ಹೊರಗೆ ಮಾತ್ರವಲ್ಲ, ಫ್ರಿಡ್ಜ್‌ನಲ್ಲಿ ಇಟ್ರೂ ಕೊತ್ತಂಬರಿ ಸೊಪ್ಪು ಕೊಳೆಯುತ್ತಿದ್ರೆ ಈ ಟ್ರಿಕ್ಸ್‌ ಟ್ರೈ ಮಾಡಿ

Published : Nov 15, 2025, 01:00 PM IST

How to keep coriander fresh: ಕೊತ್ತಂಬರಿ ಸೊಪ್ಪು  ಫ್ರಿಜ್‌ನಲ್ಲಿ ಇಟ್ಟರೂ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಅದರ ತಾಜಾತನವನ್ನು ಕಳೆದುಕೊಳ್ಳುತ್ತದೆ. ಎಲ್ಲರಿಗೂ ದಿನಾ ಮಾರ್ಕೇಟ್‌ಗೆ ಹೋಗಿ ಕೊತ್ತಂಬರಿ ಸೊಪ್ಪು ತರಕ್ಕೆ ಅಗಲ್ಲ. ಆದ್ದರಿಂದ ದೀರ್ಘಕಾಲದವರೆಗೆ ತಾಜಾವಾಗಿಡಲು ಹೀಗೆ ಮಾಡಿ.. 

PREV
17
ದೀರ್ಘಕಾಲದವರೆಗೆ ಫ್ರೆಶ್ ಆಗಿಡಬೇಕೆಂದರೆ...

ರೆಸ್ಟೋರೆಂಟ್ ಫುಡ್ ಆದ್ರೇನೂ, ಸ್ಟ್ರೀಟ್‌ ಫುಡ್ ಆದ್ರೇನೂ ಯಾವುದೇ ರೆಸಿಪಿಗೆ ಕೊತ್ತಂಬರಿ ಸೊಪ್ಪು ಸೇರಿಸಿದರೆ ಅದರ ಮಜಾನೇ ಬೇರೆ. ಅದಕ್ಕಾಗಿಯೇ ಇದು ಬಹುತೇಕರ ಫೇವರಿಟ್. ಆದರೆ ಬೇರೆ ತರಕಾರಿಯ ತರಹ ಕೊತ್ತಂಬರಿ ಸೊಪ್ಪನ್ನ ಲಾಂಗ್‌ ಟೈಂ ಇಡೋಕೆ ಆಗಲ್ಲ, ಬೇಗನೆ ಹಾಳಾಗುತ್ತದೆ ಎಂಬುದೇ ಎಲ್ಲರ ಚಿಂತೆ. ಇನ್ನು ವಿಶೇಷವೆಂದರೆ ಅದನ್ನು ಫ್ರಿಜ್‌ನಲ್ಲಿ ಸಂಗ್ರಹಿಸಿದರೂ ಅದು ಕಪ್ಪು ಬಣ್ಣಕ್ಕೆ ತಿರುಗುತ್ತದೆ ಮತ್ತು ಅದರ ತಾಜಾತನ ಕಳೆದುಕೊಳ್ಳುತ್ತದೆ. ಹಾಗಾದರೆ ಕೊತ್ತಂಬರಿ ಸೊಪ್ಪನ್ನು ದೀರ್ಘಕಾಲದವರೆಗೆ ಫ್ರೆಶ್ ಆಗಿಡಬೇಕೆಂದರೆ ಏನ್‌ ಮಾಡ್ಬೇಕು?. ಇಲ್ಲಿವೆ ನೋಡಿ ಟಿಪ್ಸ್.

27
ವಿವಿಧ ಭಕ್ಷ್ಯಗಳಲ್ಲಿ ಬಳಕೆ

ಕೊತ್ತಂಬರಿ ಸೊಪ್ಪನ್ನ ಎಲ್ಲಾ ಸೀಸನ್‌ನಲ್ಲೂ ಬಳಸಬಹುದು. ಮಾರ್ಕೇಟ್‌ನಲ್ಲೂ ಯಾವಾಗಲೂ ಲಭ್ಯವಿರುತ್ತದೆ. ಅತ್ಯಂತ ಪ್ರತಿಷ್ಠಿತ ರೆಸ್ಟೋರೆಂಟ್‌ಗಳಿಂದ ಹಿಡಿದು ಬೀದಿ ಬದಿ ಸಿಗುವ ಆಹಾರದಲ್ಲೂ ಕೊತ್ತಂಬರಿ ಸೊಪ್ಪನ್ನು ವಿವಿಧ ಭಕ್ಷ್ಯಗಳಲ್ಲಿ ಬಳಸಲಾಗುತ್ತದೆ. ಇನ್ನು ಆಹಾರವನ್ನ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸುವುದರಿಂದ ಅದರ ಬಣ್ಣ ಮತ್ತು ಸುವಾಸನೆ ಎರಡೂ ಹೆಚ್ಚುತ್ತದೆ.

37
ಈ ಟಿಪ್ಸ್‌ ಫಾಲೋ ಮಾಡಿ..

ಈ ಮೊದಲೇ ಹೇಳಿದ ಹಾಗೆ ಕೊತ್ತಂಬರಿ ಸೊಪ್ಪನ್ನು ಫ್ರಿಜ್‌ನಲ್ಲಿ ಇಟ್ಟರೂ ಅದು ಕಪ್ಪು ಬಣ್ಣಕ್ಕೆ ತಿರುಗುತ್ತದೆ ಮತ್ತು ಅದರ ತಾಜಾತನವನ್ನು ಕಳೆದುಕೊಳ್ಳುತ್ತದೆ. ಎಲ್ಲರಿಗೂ ದಿನಾ ಮಾರ್ಕೇಟ್‌ಗೆ ಹೋಗಿ ಕೊತ್ತಂಬರಿ ಸೊಪ್ಪು ತರುವುದಕ್ಕೆ ಅಗಲ್ಲ. ಆದ್ದರಿಂದ ಇದನ್ನ ದೀರ್ಘಕಾಲದವರೆಗೆ ತಾಜಾವಾಗಿಡಲು ಈ ಟಿಪ್ಸ್‌ ಫಾಲೋ ಮಾಡಿ..

47
ಬಟ್ಟೆಯಲ್ಲಿ ಸುತ್ತಿ

ಮೊಟ್ಟಮೊದಲನೆಯದಾಗಿ ಕೊತ್ತಂಬರಿ ಸೊಪ್ಪು ದೀರ್ಘಕಾಲ ತಾಜಾವಾಗಿರಲು ಮಾರುಕಟ್ಟೆಯಿಂದ ಖರೀದಿಸಿದ ನಂತರ ಹಳದಿ ಅಥವಾ ಕೊಳೆತ ಎಲೆಗಳನ್ನು ಕಟ್ ಮಾಡಿ ಸ್ವಚ್ಛಗೊಳಿಸಿ. ನಂತರ ಸೊಪ್ಪನ್ನ ನೀರಿನಲ್ಲಿ ಚೆನ್ನಾಗಿ ತೊಳೆದು ಬಟ್ಟೆಯಲ್ಲಿ ಸುತ್ತಿ. ಇದು ಹಲವಾರು ದಿನಗಳವರೆಗೆ ತಾಜಾತನವನ್ನು ಉಳಿಸಿಕೊಳ್ಳುತ್ತದೆ.

57
ಒಣ ಡಬ್ಬಿಯಲ್ಲಿ ಸಂಗ್ರಹಿಸಿ

ನಿಮ್ಮ ಬಳಿ ಫ್ರಿಜ್‌ ಇಲ್ಲದಿದ್ದರೆ ಕಾಗದ ಕೂಡ ಉತ್ತಮ ಪರ್ಯಾಯವಾಗಿದೆ. ಕೊತ್ತಂಬರಿ ಸೊಪ್ಪನ್ನು ಚೆನ್ನಾಗಿ ತೊಳೆದು ಒಣಗಿಸಿ ಕಾಗದದಲ್ಲಿ ಸುತ್ತಿ, ಒಣ ಡಬ್ಬಿಯಲ್ಲಿ ಸಂಗ್ರಹಿಸಿ. ಕಾಗದವು ಹೆಚ್ಚುವರಿ ತೇವಾಂಶವನ್ನು ಹೀರಿಕೊಳ್ಳುತ್ತದೆ ಮತ್ತು ಎಲೆಗಳನ್ನು ಹೆಚ್ಚು ಕಾಲ ತಾಜಾವಾಗಿರಿಸುತ್ತದೆ.

67
ಗಾಳಿಯಾಡದ ಡಬ್ಬಿಯಲ್ಲಿಡಿ

ಕೊತ್ತಂಬರಿ ಸೊಪ್ಪನ್ನು ತೊಳೆದು ಒಣಗಿಸಿ ನಂತರ ಬೇರುಗಳನ್ನು ಕತ್ತರಿಸಿ. ನಂತರ ಸಣ್ಣ ತುಂಡುಗಳಾಗಿ ಕತ್ತರಿಸಿ. ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಗಾಳಿಯಾಡದ ಡಬ್ಬಿಯಲ್ಲಿ ಸಂಗ್ರಹಿಸಿ. ಇದು ದೀರ್ಘಕಾಲ ತಾಜಾವಾಗಿರುತ್ತದೆ.

77
ಪ್ಲಾಸ್ಟಿಕ್ ಬ್ಯಾಗ್‌ನಲ್ಲಿ ಪ್ಯಾಕ್ ಮಾಡಿ

ಕೊತ್ತಂಬರಿ ಸೊಪ್ಪು ದೀರ್ಘಕಾಲದವರೆಗೆ ತಾಜಾವಾಗಿರಲು ಅದನ್ನು ಬಟ್ಟೆಯಲ್ಲಿ ಸುತ್ತಿ ಫ್ರೀಜರ್‌ನಲ್ಲಿ ಸಂಗ್ರಹಿಸಿ. ಇದು ಬೇಗನೆ ಹಾಳಾಗುವುದನ್ನು ತಡೆಯುತ್ತದೆ. ಪರ್ಯಾಯವಾಗಿ ಅದನ್ನು ಪ್ಲಾಸ್ಟಿಕ್ ಬ್ಯಾಗ್‌ನಲ್ಲಿ ಪ್ಯಾಕ್ ಮಾಡಿ ಫ್ರೀಜರ್‌ನಲ್ಲಿ ಸಂಗ್ರಹಿಸುವುದರಿಂದ ಅದರ ತಾಜಾತನವನ್ನು ಕಾಪಾಡಿಕೊಳ್ಳಬಹುದು.

Read more Photos on
click me!

Recommended Stories