ಕಾಂಡೋಮ್‌ ತೊಳೆದು ಮರು ಬಳಕೆ ಮಾಡಬಹುದಾ?

Published : Apr 07, 2025, 05:59 PM IST

ಕಾಂಡೋಮ್ ಬಳಸೋದ್ರಲ್ಲಿ ತಪ್ಪಾದ್ರೆ ಡೇಂಜರ್. ಅದಕ್ಕೆ ಇದನ್ನು ಬಳಸೋ ಬಗ್ಗೆ ಅಗತ್ಯವಿರುವಷ್ಟ ಮಾಹಿತಿ ಇರಬೇಕು. ಕೆಲವೊಮ್ಮೆ ಕಾಂಡೋಮ್‌ ಬಗ್ಗೆ ತಮಗೆಲ್ಲ ಗೊತ್ತೆಂದು ಬಳಸುವಾಗ ಒದ್ದಾಡೋದುಂಟು. ಕಾಂಡೋಮ್ ಬಳಕೆ, ಸೈಡ್ ಎಫೆಕ್ಟ್ ಇತ್ಯಾದಿ ಬಗ್ಗೆ ಇಲ್ಲಿದೆ ವಿವರಗಳು. 

PREV
17
ಕಾಂಡೋಮ್‌ ತೊಳೆದು ಮರು ಬಳಕೆ ಮಾಡಬಹುದಾ?

ಕಾಂಡೋಮ್ ಬಗ್ಗೆ ಮುಕ್ತವಾಗಿ ಮಾತನಾಡಲು ಎಲ್ಲರಿಗೂ ಮುಜುಗರ. ಕ್ಲೋಸ್ಡ್ ಸರ್ಕಲ್‌ನಲ್ಲಿ ಮಾತ್ರ ಆಡುವ ಜೋಕ್‌ಗಳಲ್ಲಿ, ಪತಿ-ಪತ್ನಿ ಅಥವಾ ಕಪಲ್ ನಡುವಿನ ಮಾತು ಕಥೆಯಲ್ಲಿ ಆಗಾಗ ಈ ಕಾಂಡೋಮ್ ಕುರಿತ ಮಾತು ಕೇಳಿ ಬರುತ್ತದೆ. ಆದರೆ ಅವು ಯಾವುದೂ ಇದರ ಬಳಕೆ ಬಗ್ಗೆ ತಿಳಿವಳಿಕೆ ಮೂಡಿಸುವವರೇ ಇರೋಲ್ಲ. ಅಷ್ಟೇ ಅಲ್ಲ, ಮೆಡಿಕಲ್ ಶಾಪಲ್ಲಿ ತಮಗೆ ಬೇಕಾದ ಕಾಂಡೋಮ್‌ ಬಗ್ಗೆ ಮುಕ್ತವಾಗಿ ಕೇಳಲು ನಾಚಿಕೆ ಪಟ್ಟು ಏನೋ ಒಂದು ಕಾಂಡೋಮ್ ಖರೀದಿಸಿ ಅದನ್ನು ಬಳಸಲಾಗದೇ ಒದ್ದಾಡೋದುಂಟು. 

27

ಆನ್‌ಲೈನ್‌ನಲ್ಲಿ ಸ್ವಲ್ಪ ಚೆಕ್ ಮಾಡಿದರೂ ಆ ಬಗ್ಗೆ ಡೀಟೇಲ್ಸ್ ಸಿಗುತ್ತೆ. ಆದರಷ್ಟು ವ್ಯವಧಾನ ಹೆಚ್ಚಿನವರಿಗೆ ಇಲ್ಲ. ಇದರಿಂದ ಆ ಟೈಮಲ್ಲಿ ಒದ್ದಾಡೋದು ತಪ್ಪೋಲ್ಲ. ಏನೋ ಮಾಡಲು ಹೋಗಿ ಮತ್ತೇನೋ ಆಗಿ, ಆಗಬಾರದ್ದು ಆಗೋಗುತ್ತೆ. ಸಮಸ್ಯೆಯೂ ಆಗಬಹದು. ಗರ್ಭ ಕಟ್ಟೋದನ್ನು ತಡೆಯುವ ಕಾಂಡೋಮ್ ಸುರಕ್ಷಿತ ವಿಧಾನ, ಲೈಂಗಿಕ ರೋಗಗಳಿಂದ ಕಾಪಾಡುವ ವಿಧಾನವೂ ಆಗಿರುವುದರಿಂದ ಈ ಬಗ್ಗೆ ಎಷ್ಟು ತಿಳಿದುಕೊಂಡರೂ ಸಾಲದು. 

37

ಕಾಂಡೋಮ್ (Condom) ಬಳಸುವ ಮುನ್ನ ಇದರ ಬಗ್ಗೆ ತಿಳಿದುಕೊಳ್ಳುವುದು ಬಹಳ ಒಳ್ಳೆಯದು. ಇದನ್ನು ಬಹಳ ಎಚ್ಚರಿಕೆಯಿಂದ ಬಳಸಬೇಕು. ಒಳ್ಳೆ ಕಂಪನಿಯ ಕಾಂಡೋಮ್ ಕೊಳ್ಳಬೇಕು. ಇದರ ಬಳಕೆಯಿಂದ ಅಲರ್ಜಿ ಕಾಣಿಸಿಕೊಂಡರೆ ತಕ್ಷಣ ಬ್ರ್ಯಾಂಡ್ ಬದಲಾಯಿಸಬೇಕು. ಬಳಸುವ ಮುನ್ನ ಕಾಂಡೋಮ್ ಮೇಲಿರುವ ಸೀಲ್ ಹಾಗೂ ದಿನಾಂಕವನ್ನು ಮರೆಯದೇ ಪರಿಶೀಲಿಸಿಕೊಳ್ಳಬೇಕು.

47

ಎಕ್ಸ್‌ಪೈರ್ ಆಗಿರುವ ಕಾಂಡೋಮನ್ನು ಅಪ್ಪಿತಪ್ಪಿಯೂ ಬಳಸಬಾರದು. ಜೇಬಲ್ಲಿ, ಕಾರಲ್ಲಿ ಹಾಗೂ ಪರ್ಸಿನಲ್ಲಿ ಹೆಚ್ಚು ಕಾಲ ಇಟ್ಟುಕೊಳ್ಳಬೇಡಿ. ತಣ್ಣಗಿನ ಅಥವಾ ಒಣ ಪ್ರದೇಶದಲ್ಲಿ ಕಾಂಡೋಮ್ ಇಟ್ಟರೆ ಒಳತು. ಒಂದು ಕಾಂಡೋಮ್  ಒಂದೇ ಬಾರಿ ಬಳಸಿ. ಇದರ ಪ್ಯಾಕೆಟ್ ಅನ್ನು ಮೂಗಿನ ಹತ್ತಿರ ತೆರೆಯಬೇಡಿ.

57

ಕಾಂಡೋಮ್(Condom) ಅನ್ನು ತೊಳೆಯುವುದು ಮತ್ತು ಮರುಬಳಕೆ ಮಾಡಲೇ ಬಾರದು. ಆದ್ದರಿಂದ ಪ್ರತಿ ಬಾರಿಯೂ ಹೊಸ ಕಾಂಡೋಮ್ ಬಳಸಿ. ಗುಪ್ತಾಂಗದ ಗಾತ್ರ ವ್ಯಕ್ತಿಯಿಂದ ವ್ಯಕ್ತಿಗೆ ವಿಭಿನ್ನವಾಗಿರುತ್ತದೆ. ಅದಕ್ಕೆ ಗಾತ್ರ (Size)ಕ್ಕೆ ತಕ್ಕಂತೆ ಕಾಂಡೋಮ್‌ಗಳು ಲಭ್ಯ. ನಿಖರ ಗಾತ್ರದ ಕಾಂಡೋಮ್ ಬಳಸೋದು ಸೇಫ್. ಸಣ್ಣ ಗಾತ್ರದ್ದು ಬಳಸಿದರೆ ಸೆ*ಕ್ಸ್ ಮಾಡುವಾಗ ಹರಿಯಬಹುದು. ದೊಡ್ಡ ಗಾತ್ರದ ಕಾಂಡೋಮ್ ಬಳಿಸಿದರೆ ಜಾರಬಹುದು. ಹೆಚ್ಚುವರಿ ರಕ್ಷಣೆಗಾಗಿ ಕೆಲವರು ಎರಡು ಕಾಂಡೋಮ್‌ ಧರಿಸುತ್ತಾರೆ. ಇದೂ ವೇಸ್ಟ್. ಹಾಗೆ ಮಾಡಿದರೆ ಕಾಂಡೋಮ್ ಹರಿದು, ಜಾರಿ ಬೀಳಬಹುದು.

67

ಕಾಂಡೋಮ್‌ಗಳನ್ನು ಲ್ಯಾಟೆಕ್ಸ್ (Latex) ಅಂದರೆ ರಬ್ಬರ್ ಮರದ ದ್ರವದಿಂದ ತಯಾರಿಸಲಾಗುವುದು. ಇದರಿಂದ ಕೆಲವೊಮ್ಮೆ ಅಲರ್ಜಿ ಆಗಬಹುದು. ಆದರೆ ಹೀಗಾಗೋದು ಬಹಳ ಅಪರೂಪ. ಅಲರ್ಜಿ ಲಕ್ಷಣಗಳು ತುಂಬಾ ಭಿನ್ನವಾಗಿಯೂ ಇರಬಹುದು. 

77

ತೀವ್ರ ಅಲರ್ಜಿ ಕಾಡಿದರೆ ಸೀನು, ಶೀತ, ತುರಿಕೆ, ಬೊಕ್ಕೆಯೂ ಬರಬಹುದು. ಅಲ್ಲದೇ ಉಬ್ಬಸ, ಊತ, ನಿಶ್ಯಕ್ತಿ ಮತ್ತು ಲಘು ತಲೆನೋವು ಸಹ ಕಾಡಬಹುದು. ಕೆಲಮೊಮ್ಮೆ ಲ್ಯಾಟೆಕ್ಸ್ ಅಲರ್ಜಿ (Allery)ಯಿಂದ ಅನಾಫಿಲ್ಯಾಕ್ಸಿಸ್ ಎನ್ನುವ ಪ್ರಾಣಹಾನಿಯೂ ಆಗಬಹುದು. ಆಗ ಕಾಂಡೋಮ್ ಲೈಂಗಿಕ ಕ್ರಿಯೆ ವೇಳೆ ಹರಿಯಬಹುದು. ಇವು ಯೋನಿಯ ದ್ರವಕ್ಕೆ ಹೊಂದಿಕೊಳ್ಳುವುದಿಲ್ಲ.
 

Read more Photos on
click me!

Recommended Stories