ಯಾರದ್ದೇ ಅಡುಗೆಮನೆ ನೋಡಿದರೂ ಸಾಮಾನ್ಯವಾಗಿ ಅಲ್ಲಿ ನಿಂಬೆಹಣ್ಣು ಇದ್ದೇ ಇರುತ್ತದೆ. ಇದು ಅಡುಗೆ ರುಚಿಯನ್ನು ಹೆಚ್ಚಿಸುವುದಲ್ಲದೆ, ನಮ್ಮ ಆರೋಗ್ಯಕ್ಕೆ ಅಗತ್ಯವಾದ ವಿಟಮಿನ್ ಸಿ, ಉತ್ಕರ್ಷಣ ನಿರೋಧಕಗಳು ಮತ್ತು ಇತರ ಪೋಷಕಾಂಶಗಳನ್ನು ಒದಗಿಸುವ ನೈಸರ್ಗಿಕ ಔಷಧವೂ ಆಗಿದೆ. ಬೆಳಗ್ಗೆ ಬಿಸಿ ನೀರಿನಲ್ಲಿ ನಿಂಬೆ ರಸ ಹಾಕಿ ಕುಡಿಯುವುದರಿಂದ ದೇಹವು ಶುದ್ಧವಾಗುತ್ತದೆ. ಅಡುಗೆಗೆ ಮಾತ್ರವಲ್ಲ, ಜ್ಯೂಸ್ ಮತ್ತು ಉಪ್ಪಿನಕಾಯಿ ಮಾಡಲು ನಿಂಬೆ ಅತ್ಯಗತ್ಯ.