ಸಾಲು ಸಾಲು ಹಬ್ಬಗಳು ಬರುತ್ತಿವೆ. ಹಬ್ಬಳಲ್ಲಿ ಸಿಹಿ ತಿನಿಸಿಗೆ ಬೇಕಾಗುವ ಬೆಲ್ಲವನ್ನು ಈಗಿನಿಂದಲೇ ಖರೀದಿಸುತ್ತಿದ್ದಾರೆ.. ಆದರೆ ದೀರ್ಘಕಾಲ ಬೆಲ್ಲ ಜಿಗುಟಾಗದಂತೆ ತಡೆಯಲು ಏನು ಮಾಡಬೇಕು? ಬೆಲ್ಲ ಹೇಗೆ ಸಂಗ್ರಹಿಸಬೇಕು. ಯಾವ ಬೆಲ್ಲ ಅಸಲಿ? ವಿವರವಾಗಿ ತಿಳಿಯಿರಿ.
ಭಾರತೀಯರ ಪ್ರತಿ ಮನೆಗಳಲ್ಲಿ ಬೆಲ್ಲ ಇದ್ದೇ ಇರುತ್ತೆ. ಬೆಲ್ಲ ಇಲ್ಲದ ಸಿಹಿ ಪದಾರ್ಥಗಳೇ ಇಲ್ಲ. ಬೆಲ್ಲವನ್ನು ಚಹಾದಿಂದ ಹಿಡಿದು ಲಡ್ಡು ಹೋಳಿಗೆ ಕರಿಗಡಬು ಸಿಹಿ ತಿನಿಸುಗಳಿಗೆ ಬೆಲ್ಲ ಬೇಕೇಬೇಕು ಎಂಬಷ್ಟು ಹೆಚ್ಚು ಬಳಸಲಾಗುತ್ತೆ. ಅದರಲ್ಲೂ ಈಗ ಹಬ್ಬಗಳ ಸೀಸನ್. ಮುಂಬರುವ ಗಣೇಶ ಚತುರ್ಥಿ, ನವರಾತ್ರಿ, ದಸರಾ ಹೀಗೆ ಸಾಲು ಸಾಲು ಹಬ್ಬಗಳಿಗೆ ಈಗಿನಿಂದಲೇ ಬೆಲ್ಲ ಖರೀದಿಸಿ ಮನೆಯಲ್ಲಿ ತಂದಿಟ್ಕೊಳ್ತಾರೆ. ಆದರೆ ಅನೇಕ ಜನರಿಗೆ ಬೆಲ್ಲ ದೀರ್ಘಕಾಲ ಜಿಗುಟಾಗಿ ಅಥಾವ ನೀರುನೀರಾಗದಂತೆ ಹೇಗೆ ಸಂಗ್ರಹಿಸಿಡಬೇಕು ಎಂಬುದೇ ತಿಳಿದಿಲ್ಲ. ಬೆಲ್ಲ ಖರೀದಿಸಿದ ಬಳಿಕ ದಬ್ಬಿಯಲ್ಲಿಡುತ್ತಾರೆ ಸ್ವಲ್ಪ ದಿನಗಳ ನಂತರ ಜಿಗುಟಾಗಿರುತ್ತದೆ.
26
ಬೆಲ್ಲ ಏಕೆ ಜಿಗುಟಾಗುತ್ತೆ?
ಬೆಲ್ಲ ಭಾರತೀಯರ ಪಾಕ ಪದ್ಧತಿಯ ಅವಿಭಾಜ್ಯ ಅಂಗ. ದಿನನಿತ್ಯ ಬೆಲ್ಲ ಬಳಸಲಾಗುತ್ತೆ. ರಾತ್ರಿ ಊಟದ ಬಳಿಕವೂ ಒಂದು ತುಂಡು ಬೆಲ್ಲ ಬಾಯಲ್ಲಿ ಹಾಕಿಕೊಳ್ಳುವುದು ಹಲವರಿಗೆ ಅಭ್ಯಾಸ. ಹೀಗಾಗಿ ಬೆಲ್ಲವನ್ನು ದಿನೇದಿನೆ ಖರೀದಿಸದೆ ತಿಂಗಳಿಗ ಆಗುವಷ್ಟು ಖರೀದಿಸಿ ಸ್ಟೋರೇಜ್ ಮಾಡುವುದು ಸಾಮಾನ್ಯ. ಆದರೆ ಬಹುತೇಕ ಬೆಲ್ಲ ಸ್ವಲ್ಪ ದಿನಗಳಲ್ಲೇ ಜಿಗುಟಾಗುತ್ತದೆ ಹೀಗೇಕೆ? ಗಟ್ಟಿಯಾಗಿದ್ದ ಬೆಲ್ಲ ಏಕೆ ಜಿಗುಟಾಯ್ತು? ಜಿಗುಟು ಆಗದ ಹಾಗೆ ಹೇಗೆ ಇಡಬೇಕು? ಈ ಪ್ರಶ್ನೆಗಳಿಗೆ ಸುಲಭ ವಿಧಾನ ಇಲ್ಲಿ ಕೊಡಲಾಗಿದೆ.
ವಾಸ್ತವವಾಗಿ ಬೆಲ್ಲ ತೇವಾಂಶ ಅಕರ್ಷಿಸುತ್ತೆ. ಅದು ಗಾಳಿಗೆ ತೆರೆದುಕೊಂಡಾಗ ಗಾಳಿಯಲ್ಲಿನ ತೇವಾಂಶ ಹೀರಿಕೊಳ್ಳುತ್ತೆ. ಅದಕ್ಕಾಗಿಯೇ ಗಟ್ಟಿಯಾದ ತುಂಡು ಕ್ರಮೇಣ ಮೃದುವಾಗಿ, ಜಿಗುಟಾಗಬಹುದು. ಅತಿಯಾದ ತೇವಾಂಶವು ಬೆಲ್ಲದ ಮೇಲಿನ ಭಾಗ ಹಸಿಯಾಗಿ ಸಿರಪ್ ನಂತೆ ಜಿಗುಟಾಗುತ್ತೆ.
36
ಜಿಗುಟಾಗದಂತೆ ಇರಲು ಏನು ಮಾಡಬೇಕು?
ಬೆಲ್ಲ ಜಿಗುಟಾಗುವುದನ್ನು ತಡೆಯಲು ಮೊದಲಿಗೆ ಅದನ್ನು ಗಾಳಿ, ತೇವಾಂಶದಿಂದ ದೂರವಿರಿಸುವುದು ಬಹಳ ಮುಖ್ಯ. ಪಾಕೆಟ್ ತೆಗೆದ ನಂತರ ಅದನ್ನು ಗಾಳಿಯಾಡದ ಪಾತ್ರೆಯಲ್ಲಿ, ಗಾಜಿನ ಡಬ್ಬಿಯಲ್ಲಿ ಹಾಕಿ ಮುಚ್ಚಳವನ್ನು ಗಟ್ಟಿಯಾಗಿ ಮುಚ್ಚಬೇಕು. ಇದರಿಂದ ಹೊರಗಿನ ಗಾಳಿ ಹೋಗುವುದಿಲ್ಲ.
ಅತಿಯಾದ ತಂಪು ಬೆಲ್ಲವನ್ನು ಇನ್ನಷ್ಟು ಗಟ್ಟಿಯಾಗಿಸುತ್ತದೆ ಇದರಿಂದಾಗಿ ಬೇಕಾದಾಗ ತುಂಡು ಮಾಡಲು ಕಷ್ಟವಾಗುತ್ತದೆ. ಇದಲ್ಲದೆ, ರೆಫ್ರಿಜರೆಟರ್‌ನಿಂದ ಹೊರ ತೆಗೆದಾಗ ಹೊರಗಿನ ವಾತಾವರಣದ ಗಾಳಿಗೆ ಒಡ್ಡಿಕೊಂಡು ಬೇಗನೇ ಜಿಗುಟಾಗಬಹುದು. ಹೀಗಾಗಿ ಬೆಲ್ಲವನ್ನು ಫ್ರಿಡ್ಜ್‌ನಲ್ಲಿಡುವುದು ಸೂಕ್ತವಲ್ಲ, ಅದರ ಬದಲು ಗಾಳಿಯಾಡದ ಪಾತ್ರೆಯಲ್ಲಿ ತೇವಾಂಶವಿಲ್ಲದ ಒಣಗಿದ ಸ್ಥಳದಲ್ಲಿಡುವುದು ಉತ್ತಮ.
56
ಒಣಗಿದ ಸ್ಥಳದಲ್ಲಿಡುವುದು ಉತ್ತಮ.
