ಅದು ಯಾವುದೇ ಬೇಳೆಯಾದರೂ ನಮ್ಮ ಆಹಾರದ ಪ್ರಮುಖ ಭಾಗವಾಗಿದೆ. ಬಹುತೇಕ ಇದನ್ನು ಪ್ರತಿದಿನ ಸೇವಿಸಲಾಗುತ್ತದೆ. ಬೇಳೆಕಾಳುಗಳಿಂದ ಅನೇಕ ರೀತಿಯ ರೆಸಿಪಿಗಳನ್ನು ಸಹ ತಯಾರಿಸಲಾಗುತ್ತದೆ. ಇವು ಪೋಷಕಾಂಶಗಳಿಂದ ಸಮೃದ್ಧವಾಗಿವೆ. ಬೇಳೆಕಾಳುಗಳನ್ನು ಸೇವಿಸುವುದರಿಂದ ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ. ಆದರೆ ಜನರು ಬೇಳೆಯಲ್ಲಿ ಬಹಳ ಬೇಗ ಹುಳುವಾಗುತ್ತದೆ ಎಂದು ದೂರುತ್ತಾರೆ. ಬೇಳೆಕಾಳುಗಳಲ್ಲಿ ಹುಳುವಾದರೆ ಅವು ಬೇಗನೆ ಹಾಳಾಗುತ್ತವೆ ಮತ್ತು ರುಚಿ ಕೂಡ ಹದಗೆಡುತ್ತದೆ. ಮಳೆಗಾಲದಲ್ಲಿಯಂತೂ ಈ ಸಮಸ್ಯೆ ಸಾಮಾನ್ಯವಾಗಿದೆ. ಹಾಗಾಗಿ ಬೇಳೆಕಾಳುಗಳನ್ನು ದೀರ್ಘಕಾಲದವರೆಗೆ ತಾಜಾವಾಗಿ ಅಥವಾ ಫ್ರೆಶ್ ಆಗಿಡಲು ನೀವು ಈ ಟಿಪ್ಸ್ ಅನುಸರಿಸಬಹುದು. ಹಾಗಾದರೆ ಬೇಳೆಕಾಳುಗಳನ್ನು ಸಂಗ್ರಹಿಸುವ ವಿಧಾನವನ್ನು ತಿಳಿದುಕೊಳ್ಳೋಣ ಬನ್ನಿ...