ಕೋಡುಬಳೆ ಹುಳವೆಂದ್ರೆ ನೆನಪಾಗುತ್ತೆ ಬಾಲ್ಯ, ಇದರ ಕಾಟದಿಂದ ಮುಕ್ತರಾಗೋದು ಹೇಗೆ?

First Published | Jul 16, 2023, 4:57 PM IST

ಮಳೆಗಾಲದಲ್ಲಿ, ಹಲವಾರು ರೀತಿಯ ಹುಳಗಳು ಮನೆಗೆ ಬರಲು ಪ್ರಾರಂಭಿಸುತ್ತವೆ. ಇವುಗಳನ್ನು ಹೇಗೆ ದೂರ ಮಾಡೋದು ಅನ್ನೋದೆ ಒಂದು ತಲೆನೋವಿನ ವಿಷಯವಾಗಿರುತ್ತೆ. ನಿಮ್ಮ ಮನೆಯಲ್ಲೂ ಹೀಗಾಗಿದ್ದರೆ, ಮನೆಯಲ್ಲಿ ಸಿಗುವ ಈ ವಸ್ತುಗಳನ್ನು ಬಳಸಿಕೊಂಡು ಹುಳಗಳನ್ನು ದೂರ ಮಾಡಬಹುದು. 
 

ಪ್ರಸ್ತುತ, ದೇಶದ ಬಹುತೇಕ ಎಲ್ಲಾ ಭಾಗಗಳಲ್ಲಿ ಮಳೆಯಾಗುತ್ತಿವೆ. ಕೆಲವು ಸ್ಥಳಗಳಲ್ಲಿ ಅಲ್ಲಲ್ಲಿ ಸ್ವಲ್ಪ ಮಳೆಯಾಗುತ್ತಿದ್ದರೆ, ಇನ್ನೂ ಅನೇಕ ಸ್ಥಳಗಳಲ್ಲಿ ಭಾರಿ ಮಳೆಯಾಗುತ್ತಿವೆ. ಅನೇಕ ಜನರು ಮಾನ್ಸೂನ್ ಋತುವನ್ನು (monsoon season) ತುಂಬಾ ಇಷ್ಟಪಡುತ್ತಾರೆ, ಆದರೆ ಈ ಹುಳಗಳ ಆಗಮನದಿಂದಾಗಿ ಹೆಚ್ಚಿನ ಜನ ಮಾನ್ಸೂನ್ ಅನ್ನು ಇಷ್ಟಪಡೋದೆ ಇಲ್ಲ. 
 

ಮಳೆಗಾಲದಲ್ಲಿ ಸಾಮಾನ್ಯ ವಿಷಯವೆಂದರೆ ಮಳೆಗಾಲದ ಕೀಟಗಳು ತೋಟದಲ್ಲಿ ಮತ್ತು ಮನೆಯಲ್ಲಿ ಬೆಳೆಯಲು ಪ್ರಾರಂಭಿಸುತ್ತವೆ. ಮಳೆ ಹುಳುಗಳ ಕಡಿತದಿಂದ ಅನೇಕ ಜನರು ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಮಳೆಗಾಲದ ಕೀಟಗಳಲ್ಲಿ ಹೆಚ್ಚಾಗಿ ಕಾಣಿಸೋದು ಸಹಸ್ರಪದಿ (millipede). ಇದು ಮಳೆ ಬಂದ ಕೂಡಲೆ, ಮನೆಯ ಹೊರಗೆ, ಒಳಗೆ ಎಲ್ಲೆಡೆ ಕಾಣಸಿಗುತ್ತೆ. 
 

Tap to resize

ನೀವು ಸಹ ಮಳೆಗಾಲದಲ್ಲಿ ಸಹಸ್ರಪದಿಯಿಂದ ಹೆಚ್ಚು ತೊಂದರೆಗೀಡಾಗಿದ್ದರೆ ಅಥವಾ ಸಹಸ್ರಪದಿಯಿಂದಾಗಿ ಸಸ್ಯಗಳು ಸಹ ಹದಗೆಡಲು ಪ್ರಾರಂಭಿಸಿದ್ದರೆ, ಈ ಗೃಹೋಪಯೋಗಿ ವಸ್ತುಗಳನ್ನು ಬಳಸಿಕೊಂಡು ನೀವು ಕೆಲವೇ ನಿಮಿಷಗಳಲ್ಲಿ ಅವುಗಳನ್ನು ಓಡಿಸಬಹುದು. 
 

ಸಹಸ್ರಪದಿ ಹುಟ್ಟಿಕೊಳ್ಳಲು ಕಾರಣ ಏನು?
ಮಾನ್ಸೂನ್ ನಲ್ಲಿ ಸಹಸ್ರಪದಿಗಳನ್ನು ಸುಲಭವಾಗಿ ತೆಗೆದುಹಾಕುವ ಮೊದಲು, ಮನೆಯ ಯಾವ ಸ್ಥಳಗಳಲ್ಲಿ ಸಾಮಾನ್ಯವಾಗಿ ಸಹಸ್ರಪದಿ ಕಂಡುಬರುತ್ತವೆ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. 
ಸಹಸ್ರಪದಿ ತೋಟಗಳು ಮತ್ತು ಕೊಳೆತ ಮರಗಳು ಮತ್ತು ಸಸ್ಯಗಳು ಎಲೆಗಳ ಸುತ್ತಲೂ ಕಂಡುಬರುತ್ತವೆ.
ಅಳಿದುಳಿದ ಆಹಾರವನ್ನು ಹೊರಗೆ ಎಸೆಯುವುದು ಸಹ ಸಹಸ್ರಪದಿ ಹುಟ್ಟಲು ಕಾರಣವಾಗುತ್ತದೆ. 
ಸಹಸ್ರಪದಿ ಬಾತ್ ರೂಮ್ ಮತ್ತು ಕಿಚನ್ ಲೇನ್ ಮೂಲಕ ಮನೆಯ ಒಳಭಾಗವನ್ನು ತಲುಪುತ್ತವೆ. 
ಅನೇಕ ಬಾರಿ ಸಹಸ್ರಪದಿ ಕಿಟಕಿಗಳ ಮೂಲಕ ಮನೆಗೆ ಎಂಟ್ರಿ ಪಡೆಯುತ್ತವೆ.

ಬೇಕಿಂಗ್ ಸೋಡಾ ಬಳಸಿ 
ಮನೆಯಲ್ಲಿ ಬೇಕಿಂಗ್ ಸೋಡ (baking soda) ಹೆಚ್ಚಾಗಿ ಇರುತ್ತೆ. ಇದನ್ನು ಮನೆ ಕ್ಲೀನ್ ಮಾಡಲು ಸಹ ಬಳಸಿರಬಹುದು.  ಆದರೆ ಇದನ್ನು ಬಳಸಿ ಸಹಸ್ರಪದಿಯನ್ನ ಸಹ ದೂರ ಮಾಡಬಹುದು. ಅದ್ಕಕೇನು ಮಾಡಬಹುದು ನೋಡಿ.

ಮೊದಲಿಗೆ, 1-2 ಲೀಟರ್ ನೀರಿನಲ್ಲಿ 3-4 ಟೀಸ್ಪೂನ್ ಅಡುಗೆ ಸೋಡಾ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. 
ಈಗ ಅದಕ್ಕೆ 1-2 ಟೀಸ್ಪೂನ್ ಉಪ್ಪು ಅಥವಾ ನಿಂಬೆ ರಸ ಸೇರಿಸಿ. 
ನಂತರ, ಮಿಶ್ರಣವನ್ನು ಸ್ಪ್ರೇ ಬಾಟಲಿಯಲ್ಲಿ (spray bottle) ತುಂಬಿಸಿ ಸಸ್ಯಗಳ ಜೊತೆಗೆ ಚರಂಡಿ ಮತ್ತು ಕಿಟಕಿಗಳ ಮೇಲೆ ಸಿಂಪಡಿಸಿ. ಮಾನ್ಸೂನ್ ದಿನಗಳಲ್ಲಿ ಇದನ್ನ ಮಾಡಿದ್ರೆ ಸಹಸ್ರಪದಿ ಬರೋದಿಲ್ಲ.
 

ಬೇವಿನ ಎಲೆಗಳನ್ನು ಬಳಸಿ 
ಬೇವಿನ ಎಲೆಗಳನ್ನು(neem leaves) ಆರೋಗ್ಯಕ್ಕೆ ತುಂಬಾ ಪ್ರಯೋಜನ ನೀಡುತ್ತೆ, ಇದನ್ನು ಕೀಟಗಳನ್ನು ಓಡಿಸಲು ಸಹ ಬಳಸಬಹುದು. 
ಇದಕ್ಕಾಗಿ, ಮೊದಲು 2 ಕಪ್ ಬೇವಿನ ಎಲೆಗಳನ್ನು ಮಿಕ್ಸರ್ ನಲ್ಲಿ ಹಾಕಿ.
ಈಗ 2-3 ಕಪ್ ನೀರನ್ನು ಮಿಕ್ಸಿಯಲ್ಲಿ ಬೆರೆಸಿ ನುಣ್ಣಗೆ ರುಬ್ಬಿ ಒಂದು ಪಾತ್ರೆಯಲ್ಲಿ ಹಾಕಿ. 
ನಂತರ, ಮಿಶ್ರಣವನ್ನು ಸಸ್ಯ-ಚರಂಡಿ ಮತ್ತು ಕಿಟಕಿಗಳ ಸುತ್ತಲೂ ಸಿಂಪಡಿಸಿ.
ಬೇವಿನ ಎಲೆಗಳ ಕಹಿಯಿಂದಾಗಿ, ಸಹಸ್ರಪದಿ ಎಂದಿಗೂ ಕಾಣಿಸಿಕೊಳ್ಳುವುದಿಲ್ಲ.

ಸಹಸ್ರಪದಿಗಳನ್ನು ತೊಡೆದುಹಾಕಲು ಈ ವಸ್ತುಗಳನ್ನು ಬಳಸಿ 
ಅಡಿಗೆ ಸೋಡಾ ಮತ್ತು ಬೇವಿನ ಎಲೆಗಳನ್ನು ಹೊರತುಪಡಿಸಿ, ಇತರ ಅನೇಕ ಗೃಹೋಪಯೋಗಿ ವಸ್ತುಗಳಿಂದಲೂ ಸಹಸ್ರಪದಿ ಸುಲಭವಾಗಿ ಓಡಿಹೋಗಬಹುದು. ಇದಕ್ಕಾಗಿ, ನೀವು ನಿಂಬೆ ರಸ, ಅಮೋನಿಯಾ ಪುಡಿ, ಉಪ್ಪು ನೀರು ಮತ್ತು ಸೀಮೆಎಣ್ಣೆಯನ್ನು ಸಹ ಬಳಸಬಹುದು. ಈ ವಸ್ತುಗಳ ದುರ್ವಾಸನೆಯಿಂದಾಗಿ, ಸಹಸ್ರಪದಿ ಕೆಲವೇ ನಿಮಿಷಗಳಲ್ಲಿ ಓಡಿಹೋಗುತ್ತದೆ.

Latest Videos

click me!