ಒಂದು ವೇಳೆ ನೀವು ಮಾರ್ಕೆಟ್‌ನಿಂದ ದೊಡ್ಡ ಗಾತ್ರದ ಬೆಲ್ಲದ ತುಂಡನ್ನು ಖರೀದಿಸಿದ್ದರೆ, ಮನೆಗೆ ಬಂದ ನಂತರ ಅಗತ್ಯವಿರುವಷ್ಟು ಸಣ್ಣ ತುಂಡುಗಳಾಗಿ ಮಾಡಿಕೊಳ್ಳುವುದು ಉತ್ತಮ ಇದರಿಂದ ದೀರ್ಘಕಾಲ ಗಾಳಿಯಾಡದ ಡಬ್ಬಿಯಲ್ಲಿ ಇಟ್ಟುಕೊಳ್ಳಬಹುದು, ಬೇಕಾದಾಗ ಅಗತ್ಯವಿರುವಷ್ಟೇ ಬಳಸಿಕೊಳ್ಳಬಹುದು.
66
ಬೆಲ್ಲವನ್ನು ತುಂಡು ಮಾಡಲು ಹೀಗೆ ಮಾಡಿ
ಬೆಲ್ಲವನ್ನು ಕೆಲವೊಮ್ಮೆ ಸಂಪೂರ್ಣವಾಗಿ ಬಳಸೋಕೆ ಆಗಲ್ಲ, ಅಂಥ ಸಮಯದಲ್ಲಿ ಅದು ಗಟ್ಟಿಯಾಗಿದ್ದರೆ, ನಿಮಗೆ ಸ್ವಲ್ಪ ಮಾತ್ರ ಬೆಲ್ಲ ಬೇಕಿದ್ದರೆ ಅದರನ್ನ ಎರಡು ಓಳು ಮಾಡುವ ಅಗತ್ಯವಿಲ್ಲ. ಅದರ ಬದಲಿಗೆ ಕೆಲವು ಸೆಕೆಂಡುಗಳ ಕಾಲ ನಿಧಾನವಾಗಿ ಬಿಸಿ ಮಾಡಿ ಬಳಿಕ ಅದನ್ನ ಮೃದುಗೊಳಿಸಿ ತುಂಡು ಮಾಡಿಕೊಳ್ಳಬಹುದು. ಸುಮಾರು 10 ರಿಂದ 15 ಸೆಕೆಂಡುಗಳ ಕಾಲ ನಿಧಾನವಾಗಿ ಬಿಸಿ ಮಾಡಿ. ಇದು ಬೆಲ್ಲವನ್ನು ಸ್ವಲ್ಪ ಮೃದುಗೊಳಿಸುತ್ತದೆ, ಅಗತ್ಯವಿರುವಂತೆ ಕತ್ತರಿಸಲು ಅಥವಾ ತೆಗೆದುಹಾಕಲು ಸುಲಭವಾಗುತ್ತದೆ.
ಬೆಲ್ಲ ಖರೀದಿಸುವಾಗ ಈ ವಿಷಯ ನೆನಪಿಡಿ
ಬೆಲ್ಲ ಖರೀದಿಸುವಾಗ ಅದರ ಗುಣಮಟ್ಟಕ್ಕೆ ಗಮನ ಕೊಡುವುದು ಮುಖ್ಯ. ನೈಸರ್ಗಿಕ ಬಣ್ಣ ಮತ್ತು ಸಾಮಾನ್ಯ ಪರಿಮಳವಿರುವ ಬೆಲ್ಲವನ್ನು ಖರೀದಿಸಿ. ಗ್ರಾಹಕರನ್ನ ಆಕರ್ಷಿಸಲು ವ್ಯಾಪಾರಿಗಳು ಕೃತಕ ಬಣ್ಣ ಬಳಸುತ್ತಾರೆ ಅಂಥದ್ದನ್ನು ಖರೀದಿಸಬೇಡಿ. ಗಾಢ ಹಳದಿ ಬಣ್ಣದಲ್ಲಿ ಕಾಣುವ ಬೆಲ್ಲ ಕಳಪೆ ಗುಣಮಟ್ಟದ್ದಾಗಿರುತ್ತೆ. ಸರಿಯಾದ ಗುಣಮಟ್ಟದ ಬೆಲ್ಲವನ್ನು ಖರೀದಿಸುವುದರ ಜೊತೆಗೆ ಅದನ್ನು ಸರಿಯಾಗಿ ಸಂಗ್ರಹಿಸುವುದು ಅಷ್ಟೇ ಮುಖ್ಯ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.