ಇದು ಬರೀ ಕಸ ತುಂಬೋ ಜಾಗವಲ್ಲ, ಕೈ ಖಾಲಿ ಮಾಡಿ ಬೀದಿಗೆ ತರುತ್ತೆ ಅಡುಗೆ ಮನೆಯಲ್ಲಿರುವ ಡಸ್ಟ್ ಬಿನ್

Published : Mar 06, 2026, 07:45 PM IST

ಅಡುಗೆ ಮನೆಯಲ್ಲಿರುವ ಡಸ್ಟ್ ಬಿನ್ ನಿಮ್ಮ ಜೀವನ ನಿರ್ಧರಿಸುವ ಶಕ್ತಿ ಹೊಂದಿದೆ. ಡಸ್ಟ್ ಬಿನ್ ಬಣ್ಣ, ದಿಕ್ಕು ಹಾಗೂ ಆಕಾರ ನಮ್ಮ ಆರ್ಥಿಕ ಸ್ಥಿತಿ, ನೆಮ್ಮದಿ, ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತೆ ಗೊತ್ತಾ? 

PREV
16
ಡಸ್ಟ್ ಬಿನ್ ವಾಸ್ತುಶಾಸ್ತ್ರ

ವಾಸ್ತು ಶಾಸ್ತ್ರದಲ್ಲಿ, ಅಡುಗೆಮನೆಯನ್ನು ಮನೆಯ ಶಕ್ತಿ ಕೇಂದ್ರ ಅಂತ ಕರೀತಾರೆ. ಕುಟುಂಬಸ್ಥರ ಆರೋಗ್ಯ ಅಡುಗೆ ಮನೆಯಲ್ಲಿದೆ. ಅಲ್ಲಿ ಮಾಡುವ ಸಣ್ಣಪುಟ್ಟ ತಪ್ಪುಗಳು ಮನೆಯ ನೆಮ್ಮದಿ ಹಾಳು ಮಾಡುತ್ತೆ. ಸಕಾರಾತ್ಮಕ ಶಕ್ತಿ ನಾಶ ಮಾಡಿ, ನಕಾರಾತ್ಮಕ ಶಕ್ತಿ ಹೆಚ್ಚಿಸುತ್ತೆ. ಅಡುಗೆ ಮನೆಯಲ್ಲಿರುವ ಕಸದ ಬುಟ್ಟಿಕೂಡ ಬಹಳ ಮುಖ್ಯ. ಕಸದಬುಟ್ಟಿ ವಾಸ್ತು ದೋಷಕ್ಕೆ ಕಾರಣವಾಗುತ್ತೆ. ಕುಟುಂಬಸ್ಥರ ಆರೋಗ್ಯ ಹಾಳು ಮಾಡೋದಲ್ದೆ ಬಡತನವನ್ನು ಆಹ್ವಾನಿಸುತ್ತೆ.

26
ತೆರೆದ ಕಸದ ಬುಟ್ಟಿ

ವಾಸ್ತು ಶಾಸ್ತ್ರದ ಪ್ರಕಾರ ಅಡುಗೆ ಮನೆಯ ಸದಾ ಸ್ವಚ್ಛವಾಗಿರಬೇಕು, ಶುದ್ಧವಾಗಿರಬೇಕು. ಅಡುಗೆ ಮನೆಯಲ್ಲಿ ಕೊಳಕಿದ್ದಾಗ ಅದು ನಕಾರಾತ್ಮಕ ಶಕ್ತಿ ಆಹ್ವಾನಿಸುತ್ತದೆ. ಅನ್ನಪೂರ್ಣೆ ಮುನಿಸಿಗೆ ಕಾರಣವಾಗುತ್ತದೆ. ಬರೀ ಕೊಳಕಲ್ಲ, ತೆರೆದ ಕಸದ ಬುಟ್ಟಿ, ಅಡುಗೆ ಮನೆಯಲ್ಲಿ ನಕಾರಾತ್ಮಕತೆ ಹೆಚ್ಚಿಸುತ್ತೆ. ಕುಟುಂಬ ಸದ್ಸಯರ ಮಧ್ಯೆ ಗಲಾಟೆಗೆ ಕಾರಣವಾಗುತ್ತೆ. ಸಣ್ಣ ವಿಷ್ಯಕ್ಕೆ ಕುಟುಂಬಸ್ಥರು ಒತ್ತಡಕ್ಕೊಳಗಾಗ್ತಾರೆ. ಮನೆಯಲ್ಲಿ ಶಾಂತಿ ನಾಶವಾಗುತ್ತೆ. ಹಾಗಾಗಿ ನೀವು ಅಡುಗೆ ಮನೆಯಲ್ಲಿ ಸದಾ ಮುಚ್ಚಿದ ಕಸದ ಬುಟ್ಟಿಯನ್ನು ಇಡಿ.

36
ಕಸದ ಬುಟ್ಟಿ ಎಲ್ಲಿ ಇಡ್ಬೇಕು?

ತೆರೆದ ಕಸದ ಬುಟ್ಟಿ ಮಾತ್ರವಲ್ಲ ಕಸದ ಬುಟ್ಟಿ ಇರುವ ಜಾಗವೂ ಮಹತ್ವದ್ದು. ವಾಸ್ತು ಶಾಸ್ತ್ರದ ಪ್ರಕಾರ, ನೈಋತ್ಯ ಅಥವಾ ಪಶ್ಚಿಮ ದಿಕ್ಕಿನಲ್ಲಿ ನೀವು ಕಸದ ಬುಟ್ಟಿಯನ್ನು ಇಡುವುದು ಉತ್ತಮ. ಮೆರತೂ ನೀವು ಈಶಾನ್ಯ ದಿಕ್ಕಿನಲ್ಲಿ ಕಸದ ಬುಟ್ಟಿಯನ್ನು ಇಡಬೇಡಿ. ಈ ದಿಕ್ಕನ್ನು ದೇವತೆಗಳು ಮತ್ತು ಸಕಾರಾತ್ಮಕ ಶಕ್ತಿಯ ವಾಸ ಎಂದು ನಂಬಲಾಗಿದೆ. ಉತ್ತರ ದಿಕ್ಕು ಕೂಡ ಸಂಪತ್ತು ಮತ್ತು ಪ್ರಗತಿಗೆ ಸಂಬಂಧಿಸಿದೆ. ಈ ದಿಕ್ಕಿನಲ್ಲಿ ಕಸದ ಬುಟ್ಟಿ ಇಡುವುದರಿಂದ ಆರ್ಥಿಕ ಸಮಸ್ಯೆಗಳು ಹೆಚ್ಚಾಗಬಹುದು. ದುಡಿದ ಹಣವೆಲ್ಲ ಖಾಲಿ ಆಗ್ಬಹುದು. ಮಾನಸಿಕ ಆತಂಕ ಮತ್ತು ಒತ್ತಡಕ್ಕೂ ಕಾರಣವಾಗಬಹುದು.

46
ಇಲ್ಲಿ ಕಸದಬುಟ್ಟಿ ಇಡಬೇಡಿ

ಕಸದ ಬುಟ್ಟಿಯನ್ನು ನೀವು ಸ್ಟೌವ್ ಅಥವಾ ಗ್ಯಾಸ್ ಕೆಳಗೆ ಅಥವಾ ಅದ್ರ ಹತ್ತಿರಕ್ಕೆ ಇಡಬೇಡಿ. ಅಗ್ನಿ ಸಮೀಪ ನೀವು ಕೊಳಕು, ಡಸ್ಟ್ ಬಿನ್ ಇಡೋದ್ರಿಂದ ಶಕ್ತಿಯ ಸಮತೋಲನಕ್ಕೆ ಅಡ್ಡಿಯಾಗುತ್ತದೆ.

56
ಯಾವ ಬಣ್ಣದಲ್ಲಿರಬೇಕು ಡಸ್ಟ್ ಬಿನ್

ಈಗ ಮಾರ್ಕೆಟ್ ನಲ್ಲಿ ಸಾಕಷ್ಟು ವೆರೈಟಿ ಹಾಗೂ ಡಿಸೈನ್ ಡಸ್ಟ್ ಬಿನ್ ಲಭ್ಯವಿದೆ. ಆದ್ರೆ ವಾಸ್ತು ಶಾಸ್ತ್ರದ ಪ್ರಕಾರ, ಅಡುಗೆ ಮನೆಗೆ ಎಲ್ಲ ಬಣ್ಣದ ಡಸ್ಟ್ ಬಿನ್ ಸೂಕ್ತವಲ್ಲ. ಅಡುಗೆಮನೆಯಲ್ಲಿ ಹಸಿರು, ನೀಲಿ ಅಥವಾ ಬೂದು ಬಣ್ಣದ ಡಸ್ಟ್ಬಿನ್ ಬಳಸುವುದು ಉತ್ತಮ. ಈ ಬಣ್ಣಗಳು ಸ್ವಚ್ಛತೆ ಮತ್ತು ಸಮತೋಲನವನ್ನು ಸೂಚಿಸುತ್ತವೆ. ಕೆಂಪು ಬಣ್ಣ ಅಗ್ನಿ ಅಂಶವನ್ನು ಪ್ರತಿನಿಧಿಸುವುದರಿಂದ ತುಂಬಾ ಪ್ರಕಾಶಮಾನವಾದ ಅಥವಾ ಕೆಂಪು ಡಸ್ಟ್ಬಿನ್ಗಳನ್ನು ಬಳಸದಿರುವುದು ಉತ್ತಮ.

66
ಡಸ್ಟ್ ಬಿನ್ ಸ್ವಚ್ಛತೆ

ಬಹುತೇಕರು ಡಸ್ಟ್ ಬಿನ್ ಸ್ವಚ್ಛತೆಗೆ ಆದ್ಯತೆ ನೀಡೋದಿಲ್ಲ. ಕಸ ತುಂಬುವ ಬುಟ್ಟಿ ಕ್ಲೀನ್ ಮಾಡೋದೇಕೆ ಅಂತ ಭಾವಿಸ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ, ಡಸ್ಟ್ ಬಿನ್ ಕ್ಲೀನಿಂಗ್ ಬಹಳ ಮುಖ್ಯ. ಡಸ್ಟ್ ಬಿನ್ ನಲ್ಲಿರುವ ಕಸವನ್ನು ದೀರ್ಘಕಾಲ ಬಿಡಬೇಡಿ. ದಿನಕ್ಕೆ ಒಮ್ಮೆಯಾದ್ರೂ ಕಸವನ್ನು ತೆಗೆದು ಎಸೆಯಿರಿ. ಡಸ್ಟ್ಬಿನ್ ಒಳಗೆ ಪಾಲಿಬ್ಯಾಗ್ ಅಥವಾ ಲೈನರ್ ಬಳಸಿ. ಇದ್ರಿಂದ ವಾಸನೆ ಕಡಿಮೆ ಆಗೋದಲ್ದೆ ಡಸ್ಟ್ ಬಿನ್ ಸ್ವಚ್ಛವಾಗಿರುತ್ತದೆ. ಡಸ್ಟ್ಬಿನ್ ಅನ್ನು ವಾರಕ್ಕೊಮ್ಮೆ ಅಥವಾ ಎರಡು ಬಾರಿ ಬಿಸಿನೀರು, ಸೋಪ್ ನಿಂದ ಕ್ಲೀನ್ ಮಾಡಿ. ಡಸ್ಟ್ ಬಿನ್ ಸ್ವಚ್ಛವಾಗಿದ್ರೆ ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸೋದಲ್ದೆ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories