ನವಜಾತ ಶಿಶುಗಳು (Newborns) ನಿದ್ದೆ ಮಾಡುವಾಗ ನಗುವುದನ್ನು ನಾವೆಲ್ಲ ನೋಡಿದ್ದೇವೆ. ನಿದ್ರೆ (sleep)ಯಲ್ಲಿ ಮಕ್ಕಳು ಯಾಕೆ ನಗ್ತವೆ ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡೋದು ಸಹಜ. ಅದಕ್ಕೆ ಉತ್ತರ ಇಲ್ಲಿದೆ.
ಆಗಷ್ಟೇ ಈ ಪ್ರಪಂಚಕ್ಕೆ ಬಂದ ಮಕ್ಕಳು ನಿದ್ರೆ ಮಾಡುವಾಗ ನಗೋದನ್ನು ನೀವು ನೋಡಿರ್ತೀರಿ. ನಗ್ತಿರುವ ಮಕ್ಕಳನ್ನು ನೋಡೋದೇ ಚೆಂದ. ಆ ಮಕ್ಕಳು, ದೇವರ ಜೊತೆ ಮಾತನಾಡ್ತಿವೆ. ಮಗುವನ್ನು ದೇವರು ನಗಸ್ತಿದ್ದಾನೆ ಅಂತ ಹಿರಿಯರು ಹೇಳ್ತಿರುತ್ತಾರೆ. ಆದ್ರೆ ಇದಕ್ಕೆ ವೈಜ್ಞಾನಿಕ ಕಾರಣ ಬೇರೆಯೇ ಇದೆ.
27
ಶಿಶುಗಳು ನಿದ್ದೆ ಮಾಡುವಾಗ ಏಕೆ ನಗುತ್ತವೆ?
ನಗು ಆರೋಗ್ಯಕರ ಮಗುವಿನ ನಿದ್ರೆ ಸರ್ಕಲ್ ನ ಸಾಮಾನ್ಯ ಭಾಗವಾಗಿದೆ. ಮಕ್ಕಳು ಮೆದುಳು ವೇಗವಾಗಿ ಅಭಿವೃದ್ಧಿ ಹೊಂದುತ್ತದೆ. ಹೊಸ ಸಂವೇದನೆಗಳನ್ನು ಪ್ರಕ್ರಿಯೆಗೊಳಿಸುತ್ತದೆ. ಈ ಆರಂಭಿಕ ನಗು ಸಾಮಾನ್ಯವಾಗಿ ಅನೈಚ್ಛಿಕವಾಗಿರುತ್ತವೆ.
37
ನವಜಾತ ಶಿಶುಗಳು ನಿದ್ರೆ ಚಕ್ರ
ನವಜಾತ ಶಿಶುಗಳ ನಿದ್ರೆ ಚಕ್ರವನ್ನು ಮೂರು ಹಂತಗಳಾಗಿ ವಿಂಗಡಿಸಲಾಗಿದೆ. ಒಂದು ಶಾಂತ ನಿದ್ರೆ. ಇನ್ನೊಂದು ಪ್ರಕ್ಷುಬ್ಧ ನಿದ್ರೆ ಮತ್ತು ಕೊನೆಯದು ಸಕ್ರಿಯ ನಿದ್ರೆ. ಶಾಂತ ನಿದ್ರೆ ಅವರ ನಿದ್ರೆ ಚಕ್ರದ ಮೊದಲ ಮತ್ತು ಅತ್ಯಂತ ವಿಶ್ರಾಂತಿ ಹಂತವಾಗಿದೆ. ಇದು ವಯಸ್ಕರಲ್ಲಿ ಆಳವಾದ ನಿದ್ರೆಯಂತೆಯೇ ಇರುತ್ತದೆ. ಈ ಹಂತದಲ್ಲಿ, ಮಗು ಸಂಪೂರ್ಣವಾಗಿ ಸ್ಥಿರವಾಗಿರುತ್ತದೆ. ನಿಧಾನವಾಗಿ ಮತ್ತು ಸರಿಯಾಗಿ ಉಸಿರಾಡುತ್ತದೆ . ಬಹುತೇಕ ಯಾವುದೇ ಚಲನೆ ಇರೋದಿಲ್ಲ. ಮುಖ ಶಾಂತವಾಗಿರುತ್ತದೆ. ಈ ನಿದ್ರೆ ಮಗುವಿನ ಬೆಳವಣಿಗೆ, ಮೆದುಳಿನ ಬೆಳವಣಿಗೆ ಮತ್ತು ದೈಹಿಕ ಚೇತರಿಕೆಗೆ ಸಹಾಯಕವಾಗಿದೆ.
ನವಜಾತ ಶಿಶುಗಳಲ್ಲಿ ನಿದ್ರೆಯ ಎರಡನೇ ಹಂತ ಪ್ರಕ್ಷುಬ್ಧ ನಿದ್ರೆ. ಇದನ್ನು ಅನಿಯಮಿತ ನಿದ್ರೆ ಎಂದೂ ಕರೆಯಲಾಗುತ್ತದೆ. ಅನಿಯಮಿತ ನಿದ್ರೆಯು ಮಧ್ಯಂತರ ಹಂತವಾಗಿದೆ. ಇಲ್ಲಿ ನವಜಾತ ಶಿಶುಗಳು ಒಂದು ನಿದ್ರೆಯ ಹಂತದಿಂದ ಇನ್ನೊಂದಕ್ಕೆ ಹೋಗುತ್ತವೆ. ಇಲ್ಲಿಯೂ ಶಾಂತ ಮತ್ತು ಸಕ್ರಿಯ ನಡವಳಿಕೆ ಪ್ರದರ್ಶಿಸುತ್ತವೆ.
57
ನವಜಾತ ಶಿಶುವಿನ ನಿದ್ರೆಯ ಮೂರನೇ ಹಂತ
ಸಕ್ರಿಯ ನಿದ್ರೆಯು ಮೂರನೇ ಹಂತದಲ್ಲಿ ಬರುತ್ತದೆ. ಇದು ಹಗುರವಾದ ಮತ್ತು ಉತ್ಸಾಹಭರಿತ ಹಂತವಾಗಿದೆ. ಇತರ ಹಂತಗಳಿಗಿಂತ ಹೆಚ್ಚು ಚಲನೆ ಮತ್ತು ಅಭಿವ್ಯಕ್ತಿಯನ್ನು ತೋರಿಸುತ್ತವೆ. ಈ ಹಂತದಲ್ಲಿ ಮಗುವಿನ ಮೆದುಳು ವೇಗವಾಗಿ ಅಭಿವೃದ್ಧಿ ಹೋಮದುತ್ತಿದ್ದು, ವಿಶ್ರಾಂತಿ ಸಮಯದಲ್ಲೂ ಕೆಲ್ಸ ಮಾಡ್ತಿದೆ ಎಂಬುದನ್ನು ಸೂಚಿಸುತ್ತದೆ.
67
ಬೆಳೆದಂತೆ ಹೆಚ್ಚಾಗುವ ನಗು
ಆರಂಭಿಕ ತಿಂಗಳುಗಳಲ್ಲಿ, ಈ ನಗುಗಳು ಹೆಚ್ಚಾಗಿ ಸ್ವಯಂಪ್ರೇರಿತ, ಸ್ವಯಂಚಾಲಿತ ಅಭಿವ್ಯಕ್ತಿಗಳಾಗಿರುತ್ತವೆ. ಮಕ್ಕಳು ಬೆಳೆದಂತೆ ಅವುಗಳ ಮೆದುಳುಗಳು ವಿಶ್ರಾಂತಿ ಪಡೆಯುವಾಗಲೂ ಸಕ್ರಿಯವಾಗಿರುತ್ತವೆ. ದಿನವಿಡೀ ನೋಡಿದ ಹೊಸ ದೃಶ್ಯಗಳು, ಶಬ್ದಗಳು ಮತ್ತು ಅನುಭವಗಳನ್ನು ಸಂಸ್ಕರಿಸುತ್ತವೆ. ಇದು ನಿದ್ರೆಯ ಸಮಯದಲ್ಲಿ ಸೌಮ್ಯ ನಗುವಿಗೆ ಕಾರಣವಾಗಬಹುದು.
77
ಶಾಂತಿಯ ಸಂಕೇತ
ಕೆಲವು ನಗು ವಿಶ್ರಾಂತಿ ಪಡೆಯುವಾಗ ಸಿಗುವ ನೆಮ್ಮದಿ ಹಾಗೂ ಭದ್ರತೆಯನ್ನು ಸೂಚಿಸುತ್ತದೆ. ಆಳವಾದ ನಿದ್ರೆಗೆ ಹೋಗುವ ಮುನ್ನ ಅಥವಾ ಕನಸು ಆರಂಭದ ವೇಳೆ ಈ ನಗು ಕಾಣಿಸಿಕೊಳ್ಳುತ್ತದೆ. ಮಕ್ಕಳ ನಿದ್ರೆಯ ನಗು ಅವರ ತ್ವರಿತ ಬೆಳವಣಿಗೆಯನ್ನು ಸೂಚಿಸುತ್ತದೆ. ನಿದ್ದೆ ಮಾಡುವಾಗ ಕಂಡುಕೊಳ್ಳುವ ಶಾಂತಿಯನ್ನೂ ಈ ನಗು ಸೂಚಿಸುತ್ತದೆ.