ದೋಸೆ ಮತ್ತು ಇಡ್ಲಿ ಹಿಟ್ಟನ್ನು ಸಂಗ್ರಹಿಸಲು ಸ್ಟೀಲ್ ಪಾತ್ರೆಗಳು ಅತ್ಯುತ್ತಮ ಮತ್ತು ಸುರಕ್ಷಿತ ಆಯ್ಕೆಯಾಗಿದೆ. ಪ್ಲಾಸ್ಟಿಕ್, ಅಲ್ಯೂಮಿನಿಯಂ ಮತ್ತು ತಾಮ್ರದ ಪಾತ್ರೆಗಳ ಬಳಕೆಯ ಮಾಹಿತಿಯನ್ನು ಈ ಲೇಖನ ಹೊಂದಿದೆ.
ದಕ್ಷಿಣ ಭಾರತದ ಬಹುತೇಕ ಮನೆಗಳಲ್ಲಿ ವಾರಕ್ಕೆ ಎರಡು ಬಾರಿಯಾದ್ರೂ ಇಡ್ಲಿ ಮತ್ತು ದೋಸೆ ಇರುತ್ತದೆ. ದೋಸೆ ಮತ್ತು ಇಡ್ಲಿ ಮಾಡೋದು ದೀರ್ಘವಾದ ಪ್ರಕ್ರಿಯೆಯಾಗಿದ್ದು, ಒಂದು ದಿನ ಮುಂಚಿತವಾಗಿಯೇ ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ. ರಾತ್ರಿ ಅಥವಾ 8 ಗಂಟೆ ಮುಂಚೆಯೇ ಸಿದ್ಧ ಮಾಡಿರಿಕೊಂಡಿರುವ ಹಿಟ್ಟನ್ನು ಯಾವ ಪಾತ್ರೆಯಲ್ಲಿ ಸ್ಟೋರ್ ಮಾಡಿಕೊಳ್ಳಬೇಕು ಎಂಬುದರ ಮಾಹಿತಿಯನ್ನ ಹೊಂದಿದೆ.
25
ಪ್ಲಾಸ್ಟಿಕ್ ಪಾತ್ರೆ ಅಥವಾ ಡಬ್ಬ Plastic: Second Best (with conditions)
ಇಂದು ಪ್ಲಾಸ್ಟಿಕ್ ಪಾತ್ರೆಗಳು ಅಡುಗೆಮನೆಯನ್ನು ಆಳುತ್ತಿವೆ. ಏರ್ ಟೈಟ್ ಕಂಟೇನರ್ ಅಂತ ಹೇಳುತ್ತಿದ್ದಂತೆ ಪ್ಲಾಸ್ಟಿಕ್ ಕಣ್ಮುಂದೆ ಬರುತ್ತದೆ. ಉತ್ತಮ ಗುಣಮಟ್ಟದ, ಬಿಪಿಎ-ಮುಕ್ತ ಪ್ಲಾಸ್ಟಿಕ್ ಕಂಟೇನರ್‌ಗಳಲ್ಲಿ ಹಿಟ್ಟು ಸಂಗ್ರಹಿಸಿಡಬಹುದು. ಆದ್ರೆ ಹೊರಗಿನ ವಾತಾವರಣ ಅಂದ್ರೆ ಗಾಳಿಯೂ ಸಹ ಡಬ್ಬದೊಳಗೆ ಹೋಗಲ್ಲ. ಅಗ್ಗದ ಪ್ಲಾಸ್ಟಿಕ್ ದೋಸೆಹಿಟ್ಟಿನ ರುಚಿಯನ್ನು ಹಾಳು ಮಾಡಬಹುದು ಅಥವಾ ಹುದುಗುವಿಕೆ ಪ್ರಕ್ರಿಯೆಯನ್ನು ನಿಧಾನಗೊಳಿಸುವ ಸಾಧ್ಯತೆ ಇರುತ್ತೆ. ಆರೋಗ್ಯ ದೃಷ್ಟಿಯಿಂದ ಪ್ಲಾಸ್ಟಿಕ್ ಬಳಕೆ ಅಪಾಯಕಾರಿ.
35
ಸ್ಟೀಲ್ Steel (Stainless Steel)
ಬಹುತೇಕರು ಸ್ಟೀಲ್ ಪಾತ್ರೆಗಳನ್ನು ಬಳಸುತ್ತಾರೆ. ಸ್ಟೀಲ್ ಪಾತ್ರೆಗಳು ಆಹಾರಕ್ಕೆ ಸುರಕ್ಷಿತ ದರ್ಜೆಯದ್ದು ಎಂದು ಪರಿಗಣಿಸಲಾಗುತ್ತದೆ. ಈ ಪಾತ್ರೆಗಳಲ್ಲಿ ದೋಸೆ/ಇಡ್ಲಿ ಹಿಟ್ಟನ್ನು ಸ್ಟೋರ್ ಮಾಡಬಹುದು. ಈ ಪಾತ್ರೆಗಳು ಆಹಾರದ ಮೇಲೆ ಯಾವುದೇ ರೀತಿಯ ರಾಸಾಯನಿಕ ಬಿಡುಗಡೆ ಮಾಡಲ್ಲ. ಈ ಪಾತ್ರೆಗಳನ್ನು ಸುಲಭವಾಗಿ ತೊಳೆಯಬಹುದು. ಫೇಸ್‌ಬುಕ್‌ನಲ್ಲಿರುವ ಬಹುತೇಕ ಬಳಕೆದಾರರು ಸಹ ಸ್ಟೇನ್‌ಲೆಸ್ ಸ್ಟೀಲ್ ಹಿಟ್ಟಿನ ಪಾತ್ರೆಗಳೇ ಅತ್ಯುತ್ತಮ ಆಯ್ಕೆ ಎಂದು ಹೇಳುತ್ತಾರೆ.
ಅಲ್ಯೂಮಿನಿಯಂ ಪಾತ್ರೆಗಳು ದೋಸೆ ಮತ್ತು ಇಡ್ಲಿ ಬ್ಯಾಟರ್‌ನಲ್ಲಿರುವ ನೈಸರ್ಗಿಕ ಲ್ಯಾಕ್ಟಿಕ್ ಆಮ್ಲ ಮತ್ತು ಹುದುಗುವಿಕೆ ಪ್ರಕ್ರಿಯೆಯು ಲೋಹದೊಂದಿಗೆ ಪ್ರತಿಕ್ರಿಯಿಸುವ ಸಾಧ್ಯತೆಗಳಿರುತ್ತವೆ. ಈ ಪಾತ್ರೆ ಬಳಕೆ ಮಾಡಿದಂತೆ ಸವೆದು ಲೋಹದಂಶವನ್ನು ಬಿಡುಗಡೆ ಮಾಡುತ್ತದೆ. ಈ ಸವೆತದಿಂದ ಲೋಹದ ಅಂಶ ಆಹಾರಕ್ಕೆ ವರ್ಗಾವಣೆಯಾಗುವ ಅಪಾಯವಿರುತ್ತದೆ.
55
ತಾಮ್ರ (Copper)
ದೋಸೆ ಮತ್ತು ಇಡ್ಲಿ ಬ್ಯಾಟರ್ ಸಂಗ್ರಹಣೆಗೆ ತಾಮ್ರ ಸೂಕ್ತವಲ್ಲ ಎಂಬ ಅಭಿಪ್ರಾಯವಿದೆ. ಆಮ್ಲೀಯ ಮತ್ತು ಹುದುಗುವ ಆಹಾರಗಳೊಂದಿಗೆ ತಾಮ್ರವು ಹೆಚ್ಚು ಪ್ರತಿಕ್ರಿಯಾತ್ಮಕವಾಗಿರುತ್ತದೆ. ಇದು ರಾಸಾಯನಿಕ ವಿಷತ್ವವನ್ನು ಉಂಟುಮಾಡಬಹುದು ಮತ್ತು ಬ್ಯಾಟರ್‌ನ ರುಚಿ ಮತ್ತು ಸುರಕ್ಷತೆಯನ್ನು ಹಾಳುಮಾಡಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.