ಸ್ಟೀಲ್ ಸ್ಕ್ರಬ್ಬರ್ ಬೇಡವೇ ಬೇಡ.. ಸೀದ ಪಾತ್ರೆ, ಬಾಣಲೆ ಸುಲಭವಾಗಿ ಕ್ಲೀನ್ ಮಾಡಲು ಇಲ್ಲಿದೆ ಟಿಶ್ಯೂ ಪೇಪರ್ ಟ್ರಿಕ್

Published : Oct 06, 2026, 12:19 PM IST

Clean Burnt Pan: ಸೀದುಹೋದ ಪಾತ್ರೆಗಳನ್ನು ಸ್ಟೀಲ್ ಸ್ಕ್ರಬ್ಬರ್‌ನಿಂದ ಉಜ್ಜಿ ಹಾಳುಮಾಡುತ್ತಿದ್ದೀರಾ? ಹಾಗಿದ್ದರೆ ಈ ಸಿಂಪಲ್ ಕಿಚನ್ ಟ್ರಿಕ್ ನಿಮಗಾಗಿ! ಯಾವುದೇ ಶ್ರಮವಿಲ್ಲದೆ, ಕೇವಲ ಮೂರೇ ಮನೆಮದ್ದುಗಳಿಂದ ಎಷ್ಟೇ ಕಪ್ಪಾದ ಪಾತ್ರೆಯನ್ನೂ ಹೊಚ್ಚ ಹೊಸದರಂತೆ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ.

PREV
15
ಕೇವಲ ಕೆಲವೇ ನಿಮಿಷ ಸಾಕು

ಕೇವಲ ಕೆಲವೇ ನಿಮಿಷ ಸಾಕು
ಅಡುಗೆ ಮಾಡುವಾಗ ಪಾತ್ರೆ ಅಥವಾ ಬಾಣಲೆ ಸೀದು ಕಪ್ಪಾಗುವುದು ಸಾಮಾನ್ಯ. ಎಷ್ಟೇ ಉಜ್ಜಿದರೂ ಹೋಗದ ಈ ಜಿಡ್ಡು ಮತ್ತು ಕಪ್ಪುಕಲೆಯ ಜಿಡ್ಡುತನವನ್ನು ಹೋಗಲಾಡಿಸಲು ಸ್ಟೀಲ್ ಸ್ಕ್ರಬ್ಬರ್ ಬಳಸಿ ಪಾತ್ರೆ ಹಾಳುಮಾಡಿಕೊಳ್ಳಬೇಕಿಲ್ಲ. ಮನೆಯಲ್ಲಿರುವ ಪದಾರ್ಥ ಬಳಸಿ ಕೇವಲ ಕೆಲವೇ ನಿಮಿಷಗಳಲ್ಲಿ ಪಾತ್ರೆಯನ್ನು ಹೊಸದರಂತೆ ಹೊಳೆಯಿಸಬಹುದು.

25
ಬೇಕಾಗುವ ಸಾಮಗ್ರಿಗಳು

ಬೇಕಾಗುವ ಸಾಮಗ್ರಿಗಳು
ಅಡುಗೆ ಉಪ್ಪು (ದಪ್ಪ ಉಪ್ಪು ಅಥವಾ ಪುಡಿ ಉಪ್ಪು)
ಅಡುಗೆ ಸೋಡಾ (Baking Soda)
ಪಾತ್ರೆ ತೊಳೆಯುವ ಲಿಕ್ವಿಡ್ (Dish Soap)
ಬಿಳಿ ವಿನೆಗರ್ (White Vinegar)
ಪೇಪರ್ ಟವೆಲ್ ಅಥವಾ ಟಿಶ್ಯೂ ಪೇಪರ್

35
ಪಾತ್ರೆ ಸ್ವಚ್ಛಗೊಳಿಸುವ ಹಂತ-ಹಂತದ ವಿಧಾನ

ಪಾತ್ರೆ ಸ್ವಚ್ಛಗೊಳಿಸುವ ಹಂತ-ಹಂತದ ವಿಧಾನ
*ಮೊದಲು ಸೀದುಹೋದ ಒಣ ಪಾತ್ರೆಯ ತಳಕ್ಕೆ ಸ್ವಲ್ಪ ಉಪ್ಪು ಹಾಗೂ ಅದರ ಮೇಲೆ ಅಡುಗೆ ಸೋಡಾವನ್ನು ಸಮ ಪ್ರಮಾಣದಲ್ಲಿ ಹರಡಿ.

*ಇದರ ಮೇಲೆ ಪಾತ್ರೆ ತೊಳೆಯುವ ಲಿಕ್ವಿಡ್ ಅನ್ನು ಹಾಕಿ, ಲಘುವಾಗಿ ಆ ಮಿಶ್ರಣದ ಮೇಲೆ ಹರಡಿ (ಉಜ್ಜುವ ಅಗತ್ಯವಿಲ್ಲ).

*ಈ ಮಿಶ್ರಣದ ಮೇಲೆ ಪೇಪರ್ ಟವೆಲ್ ಅಥವಾ ಟಿಶ್ಯೂ ಪೇಪರ್ ಅನ್ನು ಪಾತ್ರೆಯ ಅಂಚುಗಳಿಗೂ ತಾಗುವಂತೆ ಸರಿಯಾಗಿ ಹರಡಿ ಮುಚ್ಚಿ.

*ಪೇಪರ್ ಟವೆಲ್ ಅಥವಾ ಟಿಶ್ಯೂ ಪೇಪರ್ ಮೇಲೆ ಬಿಳಿ ವಿನೆಗರ್ ಅನ್ನು ಸಂಪೂರ್ಣವಾಗಿ ನೆನೆಯುವಂತೆ ಸುರಿಯಿರಿ. ವಿನೆಗರ್ ಮತ್ತು ಸೋಡಾ ಸೇರಿದಾಗ ಗುಳ್ಳೆಗಳು (Carbon Dioxide) ಏಳಲು ಶುರುವಾಗುತ್ತದೆ. ಈ ರಾಸಾಯನಿಕ ಕ್ರಿಯೆಯು ಕಪ್ಪಾದ ಕರೆಯನ್ನು ಪಾತ್ರೆಯ ತಳದಿಂದ ಸಡಿಲಗೊಳಿಸುತ್ತದೆ.

45
15 ರಿಂದ 45 ನಿಮಿಷ ಬಿಡಿ

15 ರಿಂದ 45 ನಿಮಿಷ ಬಿಡಿ
ಕಡಿಮೆ ಕಲೆಯಿದ್ದರೆ 15 ನಿಮಿಷ, ದಪ್ಪನೆಯ ಕಪ್ಪು ಪದರವಿದ್ದರೆ 40-45 ನಿಮಿಷ ಹಾಗೆಯೇ ಬಿಡಿ.
ನಂತರ ಅದೇ ಪೇಪರ್ ಟವೆಲ್‌ನಿಂದ ಪಾತ್ರೆಯನ್ನು ಒರೆಸಿದರೆ, ಅಂಟಿಕೊಂಡಿದ್ದ ಕಪ್ಪು ಪದರವು ಸುಲಭವಾಗಿ ಕಳಚಿ ಬರುತ್ತದೆ. ಕೊನೆಯಲ್ಲಿ ಸಾಮಾನ್ಯ ಸ್ಪಾಂಜ್ ಮತ್ತು ನೀರಿನಿಂದ ತೊಳೆದರೆ ಪಾತ್ರೆ ಹೊಸದರಂತೆ ಹೊಳೆಯುತ್ತದೆ!

55
ಸ್ಟೀಲ್ ಸ್ಕ್ರಬ್ಬರ್ ಏಕೆ ಬಳಸಬಾರದು?

ಸ್ಟೀಲ್ ಸ್ಕ್ರಬ್ಬರ್ ಏಕೆ ಬಳಸಬಾರದು?
ಸಾಮಾನ್ಯವಾಗಿ ಗಟ್ಟಿಯಾದ ಕರೆಯನ್ನು ತೆಗೆಯಲು ತಂತಿಯ ಸ್ಕ್ರಬ್ಬರ್ ಬಳಸುತ್ತಾರೆ. ಇದರಿಂದ ಸ್ಟೇನ್‌ಲೆಸ್ ಸ್ಟೀಲ್ ಅಥವಾ ನಾನ್‌ಸ್ಟಿಕ್ ಪಾತ್ರೆಗಳ ಮೇಲೆ ಗೀರುಗಳು (Scratches) ಬೀಳುತ್ತವೆ. ಹೀಗೆ ಗೀರು ಬಿದ್ದ ಜಾಗದಲ್ಲಿ ಮುಂದಿನ ದಿನಗಳಲ್ಲಿ ಆಹಾರ ಮತ್ತು ಜಿಡ್ಡು ಮತ್ತಷ್ಟು ಗಟ್ಟಿಯಾಗಿ ಅಂಟಿಕೊಳ್ಳುತ್ತದೆ. ಆದರೆ ಈ 'ಪೇಪರ್ ಟವೆಲ್ ಕಂಪ್ರೆಸ್' ವಿಧಾನದಲ್ಲಿ ಯಾವುದೇ ಗೀರು ಬೀಳದೆ ಪಾತ್ರೆ ಸುರಕ್ಷಿತವಾಗಿರುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories