ಮಕ್ಕಳು ಉತ್ತಮವಾಗಿ ಬೆಳವಣಿಗೆಯಾಗಬೇಕಾದರೆ ಸರಿಯಾಗಿ ಪೋಷಿಸುವುದು ಬಹಳ ಮುಖ್ಯ. ಮಕ್ಕಳ ಪೋಷಣೆಗೆ ಹಾಲು ಬಹಳ ಮುಖ್ಯ ಮೂಲವೆಂದು ಪರಿಗಣಿಸಲಾಗುತ್ತದೆ. ಅಂದಹಾಗೆ ಅನೇಕ ಪೋಷಕರಿಗೆ ಒಂದು ಪ್ರಶ್ನೆ ಇರುತ್ತದೆ, ಚಿಕ್ಕ ಮಕ್ಕಳಿಗೆ ಹಸುವಿನ ಹಾಲನ್ನು ಯಾವಾಗ ಪ್ರಾರಂಭಿಸಬೇಕು?. ಈ ಪ್ರಶ್ನೆಗೆ ಉತ್ತರವನ್ನು ನೀವು ತಿಳಿದುಕೊಳ್ಳಲು ಬಯಸಿದರೆ ಈ ಲೇಖನವು ನಿಮಗೆ ಸಹಾಯಕವಾಗಬಹುದು.
25
ತಜ್ಞರು ಏನು ಹೇಳುತ್ತಾರೆ?
ಈ ವಿಷಯದ ಕುರಿತು ಶಿಶುವೈದ್ಯೆ ನಿಮಿಷಾ ಅರೋರಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ, ವೈದ್ಯರು, ‘ಮೊದಲ 9 ರಿಂದ 10 ತಿಂಗಳುಗಳವರೆಗೆ ಮಗುವಿಗೆ ಹಾಲು ಬಹಳ ಮುಖ್ಯ. ಆದರೆ ಜನನದ ನಂತರ ಮೊದಲ 6 ತಿಂಗಳುಗಳವರೆಗೆ ತಾಯಿಯ ಹಾಲನ್ನು ಮಾತ್ರ ನೀಡಬೇಕು. ಯಾವುದೇ ಕಾರಣಕ್ಕೂ ತಾಯಿಗೆ ಹಾಲುಣಿಸಲು ಸಾಧ್ಯವಾಗದಿದ್ದರೆ, ಫಾರ್ಮುಲಾ ಹಾಲು ಸುರಕ್ಷಿತ ಆಯ್ಕೆಯಾಗಿದೆ. ’ಈ ಹಾಲನ್ನು ತಾಯಿಯ ಹಾಲಿನಂತೆಯೇ ವೈಜ್ಞಾನಿಕವಾಗಿ ತಯಾರಿಸಲಾಗುತ್ತದೆ, ಇದು ಮಗುವಿಗೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ.'ಎಂದು ತಿಳಿಸಿದ್ದಾರೆ.
35
6 ತಿಂಗಳ ನಂತರ
ಡಾ. ಅರೋರಾ ಅವರ ಪ್ರಕಾರ, ಮಗುವಿಗೆ 6 ತಿಂಗಳ ಮೊದಲು ಯಾವುದೇ ಸಂದರ್ಭದಲ್ಲಿ ಹಸು ಅಥವಾ ಎಮ್ಮೆ ಹಾಲು ಅಥವಾ ನೀರನ್ನು ನೀಡಬಾರದು. 6 ತಿಂಗಳ ನಂತರ, ಮಗು ಘನ ಆಹಾರವನ್ನು ತೆಗೆದುಕೊಳ್ಳಲು ಪ್ರಾರಂಭಿಸಿದಾಗ, ನೀವು ಅಡುಗೆಯಲ್ಲಿ ಸ್ವಲ್ಪ ಪ್ರಮಾಣದ ಹಸುವಿನ ಹಾಲನ್ನು ಬಳಸಬಹುದು. ಅಲ್ಲದೆ, ಮೊಸರು, ಚೀಸ್, ಮಜ್ಜಿಗೆಯಂತಹ ಡೈರಿ ಉತ್ಪನ್ನಗಳನ್ನು ಸಹ ಸೀಮಿತ ಪ್ರಮಾಣದಲ್ಲಿ ಪ್ರಾರಂಭಿಸಬಹುದು. ಆದರೆ ಈ ಸಮಯದಲ್ಲಿಯೂ ಸಹ, ಮಗುವಿಗೆ ತಾಯಿಯ ಹಾಲು ಅಥವಾ ಫಾರ್ಮುಲಾ ಹಾಲನ್ನು ಮಾತ್ರ ಕುಡಿಯಲು ನೀಡಬೇಕು.
45
ಹಸುವಿನ ಹಾಲನ್ನು ಯಾವಾಗ ಕೊಡಬೇಕು?
ಮಗುವಿಗೆ 1 ವರ್ಷ ತುಂಬಿದಾಗ ಮತ್ತು ಸಂಪೂರ್ಣವಾಗಿ ಆರೋಗ್ಯವಾಗಿದ್ದಾಗ, ನೀವು ಅವನಿಗೆ/ಅವಳಿಗೆ ಹಸುವಿನ ಹಾಲನ್ನು ಕುಡಿಯಲು ನೀಡಲು ಪ್ರಾರಂಭಿಸಬಹುದು. ಆದರೆ ಹಾಲು ಚೆನ್ನಾಗಿ ಕುದಿಸಿ ಶುದ್ಧವಾಗಿರಬೇಕು ಎಂಬುದನ್ನು ನೆನಪಿನಲ್ಲಿಡಬೇಕು. 1 ರಿಂದ 1.5 ವರ್ಷದೊಳಗಿನ ಮಕ್ಕಳಿಗೆ ದಿನಕ್ಕೆ 300-400 ಮಿಲಿಗಿಂತ ಹೆಚ್ಚು ಹಾಲು ನೀಡಬಾರದು ಎಂದು ಡಾ. ಅರೋರಾ ಸೂಚಿಸುತ್ತಾರೆ. ಹೆಚ್ಚಿನ ಪ್ರಮಾಣದಲ್ಲಿ ಹಸುವಿನ ಹಾಲು ನೀಡುವುದರಿಂದ ಮಕ್ಕಳಲ್ಲಿ ಕಬ್ಬಿಣದ ಕೊರತೆ, ಮಲಬದ್ಧತೆ ಮತ್ತು ಜೀರ್ಣಕಾರಿ ಸಮಸ್ಯೆಗಳು ಉಂಟಾಗಬಹುದು.
55
ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ
ಅಲ್ಲದೆ, ಒಂದು ವರ್ಷದ ನಂತರ, ಹಾಲನ್ನು ಹೊರತುಪಡಿಸಿ, ಮಗುವಿಗೆ ಗಂಜಿ, ಕಿಚಡಿ, ಹಣ್ಣುಗಳು, ಬೇಯಿಸಿದ ತರಕಾರಿಗಳು ಮುಂತಾದ ಇತರ ಘನ ಆಹಾರಗಳನ್ನು ಹೆಚ್ಚಿನ ಪ್ರಮಾಣದಲ್ಲಿ ನೀಡಬೇಕು. ಇದು ಅವರ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಅಗತ್ಯವಾದ ಪೋಷಕಾಂಶಗಳನ್ನು ನೀಡುತ್ತದೆ.