ಕಾಡೋದು ಸಹಜ. ಸಿಪ್ಪೆ ಬಿಡಿಸೋದು ಕಷ್ಟ ಎನ್ನುವ ಕಾರಣಕ್ಕೆ ನೀವು ಮನೆಗೆ ಸಿಪ್ಪೆ ಇರುವ ಬಟಾಣಿ ತರಲು ಹಿಂಜರಿಯುತ್ತಿದ್ದರೆ ಟೆನ್ಷನ್ ಬೇಡ. ಆರಾಮವಾಗಿ, ಕೆಲವೇ ಕ್ಷಣಗಳಲ್ಲಿ ನೀವು ಬಟಾಣಿ ಸಿಪ್ಪೆ ಬಿಡಿಸಬಹುದು. ಐದು ಕೆ.ಜಿ ಬಟಾಣಿಯನ್ನು ಹತ್ತೇ ನಿಮಿಷದಲ್ಲಿ ಸಿಪ್ಪೆ ಬಿಡಿಸೋದು ಹೇಗೆ ಅಂತ ನಾವು ಹೇಳ್ತೇವೆ.

27
ಬಟಾಣಿ ಪ್ರಯೋಜನ

ಚಳಿಗಾಲದಲ್ಲಿ ಬಟಾಣಿ ಮಾರ್ಕೆಟ್ ನ ಎಲ್ಲ ಕಡೆ ಕಾಣಿಸಿಕೊಳ್ಳುತ್ತದೆ. ಚಳಿಗಾಲಕ್ಕೆ ಬಟಾಣಿ ಸೇವನೆ ಆರೋಗ್ಯಕ್ಕೆ ಒಳ್ಳೆಯದು. ತಿನ್ನಲು ರುಚಿಯಾಗಿರುವ ಈ ಬಟಾಣಿ, ಉಪ್ಪಿಟ್ಟು, ಪುಲಾವಿನಲ್ಲಿಲ್ಲ ಅಂದ್ರೆ ಹೇಗೆ?. ಬಟಾಣಿ, ವಿಟಮಿನ್ ಎ, ಸಿ, ಕೆ, ಬಿ, ಕಬ್ಬಿಣ, ಸತು, ಮೆಗ್ನೀಸಿಯಮ್, ಪೊಟ್ಯಾಸಿಯಮ್, ರಂಜಕ, ಪ್ರೋಟೀನ್, ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ. ಇದು ಅನೇಕ ಕಾಯಿಲೆಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ.

37
ಬಿಸಿ ನೀರು

ಬಟಾಣಿ ಸಿಪ್ಪೆ ತೆಗೆಯೋದು ಸವಾಲಿನ ಕೆಲ್ಸ. ಒಂದಿಷ್ಟು ಬಟಾಣಿ ಸಿಪ್ಪೆ ತೆಗೆಯುತ್ತಿದ್ದಂತೆ ಕೈ ಉರಿಯಲು ಶುರುವಾಗುತ್ತದೆ. ಉಗುರಿನಲ್ಲಿ ಕಿರಿಕಿರಿಯಾಗುತ್ತದೆ. ಆದ್ರೆ ಬಿಸಿ ನೀರನ್ನು ಬಳಸಿ ನೀವು ಸಿಪ್ಪೆ ತೆಗೆಯಬಹುದು.

47
ಹೇಗೆ ಸಿಪ್ಪೆ ತೆಗೆಯೋದು?

ಮೊದಲು ಒಂದು ದೊಡ್ಡ ಪಾತ್ರೆಯಲ್ಲಿ 1 ಲೀಟರ್ ನೀರನ್ನು ಕುದಿಸಿ. ಈಗ ಬಟಾಣಿಗಳನ್ನು ಕುದಿಯುವ ನೀರಿಗೆ ಸೇರಿಸಿ,ಪಾತ್ರೆಯನ್ನು ಮುಚ್ಚಿ. ಸುಮಾರು 2 ನಿಮಿಷಗಳ ನಂತ್ರ, ಗ್ಯಾಸ್ ಆಫ್ ಮಾಡಿ. ನಂತರ, ಬಟಾಣಿಗಳನ್ನು ನೀರಿನಿಂದ ತೆಗೆಯಿರಿ. ಈ ಪ್ರಕ್ರಿಯೆ ಬಟಾಣಿ ಸಿಪ್ಪೆಯನ್ನು ಮೃದುಗೊಳಿಸುತ್ತದೆ. ಇದ್ರಿಂದ ಸಿಪ್ಪೆ ತೆಗೆಯೋದು ಸುಲಭ.

57
ತಣ್ಣನೆಯ ನೀರು

ನೀವು ಬಿಸಿ ನೀರಿನಿಂದ ಬಟಾಣಿಯನ್ನು ತೆಗೆದ ನಂತ್ರ ಅದನ್ನು ತಣ್ಣನೆಯ ನೀರಿಗೆ ಹಾಕಬೇಕು. ಹೀಗೆ ಮಾಡಿದ್ರೆ ಸಿಪ್ಪೆ ತೆಗೆಯೋದು ಮತ್ತಷ್ಟು ಸುಲಭ. ತಣ್ಣನೆಯ ಅದ್ರಲ್ಲೂ ಐಸ್ ನೀರಿನಲ್ಲಿ ಹಾಕಿದಾಗ ಸಿಪ್ಪೆ ತಾನಾಗಿಯೇ ಒಡೆದುಕೊಳ್ಳುತ್ತದೆ.

67
ಸುಲಭವಾಗುತ್ತೆ ಕೆಲ್ಸ

ಬಿಸಿ ನೀರು, ತಣ್ಣನೆಯ ನೀರಿನಲ್ಲಿ ಅದ್ದಿದ ನಂತ್ರ ಬಟಾಣಿ ಸಿಪ್ಪೆಯನ್ನು ನೀವು ಅತೀ ಸುಲಭವಾಗಿ ತೆಗೆಯಬಹುದು. ಇದಕ್ಕೆ ಹೆಚ್ಚಿನ ಬಲ ಪ್ರಯೋಗದ ಅಗತ್ಯವಿರೋದಿಲ್ಲ. ಹತ್ತೇ ಹತ್ತು ನಿಮಿಷದಲ್ಲಿ ನೀವು ಐದು ಕೆಜಿ ಬಟಾಣಿ ಸಿಪ್ಪೆಯನ್ನು ತೆಗೆಯಬಹುದು.

77
ಈ ವಿಷ್ಯ ನೆನಪಿರಲಿ

ನೀವು ಬಟಾಣಿಯನ್ನು ಸಿಪ್ಪೆ ಸಮೇತ ಬಿಸಿ ನೀರಿಗೆ ಹಾಕ್ತೀರಿ. ಆದ್ರೆ ಬಿಸಿ ನೀರಿನಲ್ಲೇ ಬಟಾಣಿಯನ್ನು ತುಂಬಾ ಸಮಯ ಬಿಡಬೇಡಿ. ಇದ್ರಿಂದ ಬಟಾಣಿ ಬೆಂದು ಹೋಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಬಿಸಿ ನೀರಿಗೆ ಹಾಕಿದ 2 ನಿಮಿಷದಲ್ಲೇ ಅದನ್ನು ತೆಗೆಯಬೇಕು. ತಕ್ಷಣ ತಣ್ಣನೆಯ ನೀರಿನಲ್ಲಿ ಹಾಕಿದ್ರೆ ಬಟಾಣಿ ಬೇಯೋದನ್ನು ಬೇಗ ತಪ್ಪಿಸಬಹುದು. ನೀವು ಮಾರುಕಟ್ಟೆಯಿಂದ ರೆಡಿ ಬಟಾಣಿ ತರುವ ಬದಲು, ಸಿಪ್ಪೆ ಇರುವ ಬಟಾಣಿ ತಂದು ಅದರ ಸಿಪ್ಪೆ ತೆಗೆದು, ಗಾಳಿಯಾಡದ ಬಾಕ್ಸ್ ಅಥವಾ ಕವರ್ ನಲ್ಲಿ ಅದನ್ನು ಹಾಕಿ ಫ್ರೀಜರ್ ನಲ್ಲಿಡಿ. ಒಂದೆರಡು ತಿಂಗಳು ಯಾವುದೇ ಟೆನ್ಷನ್ ಇಲ್ದೆ ಅದನ್ನು ಬಳಸಬಹುದು. ಸಿಪ್ಪೆ ತೆಗೆಯುವ ಟೈಂ ಉಳಿಯುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories