ಮಳೆಗಾಲದಲ್ಲಿ ಅಥವಾ ನೀರು ತಾಗಿ ಬೆಂಕಿ ಪೊಟ್ಟಣ ತಂಪಾದಾಗ ಕಡ್ಡಿ ಗೀರಿದರೂ ಬೆಂಕಿ ಹೊತ್ತಿಕೊಳ್ಳುವುದಿಲ್ಲ. ಇಂತಹ ಸಮಯದಲ್ಲಿ ಬೆಂಕಿ ಪೊಟ್ಟಣದ ಎರಡೂ ಬದಿಗಳಿಗೆ ಪೌಡರ್ ಸವರಿದರೆ ಅದು ತೇವವನ್ನು ಸಂಪೂರ್ಣವಾಗಿ ಹೀರಿಕೊಳ್ಳುತ್ತದೆ. ಇದರಿಂದ ಸುಲಭವಾಗಿ ಬೆಂಕಿ ಕಡ್ಡಿ ಉರಿಯುತ್ತದೆ.
ಮ್ಯಾಚ್ಬಾಕ್ಸ್ ಅಥವಾ ಬೆಂಕಿ ಪೊಟ್ಟಣ ಎಲ್ಲ ಮನೆಗಳಲ್ಲಿಯೂ ಬೇಕೇ ಬೇಕು. ಗ್ಯಾಸ್ ಇದ್ದ ಮನೆಗಳಲ್ಲಿ ಗ್ಯಾಸ್ ಲೈಟರ್ ಇದ್ದರೂ, ಮ್ಯಾಚ್ಬಾಕ್ಸ್ ಮಹತ್ವವೇನೂ ಕಡಿಮೆಯಾಗಿಲ್ಲ. ಗ್ಯಾಸ್ ಹಚ್ಚಲು ಮಾತ್ರವಲ್ಲದೇ, ದೇವರ ಮನೆಯ ದೀಪ ಹಚ್ಚುವುದರಿಂದ ಹಿಡಿದು, ಕರೆಂಟ್ ಹೋದಾಗ ಮೋಂಬತ್ತಿ ಹಚ್ಚುವವರೆಗೆ ಮ್ಯಾಚ್ ಬಾಕ್ಸ್ ಇರಲೇಬೇಕು.
25
ತಂಪಾಗಿ ತೊಂದರೆ
ಆದರೆ ಮಳೆಗಾಲದಲ್ಲಿ ಹೆಚ್ಚಾಗಿ ಮ್ಯಾಚ್ಬಾಕ್ಸ್ ತಂಪಾಗಿ ಕಡ್ಡಿ ಗೀರಿದಾಗ ಬೆಂಕಿ ಹೊತ್ತಿಕೊಳ್ಳುವುದೇ ಇಲ್ಲ. ಇದು ಮಳೆಗಾಲದ ಸಮಸ್ಯೆ ಅಲ್ಲ. ಕೆಲವೊಮ್ಮೆ ನೀರು ಚೆಲ್ಲಿಯೋ ಅಥವಾ ತಂಪಾದ ಪ್ರದೇಶದಲ್ಲಿ ಇಟ್ಟಾಗಲೋ ಬೆಂಕಿ ತಗಲುವುದೇ ಇಲ್ಲ.
35
ತುಂಬಾ ಸಮಸ್ಯೆ
ಹೆಚ್ಚಾಗಿ ಮ್ಯಾಚ್ಬಾಕ್ಸ್ಗಳು ಒಂದೇ ಇರುವ ಕಾರಣದಿಂದ ಇಂಥ ಸಂದರ್ಭ ಬಂದಾಗ, ತುಂಬಾ ಸಮಸ್ಯೆಯಾಗುವುದು ಉಂಟು. ಬೆಂಕಿ ಪೊಟ್ಟಣದ ಎರಡೂ ಕಡೆಗಳನ್ನು ಉಜ್ಜಿ ಉಜ್ಜಿ ಕಡ್ಡಿ ಗೀರಿದರೂ ಬೆಂಕಿ ಬರದೇ ಎಷ್ಟೋ ಮಂದಿ ಪರದಾಡುವುದು ಇದೆ.
ಇದಕ್ಕೆ ಸುಲಭದ ಉಪಾಯ ಒಂದಿದೆ. ಅದೇನೆಂದರೆ, ನೀರಿಗೆ ಬಿದ್ದ ಅಥವಾ ಇನ್ನಾವುದಾದರೂ ಕಾರಣಕ್ಕೆ ಬೆಂಕಿ ಪೊಟ್ಟಣವು ತಂಪಾಗಿದ್ದರೆ, ಎರಡೂ ಭಾಗಕ್ಕೆ ನೀವು ಬಳಸುವ ಯಾವುದಾದರೂ ಪೌಡರ್ ಹಾಕಿ ಸವರಿ.
55
ಪೌಡರ್ ಮ್ಯಾಜಿಕ್
ಹೀಗೆ ಸವರಿ ಕೆಲ ಹೊತ್ತು ಬಿಟ್ಟಾಗ ಪೌಡರ್ ನೀರನ್ನು ಸಂಪೂರ್ಣವಾಗಿ ಹೀರಿಕೊಂಡಿರುತ್ತದೆ. ಆಗ ಸುಲಭದಲ್ಲಿ ಕಡ್ಡಿ ಗೀರಬಹುದು, ಆಗ ಸುಲಭದಲ್ಲಿ ಬೆಂಕಿ ಹೊತ್ತಿಕೊಳ್ಳುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.