ಪಿರಿಯಡ್ಸ್ ತಪ್ಪಿಸಿಕೊಂಡರೆ ಲೈಂಗಿಕಾಸಕ್ತಿ ಕುಂದುತ್ತಾ? ಏನು ಮಾಡಿದ್ರೆ ಸೇಫ್?

First Published | Dec 5, 2023, 11:06 AM IST

ಯಾವುದಾದರೂ ಸಮಾರಂಭ ಇದ್ರೆ, ಪಿರಿಯಡ್ಸ್ ಆಗಬಾರದು ಎಂದು ಅಂದುಕೊಳ್ತೀರಿ ಅಲ್ವಾ? ನೀವು ಮುಟ್ಟಿನ ಸೆಳೆತದಿಂದ ವಿರಾಮ ಬಯಸುವಿರಾ? ಪಿರಿಯಡ್ಸ್ ಮಿಸ್ ಆಗೋ ಹಾಗೆ ಮಾಡಲು ಜನರು ಏನೇನೋ ಮಾಡ್ತಾರೆ. ಅದರಲ್ಲೂ ಕೆಲವರು ಜನನ ನಿಯಂತ್ರಣ ಮಾತ್ರೆ ತೆಗೆದುಕೊಳ್ಳುತ್ತಾರೆ. ಇದು ಸುರಕ್ಷಿತವೇ?
 

ಋತುಚಕ್ರವು (periods) ಪ್ರತಿ ತಿಂಗಳು ಮಹಿಳೆಯರಿಗೆ ಬರುವಂತಹ ಒಂದು ಸಾಮಾನ್ಯ ವಿಷಯ. ನೀವು ಅವನ್ನು ಡಿಲೇ ಮಾಡಲು ಅಥವಾ ಪ್ರಿರಿಯಡ್ಸ್ ಆಗದೇ ಇದ್ರೆ ಸಾಕಪ್ಪ ಎಂದು ಬಯಸುವ ಸಂದರ್ಭಗಳೂ ಇರಬಹುದು. ಕೆಲವೊಮ್ಮೆ ಸಮಾರಂಭಗಳಲ್ಲಿ ಭಾಗಿಯಾಗಲು ಪಿರಿಯಡ್ಸ್ ಮುಂದೆ ಹೋದ್ರೆ ಸಾಕು ಅಂತ ಅದನ್ನು ಮುಂದೂಡಲು ಏನೇನೋ ಮಾಡ್ತಾರೆ. ಅನಗತ್ಯ ಗರ್ಭಧಾರಣೆಯನ್ನು(unwanted pregnancy) ತಡೆಗಟ್ಟಲು ಸೇವಿಸುವ ಜನನ ನಿಯಂತ್ರಣ ಮಾತ್ರೆಗಳೂ ನಿಮ್ಮ ಋತುಚಕ್ರವನ್ನು ವಿಳಂಬಗೊಳಿಸಬಹುದು. ಆದರೆ ಜನನ ನಿಯಂತ್ರಣ ಮಾತ್ರೆಗಳನ್ನು ಬಳಸಿ ಋತುಚಕ್ರವನ್ನು ವಿಳಂಬಗೊಳಿಸೋದು (postpone periods) ಉತ್ತಮವೇ?

ಪಿರಿಯಡ್ಸ್ ಆಗದಂತೆ ತಡೇಯೋದು ಅಥವಾ ವಿಳಂಬ ಮಾಡುವುದು ಸಾಮಾನ್ಯವಾಗಿ ಅನೇಕ ಮಹಿಳೆಯರಿಗೆ ಸುರಕ್ಷಿತವೆಂದು ಪರಿಗಣಿಸಲಾಗಿದೆ ಎಂದು ಪ್ರಸೂತಿ ಮತ್ತು ಸ್ತ್ರೀರೋಗತಜ್ಞರು ಹೇಳುತ್ತಾರೆ. ಹಾರ್ಮೋನಲ್ ಜನನ ನಿಯಂತ್ರಣ (hormonal birth control method) ವಿಧಾನಗಳನ್ನು ಬಳಸಿಕೊಂಡು ಇದನ್ನು ಮಾಡಬಹುದು, ಇದು ನಿಮ್ಮ ಋತುಚಕ್ರವನ್ನು ನಿರ್ವಹಿಸುವಲ್ಲಿ ಸಹಾಯ ಮಾಡುತ್ತೆ. ಆದರೂ, ಈ ಅಭ್ಯಾಸದ ಸುರಕ್ಷತೆಯನ್ನು ನಿರ್ಧರಿಸುವಲ್ಲಿ ವೈಯಕ್ತಿಕ ಆರೋಗ್ಯ ಅಂಶಗಳು ಮತ್ತು ಬಳಸಿದ ಜನನ ನಿಯಂತ್ರಣದ ಪ್ರಕಾರವು ನಿರ್ಣಾಯಕ ಪಾತ್ರ ವಹಿಸುತ್ತದೆ.

Tap to resize

ನೀವು ಮಾತ್ರೆ ತೆಗೆದುಕೊಳ್ಳುವಾಗ, ನಿಮಗೆ ಪಿರಿಯಡ್ಸ್ ಇರುವುದಿಲ್ಲ ಏಕೆಂದರೆ ಗರ್ಭಾಶಯದ ಒಳಪದರವು ನಿರ್ಮಾಣವಾಗುವುದಿಲ್ಲ. ಆದರೆ ನೀವು ಪ್ಲಸೀಬೊ ಮಾತ್ರೆಗಳು ಅಥವಾ ಹಾರ್ಮೋನ್-ಮುಕ್ತ ಮಾತ್ರೆಗಳನ್ನು ತೆಗೆದುಕೊಳ್ಳುವ ವಾರದಲ್ಲಿ ವಿತ್ ಡ್ರಾವಲ್ ಬ್ಲೀಡಿಂಗ್ (withdrowal bleeding)ಎಂದೂ ಕರೆಯಲ್ಪಡುವ ಬ್ಲೀಡಿಂಗ್ ಉಂಟಾಗುತ್ತದೆ. ವಿತ್ ಡ್ರಾವಲ್ ಬ್ಲೀಡಿಂಗ್ ಯಾಕೆ ಉಂಟಾಗುತ್ತೆ  ಅಂದ್ರೆ ಜನನ ನಿಯಂತ್ರಣ ಮಾತ್ರಗಳು ಹಾರ್ಮೋನ್ಸ್ ಜೊತೆ ಪ್ರತಿಕ್ರಿಯಿಸಿದಾಗ ಉಂಟಾಗುತ್ತೆ. ನೀವು ಹಾರ್ಮೋನ್ ಹೊಂದಿರುವ ಮಾತ್ರೆಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದಾಗ, ರಕ್ತಸ್ರಾವ ನಿಲ್ಲುತ್ತದೆ.
 

ಜನನ ನಿಯಂತ್ರಣ ಮಾತ್ರೆಗಳನ್ನು ಬಳಸಿ ಋತುಚಕ್ರ ತಪ್ಪಿಸುವುದು ಹೇಗೆ?
ಜನನ ನಿಯಂತ್ರಣ ಮಾತ್ರೆಗಳಂತಹ ಹಾರ್ಮೋನುಗಳ ಜನನ ನಿಯಂತ್ರಣ ಬಳಸುವುದರಿಂದ ಮಹಿಳೆಯರು ತಮ್ಮ ಋತುಚಕ್ರವನ್ನು ನಿರ್ವಹಿಸಬಹುದು. ಹಾರ್ಮೋನ್-ಫ್ರೀ ಇಂಟರ್ವಲ್ ಇಲ್ಲದೇ  ಆಕ್ಟೀವ್ ಮಾತ್ರೆಗಳನ್ನು (pills with hormones) ನಿರಂತರವಾಗಿ ತೆಗೆದುಕೊಳ್ಳುವ ಮೂಲಕ, ಮುಟ್ಟು ವಿಳಂಬವಾಗಬಹುದು ಅಥವಾ ಪಿರಿಯಡ್ಸ್ ಆಗದಂತೆ ತಡೆಯಬಹುದು ಎಂದು ತಜ್ಞರು ಹೇಳುತ್ತಾರೆ. 

ಋತುಚಕ್ರವನ್ನು ತಪ್ಪಿಸಲು ಜನನ ನಿಯಂತ್ರಣವನ್ನು ಬಳಸುವಾಗ, ಸ್ತ್ರೀರೋಗತಜ್ಞರಿಂದ ಸೂಚಿಸಿದ ಸೂಚನೆಗಳನ್ನು ಅನುಸರಿಸುವುದು ಅತ್ಯಗತ್ಯ. ಪರಿಣಾಮಕಾರಿತ್ವವನ್ನು ಖಚಿತಪಡಿಸಿಕೊಳ್ಳಲು ಮಾತ್ರೆ ಸೇವನೆಯಲ್ಲಿ ಸ್ಥಿರತೆ ನಿರ್ಣಾಯಕವಾಗಿದೆ, ಮತ್ತು ವೈದ್ಯರು ಸೂಚಿಸಿದ ಮಾರ್ಗ, ನಿಯಮಗಳನ್ನು ಅನುಸರಿಸುವ ಮೂಲಕ ಮಾತ್ರೆ ಸೇವಿಸಬೇಕು. ಇಲ್ಲವಾದರೆ ಸಮಸ್ಯೆ ಕಾಡಬಹುದು. 
 

ಮುನ್ನೆಚ್ಚರಿಕೆಗಳು ಯಾವುವು?
ನೀವು ಜನನ ನಿಯಂತ್ರಣ ಮಾತ್ರೆಗಳನ್ನು (contraceptive pills) ತೆಗೆದುಕೊಳ್ಳಲು ಪ್ರಾರಂಭಿಸುವ ಮೊದಲು, ನಿಮ್ಮ ಮುಂದಿನ ಋತುಚಕ್ರ ಪ್ರಾರಂಭವಾಗುವವರೆಗೆ ನೀವು ಕಾಯಬೇಕು. ನಿಮ್ಮ ವೈದ್ಯರಿಂದ ಸಹಾಯ ಪಡೆಯಿರಿ, ನಿಮ್ಮ ಋತುಚಕ್ರವನ್ನು ವಿಳಂಬಗೊಳಿಸಲು ನೀವು ಮಾತ್ರೆಗಳನ್ನು ಬಳಸಲು ಪ್ರಾರಂಭಿಸುವ ಮೊದಲು ನಿಮ್ಮ ದೇಹವು ಮಾತ್ರೆಗಳಿಗೆ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ವೈದ್ಯರ ಮೂಲಕ ತಿಳಿಯಿರಿ. ನೀವು ಒಮ್ಮೆ ನಿಮ್ಮ ಋತುಚಕ್ರವನ್ನು ತಪ್ಪಿಸಲು ಬಯಸಿದರೆ, ನಿಮಗೆ ಎರಡು ಪ್ಯಾಕ್ ಮಾತ್ರೆಗಳು ಬೇಕಾಗುತ್ತವೆ. ಒಂದು ಪ್ಯಾಕ್ ನಿಮ್ಮ ಪ್ರಸ್ತುತ ತಿಂಗಳಿಗೆ ಮತ್ತು ಇನ್ನೊಂದು ಮುಂದಿನ ತಿಂಗಳಿಗೆ ಉಪಯೋಗಿಸಿ. ಪಿರಿಯಡ್ಸ್ ಆಗಬಾರದು ಎಂದು ಬಯಸಿದರೆ ನಿಮಗೆ ಹೆಚ್ಚಿನ ಪ್ಯಾಕ್ ಗಳು ಬೇಕಾಗುತ್ತವೆ. ಯಾವುದಕ್ಕೂ ವೈದ್ಯರ ಸಲಹೆ ಪಡೆಯೋದು ಮುಖ್ಯ.

ಜನನ ನಿಯಂತ್ರಣ ಮಾತೆ ಬಳಸಿ ಪಿರಿಯಡ್ಸ್ ಆಗದಂತೆ ತಡೆಯೋದ್ರಿಂದ ಏನಾಗುತ್ತದೆ? 
ಕೆಲವು ಮಹಿಳೆಯರು ಜನನ ನಿಯಂತ್ರಣ ಮಾತ್ರೆಗಳನ್ನು ಬಳಸುವಾಗ ನಡುವೆ ಕಲೆ ಅಥವಾ ಲಘು ರಕ್ತಸ್ರಾವವನ್ನು ಅನುಭವಿಸಬಹುದು ಎಂದು ತಜ್ಞರು ಹೇಳುತ್ತಾರೆ.
ಹಾರ್ಮೋನುಗಳ ಏರಿಳಿತಗಳು ