ಬೇಸಿಗೆಯಲ್ಲಿ ಟೊಮೆಟೋ ಬೇಗ ಹಾಳಾಗುವುದನ್ನು ತಡೆಯಲು ಫ್ರಿಡ್ಜ್ ಇಲ್ಲದೆಯೂ ಹಲವು ಸರಳ ವಿಧಾನಗಳಿವೆ. ಈ ರೀತಿಯಾಗಿ ಟೊಮೆಟೋ ಸಂಗ್ರಹಿಸುವುದರಿಂದ ಅವುಗಳನ್ನು ವಾರಗಟ್ಟಲೇ ತಾಜಾವಾಗಿಡಬಹುದು.
ಬೇಸಿಗೆಯಲ್ಲಿ ಹಣ್ಣು ಮತ್ತು ತರಕಾರಿ ಸಂಗ್ರಹಿಸಿಡೋದು ದೊಡ್ಡ ಸವಾಲಿನ ಕೆಲಸ. ಬಿಸಿಲು ಹೆಚ್ಚಾಗಿರೋದರಿಂದ ಟೊಮೆಟೋ ಕಡಿಮೆ ಸಮಯದಲ್ಲಿಯೇ ಅದು ಮೃದುವಾಗಿ ಹಾಳಾಗುತ್ತದೆ. ಹಾಗಾಗಿ ಅನೇಕರು ಟೊಮೆಟೋಗಳನ್ನು ಫ್ರಿಡ್ಜ್‌ನಲ್ಲಿಡುತ್ತಾರೆ. ಆದ್ರೆ ಫ್ರಿಡ್ಜ್ ಇಲ್ಲದಿರುವಾಗ ಕೆಲವೊಂದು ಸರಳ ವಿಧಾನಗಳ ಮೂಲಕ ಸಂಗ್ರಹಿಸಿದ್ರೆ ವಾರಗಟ್ಟಲೇ ಫ್ರೆಶ್ ಆಗಿರುತ್ತದೆ.
25
ಸರಿಯಾದ ಕ್ರಮದಲ್ಲಿಡಿ
ಟೊಮೆಟೋಗಳನ್ನು ಯಾವಾಗಲೂ ಕಾಂಡದ ಬದಿಯಲ್ಲಿರಿಸಿ. ಅಂದ್ರೆ ಟೊಮೆಟೋ ಮೇಲ್ಭಾಗ ಕೆಳಗಡೆ ಇರುವಂತೆ ನೋಡಿಕೊಳ್ಳಿ. ಇದು ಗಾಳಿ ಪ್ರವೇಶಿಸೋದನ್ನು ತಡೆಯುತ್ತದೆ. ಹಾಗೆಯೇ ಹೆಚ್ಚು ಸೂರ್ಯನ ಬೆಳಕು ಬೀಳದ ಮತ್ತು ಗಾಳಿಯಾಡುವ ಸ್ಥಳದಲ್ಲಿ ಇರಿಸಿ. ಇದರಿಂದ ಟೊಮೆಟೋ ವಾರಗಟ್ಟಲೇ ಫ್ರೆಶ್ ಆಗಿರುತ್ತದೆ.
35
ನ್ಯೂಸ್ ಪೇಪರ್
ಟೊಮೆಟೋ ಹಣ್ಣುಗಳನ್ನು ಟಿಶ್ಯೂ ಅಥವಾ ನ್ಯೂಸ್ ಪೇಪರ್‌ನಲ್ಲಿ ಸುತ್ತಿಡೋದರಿಂದ ವಾರಗಟ್ಟಲೇ ಹಾಳಗಾದಂತೆ ಸ್ಟೋರ್ ಮಾಡಬಹುದು. ನ್ಯೂಸ್ ಪೇಪರ್ ಸುತ್ತೋದರಿಂದ ಹಣ್ಣಿನ ತೇವಾಂಶ ನಿಯಂತ್ರಿಸಿ ಕೊಳೆಯೋದನ್ನು ತಡೆಯುತ್ತದೆ. ಗ್ರಾಮೀಣ ಭಾಗದಲ್ಲಿ ಈ ವಿಧಾನವನ್ನು ಇಂದಿಗೂ ಬಳಸುತ್ತಾರೆ.
ಟೊಮೆಟೋಗಳನ್ನು ಚೆನ್ನಾಗಿ ತೊಳೆದುಕೊಳ್ಳಬೇಕು. ನಂತರ ಮೇಲ್ಭಾಗದ ನೀರಿನಂಶ ಸಂಪೂರ್ಣವಾಗಿ ಹೋದ್ಮೇಲೆ ಅವುಗಳನ್ನು ಮಡಿಕೆಯಲ್ಲಿ ಸ್ಟೋರ್ ಮಾಡೋದರಿಂದ ದೀರ್ಘ ಸಮಯದವರೆಗೆ ಸಂಗ್ರಹಿಸಿಡಬಹುದು. ಮಣ್ಣಿನ ಮಡಿಕೆಗಳಲ್ಲಿ ಬೇರೆ ತರಕಾರಿಗಳನ್ನು ಸಹ ಸ್ಟೋರ್ ಮಾಡಬಹುದಾಗಿದೆ.
55
ಹಣ್ಣು ಮತ್ತು ಮಾಗಿದ ಟೊಮೆಟೋ
ಮಾರುಕಟ್ಟೆಯಿಂದ ಬರುತ್ತಲೇ ಹಸಿ, ಮಾಗಿದ ಮತ್ತು ಹಣ್ಣು ಟೊಮೆಟೋಗಳನ್ನು ಪ್ರತ್ಯೇಕವಾಗಿರಿಸಬೇಕು. ಯಾವುದೇ ಕಾರಣಕ್ಕೂ ಎಲ್ಲ ವಿಧದ ಟೊಮೆಟೋ ಒಟ್ಟಿಗೆ ಸಂಗ್ರಹಿಸಿಡಬಾರದು. ಹಾಗೆಯೇ ಮೊದಲು ಹಣ್ಣಾಗಿರುವ ಟೊಮೆಟೋ ಬಳಸಿ. ಇದರಿಂದ ಹಾಳಾಗೋದು ತಪ್ಪಲಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.