ರಾತ್ರಿಯಿಡಿ ನೆನೆ ಹಾಕ್ಬೇಕಾಗಿಲ್ಲ, ಅರೆ ಕ್ಷಣದಲ್ಲಿ ಮೃದುವಾಗುತ್ತೆ ಕಡಲೆ

Published : Mar 12, 2026, 03:48 PM IST

ಕಡ್ಲೆ ಉಸ್ಲಿ ಮಾಡ್ಬೇಕು ಇಲ್ಲ ಚೋಲೆ ಮಸಾಲ ಮಾಡ್ಬೇಕು ಅಂತ ಪ್ಲಾನ್ ಮಾಡಿರ್ತೀರಿ. ಆದ್ರೆ ಕಡಲೆಯನ್ನು ರಾತ್ರಿ ಪೂರ್ತಿ ನೆನೆ ಹಾಕೋಕೆ ಮರೆತಿರ್ತೀರಿ. ಇಂಥ ಟೈಂನಲ್ಲಿ  ನಿಮ್ಮ ಪ್ಲಾನ್ ಕ್ಯಾನ್ಸಲ್ ಆಗುತ್ತೆ. ರಾತ್ರಿ ಪೂರ್ತಿ ಕಡಲೆ ಕಾಳನ್ನು ನೆನೆಸದೆ ಉಸ್ಲಿ ಮಾಡ್ಬಹುದು. ಅದು ಹೇಗೆ ಗೊತ್ತಾ? 

PREV
17
ಕಡಲೆ ಕಾಳು

ಕಡಲೆ ಕಾಳು ಕಟ್ಟಿಯಾಗಿರುತ್ತೆ. ಅದನ್ನು ನೆನೆಸದೆ ಬೇಯಿಸೋದು ಕಷ್ಟ., ಕಡಲೆ ಕಾಳು ಮೃದುವಾಗ್ಲಿ ಎನ್ನವ ಕಾರಣಕ್ಕೆ ರಾತ್ರಿ ಪೂರ್ತಿ ಕಾಳನ್ನು ನೀರಿನಲ್ಲಿ ನೆನೆ ಹಾಕ್ತಾರೆ. ಆದ್ರೆ ನೀವು ರಾತ್ರಿ ಪೂರ್ತಿ ಇದನ್ನು ನೆನೆ ಹಾಕಬೇಕಾಗಿಲ್ಲ. ಕೆಲ ಟ್ರಿಕ್ಸ್ ಬಳಸಿ, ಮೃದುವಾದ ಕಡಲೆ ಉಸ್ಲಿ ಮಾಡಬಹುದು.

27
ಮೊದಲು ಏನು ಮಾಡ್ಬೇಕು?

ನೀವು ಕಡಲೆ ಕಾಳಿನ ಪಲ್ಯ, ಉಸ್ಲಿ ಅಥವಾ ಬಾಜಿ ಮಾಡುವ ಪ್ಲಾನ್ ನಲ್ಲಿದ್ರೆ ಮೊದಲು ಒಂದು ಪಾತ್ರೆಯಲ್ಲಿ ನೀರನ್ನು ಹಾಕಿ ಕುದಿಸಿ. ನೀರು ಕುದಿಯುತ್ತಿದ್ದಂತೆ ಇನ್ನೊಂದು ಇನ್ನೊಂದು ಪಾತ್ರೆಗೆ ಕಡಲೆ ಕಾಳು ಹಾಕಿ, ಅದರ ಮೇಲೆ ಬಿಸಿ ನೀರನ್ನು ಹಾಕಿ. ಸುಮಾರು 20 -30 ನಿಮಿಷ ನೀವು ಅದನ್ನು ಹಾಗೆ ಬಿಡಬೇಕು.

37
ಬೇಯಿಸುವ ವಿಧಾನ

ನೀವು ಕಡಲೆ ಕಾಳನ್ನು ಬಿಸಿ ನೀರಿನಲ್ಲಿ ನೆನೆ ಹಾಕಿದಾಗ ಅದು ಬೇಗ ಮೃದುವಾಗುತ್ತದೆ. ರಾತ್ರಿ ಪೂರ್ತಿ ನೆನೆ ಹಾಕಿದಾಗ ಉಬ್ಬಿ ಬರುವಂತೆ ಕಡಲೆ ಗಾತ್ರ ಹೆಚ್ಚಾಗುವುದಿಲ್ಲ. ಆದ್ರೆ ಬೇಯಿಸಲು ತೊಂದ್ರೆ ಆಗೋದಿಲ್ಲ. ನೀವು ಈ ಕಡಲೆಯನ್ನು ಬೇಯಿಸಲು ಪಾತ್ರೆ ಬದಲು ಕುಕ್ಕರ್ ಬಳಸಬೇಕು. ಫ್ರೆಶರ್ ಕುಕ್ಕರ್ ಗೆ ಬಿಸಿ ನೀರನ್ನು ಹಾಕಿ, ಕಡಲೆ ಹಾಕಿ, ಚಿಟಕಿ ಉಪ್ಪು, ಎಣ್ಣೆ ಹಾಕಿ ಬೇಯಿಸಬೇಕು. ಕುಕ್ಕರ್ 6 -7 ಸಿಟಿ ಹೊಡೆಸಿ. ಇದ್ರಿಂದ ಕಡಲೆ ಬೇಗ ಬೇಯುತ್ತದೆ. ಅದ್ರ ಟೆಕ್ಸ್ಚರ್ ಹಾಳಾಗೋದಿಲ್ಲ.

