ಚಪಾತಿ ತಣ್ಣಗಾದಾಗ ಗಟ್ಟಿಯಾಗಲು ಹಿಟ್ಟು ಕಲಸುವುದರಿಂದ ಹಿಡಿದು ಸಂಗ್ರಹಿಸುವವರೆಗೆ ಮಾಡುವ ನಾಲ್ಕು ಸಾಮಾನ್ಯ ತಪ್ಪುಗಳೇ ಕಾರಣ. ಬೆಚ್ಚಗಿನ ನೀರು ಬಳಸುವುದು, ಹಿಟ್ಟಿಗೆ ವಿಶ್ರಾಂತಿ ನೀಡುವುದು, ಸರಿಯಾದ ಉರಿಯಲ್ಲಿ ಬೇಯಿಸುವುದು ಚಪಾತಿಯನ್ನು ದೀರ್ಘಕಾಲ ಮೃದುವಾಗಿಡಬಹುದು ಎಂದು ಷೆಫ್ ಸಲಹೆ ನೀಡುತ್ತಾರೆ.
ಎಷ್ಟೋ ಸಂದರ್ಭಗಳಲ್ಲಿ ಚಪಾತಿ ಮಾಡಿಟ್ಟ ಕೆಲವೇ ಗಂಟೆಗಳಲ್ಲಿ ಅದು ತಣ್ಣಗಾಗುತ್ತಿದ್ದಂತೆಯೇ ಗಟ್ಟಿಯಾಗಿಬಿಡುತ್ತದೆ. ಇದಕ್ಕೆ ಕಾರಣ ಏನು ಗೊತ್ತಾ? ನೀವು ಮಾಡ್ತಿರೋ ನಾಲ್ಕು ತಪ್ಪುಗಳೇ ಇದಕ್ಕೆ ಕಾರಣ ಎನ್ನುತ್ತಾರೆ ಮಾಸ್ಟರ್ಷೆಫ್ ಮೊಬಾಸಿರ್ ಹಾಸನ್.
26
ನಾಲ್ಕು ತಪ್ಪುಗಳಿಂದ ಹೀಗಾಗತ್ತೆ
ಹಾಗಿದ್ದರೆ ಆ ನಾಲ್ಕು ತಪ್ಪುಗಳು ಯಾವುದು ಎಂದು ನೋಡೋಣ. ಇದು ಶುರುವಾಗುವುದು ಹಿಟ್ಟು ಕಲಸುವುದರಿಂದಲೇ. ಅಲ್ಲಿಂದ ಆಗುವ ತಪ್ಪು ಪ್ರತಿ ಹೆಜ್ಜೆಯಲ್ಲಿಯೂ ಆಗುತ್ತಿದೆ.ಆದರೆ ಸಾಧಾರಣವಾಗಿ ಈ ತಪ್ಪು ಎಷ್ಟೋ ಮಂದಿಗೆ ತಿಳಿದೇ ಇರುವುದಿಲ್ಲ.
36
ತಪ್ಪು 1: ಕಲಸುವಾಗ ತಣ್ಣೀರು ಹಾಕುವುದು
ಮೊದಲನೆಯ ತಪ್ಪು ಎಂದರೆ, ಹಿಟ್ಟನ್ನು ಕಲಸುವಾಗ ತಣ್ಣೀರು ಹಾಕುವುದು. ಮೊಬಾಸಿರ್ ಹಾಸನ್ ಅವರು ಹೇಳುವ ಪ್ರಕಾರ, ಹಿಟ್ಟನ್ನು ತಣ್ಣೀರಿನಲ್ಲಿ ಕಲಸಬಾರದು, ಬದಲಿಗೆ ಸ್ವಲ್ಪ ಬೆಚ್ಚಗಿನ ನೀರಿನಲ್ಲಿ ಕಲಸಬೇಕು. ಇದರಿಂದ ಮಾಯಿಸ್ಟರೈಸರ್ ಚೆನ್ನಾಗಿ ಉಳಿಯುತ್ತದೆ. ದೀರ್ಘಕಾಲ ಚಪಾತಿ ಸಾಫ್ಟ್ ಆಗಿಯೇ ಇರುತ್ತದೆ.
ಎರಡನೆಯ ತಪ್ಪು, ಹಿಟ್ಟನ್ನು ಕಲಸಿದ ತಕ್ಷಣವೇ ಚಪಾತಿ ಮಾಡುವುದು. ಇದು ತಪ್ಪು. ಹಿಟ್ಟನ್ನು ಕಲಸಿ ಕನಿಷ್ಠ 15 ನಿಮಿಷಗಳವರೆಗೆ ರೆಸ್ಟ್ ಕೊಡಬೇಕು. ಅದರ ಮೇಲೆ ಒಂದು ಬಟ್ಟೆ ಮುಚ್ಚಿಟ್ಟರೆ ಚಪಾತಿ ದೀರ್ಘಕಾಲ ಸಾಫ್ಟ್ ಆಗಿರುತ್ತದೆ.
56
ತಪ್ಪು 3: ಅತಿ ಕಡಿಮೆ ಹೀಟ್ನಲ್ಲಿ ಬೇಯಿಸುವುದು
ಚಪಾತಿ ಮಾಡುವಾಗ ಅತಿ ಕಡಿಮೆ ಹೀಟ್ನಲ್ಲಿ ಬೇಯಿಸುವುದು. ಈ ಸಂದರ್ಭದಲ್ಲಿ ಚಪಾತಿಯಲ್ಲಿನ ನೀರಿನಾಂಶವೆಲ್ಲಾ ನಿಧಾನವಾಗಿ ಹೀರುವುದರಿಂದ ಚಪಾತಿ ಗಟ್ಟಿಯಾಗುತ್ತದೆ. ಆದ್ದರಿಂದ ಅದನ್ನು ಮೀಡಿಯಂ ಹೈ ಹೀಟ್ನಲ್ಲಿ ಬೇಯಿಸಬೇಕು.
66
ತಪ್ಪು 4: ನೇರವಾಗಿ ಡಬ್ಬದಲ್ಲಿ ಹಾಕುವುದು
ಕೊನೆಯದಾಗಿ ಚಪಾತಿಯನ್ನು ನೇರವಾಗಿ ಡಬ್ಬದಲ್ಲಿ ಹಾಕುವುದು. ಇದು ಸರಿಯಲ್ಲ. ಅದರ ಬದಲು ಒಂದು ಕಾಟನ್ ಬಟ್ಟೆ ಹಾಕಿ ಅದರಲ್ಲಿ ಚಪಾತಿ ಇಟ್ಟು ಮುಚ್ಚಬೇಕು ಎನ್ನುವುದು ಮಾಸ್ಟರ್ಷೆಫ್ ಸಲಹೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.