ಅಡುಗೆಮನೆ ಚಾಕು ಬೇಗ ಹಾಳಾಗ್ತಿದೆಯೇ? ಹೀಗೆ ಸ್ವಚ್ಛಗೊಳಿಸಿದ್ರೆ ಹೆಚ್ಚು ದಿನ ಬಾಳಿಕೆ ಬರುತ್ತೆ !

Published : Jul 04, 2025, 10:34 AM IST

Kitchen Knife Cleaning Hacks: ಅಡುಗೆಮನೆಯಲ್ಲಿ ಚಾಕುಗಳು ಅತ್ಯಗತ್ಯ. ಆದರೆ ಅವುಗಳನ್ನು ಸರಿಯಾಗಿ ಸ್ವಚ್ಛಗೊಳಿಸದಿದ್ದರೆ ಬೇಗ ಹಾಳಾಗುತ್ತವೆ. ಈ ಲೇಖನದಲ್ಲಿ ಚಾಕುಗಳನ್ನು ಸ್ವಚ್ಛಗೊಳಿಸುವ ಸುಲಭ ವಿಧಾನಗಳನ್ನು ತಿಳಿಸಲಾಗಿದೆ.

PREV
15

ಅಡುಗೆಮನೆಯಲ್ಲಿ ಚಾಕು ಅತ್ಯಂತ ಪ್ರಮುಖವಾದ ವಸ್ತುವಾಗಿದೆ. ಈ ಚಾಕು ಐದು ನಿಮಿಷ ಕಣ್ಣಿಗೆ ಬೀಳದಿದ್ದರೆ ಅಡುಗೆಮನೆಯ ಕೆಲಸಗಳು ಸಂಪೂರ್ಣವಾಗಿ ನಿಂತು ಹೋಗುತ್ತವೆ.

25

ಅಡುಗೆ ಆರಂಭಕ್ಕೆ ಬೇಕಾಗುವ ಮೊಟ್ಟ ಮೊದಲ ಪರಿಕರವೇ ಚಾಕು. ಆದರೆ ಚಾಕುಗಳನ್ನು ತುಂಬಾನೇ ಅಂಡರ್‌ ಎಸ್ಟಿಮೇಟ್ ಮಾಡಲಾಗುತ್ತದೆ. ಹಾಗಾಗಿ ಚಾಕುಗಳು ಕಡಿಮೆ ಸಮಯದಲ್ಲಿ ಹಾಳಾಗುತ್ತವೆ. ಹರಿತ ಚಾಕುಗಳು ತಮ್ಮ ತೀಕ್ಷ್ಣತೆಯನ್ನು ಕಳೆದುಕೊಳ್ಳುತ್ತವೆ.

35

ಸಾಮಾನ್ಯವಾಗಿ ಅಡುಗೆಮನೆಯಲ್ಲಿ ಎಲ್ಲಾ ಪಾತ್ರೆಗಳನ್ನು ಸ್ವಚ್ಛಗೊಳಿಸಲಾಗುತ್ತದೆ. ಆದ್ರೆ ಚಾಕುವನ್ನು ನೀರಿನಲ್ಲಿ ಅದ್ದಿ ಹಾಗೆ ಇಟ್ಟಿರಬಹುದು. ತರಕಾರಿ ಕತ್ತರಿಸುವ ಚಾಕುಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಬೇಕು. ಹಾಗಾದ್ರೆ ಮಾತ್ರ ಚಾಕುಗಳು ಬಹುದಿನ ಬಾಳಿಕೆಗೆ ಬರುತ್ತವೆ. ಸರಿಯಾದ ಮಾರ್ಗದಲ್ಲಿ ಚಾಕುವನ್ನು ಹೇಗೆ ಸ್ವಚ್ಛಗೊಳಿಸಬೇಕು.

45

ಹಂತ 1

ಚಾಕುವನ್ನು ಎರಡು ಬೆರಳುಗಳಿಂದ ಹಿಡಿದುಕೊಳ್ಳಿ. ಅಗತ್ಯವಿದ್ರೆ ಕೌಂಟರ್‌ ಟಾಪ್ ಮೇಲಿಡಿ. ಆನಂತರ ಬಿಸಿನೀರು ಬಳಸಿ ಆಹಾರಕಣಗಳನ್ನು ಸ್ವಚ್ಛಗೊಳಿಸಿ. ಹೀಗೆ ಮಾಡುವಾಗ ನಿಧಾನವಾಗಿ ಕೆಲಸ ಮಾಡಿ. ಇಲ್ಲವಾದ್ರೆ ಗಾಯವಾಗಬಹುದು.

55

ಹಂತ 2

ಮೊದಲನೇ ಹಂತದಲ್ಲಿ ಆಹಾರದ ಕಲೆಗಳು ಹೋಗದಿದ್ದರೆ ಸಾಬೂನು ನೀರಿನಲ್ಲಿ ಅದ್ದಿಡಿ. ಆನಂತರ ಹರಿಯುವ ನೀರಿನಲ್ಲಿ ಚಾಕು ಹಿಡಿಯಿರಿ. ಕೊನೆಗೆ ಒಣಬಟ್ಟೆಯಿಂದ ಚಾಕುವನ್ನು ಒರೆಸಬೇಕು.

Read more Photos on
click me!

Recommended Stories