47
ಅಡುಗೆ ಸೋಡಾ

ನೆನೆಸದೆ ಕಡಲೆ ಕಾಳು ಬೇಗ ಮೃದುವಾಗ್ಬೇಕು ಅಂದ್ರೆ ಅಡುಗೆ ಸೋಡಾ ಬಳಸಬಹುದು. ಆದ್ರೆ ಅಡುಗೆ ಸೋಡಾ ಅತಿಯಾದ್ರೆ ರುಚಿ ಹಾಗೂ ಪೋಷಕಾಂಶ ಹಾಳಾಗಬಹುದು. ನೀವು ಅಡುಗೆ ಸೋಡಾ ಬಳಸುತ್ತಿದ್ದರೆ ಅತಿ ಕಡಿಮೆ ಪ್ರಮಾಣದಲ್ಲಿ ಇದನ್ನು ಬಳಸಬೇಕು.

57
ಗಾಢ ಬಣ್ಣ

ನೀವು ಹೊಟೇಲ್, ರೆಸ್ಟೋರೆಂಟ್ ನಂತೆ ಕಡಲೆ ಬಣ್ಣ ಗಾಢವಾಗಿರಬೇಕು ಅಂದ್ರೆ ಒಂದು ಟ್ರಿಕ್ಸ್ ಫಾಲೋ ಮಾಡ್ಬೇಕು. ಟೀ ಎಲೆಗಳು ನಿಮ್ಮ ಕಡಲೆ ಕಾಳಿನ ಬಣ್ಣವನ್ನು ಗಾಢವಾಗಿಡುತ್ತದೆ. ನೀವು ಕುಕ್ಕರ್ ನಲ್ಲಿ ಕಡಲೆ ಕಾಳನ್ನು ಬೇಯಿಸುವ ಮೊದಲು ಒಂದು ಬಟ್ಟೆಗೆ ಟೀ ಎಲೆಗಳನ್ನು ಹಾಕಿ, ಅದನ್ನು ಕಟ್ಟಿ, ಕುಕ್ಕರ್ ಒಳಗೆ ಇಡಬೇಕು. ಇದು ಕಡಲೆ ಬಣ್ಣವನ್ನು ಗಾಢಗೊಳಿಸುತ್ತದೆ.

67
ಮಸಾಲೆ ಮುಖ್ಯ

ಕಡಲೆ ಕಾಳಿನ ರುಚಿ ಹೆಚ್ಚಾಗ್ಬೇಕು ಅಂದ್ರೆ ನೀವು ಅದಕ್ಕೆ ಏನೆಲ್ಲ ಮಸಾಲೆ ಹಾಕ್ತೀರಿ ಅನ್ನೋದು ಮುಖ್ಯವಾಗುತ್ತದೆ. ಗರಂ ಮಸಾಲೆ ಜೊತೆ ಮೆಂತ್ಯ ಎಲೆ, ಮಾವಿನ ಕಾಯಿ ಪುಡಿ ಇವೆಲ್ಲ ಅದರ ರುಚಿಯನ್ನು ಡಬಲ್ ಮಾಡುತ್ತದೆ. ಶುಂಠಿ, ಬೆಳ್ಳುಳ್ಳಿ, ಟೊಮೆಟೊವನ್ನು ನೀವು ಬಳಸಬೇಕು.

77
ಕಡಲೆ ಕಾಳಿನ ಪ್ರಯೋಜನ

ಕಡಲೆಯಲ್ಲಿರುವ ಹೆಚ್ಚಿನ ಪ್ರೋಟೀನ್ ಮತ್ತು ಫೈಬರ್ ಹೆಚ್ಚು ಹೊತ್ತು ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ಊಟದ ನಡುವೆ ತಿಂಡಿ ತಿನ್ನುವ ಹಂಬಲವನ್ನು ಕಡಿಮೆ ಮಾಡುತ್ತದೆ. ಇದು ಕ್ಯಾಲೋರಿ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ. ನಿಯಮಿತವಾಗಿ ಕಡಲೆ ತಿನ್ನುವುದರಿಂದ ಜೀರ್ಣಕ್ರಿಯೆ, ಹೃದಯದ ಆರೋಗ್ಯ, ಮೆದುಳಿನ ಕಾರ್ಯ ಮತ್ತು ಒಟ್ಟಾರೆ ಆರೋಗ್ಯ ಸುಧಾರಿಸುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories