ಕಡಿಮೆ ಸಮಯದಲ್ಲಿ ರುಚಿಕರವಾಗಿ ಅಡುಗೆ ಮಾಡೋದು ಹೇಗೆ? ಇಲ್ಲಿದೆ ಸೂಪರ್ ಕಿಚನ್ ಟಿಪ್ಸ್

Published : Oct 30, 2025, 09:36 PM IST

Delicious Cooking Secrets: ರುಚಿಕರವಾದ ಆಹಾರ ತಯಾರಿಸಲು ಸರಿಯಾದ ಯೋಜನೆ ಮತ್ತು ಕೆಲವು ಸ್ಮಾರ್ಟ್ ಟಿಪ್ಸ್‌ಗಳು ಸಹಕಾರಿ. ಅಡುಗೆಗೆ ಮುಂಚಿತವಾಗಿ ತರಕಾರಿ ಕತ್ತರಿಸುವುದು, ಮಸಾಲೆ ಸಿದ್ಧಪಡಿಸಿಕೊಳ್ಳುವುದು ಸೇರಿದಂತೆ ಕೆಲವು ಸೂಪರ್ ಟಿಪ್ಸ್‌ಗಳು ಇಲ್ಲಿವೆ

PREV
16
ರುಚಿಕರ ಅಡುಗೆ

ಅಡುಗೆ ಮಾಡೋದು ಸುಲಭದ ಕೆಲಸವಲ್ಲ, ಅದರಲ್ಲಿಯೂ ರುಚಿಕರವಾದ ಆಹಾರ ತಯಾರಿಸಿ ಎಲ್ಲರಿಂದಲೂ ಬೇಷ್ ಅನ್ನಿಸಿಕೊಳ್ಳಬೇಕೆಂದ್ರೆ ಸ್ವಲ್ಪ ಹೆಚ್ಚು ಶ್ರಮ ಹಾಕಬೇಕಾಗುತ್ತದೆ. ಮನೆಯಲ್ಲಿ ಮಕ್ಕಳಿಂದ ಹಿಡಿದು ಹಿರಿಯರು ಇರುತ್ತಾರೆ. ಹಾಗಾಗಿ ಮಹಿಳೆಯರಿಗೆ ಏನು ಅಡುಗೆ ಮಾಡಬೇಕು ಅನ್ನೋದು ಸವಾಲಿನ ಕೆಲಸವಾಗಿರುತ್ತದೆ. ಆದರೆ ಸರಿಯಾದ ಯೋಜನೆ, ಕೆಲವು ಸ್ಮಾರ್ಟ್ ಟಿಪ್ಸ್ ಪಾಲಿಸಿದರೆ ಅಡುಗೆ ಬೇಗನೆ ಮುಗಿಯುತ್ತದೆ. ಸಮಯವೂ ಉಳಿತಾಯವಾಗುತ್ತದೆ.

26
ಕಡಿಮೆ ಸಮಯದಲ್ಲಿ ಅಡುಗೆ ಮಾಡುವ ಸಲಹೆಗಳು

ಮಹಿಳೆಯರು ಮನೆಯಿಂದ ಹೊರಗಡೆ ಕೆಲಸ ಮಾಡುತ್ತಿದ್ರೆ, ಕಡಿಮೆ ಸಮಯದಲ್ಲಾಗುವ ಅಡುಗೆಯನ್ನು ಹುಡುಕುತ್ತಾರೆ. ಸಮಯಕ್ಕೆ ಸರಿಯಾಗಿ ಅಡುಗೆ ಮಾಡದಿದ್ದರೆ ಎಲ್ಲಾ ಕೆಲಸಗಳು ತಡವಾಗುತ್ತವೆ. ಹಾಗಾಗಿ ಹೆಚ್ಚಿನ ಮಹಿಳೆಯರು ಬೆಳಗ್ಗೆ ಅವಸರದಲ್ಲಿ ಅಡುಗೆ ಮಾಡುತ್ತಾರೆ. ಕೆಲವು ಸರಳ ಸಲಹೆಗಳನ್ನು ಯೂಸ್ ಮಾಡಿದ್ರೆ ಕಡಿಮೆ ಸಮಯದಲ್ಲಿ ರುಚಿಕರವಾದ ಅಡುಗೆ ಮಾಡಬಹುದು.

36
ಮುಂಚೆಯೇ ಪ್ಲಾನ್ ಮಾಡ್ಕೊಳ್ಳಿ

ಕಿಚನ್‌ಗೆ ಕಾಲಿಡುವ ಮುನ್ನವೇ ಏನು ಅಡುಗೆ ಮಾಡಬೇಕೆಂದು ಪ್ಲಾನ್ ಮಾಡಿಕೊಂಡಿರಬೇಕಾಗುತ್ತದೆ. ಬೆಳಗ್ಗೆಯ ಅಡುಗೆ ಕುರಿತು ರಾತ್ರಿಯೇ ಯೋಚಿಸಿರಬೇಕು. ರಾತ್ರಿಯೇ ನಿರ್ಧರಿಸಿದರೆ ಮರುದಿನ ಅಡುಗೆಯಯ ಟೆನ್ಶನ್ ಇರುವುದಿಲ್ಲ. ಪ್ಲಾನ್‌ನಂತೆಯೇ ರಾತ್ರಿಯೇ ಅಗತ್ಯ ತರಕಾರಿಗಳನ್ನು ಮೊದಲೇ ಕತ್ತರಿಸಿ ಫ್ರಿಜ್‌ನಲ್ಲಿಟ್ಟರೆ ಸಮಯ ಉಳಿಯುತ್ತದೆ. ತರಕಾರಿ ಕತ್ತರಿಸಿಟ್ಟುಕೊಳ್ಳೋದರಿಂದ ಬೆಳಗ್ಗೆ ಅಧಿಕ ಸಮಯ ಉಳಿತಾಯವಾಗುತ್ತದೆ.

46
ಅಡುಗೆ ಪಾತ್ರೆಗಳು

ಅಡುಗೆ ಮಾಡುವ ಮುಂಚೆಯೇ ಬೇಕಾಗುವ ಎಲ್ಲಾ ಪಾತ್ರೆಗಳನ್ನು ತೊಳೆದಿಟ್ಟುಕೊಂಡು ಅಚ್ಚುಕಟ್ಟಾಗಿ ಜೋಡಿಸಿಕೊಳ್ಳಿ. ಆಹಾರ ತಯಾರಿಸುವಾಗ ಪಾತ್ರೆಗಳು ಕರೆಕ್ಟ್ ಆಗಿ ಕೈಗಳಿಗೆ ಸಿಗುತ್ತಿದ್ರೆ ಅಡುಗೆ ಕೆಲಸ ಕಡಿಮೆ ಸಮಯದಲ್ಲಿಯೇ ಮುಗಿಸಬಹುದಾಗಿದೆ. ಸ್ಮಾರ್ಟ್ ಕಿಚನ್ ಗ್ಯಾಜೆಟ್‌ಗಳಾದ ಪ್ರೆಶರ್ ಕುಕ್ಕರ್, ಮಿಕ್ಸಿ, ಇಂಡಕ್ಷನ್ ಸ್ಟೌವ್ ಬಳಕೆಯಿಂದಲೂ ಸಮಯ ಉಳಿತಾಯವಾಗುತ್ತದೆ.

56
ಮಸಾಲೆಗಳನ್ನು ಸಿದ್ಧಪಡಿಸಿಕೊಳ್ಳಿ

ಬಿಡುವಿನ ಸಮಯದಲ್ಲಿ ಅಡುಗೆಗೆ ಬೇಕಾಗುವ ಮಸಾಲೆಗಳನ್ನು ಸಿದ್ಧಪಡಿಸಿಕೊಳ್ಳಿ. ಖಾರದ ಪುಡಿ, ಗರಂ ಮಸಾಲೆ ಪುಡಿ, ಗೊಜ್ಜಿನ ಪುಡಿಗಳನ್ನು ತಯಾರಿಸಿ ಗಾಳಿಯಾಡದ ಡಬ್ಬದಲ್ಲಿ ತುಂಬಿಸಿಟ್ಟುಕೊಳ್ಳಿ. ಇದರಿಂದ ಅಡುಗೆ ಮಾಡುವಾಗ ಸಮಯ ಉಳಿತಾಯವಾಗುತ್ತದೆ. ಅಡುಗೆ ಮಾಡುವಾಗ ಫೋನ್ ನೋಡುವುದು, ಕರೆಗಳಲ್ಲಿ ಮಾತನಾಡುವುದರಿಂದ ಸಮಯ ವ್ಯರ್ಥವಾಗುತ್ತದೆ. ಅಡುಗೆ ಮಾಡುತ್ತಲೇ ಅಡುಗೆಮನೆ ಸ್ವಚ್ಛಗೊಳಿಸಿದರೆ, ಕ್ಲೀನಿಂಗ್‌ಗೆ ಪ್ರತ್ಯೇಕ ಸಮಯ ಬೇಕಾಗುವುದಿಲ್ಲ.

ಇದನ್ನೂ ಓದಿ: ಬ್ಯಾಚುಲರ್ಸ್‌ ರೆಸಿಪಿ: 15 ನಿಮಿಷದಲ್ಲಿ ಮಾಡ್ಕೊಳ್ಳಿ ಮೊಟ್ಟೆ ತೊಕ್ಕು, ಗೆಸ್ಟ್ ಬಂದಾಗ ಮಾಡಿದ್ರೆ ತಿಂದವರು ಫಿದಾ!

66
ಕೂಲ್ ಆಗಿ ಅಡುಗೆ ತಯಾರಿಸಿ

ಅಡುಗೆಯನ್ನು ಎಂಜಾಯ್ ಮಾಡುತ್ತಾ ತಯಾರಿಸಬೇಕಾಗುತ್ತದೆ. ಒತ್ತಡದಲ್ಲಿ ಅಡುಗೆ ಮಾಡಿದ್ರೆ ಅದರಲ್ಲಿ ಯಾವುದೇ ರುಚಿ ಇರುವುದಿಲ್ಲ. ಮನಸ್ಸಿನಲ್ಲಿ ಒತ್ತಡವಿದ್ದರೆ ಅದರ ಪರಿಣಾಮ ಅಡುಗೆಯ ಮೇಲೂ ಬೀಳುತ್ತದೆ. ಖುಷಿಯಿಂದ, ಎಂಜಾಯ್ ಮಾಡುತ್ತಾ ಅಡುಗೆ ಮಾಡಿದರೆ ರುಚಿ ಯಾವಾಗಲೂ ವಿಶೇಷವಾಗಿರುತ್ತದೆ.

ಇದನ್ನೂ ಓದಿ: ಟೀ ರುಚಿಯಾಗಿ ಬರಬೇಕೆಂದ್ರೆ ಹಾಲು, ನೀರು ಮುಖ್ಯವಲ್ಲ... ಸೀಕ್ರೆಟ್ ಟಿಪ್ಸ್ ಇಲ್ಲಿದೆ ನೋಡಿ

Read more Photos on
click me!

Recommended Stories