ಗೋಧಿಯಲ್ಲಿ ಒಂದೂ ಕೀಟ ಇರದಂತೆ ಮಾಡಲು ಇದರಲ್ಲಿಟ್ಟರೆ ಸಾಕು, ವರ್ಷವಾದ್ರೂ ಫ್ರೆಶ್ ಆಗಿರುತ್ತೆ!

Published : Sep 10, 2025, 12:51 PM IST

ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿದ್ರೆ ನೀವು ಗೋಧಿಯನ್ನು ತಿಂಗಳೇಕೆ ಹಲವು ವರ್ಷಗಳ ಕಾಲ ಸುರಕ್ಷಿತವಾಗಿಡಬಹುದು.

PREV
16

ಅಂಗಡಿಯಿಂದ ಹೆಚ್ಚಿನ ಪ್ರಮಾಣದಲ್ಲಿ ತಂದಿಟ್ಟುಕೊಂಡ ಗೋಧಿಯನ್ನು ಸರಿಯಾಗಿ ಸಂಗ್ರಹಿಸಿಡುವುದು ಸಹ ಒಂದು ರೀತಿ ದೊಡ್ಡ ಸಮಸ್ಯೆಯೇ. ಏಕೆಂದರೆ ಸರಿಯಾಗಿ ಸಂಗ್ರಹಿಸದಿದ್ದರೆ ಅದು ಹಾಳಾಗುತ್ತದೆ. ಇದರಿಂದ ದೊಡ್ಡ ನಷ್ಟವಾಗುವುದು ನಮಗೆ. ಆದರೆ ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿದ್ರೆ ನೀವು ಗೋಧಿಯನ್ನು ತಿಂಗಳೇಕೆ ಹಲವು ವರ್ಷಗಳ ಕಾಲ ಸುರಕ್ಷಿತವಾಗಿಡಬಹುದು. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಹಳ್ಳಿಗರು ಗೋಧಿಯನ್ನು ಸುರಕ್ಷಿತವಾಗಿಡಲು ದೊಡ್ಡ ಮಣ್ಣಿನ ಮಡಕೆಗಳನ್ನು ಬಳಸುತ್ತಾರೆ. ಅವುಗಳಲ್ಲಿ ಗೋಧಿಯನ್ನು ಸಂಗ್ರಹಿಸಿ ಬೇವಿನ ಎಲೆಗಳನ್ನು ಹಾಕಿದರೆ ಅದು ವರ್ಷಗಳ ಕಾಲ ಸುರಕ್ಷಿತವಾಗಿರುತ್ತದೆ.

26

ಹೌದು, ಹಿಂದಿನ ಜನರು ಧಾನ್ಯಗಳನ್ನು ಸಂಗ್ರಹಿಸಲು ಮಣ್ಣಿನ ಮಡಕೆಗಳನ್ನು ಬಳಸುತ್ತಿದ್ದರು. ಏಕೆಂದರೆ ಹಿಂದೆಲ್ಲಾ ಕಬ್ಬಿಣ ಅಥವಾ ಸ್ಟೀಲ್‌ ಐಟಂಗಳು ಇರುತ್ತಿರಲಿಲ್ಲ. ಆದ್ದರಿಂದ, ಹಳ್ಳಿಗಳಲ್ಲಿ ಜನರು ಕೊಳಗಳು ಅಥವಾ ನದಿಗಳಿಂದ ವಿಶೇಷ ರೀತಿಯ ಜೇಡಿಮಣ್ಣನ್ನು ತೆಗೆದು ಆ ಮಣ್ಣಿನಿಂದ ದೊಡ್ಡ ಮಣ್ಣಿನ ಮಡಕೆ ತಯಾರಿಸುತ್ತಿದ್ದರು. ಇದರಲ್ಲಿ ಧಾನ್ಯಗಳನ್ನು ಸಂಗ್ರಹಿಸಲಾಗುತ್ತಿತ್ತು.

36

ಅಂದಹಾಗೆ ಧಾನ್ಯಗಳನ್ನು ಮಡಕೆಯಿಂದ ಹೊರತೆಗೆಯಲು ಕೆಳಭಾಗದಲ್ಲಿ ಒಂದು ಸ್ಥಳವನ್ನು ಸಹ ಮಾಡಲಾಗುತ್ತಿತ್ತು. ಏಕೆಂದರೆ ಕೆಲವೊಮ್ಮೆ ಮಡಕೆ ದೊಡ್ಡದಾಗಿರುತ್ತದೆ. ಆಗ ಮೇಲಿನಿಂದ ಧಾನ್ಯಗಳನ್ನು ಹೊರತೆಗೆಯಲು ಸಾಧ್ಯವಾಗುವುದಿಲ್ಲ. ಹೆಚ್ಚು ಕಮ್ಮಿ 50 ಕೆಜಿಯಿಂದ 20 ಕ್ವಿಂಟಾಲ್‌ವರೆಗಿನ ಧಾನ್ಯಗಳನ್ನು ಸಂಗ್ರಹಿಸಲು ಮಣ್ಣಿನ ಮಡಕೆಗಳನ್ನು ಮಾಡಲಾಗುತ್ತಿತ್ತು.

46

ಮಣ್ಣಿನ ಮಡಕೆಯಲ್ಲಿ ಧಾನ್ಯಗಳು ಖಂಡಿತವಾಗಿಯೂ ಸುರಕ್ಷಿತವಾಗಿರುತ್ತವೆ. ಏಕೆಂದರೆ ಧಾನ್ಯಗಳ ಮೇಲೆ ದಾಳಿ ಮಾಡುವ ಕೀಟಗಳು ಮತ್ತು ಜೀರುಂಡೆಗಳು ಮಣ್ಣಿನೊಳಗೆ ಪ್ರವೇಶಿಸಲು ಸಾಧ್ಯವಿಲ್ಲ ಮತ್ತು ಮಣ್ಣಿನ ಶೀತ ಸ್ವಭಾವದಿಂದಾಗಿ ಧಾನ್ಯಗಳು ಹಾಳಾಗುವುದಿಲ್ಲ. ಇದರೊಂದಿಗೆ, ಅನೇಕ ಜನರು ಮಣ್ಣಿನ ಮಡಕೆಯಲ್ಲಿ ಧಾನ್ಯಗಳನ್ನು ಇಡುವಾಗ ಬೇವಿನ ಎಲೆಗಳನ್ನು ಸಹ ಹಾಕುತ್ತಾರೆ. ಇದರಿಂದಾಗಿ ಧಾನ್ಯಗಳು ಸುರಕ್ಷಿತವಾಗಿ ಉಳಿಯುತ್ತವೆ.

56

ಮತ್ತೊಂದೆಡೆ, ನೀವು ಧಾನ್ಯಗಳನ್ನು ತೆರೆದ ಸ್ಥಳದಲ್ಲಿ ಅಥವಾ ಯಾವುದಾದರೂ ಸ್ಥಳದಲ್ಲಿ ಇಟ್ಟರೆ ಕೇವಲ ಒಂದರಿಂದ ಎರಡು ತಿಂಗಳೊಳಗೆ ಧಾನ್ಯಗಳಲ್ಲಿ ಕೀಟಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಆದರೆ ನಾವು ಅವುಗಳನ್ನು ಈ ಮಣ್ಣಿನ ಮಡಕೆಯಲ್ಲಿ ಇಟ್ಟರೆ ಹಲವು ವರ್ಷಗಳ ಕಾಲ ಧಾನ್ಯಗಳನ್ನು ಸುರಕ್ಷಿತವಾಗಿರಿಸಬಹುದು. ಮಡಕೆಯು ಮಣ್ಣಿನಿಂದ ಮಾಡಿರುವುದರಿಂದ ಇದು ಒಳಗೆ ಮತ್ತು ಹೊರಗೆ ತಾಪಮಾನವನ್ನು ಸಹ ನಿರ್ವಹಿಸುತ್ತದೆ. ಈ ಕಾರಣದಿಂದಾಗಿ ಧಾನ್ಯಗಳು ಹಾಳಾಗುವುದಿಲ್ಲ.

66

ಬೇಸಿಗೆಯಲ್ಲಿ ಜನರು ಹೂಜಿಯಿಂದ ನೀರನ್ನು ಬಳಸುತ್ತಾರೆ, ಅದು ತುಂಬಾ ತಂಪಾಗಿರುತ್ತದೆ. ಮಣ್ಣಿನ ಸ್ವಭಾವ ತಂಪಾಗಿರುತ್ತದೆ. ಈ ಕಾರಣದಿಂದಾಗಿ ನೀರು ತಂಪಾಗಿರುತ್ತದೆ. ಬಹುಶಃ ಮಣ್ಣಿನ ಮಡಕೆಯಲ್ಲಿ ಧಾನ್ಯಗಳನ್ನು ಇಡುವುದರಿಂದ ಅವು ಹಾಳಾಗದಿರಲು ಇದೇ ಕಾರಣವಾಗಿರಬಹುದು.

Read more Photos on
click me!

Recommended Stories