ಸೌತೇಕಾಯಿ ಬೆಳಿಗ್ಗೆ ತಿಂದರೆ ಹೀರಾ, ಮಧ್ಯಾಹ್ನ ಜೀರಾ, ರಾತ್ರಿ ತಿಂದರೆ ಕೀಡಾ- ಏನಿದು ವೈದ್ಯರ ಮಾತು?

Published : Apr 24, 2026, 07:54 PM IST

ಬೇಸಿಗೆಯಲ್ಲಿ ದೇಹಕ್ಕೆ ತಂಪು ನೀಡುವ ಸೌತೆಕಾಯಿಯು ಶೇ. 95ರಷ್ಟು ನೀರಿನಂಶ ಹೊಂದಿದೆ. ಆಯುರ್ವೇದದ ಪ್ರಕಾರ, ಇದನ್ನು ಬೆಳಿಗ್ಗೆ ತಿಂದರೆ ವಜ್ರದಂತೆ, ಮಧ್ಯಾಹ್ನ ತಿಂದರೆ ಜೀರಿಗೆಯಂತೆ ಪ್ರಯೋಜನಕಾರಿ, ಆದರೆ ರಾತ್ರಿ ಸೇವನೆ ಆರೋಗ್ಯಕ್ಕೆ ಹಾನಿಕರ.

PREV
17
ಬೇಸಿಗೆಯ ವರದಾನ ಸೌತೆಕಾಯಿ

ಬೇಸಿಗೆಯ ಧಗೆಯಲ್ಲಿ ಅತ್ಯುತ್ತುಮ ತರಕಾರಿಗಳಲ್ಲಿ ಒಂದಾಗಿರುವುದು ಸೌತೆಕಾಯಿ. ಒಂದು ಸೌತೆಕಾಯಿ (Cucumber) ತಿಂದರೆ ಆಹಾರ ಎಂದು ಮನಸ್ಸು ಉಲ್ಲಸಿತವಾಗುತ್ತದೆ. ಇದರಲ್ಲಿ ಶೇಕಡಾ 95ರಷ್ಟು ನೀರಿನ ಅಂಶ ಇರುವುದರಿಂದ ದೇಹಕ್ಕೆ ತಂಪು ಕೂಡ ಇರುತ್ತದೆ. ಸೌತೆಕಾಯಿಯನ್ನು ಹಾಗೆಯೇ ತಿನ್ನಬಹುದಾಗಿದ್ದರಿಂದ ಇದು ಬಹುತೇಕ ಮಂದಿಗೆ ಪ್ರಿಯವಾಗಿದೆ. ಸಲಾಡ್‌ಗಳಲ್ಲಿ ಬಳಸುವುದು ಅಥವಾ ಜ್ಯೂಸ್ ಮಾಡಿ ಕುಡಿಯುವುದು ಕೂಡ ಉತ್ತಮವೇ. ಪೋಷಕಾಂಶಗಳನ್ನು ಪಡೆಯಲು ಸಿಪ್ಪೆಯೊಂದಿಗೆ ತಿನ್ನುವುದು ಒಳ್ಳೆಯದು ಎನ್ನುತ್ತಾರೆ ವೈದ್ಯರು.

27
ಯಾವಾಗ ತಿನ್ನಬೇಕು?

ಇದರ ಇನ್ನಷ್ಟು ಆರೋಗ್ಯದ ಬಗ್ಗೆ ತಿಳಿಯುವ ಮುನ್ನ ಇದನ್ನು ಯಾವಾಗ ತಿನ್ನಬೇಕು ಎಂದು ತಿಳಿಯುವುದು ಬಹಳ ಮುಖ್ಯವಾಗಿದೆ. ಸಾಮಾನ್ಯವಾಗಿ ಒಳ್ಳೆಯದು ಎಂದ ತಕ್ಷಣ ಯಾವಾಗ ಬೇಕಾದರೂ ತಿನ್ನಬಹುದು ಎಂದುಕೊಳ್ಳುತ್ತೇವೆ. ಆದರೆ ಆಯುರ್ವೇದದ ಪ್ರಕಾರ ಅದು ತಪ್ಪು. ಈ ಬಗ್ಗೆ ಆಯುರ್ವೇದ ವೈದ್ಯರು ಒಂದು ಗಾದೆ ಮಾತಿನ ಮೂಲಕ ಈ ಬಗ್ಗೆ ತಿಳಿಸಿದ್ದಾರೆ.

37
ಯಾವಾಗ ತಿನ್ನಬೇಕು?

