ಇಂದಿನ ಯುಗದಲ್ಲಿ, ಹೃದಯಾಘಾತ (heart attack) ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಈ ಅಪಾಯಕಾರಿ ಸ್ಥಿತಿಯಿಂದಾಗಿ ಹೆಚ್ಚಿನ ಸಂಖ್ಯೆಯ ಯುವಕರು ಸಹ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಹೃದಯಾಘಾತಕ್ಕೆ ಅನೇಕ ಕಾರಣಗಳಿರಬಹುದು, ಇದರಲ್ಲಿ ಮಲಬದ್ಧತೆಯೂ ಒಂದು. ಹೌದು ನೀವು ಕೇಳಿದ್ದು ಸರಿಯಾಗಿಯೇ ಇದೆ, ಮಲಬದ್ಧತೆಯಿಂದ ಸಹ ಹೃದಯಾಘಾತ ಹೆಚ್ಚುತ್ತಿದೆ.
ಮಲಬದ್ಧತೆ ಒಂದು ಸಾಮಾನ್ಯ ಸಮಸ್ಯೆ. ಇದು ವೇಗವಾಗಿ ಹೆಚ್ಚುತ್ತಿದೆ. ಪ್ರತಿದಿನ ಮಲವಿಸರ್ಜನೆಯಾದರೆ ನಮ್ಮ ದೇಹ ಆರೋಗ್ಯದಿಂದ ಇರುತ್ತೆ. ಆದರೆ ಇದು ಹಲವಾರು ದಿನಗಳಿಗೊಮ್ಮೆಯಾದಾಗ ಅಥವಾ ಮಲವಿಸರ್ಜನೆಯ ಸಮಯದಲ್ಲಿ ಅತಿಯಾದ ಬಲ ಪ್ರಯೋಗ ಮಾಡಬೇಕಾಗಿ ಬಂದಾಗ ಅದು ಮಲಬದ್ಧತೆಯನ್ನು (constipation) ಸೂಚಿಸುತ್ತದೆ. ದೀರ್ಘಕಾಲದ ಮಲಬದ್ಧತೆ ಜನರನ್ನು ಮಾನಸಿಕವಾಗಿ ತೊಂದರೆಗೊಳಿಸುತ್ತದೆ ಮತ್ತು ಪೈಲ್ಸ್, ಬಿರುಕುಗಳು, ಹೃದಯಾಘಾತ, ಪಾರ್ಶ್ವವಾಯು, ದೊಡ್ಡ ಕರುಳಿನ ಗೆಡ್ಡೆ, ಮಧುಮೇಹ ಮತ್ತು ಥೈರಾಯ್ಡ್ ಅಪಾಯ ಹೆಚ್ಚಿಸುತ್ತದೆ. ಮಲಬದ್ಧತೆಯು ಹೃದಯಾಘಾತ ಮತ್ತು ಪಾರ್ಶ್ವವಾಯುವಿಗೆ ಹೇಗೆ ಕಾರಣವಾಗಬಹುದು ಎಂದು ಇಂದು ವೈದ್ಯರಿಗೆ ತಿಳಿಯುತ್ತದೆ.
ತಜ್ಞರ ಪ್ರಕಾರ ಮಲವಿಸರ್ಜನೆ ಮಾಡುವಾಗ ಮಲಬದ್ಧತೆಯಿಂದಾಗಿ ಒತ್ತಡವು ಎದೆ ನೋವಿಗೆ ಕಾರಣವಾಗಬಹುದು ಮತ್ತು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ. ಮಲಬದ್ಧತೆಯು ಕಠಿಣ ಕರುಳಿನ ಚಲನೆಗೆ ಕಾರಣವಾಗುತ್ತದೆ ಮತ್ತು ಇದು ರಕ್ತದ ಹರಿವನ್ನು ಕಡಿಮೆ ಮಾಡುತ್ತದೆ. ಅಂತಹ ಸ್ಥಿತಿಯಲ್ಲಿ, ರಕ್ತ ಹೆಪ್ಪುಗಟ್ಟುವಿಕೆಯ (blood clot) ಅಪಾಯ ಹೆಚ್ಚಾಗುತ್ತದೆ. ಕೆಲವು ಸಂದರ್ಭಗಳಲ್ಲಿ, ಇದು ಹೃದಯಾಘಾತ ಅಥವಾ ಪಾರ್ಶ್ವವಾಯುವಿಗೆ ಕಾರಣವಾಗಬಹುದು.
ಸಂಶೋಧನೆಯ ಪ್ರಕಾರ, ಮಲಬದ್ಧತೆಯಿಂದಾಗಿ ಕರುಳಿನ ಸೂಕ್ಷ್ಮಜೀವಿಯಲ್ಲಿನ ಬದಲಾವಣೆಗಳು ಅಥೆರೋಸ್ಕ್ಲೆರೋಸಿಸ್, ಅಧಿಕ ರಕ್ತದೊತ್ತಡ (high blood pressure) ಮತ್ತು ಇತರ ಹೃದಯ ಸಂಬಂಧಿತ ತೊಡಕುಗಳಂತಹ ಹೃದಯರಕ್ತನಾಳದ ಸಮಸ್ಯೆಗಳಿಗೆ ಕಾರಣವಾಗಬಹುದು. ವಯಸ್ಸು ಹೆಚ್ಚಾದಂತೆ, ಮಲಬದ್ಧತೆ ಸಮಸ್ಯೆ ಹೆಚ್ಚಾಗಲು ಪ್ರಾರಂಭಿಸುತ್ತದೆ. ಆದರೂ , ಮಲಬದ್ಧತೆ ಹೊಂದಿರುವ ಪ್ರತಿಯೊಬ್ಬ ರೋಗಿಗೆ ಹೃದಯಾಘಾತವಾಗುವುದಿಲ್ಲ ಎಂಬುದನ್ನು ಗಮನಿಸುವುದು ಮುಖ್ಯ. ಇದು ಕೆಲವು ಸಂದರ್ಭಗಳಲ್ಲಿ ಸಂಭವಿಸುತ್ತದೆ.
ವೈದ್ಯರ ಪ್ರಕಾರ, ಮಲಬದ್ಧತೆಯು ಆಸಿಡ್ ರಿಫ್ಲಕ್ಸ್ (acid reflex) ಅನ್ನು ಉತ್ತೇಜಿಸುವ ಮೂಲಕ ಎದೆಯಲ್ಲಿ ಸಮಸ್ಯೆಯನ್ನು ಉಂಟುಮಾಡುತ್ತದೆ. ಇದು ಎದೆಯಲ್ಲಿ ಗ್ಯಾಸ್ ಮತ್ತು ಕಿರಿಕಿರಿಯನ್ನು ಉಂಟುಮಾಡುತ್ತದೆ. ಇದರಿಂದ ಭಯಭೀತರಾಗಬಾರದು. ಎದೆ ನೋವಿಗೆ ನಿಖರವಾದ ಕಾರಣವನ್ನು ಕಂಡುಹಿಡಿಯಲು ವೈದ್ಯರನ್ನು ಸಂಪರ್ಕಿಸಬೇಕು. ಮಲಬದ್ಧತೆಯನ್ನು ನಿಯಂತ್ರಿಸಲು ಸರಿಯಾದ ಸಮಯಕ್ಕೆ ಚಿಕಿತ್ಸೆ ಪಡೆಯೋದು ಅಗತ್ಯ.
ಒತ್ತಡ ಮತ್ತು ದೈಹಿಕ ಚಟುವಟಿಕೆಯ (physical activity) ಕೊರತೆಯೂ ಮಲಬದ್ಧತೆಗೆ ಕಾರಣವಾಗಬಹುದು. ನೀವು ವಾರಕ್ಕೆ ಮೂರು ಬಾರಿಗಿಂತ ಕಡಿಮೆ ಮಲವಿಸರ್ಜನೆ ಮಾಡುತ್ತಿದ್ದರೆ ಅಥವಾ ಮಲವು ಒಣಗಿ, ಗಟ್ಟಿಯಾಗಿ ಅಥವಾ ಉಂಡೆಯಾಗಿದ್ದರೆ, ಅದು ಮಲಬದ್ಧತೆಯ ಸಂಕೇತ. ಮಲವಿಸರ್ಜನೆ ಮಾಡುವಾಗ ನಿಮಗೆ ಉದ್ವೇಗ ಅಥವಾ ನೋವು ಕಂಡು ಬಂದರೆ ಕೂಡಲೇ, ವೈದ್ಯರನ್ನು ಸಂಪರ್ಕಿಸಿ.
ತಜ್ಞರ ಪ್ರಕಾರ, ಮಲಬದ್ಧತೆಯನ್ನು ತಪ್ಪಿಸಲು, ಜನರು ಪ್ರತಿದಿನ ವ್ಯಾಯಾಮ ಮಾಡಬೇಕು, ನಿಯಮಿತವಾಗಿ ನಡೆಯಬೇಕು ಮತ್ತು ಸಾಕಷ್ಟು ಹಣ್ಣುಗಳು, ತರಕಾರಿಗಳು ಮತ್ತು ಸಲಾಡ್ಸ್ ತಿನ್ನಬೇಕು. ಇದಲ್ಲದೆ, ದಿನಕ್ಕೆ 8-10 ಲೋಟ ನೀರು ಕುಡಿಯಬೇಕು. ಮಧುಮೇಹ ಅಥವಾ ಥೈರಾಯ್ಡ್ ಸಮಸ್ಯೆ ಇರುವವರು ಮಲಬದ್ಧತೆ ಇದ್ದರೆ ತಕ್ಷಣ ವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆಯಬೇಕು. ಮಲಬದ್ಧತೆಯೊಂದಿಗೆ ಗುದದ್ವಾರದಿಂದ ರಕ್ತಸ್ರಾವವಾಗಿದ್ದರೆ (bleeding) ಅಥವಾ ದೇಹದಲ್ಲಿ ರಕ್ತದ ಕೊರತೆ ಅಥವಾ ಅತಿಯಾದ ತೂಕ ನಷ್ಟವಿದ್ದರೆ, ಸಾಧ್ಯವಾದಷ್ಟು ಬೇಗ ಚಿಕಿತ್ಸೆ ಪಡೆಯಿರಿ.