ಅಡುಗೆ ಮನೆಯಲ್ಲಿ ಗೃಹಿಣಿಯರು ಎದುರಿಸುವ ತೆಂಗಿನಕಾಯಿ ಒಡೆಯುವ ಕಷ್ಟದ ಕೆಲಸಕ್ಕೆ ಈ ಲೇಖನದಲ್ಲಿ ಸುಲಭ ಪರಿಹಾರ ನೀಡಲಾಗಿದೆ. ತೆಂಗಿನಕಾಯಿಯನ್ನು ಸುಲಭವಾಗಿ ಒಡೆದು, ಚಿಪ್ಪಿನಿಂದ ಕೊಬ್ಬರಿಯನ್ನು ಬೇರ್ಪಡಿಸುವ ಸರಳ ಕಿಚನ್ ಹ್ಯಾಕ್ ಅನ್ನು ಇಲ್ಲಿ ವಿವರಿಸಲಾಗಿದೆ.
ಅಡುಗೆ ಮನೆ ಕೆಲಸಗಳನ್ನು ಸುಲಭ ಮಾಡೋಕೆ ತುಂಬಾನೇ ಟಿಪ್ಸ್ ಇವೆ. ಅದರಲ್ಲೂ ಕಷ್ಟ ಅಂತ ಅನಿಸೋ, ಇಲ್ಲಾ ಬೇಜಾರಾಗೋ ಕೆಲಸಗಳಿಗೆ ಈ ಕಿಚನ್ ಹ್ಯಾಕ್ಸ್ (Kitchen Hacks) ಸಖತ್ ಹೆಲ್ಪ್ ಆಗುತ್ತೆ. ಆದ್ರೆ, ಈ ಟ್ರಿಕ್ಸ್ ಗೊತ್ತಿಲ್ಲದೆ ಎಷ್ಟೋ ಜನ ಕಷ್ಟಪಟ್ಟು ಕೆಲಸ ಮಾಡ್ತಾನೇ ಇರ್ತಾರೆ. ಅಂತಹ ಕಷ್ಟದ ಕೆಲಸವನ್ನು ಸುಲಭವಾಗಿ ಹೇಗೆ ಮಾಡೋದು ಅಂತ ಈ ಲೇಖನದಲ್ಲಿ ಹೇಳಲಾಗಿದೆ.
25
ತೆಂಗಿನಕಾಯಿ ಒಡೆಯೋದು
ಇಂದು ಬಹುತೇಕ ಗೃಹಿಣಿಯರು ಅಡುಗೆ ಮನೆಯಲ್ಲಿ ಹೆಚ್ಚಿನವರು ಫೇಸ್ ಮಾಡೋ ಒಂದು ಕಾಮನ್ ಸಮಸ್ಯೆಗೆ ಪರಿಹಾರ ಹೇಳ್ತೀವಿ. ಅಡುಗೆ ಮಾಡೋಕೆ ಎಷ್ಟೇ ಇಂಟರೆಸ್ಟ್ ಇದ್ರೂ, ತೆಂಗಿನಕಾಯಿ ಒಡೆಯೋದು (Open Coconut) ಅಂದ್ರೆ ಸಾಕು, ಕೆಲವರಿಗೆ ಭಯ, ಇನ್ನು ಕೆಲವರಿಗೆ ಸಿಕ್ಕಾಪಟ್ಟೆ ಬೇಜಾರು. ಸಾಮಾನ್ಯವಾಗಿ ನಾವೆಲ್ಲಾ ಮಚ್ಚು ಅಥವಾ ದೊಡ್ಡ ಚಾಕು ಬಳಸಿ ತೆಂಗಿನಕಾಯಿ ಒಡೆಯುತ್ತೇವೆ.
35
ತೆಂಗಿನಕಾಯಿ
ಆದರೆ ಮಚ್ಚು ಬಳಸೋಕೆ ಎಲ್ಲರಿಗೂ ಧೈರ್ಯ ಇರಲ್ಲ. ಗೊತ್ತಿಲ್ಲದೆ ಕೈಗೆ ಪೆಟ್ಟು ಮಾಡಿಕೊಳ್ಳೋದು, ಚಿಪ್ಪಿನ ಜೊತೆ ಕೈ ಚರ್ಮ ಕಿತ್ತು ಬರೋದು ಸಾಮಾನ್ಯ. ಈ ರೀತಿ ಗಾಯಗಳಾಗೋ ಸಾಧ್ಯತೆ ಹೆಚ್ಚಿರುತ್ತದೆ. ಈ ಎರಡರ ಸಹಾಯವಿಲ್ಲದೇ ಸುಲಭವಾಗಿ ತೆಂಗಿನಕಾಯಿ ಹೇಗೆ ಒಡೆಯೋದು ಮತ್ತು ಚಿಪ್ಪಿನಿಂದ ಕೊಬ್ಬರಿ ಹೇಗೆ ಬೇರ್ಪಡಿಸಬಹುದು ಅಂತ ನೋಡೋಣ ಬನ್ನಿ.
ತೆಂಗಿನಕಾಯಿ ಒಡೆಯಲು (Open Coconut) ಇಲ್ಲೊಂದು ಸಿಂಪಲ್ ಕಿಚನ್ ಹ್ಯಾಕ್ (Kitchen Hacks) ಇದೆ. ಇದಕ್ಕೆ ಬೇಕಾಗಿರೋದು ಒಂದು ಸುತ್ತಿಗೆ, ಒಂದು ಚಾಕು ಮತ್ತು ಬೇಕಿದ್ದರೆ ಒಂದು ಸ್ಕ್ರೂಡ್ರೈವರ್ ಅಷ್ಟೇ. ಮೊದಲಿಗೆ, ಸ್ಕ್ರೂಡ್ರೈವರ್ ಅಥವಾ ಚಾಕುವಿನ ತುದಿಯಿಂದ ತೆಂಗಿನಕಾಯಿಯ ಮೂರು ಕಣ್ಣುಗಳಲ್ಲಿ ಒಂದನ್ನು ಚುಚ್ಚಿ, ಒಳಗಿರೋ ನೀರನ್ನು ತೆಗೆಯಿರಿ. ಆಮೇಲೆ, ಸುತ್ತಿಗೆಯಿಂದ ತೆಂಗಿನಕಾಯಿಯ ಎಲ್ಲಾ ಭಾಗಕ್ಕೂ ನಿಧಾನವಾಗಿ ತಟ್ಟಿ. ಹೀಗೆ ತಟ್ಟುವಾಗ, ಕಾಯಿಯ ಮಧ್ಯದಲ್ಲಿ ಒಂದು ಗೆರೆ ಮೂಡುತ್ತೆ. ಆಗ ಅದನ್ನ ಎರಡು ಭಾಗ ಮಾಡೋದು ತುಂಬಾನೇ ಸುಲಭ.
55
ವೈರಲ್ ಆಗಿರುವ ವಿಡಿಯೋ
ಈ ವಿಧಾನದಿಂದ ಚಿಪ್ಪಿನಿಂದ ಕೊಬ್ಬರಿಯನ್ನು ಸುಲಭವಾಗಿ ಬೇರ್ಪಡಿಸಬಹುದು. ತೆಂಗಿನಕಾಯಿ ಎರಡು ಹೋಳುಗಳ ಮೇಲೆ ಸುತ್ತಿಗೆಯಿಂದ ನಿಧಾನಕ್ಕೆ ತಟ್ಟಿದ್ರೆ ಕೊಬ್ಬರಿ ಸಡಿಲವಾಗುತ್ತದೆ. ಮತ್ತೊಂದು ವಿಧಾನ ಅಂದ್ರೆ ಹಸಿ ತೆಂಗಿನಕಾಯಿ ಒಳಗೆ ಒಣಬಟ್ಟೆಯನ್ನು ಬಿಗಿಯಾಗಿರಿಸಬೇಕು. ನಂತರ ಚಿಪ್ಪಿನ ಮೇಲೆ ನಿಧಾನ ಸುತ್ತಿಗೆಯಿಂದ ತಟ್ಟಿದ್ರೆ ಕೊಬ್ಬರಿ ಬೇರ್ಪಡೆಯಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.