ಅದೇನೆಂದರೆ ಸೌತೆಕಾಯಿಯನ್ನು ಬೆಳಿಗ್ಗೆ ತಿಂದರೆ ಹೀರಾ, ಮಧ್ಯಾಹ್ನ ತಿಂದರೆ ಜೀರಾ ಆದರೆ ರಾತ್ರಿ ತಿಂದರೆ ಕೀಡಾ. ಇದರ ಅರ್ಥ ಇಷ್ಟೇ. ಹೀರಾ ಎಂದರೆ ವಜ್ರ. ಬೆಳಿಗ್ಗೆ 11 ಗಂಟೆಯ ಒಳಗೆ ಸೌತೆಕಾಯಿಯನ್ನು ತಿಂದರೆ ತುಂಬಾ ಉತ್ತಮ. ಇದು ಆ್ಯಸಿಡಿಟಿ ಕಡಿಮೆ ಮಾಡಲು ಮತ್ತು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸಲು ಸಹಕರಿಸುತ್ತದೆ. ಅದೇ ರೀತಿ ಮಧ್ಯಾಹ್ನದ ವೇಳೆ ತಿಂದರೆ ಜೀರಾ. ಅಂದರೆ ಜೀರಿಗೆ ಸಮಾಜ. ಜೀರಿಗೆ ಎಂದರೆ, ಜೀರಿಗೆಯು ಆ್ಯಸಿಡಿಟಿ ಮತ್ತುಉ ಪಚನ ಕ್ರಿಯೆಗೆ ತುಂಬಾ ಉತ್ತಮ ಪದಾರ್ಥವಾಗಿದೆ. ಅದರಂತೆಯೇ ಮಧ್ಯಾಹ್ನ ಸೌತೆ ತಿಂದರೂ ಒಳ್ಳೆಯದೇ. ಆದರೆ ರಾತ್ರಿ ವೇಳೆ ತಿಂದರೆ ಕೀಡಾ. ಕೀಡಾ ಎಂದರೆ ಹುಳು. ಇದರ ಅರ್ಥ ರಾತ್ರಿಯ ವೇಳೆ ಸೌತೆಕಾಯಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುವುದು.

47
ಹೀರಾ, ಜೀರಾ, ಕೀಡಾ

57
ಏನಿದರ ಪ್ರಯೋಜನ?

ಇನ್ನು ಬೆಳಿಗ್ಗೆ ಮತ್ತು ಮಧ್ಯಾಹ್ನ ತಿಂದರೆ ಏನೆಲ್ಲಾ ಅನುಕೂಲ ಎನ್ನುವುದು ನೋಡೋಣ. ಸೌತೆಕಾಯಿ ಪೋಷಕಾಂಶಗಳ ಆಗರವೂ ಹೌದು. ಬೇಸಿಗೆಯಲ್ಲಿ ದೇಹವನ್ನು ಹೈಡ್ರೇಟ್ (Hydrated) ಆಗಿಡಲು ಸಹಾಯ ಮಾಡುವ ಅದ್ಭುತ ನೈಸರ್ಗಿಕ ಆಹಾರವಾಗಿದೆ. ಹೆಚ್ಚಿನ ನೀರಿನಂಶವಿರುವುದರಿಂದ, ವಿಶೇಷವಾಗಿ ಬೇಸಿಗೆಯಲ್ಲಿ ದೇಹವನ್ನು ತಂಪಾಗಿರಿಸುತ್ತದೆ ಮತ್ತು ನಿರ್ಜಲೀಕರಣವನ್ನು ತಡೆಯುತ್ತದೆ.

67
ಅತಿ ತಿನ್ನುವುದನ್ನು ಕಡಿಮೆ ಮಾಡುತ್ತದೆ

ಕಡಿಮೆ ಕ್ಯಾಲೋರಿ ಮತ್ತು ಹೆಚ್ಚಿನ ನಾರಿನಂಶ (Fiber) ಹೊಂದಿರುವುದರಿಂದ, ಇದು ಹೊಟ್ಟೆ ಬೇಗನೆ ತುಂಬಿದ ಅನುಭವ ನೀಡಿ ಅತಿಯಾಗಿ ತಿನ್ನುವುದನ್ನು ತಡೆಯುತ್ತದೆ. ಇದರಲ್ಲಿರುವ ನಾರಿನಂಶ ಮತ್ತು ನೀರು ಮಲಬದ್ಧತೆಯನ್ನು ತಡೆದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಸೌತೆಕಾಯಿಯಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ಚರ್ಮವನ್ನು ಕಾಂತಿಯುತವಾಗಿಸುತ್ತವೆ. ಕಣ್ಣುಗಳ ಮೇಲಿಡುವುದರಿಂದ ಕಣ್ಣಿನ ಸುತ್ತಲಿನ ಊತ ಮತ್ತು ಕಪ್ಪು ಕಲೆಗಳನ್ನು (Dark Circles) ಕಡಿಮೆ ಮಾಡಬಹುದು.

77
ರಕ್ತದೊತ್ತಡ ಮತ್ತು ಸಕ್ಕರೆ ನಿಯಂತ್ರಣ

ಪೊಟ್ಯಾಸಿಯಮ್ ಅಂಶವು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ಮಧುಮೇಹಿಗಳಲ್ಲಿ ರಕ್ತದ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ಸೌತೆಕಾಯಿಯಲ್ಲಿರುವ 'ಕುಕುರ್ಬಿಟಾಸಿನ್‌ಗಳು' (cucurbitacins) ಕ್ಯಾನ್ಸರ್ ಕೋಶಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತವೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories