ಕನಸಿನಲ್ಲಿ ದೆವ್ವ ನಿಮ್ಮನ್ನು ವಶಮಾಡಿಕೊಂಡಂತೆ ಕಂಡರೇನರ್ಥ?

Published : Dec 06, 2023, 03:54 PM IST

ಅನೇಕ ಜನರು ತಮ್ಮ ಕನಸಿನಲ್ಲಿ ದೆವ್ವಗಳು ಮತ್ತು ಆತ್ಮಗಳನ್ನು ಸಹ ನೋಡುತ್ತಾರೆ. ಅಂತಹ ಕನಸುಗಳು ವಿಭಿನ್ನ ಅರ್ಥಗಳನ್ನು ಹೊಂದಿರಬಹುದು ಎಂದು ನಿದ್ರೆ ತಜ್ಞರು ಬಹಿರಂಗಪಡಿಸಿದ್ದಾರೆ. ಹಾಗಿದ್ರೆ ಒಂದು ವೇಳೆ ನೀವು ಕನಸಿನಲ್ಲಿ ಭೂತ, ಪ್ರೇತ ಕಂಡ್ರೆ ಅದಕ್ಕೇನು ಕಾರಣ, ಅದರ ಅರ್ಥ ಏನು ತಿಳಿಯಿರಿ.   

PREV
110
ಕನಸಿನಲ್ಲಿ ದೆವ್ವ ನಿಮ್ಮನ್ನು ವಶಮಾಡಿಕೊಂಡಂತೆ ಕಂಡರೇನರ್ಥ?

ಪ್ರತಿಯೊಬ್ಬರಿಗೂ ಕನಸು ಬೀಳೋದು ಸಾಮಾನ್ಯ
ಕೆಲವೊಮ್ಮೆ ಕೆಟ್ಟ ಕನಸು (bad dreams) ಬಿದ್ದು ನೀವು ಎಚ್ಚರಗೊಳ್ಳುತ್ತೀರಿ, ಆದರೆ ಎದ್ದ ನಂತರ ನಿಮಗೆ ಆ ಕನಸು ನೆನಪಿರೋದಿಲ್ಲ. ಒಂದು ವೇಳೆ ಆ ಕನಸು ನೆನಪಿನಲ್ಲಿದ್ದರೂ ಅದು ಕನಸು ತಾನೆ ಎಂದು ನೀವು ಇಗ್ನೋರ್ ಮಾಡಬಹುದು. 

210

ಕೆಲವು ಕನಸುಗಳನ್ನು ಮರೆಯೋದಕ್ಕೆ ಸಾಧ್ಯವಿಲ್ಲ
ಹೌದು ಕೆಲವು ಕನಸು ಗಳು ಎಷ್ಟೊಂದು ಭೀಕರವಾಗಿರುತ್ತೆ ಎಂದರೆ, ಅಂತಹ ಕನಸುಗಳನ್ನು ಮರೆಯೋದಕ್ಕೂ ಸಾಧ್ಯ ಇರೋದಿಲ್ಲ. ಆ ಕನಸುಗಳು ನಿಮ್ಮ ಭಾವನೆಗಳ ಜೊತೆ ಬೆರೆತು ಮತ್ತಷ್ಟು ಭಯ ಹುಟ್ಟಿಸುತ್ತೆ. 

310

ಡ್ರೀಮ್ ಡೀಕೋಡರ್ (dream decoder) ಮತ್ತು ತಜ್ಞರಾಗಿರುವ ಥೆರೆಸಾ ಚೆವುಂಗಾ ಹೇಳುವಂತೆ ನಾವು ಯಾವ ಕೆಟ್ಟ ಕನಸುಗಳನ್ನು ಅನುಭವಿಸುತ್ತೇವೆ, ಅಥವಾ ಯಾವ ಕೆಟ್ಟ ಕನಸುಗಳನ್ನು ಕಂಡು ಭಯಭೀತರಾಗುತ್ತೇವೆ ಅದು ನಮ್ಮ ಆಂಗ್ಸೈಟಿಗೆ ಸಂಬಂಧಿಸಿದ ವಿಷಯ.

410

ಪ್ರಿಫ್ರಾಂಟಲ್ ಕಾರ್ಟೆಕ್ಸ್ ನಿದ್ರೆಯ ಸ್ಥಿತಿಯಲ್ಲಿ ಮುಚ್ಚುತ್ತದೆ. ಹಾಗಾಗಿ ಈ ಸಮಯದಲ್ಲಿ ನಿಮ್ಮ ಕಲ್ಪನೆ ಮತ್ತು ಭಾವನೆಗಳು ಎಲ್ಲೆ ಇಲ್ಲದೇ ಹಾರಲು ಪ್ರಾರಂಭಿಸುತ್ತದೆ. ಇದರಿಂದಾಗಿಯೇ ಕೆಟ್ಟ ಕನಸುಗಳು ಬೀಳುತ್ತವೆ. 
 

510

ಅನೇಕ ಜನರಿಗೆ ಹಲವಾರು ರೀತಿಯ ಕೆಟ್ಟ ಕನಸುಗಳು ಬೀಳುತ್ತವೆ. ಗುಂಡು ಹಾರಿಸುವುದು, ಹಲ್ಲುಗಳನ್ನು ಕಳೆದುಕೊಳ್ಳುವುದು, ಸಾಯುವುದು ಮತ್ತು ಸಂಗಾತಿಗೆ ಮೋಸ (cheating partner) ಮಾಡುವುದು ಇವೆಲ್ಲ ಜನರಿಗೆ ಸಾಮಾನ್ಯವಾಗಿ ಬೀಳುವಂತಹ ಕನಸುಗಳು. 
 

610

ಇದಲ್ಲದೆ, ಅನೇಕ ಜನರು ತಮ್ಮ ಕನಸಿನಲ್ಲಿ ದೆವ್ವಗಳು ಮತ್ತು ಆತ್ಮಗಳನ್ನು ಸಹ ನೋಡುತ್ತಾರೆ. ಅಂತಹ ಕನಸುಗಳು ವಿಭಿನ್ನ ಅರ್ಥಗಳನ್ನು ಹೊಂದಿರಬಹುದು ಎಂದು ನಿದ್ರೆ ತಜ್ಞರು ಬಹಿರಂಗಪಡಿಸಿದ್ದಾರೆ. ಹಾಗಿದ್ರೆ ಅದರ ಅರ್ಥ ಏನಿರಬಹುದು? 

710

ದೆವ್ವವು (ghost) ನಿಮ್ಮ ಮೇಲೆ ದಾಳಿ ಮಾಡುತ್ತಿದೆ ಎಂದು ನೀವು ಕನಸು ಕಂಡರೆ, ನೀವು ಸ್ನೇಹಿತರೊಂದಿಗೆ ಮಾತನಾಡಬೇಕಾಗಬಹುದು ಅಥವಾ ನಿಮ್ಮ ನಿದ್ರೆಯ ಅಭ್ಯಾಸವನ್ನು ಬದಲಾಯಿಸಬೇಕಾಗಬಹುದು. ಇದನ್ನು ನೀವು ತಿಳಿದುಕೊಳ್ಳಬೇಕು. 
 

810

ನಿಮ್ಮ ಕನಸಿನಲ್ಲಿ ದೆವ್ವವು ನಿಮ್ಮ ಮೇಲೆ ದಾಳಿ ಮಾಡಿದಂತೆ ನಿಮಗೆ ಕಂಡರೆ ನಿಮ್ಮ ಜೀವನದ ಸಂದರ್ಭಗಳು ಅಥವಾ ಜನರ ಬಗ್ಗೆ ನೀವು ತುಂಬಾ ಹೆದರುತ್ತಿದ್ದೀರಿ ಎಂದರ್ಥ. ಇದು ಭಯದ ಸಂಕೇತವೂ ಹೌದು. 

910

ವಿಶೇಷಜ್ಞರು ಹೇಳುವಂತೆ ನಿಮ್ಮ ಮೇಲೆ ಭೂತದ ದಾಳಿ ಆಗುವಂತೆ ಕನಸು ಬಿದ್ದರೆ, ಅದು ನಿಮ್ಮ ದುರ್ಬಲ ಭಾವನಾತ್ಮಕ ಸ್ಥಿತಿಗೆ (emotional situation) ಸಂಬಂಧಿಸಿದೆ. ಜೀವನವನ್ನು ಕಂಟ್ರೋಲ್‌ನಲ್ಲಿ ಇಡುವ ಮೂಲಕ ನೀವು ಸಹ ಇಂತಹ ಕನಸುಗಳು ಬೀಳದಂತೆ ನೋಡಿಕೊಳ್ಳಬಹುದು. 

1010

ಒಂದು ವೇಳೆ ನಿಮಗೆ ಕನಸಿನಲ್ಲಿ ಭೂತ ಕಂಡರೆ, ಅದು ನಿಮ್ಮ ಜೀವನದಲ್ಲಿ ಯಾವುದೋ ಒಂದು ವಿಷಯದ ಬಗ್ಗೆ ನಿಮಗೆ ಭಯ ಇದೆ, ಅಥವಾ ನೀವು ತಪ್ಪಿತಸ್ಥರು ಎನ್ನುವ ಭಾವನೆಯನ್ನು ಸೂಚಿಸುತ್ತೆ. ಭೂತ ನಿಮ್ಮನ್ನು ವಶಕ್ಕೆ ಪಡೆದಂತೆ ಕನಸು ಕಂಡರೆ, ಅದರ ಅರ್ಥ, ನಿಮಗೆ ಸ್ಲೀಪ್ ಪ್ಯಾರಲೈಸ್ (sleep paralyse) ಆಗಿದೆ ಎಂದು. ಇದನ್ನು ನೀವು ಅರ್ಥ ಮಾಡಿಕೊಳ್ಳೋದು ಮುಖ್ಯ. 
 

Read more Photos on
click me!

Recommended Stories