Balcony Decor: ಬಾಲ್ಕನಿಯನ್ನು ಸುಂದರವಾಗಿಸಲು ದುಬಾರಿ ಫರ್ನಿಚರ್ ಅಗತ್ಯವಿಲ್ಲ. ಗಿಡಗಳು, ಹಳೆಯ ವಸ್ತುಗಳ ಮರುಬಳಕೆ, ಫೇರಿ ಲೈಟ್ಸ್ ಮತ್ತು ಸಣ್ಣ ಸಿಟ್ಟಿಂಗ್ ಕಾರ್ನರ್‌ನಂತಹ ಸರಳ ಐಡಿಯಾಗಳಿಂದ ನಿಮ್ಮ ಬಾಲ್ಕನಿಗೆ ಆಕರ್ಷಕ ಲುಕ್ ನೀಡಬಹುದು. ಅದು ಹೇಗೆ ನೋಡೋಣ.
ಮನೆಯ ಬಾಲ್ಕನಿಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಮಾತ್ರವಲ್ಲ, ಅದನ್ನು ಸುಂದರವಾಗಿ ಅಲಂಕರಿಸುವುದೂ ಮುಖ್ಯ. ಬಾಲ್ಕನಿ ಮನೆಯ ಲುಕ್‌ಗೆ ವಿಶೇಷ ಮೆರುಗು ನೀಡುವುದರಿಂದ ಅದನ್ನು ಚೆಂದಗೊಳಿಸಲು ಹೆಚ್ಚು ಹಣ ಖರ್ಚು ಮಾಡಬೇಕೆಂದಿಲ್ಲ. ಸ್ವಲ್ಪ ಕ್ರಿಯೇಟಿವಿಟಿ ಹಾಗೂ ಬಜೆಟ್ ಫ್ರೆಂಡ್ಲಿ ವಸ್ತುಗಳ ಸಹಾಯದಿಂದ ಬಾಲ್ಕನಿಯನ್ನು ಆರಾಮದಾಯಕ ಮತ್ತು ಸುಂದರವಾದ ಕಾರ್ನರ್ ಆಗಿ ಬದಲಾಯಿಸಬಹುದು. ಇದಕ್ಕಾಗಿ ದುಬಾರಿ ಫರ್ನಿಚರ್ ಅಥವಾ ದೊಡ್ಡ ಬದಲಾವಣೆಗಳ ಅಗತ್ಯವಿಲ್ಲ.
26
ಗಿಡಗಳಿಂದ ಬಾಲ್ಕನಿಗೆ ಕೊಡಿ ಫ್ರೆಶ್ ಲುಕ್
ಬಾಲ್ಕನಿಯನ್ನು ಹಸಿರಿನಿಂದ ತುಂಬಿಸುವುದು ಸುಂದರವಾಗಿ ಕಾಣಲು ಸುಲಭವಾದ ಮಾರ್ಗ. ಮನಿ ಪ್ಲಾಂಟ್, ಅಲೋವೆರಾ, ಸ್ನೇಕ್ ಪ್ಲಾಂಟ್ ಸೇರಿದಂತೆ ವಿವಿಧ ಸಸ್ಯಗಳನ್ನು ಸಣ್ಣ ಕುಂಡಗಳಲ್ಲಿ ಬೆಳೆಸಬಹುದು. ಜಾಗ ಕಡಿಮೆ ಇದ್ದರೆ ನೆಲದ ಮೇಲೆ ಗಿಡಗಳನ್ನು ಇಡುವ ಬದಲು ಹ್ಯಾಂಗಿಂಗ್ ಪ್ಲಾಂಟರ್ ಅಥವಾ ವರ್ಟಿಕಲ್ ಪ್ಲಾಂಟ್ ಸ್ಟ್ಯಾಂಡ್ ಬಳಸಬಹುದು.
36
ಹಳೆಯ ವಸ್ತುಗಳಿಗೆ ಕೊಡಿ ಹೊಸ ರೂಪ
ಮನೆಯಲ್ಲಿರುವ ಹಳೆಯ ಬಾಟಲಿಗಳು, ಮರದ ಬಾಕ್ಸ್‌ಗಳು, ಬುಟ್ಟಿಗಳು ಅಥವಾ ಸಣ್ಣ ಡಬ್ಬಿಗಳನ್ನು ಎಸೆಯುವ ಬದಲು ಬಾಲ್ಕನಿ ಡೆಕೋರ್‌ಗೆ ಬಳಸಬಹುದು. ಅವುಗಳಿಗೆ ಬಣ್ಣ ಹಚ್ಚಿ ಸುಂದರವಾದ ಪ್ಲಾಂಟರ್‌ಗಳಾಗಿ ಪರಿವರ್ತಿಸಬಹುದು. ಇದರಿಂದ ಬಾಲ್ಕನಿಗೆ ಯೂನಿಕ್ ಲುಕ್ ಸಿಗುವುದರ ಜೊತೆಗೆ ಅಲಂಕಾರದ ಖರ್ಚೂ ಕಡಿಮೆಯಾಗುತ್ತದೆ.
ಸಂಜೆ ವೇಳೆ ಬಾಲ್ಕನಿಗೆ ಸುಂದರವಾದ ವಾತಾವರಣ ಬೇಕೆಂದರೆ ಫೇರಿ ಲೈಟ್ಸ್ ಉತ್ತಮ ಆಯ್ಕೆ. ಇವುಗಳನ್ನು ಬಾಲ್ಕನಿ ರೇಲಿಂಗ್, ಗೋಡೆ ಅಥವಾ ಗಿಡಗಳ ಸುತ್ತಲೂ ಅಲಂಕರಿಸಬಹುದು. ಮೃದುವಾದ ಬೆಳಕು ಬಾಲ್ಕನಿಗೆ ಕೋಝಿ ಮತ್ತು ಆಕರ್ಷಕ ಲುಕ್ ನೀಡುತ್ತದೆ.
56
ಚಿಕ್ಕ ಜಾಗದಲ್ಲೇ ಮಾಡಿಕೊಳ್ಳಿ ಕೋಝಿ ಸಿಟ್ಟಿಂಗ್ ಕಾರ್ನರ್
ಬಾಲ್ಕನಿಯಲ್ಲಿ ಸ್ವಲ್ಪ ಜಾಗವಿದ್ದರೆ ಒಂದು ಸಣ್ಣ ಫೋಲ್ಡಿಂಗ್ ಚೇರ್, ಫ್ಲೋರ್ ಕುಶನ್ ಅಥವಾ ಮ್ಯಾಟ್ ಇಟ್ಟು ಕುಳಿತುಕೊಳ್ಳುವ ಜಾಗ ಮಾಡಿಕೊಳ್ಳಬಹುದು. ದುಬಾರಿ ಸೋಫಾ ಸೆಟ್ ಖರೀದಿಸುವ ಬದಲು ಮನೆಯಲ್ಲಿರುವ ಕುಶನ್‌ಗಳು ಹಾಗೂ ಹಳೆಯ ಬಟ್ಟೆಗಳಿಂದ ತಯಾರಿಸಿದ ಕವರ್‌ಗಳನ್ನು ಬಳಸಬಹುದು.
66
ಖಾಲಿ ಗೋಡೆಯನ್ನು ಮಾಡಿ ಡೆಕೋರ್ ಸ್ಪೇಸ್
ಬಾಲ್ಕನಿಯ ಗೋಡೆಯ ಮೇಲೆ ಖಾಲಿ ಜಾಗವಿದ್ದರೆ ಸಣ್ಣ ವಾಲ್ ಪ್ಲಾಂಟರ್‌ಗಳು, ಫೋಟೋ ಫ್ರೇಮ್‌ಗಳು, ಮಿರರ್‌ಗಳು ಅಥವಾ ಹ್ಯಾಂಡ್‌ಮೇಡ್ ಡೆಕೋರೇಟಿವ್ ಪೀಸ್‌ಗಳನ್ನು ಹಾಕಬಹುದು. ಆದರೆ ಗೋಡೆಯ ಮೇಲೆ ಯಾವುದೇ ವಸ್ತುವನ್ನು ಅಳವಡಿಸುವಾಗ ಅದು ಗಟ್ಟಿಯಾಗಿ ಮತ್ತು ಸುರಕ್ಷಿತವಾಗಿ ಫಿಕ್ಸ್ ಆಗಿರುವುದನ್ನು ಖಚಿತಪಡಿಸಿಕೊಳ್ಳಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.