ಹತ್ತು ರೂಪಾಯಿ ಉಳಿಸಲು ಹೋಗಿ ಗಂಭೀರ ಕಾಯಿಲೆಗೆ ಕಾರಣವಾಗಬಹುದು! ನಿಮ್ಮ ಅಡುಗೆ ಮನೆಯ ಚಾಕು ಹೀಗಿರಲಿ

Published : Jun 26, 2026, 10:47 AM IST

ಮನೆಗೆ ಅಗತ್ಯವಾದ ವಸ್ತುಗಳನ್ನ ಖರೀದಿಸುವಾಗ ಉತ್ತಮ ಗುಣಮಟ್ಟವನ್ನ ನೋಡಿ ಖರೀದಿಸಬೇಕು. ಬೆಲೆ ಕಡಿಮೆಯಾಗಿದೆ ಎಂದು ಬೀದಿಗಳ್ಲಲಿ ಸಿಗುವ ವಸ್ತುಗಳನ್ನ ಖರೀದಿಸಿದರೆ ಅದರಿಂದ ಪ್ರಯೋಜನವಾಗುವ ಬದಲು ಅಪಾಯಕ್ಕೆ ಆಹ್ವಾನ ನೀಡಬಹುದು. ತರಕಾರಿ ಕತ್ತರಿಸುವ ಚಾಕು ಹೀಗಿರಲಿ..

PREV
13
ಅಡುಗೆ ಮನೆಯ ಚಾಕು ಹೇಗಿರಬೇಕು?

ಹೊಸದಾಗಿ ಮದುವೆಯಾದವರು, ಹಳ್ಳಿಯಿಂದ ಮಹಾನಗರಗಳಿಗೆ ದುಡಿಯಲು ಹೋಗುವವರು, ಇನ್ನೊಂದೆಡೆ ಮನೆ ಬದಲಿಸುವವರು, ಸಾಮನ್ಯವಾಗಿ ಮನೆಯಲ್ಲಿನ ಪಾತ್ರೆಗಳನ್ನ ಜೊತೆಗೆ ತರುವ ಬದಲು ಹೊಸದಾಗಿ ಖರೀದಿಸಲು ಇಚ್ಚಿಸುತ್ತಾರೆ. ಹೀಗೆ ಬೇರೆಡೆ ಸ್ಥಳಾಂತರವಾದಾಗ ಹೆಚ್ಚಾಗಿ ದುಬಾರಿ ವಸ್ತುಗಳ ಬದಲು ತೀರಾ ಕಡಿಮೆ ಬೆಲೆಗೆ ಸಿಗುವ ವಸ್ತುಗಳನ್ನು ಖರೀದಿಸಿ ಹಣ ಉಳಿತಾಯ ಮಾಡಿದ ಖುಷಿಯಲ್ಲಿರುತ್ತಾರೆ. ಆದರೆ ಕಡಿಮೆ ಬೆಲೆಯ ವಸ್ತುಗಳನ್ನು ಖರೀದಿಸಿದರೆ ಹಣ ಉಳಿತಾಯದ ಜೊತೆಗೆ ಇನ್ನೊಂದು ಸಮಸ್ಯೆ ಸೃಷ್ಟಿಯಾಗುತ್ತದೆ. 

