World Environment Day 2023: ಈ ದಿನದ ಇತಿಹಾಸ, ಮಹತ್ವ ಮತ್ತು ಥೀಮ್‌ ಏನು? ಇಲ್ಲಿದೆ ಮಾಹಿತಿ

First Published | Jun 4, 2023, 8:32 PM IST

ಪ್ರತಿವರ್ಷ ಜೂನ್‌ 5ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಆಚರಣೆ ಆರಂಭಗೊಂಡಿದ್ದು ಯಾವಾಗ ? ಈ ದಿನದ ವಿಶೇಷತೆಯೇನು, 2023ರ ಪರಿಸರ ದಿನದ ಥೀಮ್ ಏನು ಎಂಬುದನ್ನು ತಿಳಿಯೋಣ.

ವಿಶ್ವ ಪರಿಸರ ದಿನ (World Environment Day)ವನ್ನು ಪ್ರತಿ ವರ್ಷ ಜೂನ್ 5ರಂದು ಆಚರಿಸಲಾಗುತ್ತದೆ. ವಿಶ್ವ ಪರಿಸರ ದಿನವು ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ (UNEP)ದ ಅಡಿಯಲ್ಲಿ ಆಯೋಜಿಸಲ್ಪಟ್ಟಿದೆ. ಪರಿಸರ ದಿನವನ್ನು ಆಧುನಿಕ ಪ್ರಪಂಚದ ಪರಿಸರ ವಿಪತ್ತುಗಳ ಬಗ್ಗೆ ಜಾಗೃತಿ ಮೂಡಿಸಲು ಆಚರಿಸಲು ತೀರ್ಮಾನಿಸಲಾಯಿತು. ಸುಸ್ಥಿರ ಜೀವನಶೈಲಿಯನ್ನು ಬದುಕಲು ಜನರನ್ನು ಪ್ರೋತ್ಸಾಹಿಸುವುದು ಈ ದಿನದ ಪ್ರಮುಖ ಉದ್ದೇಶವಾಗಿದೆ.

Image: Freepik

ಮಾನವ (Human) ಸೇರಿದಂತೆ ಇತರ ಪ್ರಾಣಿ, ಪಕ್ಷಿಗಳು, ಸೇರಿದಂತೆ ಪ್ರತಿಯೊಂದು ಜೀವ ಸಂಕುಲ ಆಹಾರ, ಗಾಳಿ, ನೀರು ಇತರೆ ಅಗತ್ಯತೆಗಳಿಗಾಗಿ ಪರಿಸರವನ್ನ ಅವಲಂಭಿಸಿದೆ. ಇದರೆ ಇತ್ತಿಚಿನ ದಿನಗಳಲ್ಲಿ ಮಾನವನು ತನ್ನ ಅನುಕೂಲತೆಗಳಿಗಾಗಿ ಪರಿಸರವನ್ನು ಹಾಳು ಮಾಡುತ್ತಿದ್ದಾನೆ.

Tap to resize

ಇದರಿಂದಾಗಿ ಮಣ್ಣು, ಗಾಳಿ, ನೀರು ಹೀಗೆ ಸಂಪೂರ್ಣ ಪರಿಸರವೇ ಹಾಳಾಗುತ್ತಿದೆ. ಇದರಿಂದಾಲೇ ಹವಾಮಾನ (Weather) ವೈಪರೀತ್ಯ, ಆರೋಗ್ಯ ಸಮಸ್ಯೆಗಳು (Health Problem) ಸಹ ಹೆಚ್ಚಾಗ್ತಿದೆ. ಹೀಗಾಗಿಯೇ ಪರಿಸರವನ್ನು ಉಳಿಸುವಂತೆ ಜನರಿಗೆ ಎಚ್ಚರಿಕೆ ನೀಡಲು ಪರಿಸರ ದಿನವನ್ನು ಆಚರಿಸಲು ನಿರ್ಧರಿಸಲಾಯಿತು. 

​ವಿಶ್ವ ಪರಿಸರ ದಿನ 2023ರ ಧ್ಯೇಯವಾಕ್ಯ
ಪ್ರತಿ ವರ್ಷ ಜೂನ್ 5ರಂದು ನಡೆಯುವ ವಿಶ್ವ ಪರಿಸರ ದಿನವು ನಿರ್ದಿಷ್ಟ ಆತಿಥೇಯ ದೇಶ ಮತ್ತು ಥೀಮ್ ಅನ್ನು ಹೊಂದಿದೆ. 2023ಕ್ಕೆ, ಆತಿಥೇಯವು ಪಶ್ಚಿಮ ಆಫ್ರಿಕಾದ ಕೋಟ್ ಡಿ ಐವೊರ್ ದೇಶವಾಗಿದೆ, ನೆದರ್ಲ್ಯಾಂಡ್ಸ್ ಸಹಭಾಗಿತ್ವವನ್ನು ಹೊಂದಿದೆ. ಪ್ಲಾಸ್ಟಿಕ್ ಮಾಲಿನ್ಯವನ್ನು ತಡೆಗಟ್ಟುವುದು  2023ರ ಧ್ಯೇಯವಾಕ್ಯವಾಗಿದೆ.

#BeatPlasticPollution ಎಂಬ ಹ್ಯಾಶ್‌ಟ್ಯಾಗ್ ಅಡಿಯಲ್ಲಿ 2023ರ ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ.  ಇದೇ ವಿಷಯದೊಂದಿಗೆ 45 ನೇ ವಿಶ್ವ ಪರಿಸರ ದಿನವನ್ನು ಭಾರತದ ನೇತೃತ್ವದಲ್ಲಿ ನಡೆಸಲಾಯಿತು. ಈ ಥೀಮ್ ಪ್ಲಾಸ್ಟಿಕ್‌ನ ಉತ್ಪಾದನೆ, ಬಳಕೆ, ವಿಲೇವಾರಿ ಮತ್ತು ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಉಪಕ್ರಮವಾಗಿದೆ.

​ವಿಶ್ವ ಪರಿಸರ ದಿನದ ಆಚರಣೆ ಆರಂಭವಾಗಿದ್ದು ಯಾವಾಗ ?
ವಿಶ್ವ ಪರಿಸರ ದಿನವನ್ನು 1974ರಲ್ಲಿ ವಿಶ್ವಸಂಸ್ಥೆಯ ಅನುಮೋದನೆಯೊಂದಿಗೆ ಆರಂಭಿಸಲಾಯಿತು. ಈ ಕುರಿತು 1972ರಲ್ಲಿಯೇ ಚರ್ಚೆಗಳು ಆರಂಭವಾಗಿತ್ತು. ಆದರೆ ಎರಡು ವರ್ಷಗಳ ಕಾಲ ಈ ಚರ್ಚೆ ನಡೆಸಿ, 1974 ಜೂನ್ 5ರಂದು ಮೊದಲು ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಅಂದಿನಿಂದ ಪ್ರತಿ ವರ್ಷ ವಿಶ್ವ ಪರಿಸರ ದಿನವನ್ನು ಒಂದು ಧ್ಯೇಯವಾಕ್ಯದೊಂದಿಗೆ ಆಚರಿಸಲಾಗುತ್ತದೆ.

​ಪರಿಸರ ದಿನದ ಉದ್ದೇಶಗಳು
ಜೂನ್‌ 5ರಂದು ವಿಶ್ವ ಪರಿಸರ ದಿನವನ್ನು ಆಚರಿಸುವುದರಿಂದ ಹಲವಾರು ಮುಖ್ಯ ಉದ್ದೇಶಗಳಿವೆ. ಪರಿಸರಕ್ಕೆ ಸಂಬಂಧಿಸಿದಂತೆ ಜನರಲ್ಲಿ ಜಾಗೃತಿ ಮೂಡಿಸುವುದು. ಪರಿಸರಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು. ಪರಿಸರ ಸ್ನೇಹಿ ಅಭಿವೃದ್ಧಿ ಪಡಿಸಲು ಅಭಿಯಾನ ಆರಂಭಿಸುವುದನ್ನು ಯೋಜಿಸಲಾಗಿದೆ.

ಮಾತ್ರವಲ್ಲ, ಗಿಡ, ಮರಗಳನ್ನು ಬೆಳೆಸುವಂತೆ ಜನರನ್ನು ಪ್ರೇರೆಪಿಸುವುದು. ಪರಿಸರವನ್ನು ನಾಶ ಮಾಡದಂತ ಜಾಗೃತಿ ಮೂಡಿಸುವುದು. ಪರಿಸರ ಪ್ರತಿಯೊಂದು ಜೀವಿಗೆ ಎಷ್ಟು ಮುಖ್ಯ ಎನ್ನುವುದರ ಬಗ್ಗೆ ಅರಿವು ಮೂಡಿಸುವುದು ಈ ದಿನದ ಆಚರಣೆಯ ಹಿಂದಿರುವ ಮುಖ್ಯ ಉದ್ದೇಶವಾಗಿದೆ.

Latest Videos

click me!