Stranger House Party: 'ಸ್ಟ್ರೇಂಜರ್ ಹೌಸ್ ಪಾರ್ಟಿ' ಆಯೋಜನೆಗೆ ಸಂಬಂಧಿಸಿದಂತೆ ಪೊಲೀಸರು ಏಳು ಜನರನ್ನು ಬಂಧಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್ ವೈರಲ್ ಆದ ನಂತರ ಈ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದ್ದು, ಗೋವಾದಲ್ಲೂ ಇದೇ ರೀತಿಯ ಘಟನೆ ವರದಿಯಾಗಿದೆ.
ಪಣಜಿ/ರಾಯ್ಪುರ: ಸ್ಟ್ರೇಂಜರ್ ಹೌಸ್ ಪಾರ್ಟಿ ಆಯೋಜನೆ ಸಂಬಂಧ ಪೊಲೀಸರು ಏಳು ಜನರನ್ನು ಬಂಧಿಸಿದ್ದಾರೆ. ನ್ಯೂಡ್ ಪಾರ್ಟಿ ಆಯೋಜನೆ ಕುರಿತ ಪೋಸ್ಟ್ ಮತ್ತು ಆಹ್ವಾನ ಪತ್ರಿಕೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದೀಗ ಈ ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಂಡಿದೆ.
25
ಆಮಂತ್ರಣ ಪತ್ರಿಕೆ
ಆಮಂತ್ರಣ ಪತ್ರಿಕೆ ಪ್ರಕಾರ ಸೂಚಿಸಿದ ಜಾಗದಲ್ಲಿ ನೊಂದಾಯಿಸಿಕೊಂಡ ಯುವಕರು ಬರಬೇಕು. ಬೇಕಿದ್ದರೆ ಜೊತೆಯಲ್ಲಿ ತಮ್ಮಿಷ್ಟದ ಮದ್ಯ ತೆಗೆದುಕೊಂಡು ಬರಬಹುದು ಎಂದು ತಿಳಿಸಲಾಗಿತ್ತು. ಪಾರ್ಟಿಗೂ ಮುನ್ನವೇ ರಾಯ್ಪುರ ಪೊಲೀಸರು ಏಳು ಜನರನ್ನು ಬಂಧಿಸಿದ್ದಾರೆ
35
ಬೆತ್ತಲೆ ಪಾರ್ಟಿ
ಬೆತ್ತಲೆ ಪಾರ್ಟಿ ಆಯೋಜಕ, ಫಾರ್ಮ್ ಹೌಸ್ ಮಾಲೀಕನಿಂದ ಹಿಡಿದು ಡಿಜಿಟಲ್ ಪ್ರಮೋಟರ್ ಸಹ ಬಂಧನಕ್ಕೊಳಗಾಗಿದ್ದಾರೆ. ಸೆಪ್ಟೆಂಬರ್ 12ರಂದು ಸೋಶಿಯಲ್ ಮೀಡಿಯಾದಲ್ಲಿ Aparichit Club Present ಹೆಸರಿನಲ್ಲಿ ಪೋಸ್ಟರ್ ಹಂಚಿಕೊಳ್ಳಲಾಗಿತ್ತು. ಈ ಪಾರ್ಟಿ ಸೆಪ್ಟೆಂಬರ್ 21ರಂದು ನಿಗಧಿಯಾಗಿತ್ತು. ಪಾರ್ಟಿಗೂ ಮುನ್ನವೇ ಪೊಲೀಸರು ಸುಮೊಟೋ ಪ್ರಕರಣ ದಾಖಲಿಸಿಕೊಂಡು ಏಳು ಜನರನ್ನು ಬಂಧಿಸಿದ್ದಾರೆ.
ಈ ಸಂಬಂಧ ಪ್ರತಿಕ್ರಿಯಿಸಿರುವ ಛತ್ತೀಸಗಢ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಬೈಜ್ ನೇರವಾಗಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸರ್ಕಾರದ ಬೆಂಬಲವಿಲ್ಲದೇ ಇಂತಹ ಪಾರ್ಟಿಗಳು ನಡೆಯಲು ಸಾಧ್ಯವಿಲ್ಲ. ಅಶ್ಲೀಲ ಪಾರ್ಟಿ ಆಯೋಜಿಸುವ ಮೂಲಕ ದೇಶದ ಸಂಸ್ಕೃತಿಗೆ ಧಕ್ಕೆಯನ್ನುಂಟು ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಇದೇ ರೀತಿಯ ಪೋಸ್ಟರ್‌ಗಳು ಗೋವಾದಲ್ಲಿಯೂ ವೈರಲ್ ಆಗಿದ್ದುವು. ನಾರ್ತ್ ಗೋವಾದಲ್ಲಿ ನಗ್ನ ಪಾರ್ಟಿ ಇರಲಿದೆ ಎಂದು ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಲಾಗಿತ್ತು. ಈ ಪೋಸ್ಟರ್‌ಗಳು ಗೋವಾದ ನೆರೆಯ ರಾಜ್ಯದ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದವು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