ಉದಾಹರಣೆ ನೋಡಿ, ಮನೆಯಲ್ಲೇ ಚಾಕು ಕಳೆದುಹೋಗಿದೆ ಎಂದಿಟ್ಕೊಳ್ಳಿ, ಗೃಹಿಣಿಯರು ಮಾರುಕಟ್ಟೆಗೆ ಹೋದಾಗ ತರಕಾರಿ ಕತ್ತರಿಸಲು ಚಾಕು ನೆನಪಾಗುತ್ತದೆ ಈ ವೇಳೆ ಅವರು ಹೋಗುವುದು ದೊಡ್ಡ ದೊಡ್ಡ ಶಾಪ್‌ಗಳಿಗಲ್ಲ. ರಸ್ತೆ ಬದಿ ಚಾಕುಗಳನ್ನ ಹರವಿ ಮಾರಾಟಕ್ಕಿಟ್ಟವರ ಬಳಿ. ಹತ್ತಿಪ್ಪತ್ತು ರೂಪಾಯಿಗೆ ಚಾಕು ಖರೀದಿಸುತ್ತಾರೆ. ಆದರೆ ಆ ಚಾಕು ಗುಣಮಟ್ಟದಲ್ಲಿ ಎಷ್ಟು ಸುರಕ್ಷಿತ? ಇನ್ನೊಂದು ಐವತ್ತು ರೂಪಾಯಿ ಸೇರಿಸಿದರೆ ಒಳ್ಳೆ ಗುಣಮಟ್ಟದ ಚಾಕು ಸಿಗುತ್ತದೆ ಆದರೆ ಅಷ್ಟು ದುಬಾರಿ ಎಂದು ಹತ್ತು ರೂಪಾಯಿ ಚಾಕು ಖರೀದಿಸಿ ಮನೆಗೆ ತಂದಾಗ ಎರಡು ದಿನದಲ್ಲಿ ಅದು ತುಕ್ಕು ಹಿಡಿದಿರುತ್ತದೆ ಅಂಥ ಚಾಕುವಿನಲ್ಲಿ ತರಕಾರಿ ಕತ್ತರಿಸಿ ಬೇಯಿಸುವುದು ಸೇವಿಸುವುದು ಎಷ್ಟು ಅಪಾಯಕಾರಿ ಗೊತ್ತೆ? 

ಎಷ್ಟೋ ಮನೆಗಳಲ್ಲಿನ ಇಳಿಗೆ(ತರಕಾರಿ ಕತ್ತರಿಸುವ ಸಾಧನ) ತುಂಬಾ ಕೊಳಕಾಗಿ ಕಪ್ಪು ಬಣ್ಣಕ್ಕೆ ತಿರುಗಿದರೂ, ಸ್ವಚ್ಛಗೊಳಿಸದೆ. ಅದಿರುವುದೇ ಹಾಗೆ ಎಂಬಂತ ದಿನನಿತ್ಯ ಉಪಯೋಗಿಸುತ್ತಲೇ ಇರುತ್ತಾರೆ. ಇಲ್ಲಿ ಚಾಕು ಮಾತ್ರ ಅಲ್ಲ, ಚಾಪೆಯಿಂದ ಹಿಡಿದು ಮೆಡಿಸಿನ್ ವರೆಗೂ ಜೀವನಕ್ಕೆ ಅಗತ್ಯವಾದ ಎಲ್ಲ ವಸ್ತುಗಳು ಕಡಿಮೆ ಬೆಲೆಯಲ್ಲಿ ಸಿಗುವಂತಹವು ಉಳಿತಾಯಕ್ಕಿಂತ ಅಪಾಯವೇ ಹೆಚ್ಚು.

23
ಯಾವುದನ್ನು ಖರೀದಿಸಬೇಕು? ಯಾವುದನ್ನ ಖರೀದಿಸಬಾರದು

ಮೊದಲನೆಯದಾಗಿ ಖರೀದಿಸುವ ಮುನ್ನ ಈ ವಿಚಾರ ತಿಳಿದಿರಬೇಕು. ಚಾಕು ಖರೀದಿಸುವಾಗ ಬೆಲೆಗಿಂತ ಚಾಕುವಿನ ಲೋಹದ ಗುಣಮಟ್ಟ ಏನಿದೆ ಅನ್ನೋದು ತಿಳ್ಕೊಳ್ಳಬೇಕು. ನಂತರ ಆ ಚಾಕು ಹೆಚ್ಚು ಬಾಳಿಕೆ ಬರುತ್ತದೆಯೇ, ಹಿಡಿಕೆ ಬಿಗಿಯಾಗಿದೆಯೇ? ಎಂದೆಲ್ಲ ಗಮನಿಸಿ ಖರೀದಿಸಬೇಕು. ಸಾಮಾನ್ಯವಾಗಿ ಕಡಿಮೆ ಬೆಲೆಯಲ್ಲಿ ಸಿಗುವ ಚಾಕು ತಯಾರಿಕೆಯಲ್ಲಿ ಬಳಸುವ ಲೋಕ ಕಳಪೆ ಮತ್ತು ಅಪಾಯಕಾರಿಯಾಗಿರುತ್ತೆ, ಮಿಶ್ರ ಲೋಹದಿಂದ ಚಾಕು ತಯಾರಿಸಿರುತ್ತಾರೆ. ಸ್ಟೇನ್‌ಲೆಸ್ ಸ್ಟೀಲ್ ನಿಂದ ತಯಾರಿಸಿರುವ ಸಂಭವ ಕಡಿಮೆ. ಹೀಗಾಗಿ ಬೇಗನೆ ತುಕ್ಕು ಹಿಡಿಯುತ್ತದೆ.

 ಈ ತುಕ್ಕು ಹಿಡಿದ ಪದರವು ತರಕಾರಿಗಳು, ಹಣ್ಣುಗಳು ಅಥವಾ ಮಸಾಲೆಗಳಿಗೆ ಪದೇ ಪದೇ ತಗುಲಿ, ಕ್ರಮೇಣ ಆಹಾರಕ್ಕೆ ಸೇರಿದರೆ ಮುಂದಾಗುವ ಅನಾರೋಗ್ಯಕ್ಕೆ ಮಾಡಬೇಕಾದ ಖರ್ಚು ದುಬಾರಿಯಾಗಿರುತ್ತೆ. ಹೀಗಾಗಿ ನಿಜವಾದ, ಪ್ರತಿಷ್ಠಿತ ಬ್ರಾಂಡ್ ಚಾಕುಗಳು ಉತ್ತಮ-ಗುಣಮಟ್ಟದ ಲೋಹದಿಂದ ತಯಾರಿಸಲ್ಪಟ್ಟಿರುವುದರಿಂದ ಅವು ಎಂದಿಗೂ ಕಡಿಮೆ ಬೆಲೆಯಲ್ಲಿ ಲಭ್ಯವಿರುವುದಿಲ್ಲ ಹೀಗಾಗಿ ಬೆಲೆ ಹೆಚ್ಚಾದರೂ ಸರಿ ಉತ್ತಮ ಗುಣಮಟ್ಟದ್ದನ್ನು ಖರೀಸುವುದು ಜಾಣತನ.

33
ಗುಣಮಟ್ಟದ ವಸ್ತುಗಳನ್ನ ಖರೀದಿಸಿ

ಮತ್ತೊಂದು ಪ್ರಮುಖ ಸಮಸ್ಯೆ ಚಾಕುವಿನ ಹರಿತ.ಸುರಕ್ಷತೆಗೆ ಸಂಬಂಧಿಸಿದೆ. ಕಡಿಮೆ ಬೆಲೆ ಸಿಗವ ಚಾಕು, ಇಳಿಗೆಗಳು ಖರೀದಿಸುವಾಗ ಹರಿತವಾಗಿ ಹೊಳೆಯುತ್ತವೆ. ಆದರೆ ಬಳಸಿದ ವಾರದೊಳಗೆ ತಮ್ಮ ಗುಣ ಕಳೆದುಕೊಂಡು ತುಕ್ಕು ಹಿಡಿದಂತಾಗುತ್ತವೆ. ಇನ್ನು ಮುಂದಿನ ವಾರದೊಳಗೆ ತರಕಾರಿ ಕತ್ತರಿಸಲು ಯೋಗ್ಯವಾಗಿರುವುದಿಲ್ಲ. ಅಷ್ಟರ ಮಟ್ಟಿಗೆ ಹರಿತ ಕಳೆದುಕೊಂಡು ಅರ್ಥಾತ್ ಮೊಂಡಿರುತ್ತವೆ. ಹೀಗಾಗಿ ಒಂದು ಈರುಳ್ಳಿ ಕತ್ತರಿಸಲು, ಒಂದು ನಿಂಬೆ ಹೋಳು ಮಾಡಲು ಇಡೀ ಶಕ್ತಿ ಹಾಕಿ ಕತ್ತರಿಸಿದರೂ ಅದು ತುಂಡಾಗುವುದಿಲ್ಲ. ಒಮ್ಮೆ ಕೈ ಜಾರಿ ಬೆರಳುಗಳಿಗೆ ತಾಗಿ ಅನಾಹುತವಾಗುತ್ತದೆ

ಹೀಗಾಗಿ ಅಗತ್ಯವಾದ ಏನೇ ವಸ್ತುಗಳನ್ನ ಖರೀದಿಸಿದರೂ ಒಳ್ಳೆ ಗುಣಮಟ್ಟದ ವಸ್ತುಗಳನ್ನ ಖರೀದಿಸಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories