ಗಲೀಜು ಆಗಿರೋ ಸ್ಟೀಲ್ ಬಕೆಟ್ ಫಳ ಫಳ ಅಂತ ಹೊಳೆಯಲು ಹೀಗೆ ಮಾಡಿದ್ರೆ ಸಾಕು; Cleaning Hacks

Published : Jul 14, 2026, 11:36 AM IST

ಭಾರತೀಯ ಮನೆಗಳಲ್ಲಿ ಬಳಸುವ ಸ್ಟೀಲ್ ಬಕೆಟ್‌ಗಳ ಮೇಲೆ ಗಡಸು ನೀರಿನಿಂದ ಉಂಟಾಗುವ ಬಿಳಿ ಕಲೆಗಳನ್ನು ತೆಗೆಯಲು ಈ ಲೇಖನದಲ್ಲಿ ಸಲಹೆ ನೀಡಲಾಗಿದೆ. ಮನೆಯಲ್ಲೇ ಸಿಗುವ ವಸ್ತುಗಳನ್ನು ಬಳಸಿ ಬಕೆಟ್‌ಗಳನ್ನು ಹೇಗೆ ಹೊಸದರಂತೆ ಮಾಡಬಹುದು ಎಂದು ವಿವರಿಸಲಾಗಿದೆ.

PREV
15
ಸ್ಟೀಲ್ ಬಕೆಟ್‌ಗಳ ಬಳಕೆ

ಭಾರತದ ಮನೆಗಳಲ್ಲಿ ನೀರು ಸಂಗ್ರಹಣೆ ಮತ್ತು ಸ್ನಾನದ ಗೃಹಗಳಲ್ಲಿ ಸ್ಟೀಲ್ ಬಕೆಟ್‌ಗಳನ್ನು ಬಳಕೆ ಮಾಡುತ್ತಿರುತ್ತಾರೆ. ದೀರ್ಘಕಾಲದ ಬಳಕೆಯಿಂದಾಗಿ ಬಕೆಟ್ ಮೇಲೆ ಬಿಳಿ ಬಣ್ಣದ ಕಲೆಗಳು ಉಂಟಾಗಿರುತ್ತವೆ. ಬೋರ್‌ವೆಲ್ ಅಥವಾ ಗಡಸು ನೀರು ಬಳಕೆಯಿಂದಾಗಿ ಇಂತಹ ಕಲೆಗಳು ಬಕೆಟ್ ಮೇಲೆ ಉಳಿದುಕೊಂಡಿರುತ್ತವೆ. ಇಂದು ಈ ಕಲೆಗಳನ್ನು ಸುಲಭವಾಗಿ ಹೇಗೆ ತೆಗೆಯಬೇಕು ಎಂದು ನೋಡೋಣ ಬನ್ನಿ.

25
ವಿನೆಗರ್ ಮತ್ತು ಡಿಶ್‌ವಾಶ್ ಲಿಕ್ವಿಡ್

ಬಿಳಿ ವಿನೆಗರ್ ಹೆಚ್ಚು ಆಮ್ಲಿಯ ಗುಣಗಳನ್ನು ಹೊಂದಿದ್ದು, ಸೀಮೆಸುಣ್ಣದಂತಹ ಮೊಂಡು ಕಲೆಗಳನ್ನು ಕ್ಷಿಪ್ರವಾಗಿ ತೆಗೆದು ಹಾಕುತ್ತದೆ. ಕೊಳಕಾಗಿರುವ ಬಕೆಟ್‌ಗೆ ಬಿಸಿನೀರು ತುಂಬಿಸಿ. ನಂತರ ಇದಕ್ಕೆ 1 ರಿಂದ 2 ಕಪ್ ಬಿಳಿ ವಿನೆಗರ್ ಮತ್ತು ಮನೆಯಲ್ಲಿರುವ ಪಾತ್ರೆ ತೊಳೆಯುವ ದ್ರಾವಣವನ್ನು ಸೇರಿಸಿ ಮಿಕ್ಸ್ ಮಾಡಿ. ಇದಾದ ಬಳಿಕ ಸುಮಾರು 20 ರಿಂದ 30 ನಿಮಿಷ ಬಳಿಕ ನೀರು ತೆಗೆದು ನಿಂಬೆಹಣ್ಣಿನಿಂದ ಉಜ್ಜಿದ್ರೆ ಬಕೆಟ್ ಹೊಸದರಂತೆಯೇ ಕಾಣುತ್ತದೆ.

35
ಲೆಮನ್ ಮತ್ತು ಬೇಕಿಂಗ್ ಸೋಡಾ

ನಾಲ್ಕರಿಂದ ಐದು ಟೀ ಸ್ಪೂನ್ ಬೇಕಿಂಗ್ ಸೋಡಾ ತೆಗೆದುಕೊಂಡು ಅದಕ್ಕೆ ಒಂದು ಟೀ ಸ್ಪೂನ್‌ನಷ್ಟು ನಿಂಬೆಹಣ್ಣಿನ ರಸ ಸೇರಿಸಿ ಮಿಶ್ರಣ ತಯಾರಿಸಿಕೊಳ್ಳಿ. ನಂತರ ಈ ಮಿಶ್ರಣವನ್ನು ಕಲೆಗಳ ಮೇಲೆ ತೆಳುವಾಗಿ ಸವರಿ ಅರ್ಧ ಗಂಟೆ ಎತ್ತಿಡಿ. ನಂತರ ಬಿಸಿನೀರಿನಿಂದ ಬಕೆಟ್‌ನ್ನು ಮನೆಯಲ್ಲಿರುವ ಸೋಪ್‌/ಪೌಡರ್‌ನಿಂದ ತೊಳೆದ್ರೆ ಹಠಮಾರಿ ಕಲೆಗಳು ಹೋಗುತ್ತವೆ.

45
ಪಿತಾಂಬರಿ ಪೌಡರ್

ಪಿತಾಂಬರಿ ಪೌಡರ್‌ನ್ನು ಸ್ಟೀಲ್ ಬಕೆಟ್‌ಗಳನ್ನು ತೊಳೆಯಲು ಬಳಸಿಕೊಳ್ಳಹುದು. ಕಲೆಗಳ ಮೇಲೆ ಪಿತಾಂಬರಿ ಪುಡಿಯನ್ನು ಸಿಂಪಡಿಸಿ, ಕ್ರೀಮ್‌ನಂತೆ ಬಕೆಟ್ ಮೇಲೆ ಅನ್ವಯಿಸಬೇಕು. ಸುಮಾರು 20 ರಿಂದ 30 ನಿಮಿಷದ ಬಳಿಕ ಬಕೆಟ್ ತೊಳೆದ್ರೆ ಕಲೆಗಳು ಮಾಯವಾಗಿರುತ್ತವೆ. ಈ ಸಲಹೆ ಸಹ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

55
ಸ್ಟೀಲ್ ಪಾತ್ರೆ ತೊಳೆಯುವ ಮುಂಚೆ ಈ ವಿಷಯ ಗೊತ್ತಿರಲಿ

ಸ್ಟೀಲ್ ಪಾತ್ರೆಗಳನ್ನು ತೊಳೆಯುವಾಗ ಮೃದುವಾಗ ಸ್ಪಾಂಜ್ ಮಾದರಿಯನ್ನು ಬಳಸಬೇಕು. ಸ್ಟೀಲ್ ಸ್ಕ್ರಬರ್ ತೆಗೆದುಕೊಂಡು ತೊಳೆದ್ರೆ ಸ್ಟೀಲ್ ಪಾತ್ರೆಗಳ ಮೇಲೆ ಗೆರೆಗಳು ಬೀಳುವ ಸಾಧ್ಯತೆಗಳಿರುತ್ತವೆ.

ಇದನ್ನೂ ಓದಿ: ಸುಟ್ಟ ಬಾಣಲೆಯನ್ನು ಹೊಸದಾಗಿಸುವ ಅಡುಗೆಮನೆ ರಹಸ್ಯ! ತಿಕ್ಕೋದು, ಉಜ್ಜೋದು ಬೇಡವೇ ಬೇಡ!

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories