ದೋಸೆ ಹಿಟ್ಟು ಕಲಿಸಿಕೊಳ್ಳುವಾಗ ನೀರು ಹೆಚ್ಚಾದ್ರೆ ಏನು ಮಾಡಬೇಕು ಅಂತ ಒಂದು ಕ್ಷಣ ಗೊತ್ತಾಗಲ್ಲ. ನೀರು ಕಡಿಮೆಯಾದ್ರೆ ಹಂತ ಹಂತವಾಗಿ ಹಿಟ್ಟಿಗೆ ಸೇರಿಸಿಕೊಳ್ಳಬಹುದು. ಆದ್ರೆ ನೀರು ಹೆಚ್ಚಾದ್ರೆ ನೀವು ಏನೇ ಮಾಡಿದರೂ ದೋಸೆ ಬರಲ್ಲ. ಈ ಸಮಯದಲ್ಲಿ ಏನು ಮಾಡಬೇಕು? ಹಿಟ್ಟನ್ನು ದೋಸೆ ಹಿಟ್ಟಿಗೆ ಹೇಗೆ ತೆಗೆದುಕೊಂಡು ಬರಬೇಕು ಎಂದು ನೋಡೋಣ ಬನ್ನಿ.
25
ದೋಸೆಹಿಟ್ಟಿಗೆ ನೀರು ಹೆಚ್ಚಾದಾಗ?
ನೀರು ಹೆಚ್ಚಾಗುತ್ತಿದ್ದಂತೆ ಮೊದಲು ಒಂದು ದೋಸೆಯನ್ನು ಹಾಕಿ ನೋಡಿ. ಇದರಿಂದ ನೀರು ಎಷ್ಟು ಅಧಿಕವಾಗಿದೆ ಎಂಬುದರ ಅಂದಾಜು ಲೆಕ್ಕ ಸಿಗುತ್ತದೆ. ನಂತರ ಕೆಲವೊಂದು ಪದಾರ್ಥ ಸೇರಿಸುವ ಮೂಲಕ ಹಿಟ್ಟನ್ನು ದೋಸೆ ಹದಕ್ಕೆ ತೆಗೆದುಕೊಂಡು ಬರಲು ಸಾಧ್ಯವಾಗುತ್ತದೆ.
35
ಕಾರ್ನ್‌ಫ್ಲೋರ್
ದೋಸೆಹಿಟ್ಟಿನಲ್ಲಿ ನೀರಿನ ಪ್ರಮಾಣ ಹೆಚ್ಚಾದ್ರೆ ಕಾರ್ನ್ ಫ್ಲೋರ್ ಸೇರಿಸಿಕೊಳ್ಳಬೇಕು. ಸ್ವಲ್ಪ ಸ್ವಲ್ಪವೇ ಕಾರ್ನ್‌ಫ್ಲೋರ್ ಸೇರಿಸಿಕೊಳ್ಳುತ್ತಾ ದೋಸೆಹಿಟ್ಟಿನ ಹದಕ್ಕೆ ತೆಗೆದುಕೊಂಡು ಬನ್ನಿ. ನಂತರ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಚಿಟಿಕೆಯಷ್ಟು ಬೇಕಿಂಗ್ ಸೋಡಾ ಸೇರಿಸಿದ್ರೆ ನಿಮ್ಮಿಷ್ಟದ ಶೈಲಿಯಲ್ಲಿ ದೋಸೆ ಮಾಡಿಕೊಳ್ಳಬಹುದು.
ದೋಸೆಹಿಟ್ಟು ಹೆಚ್ಚು ನೀರು ಆದ್ರೆ ಅಕ್ಕಿಹಿಟ್ಟು ಬೆಸ್ಟ್ ಆಯ್ಕೆಯಾಗುತ್ತದೆ. ದೋಸೆ ಬ್ಯಾಟರ್‌ಗೆ ಅಕ್ಕಿ ಹಿಟ್ಟು ಸೇರಿಸಬೇಕು. ನಂತರ ಗಂಟು ಆಗದಂತೆ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ತದನಂತರ ಗರಿಗರಿಯಾದ ದೋಸೆಗಳನ್ನು ಮಾಡಿಕೊಂಡು ಆನಂದಿಸಿ.
55
ಚಿರೋಟಿ ರವೆ
ಚಿರೋಟಿ ರವೆ ಜೊತೆ ಸ್ವಲ್ಪವೇ ಮೊಸರು ಸೇರಿಸಿಕೊಂಡು ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ಈ ಸಮಯದಲ್ಲಿ ಹೆಚ್ಚು ನೀರು ಸೇರಿಸಿಕೊಳ್ಳಬೇಡಿ. ನಂತರ ರುಬ್ಬಿಕೊಂಡಿರುವ ಚಿರೋಟಿ ರವೆ ಪೇಸ್ಟ್‌ನ್ನು ನೀರು ಹೆಚ್ಚಾಗಿರುವ ದೋಸೆಹಿಟ್ಟಿಗೆ ಸೇರಿಸಿಕೊಳ್ಳಿ. ಕೆಲವರು ಮೈದಾ ಸಹ ಸೇರಿಸಿಕೊಳ್ಳುತ್ತಾರೆ. ಆದ್ರೆ ಮೈದಾ ಸೇರಿಸಿದ್ರೆ ದೋಸೆಯ ರುಚಿ ಸಂಪೂರ್ಣವಾಗಿ ಬೇರೆಯಾಗುತ್ತದೆ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.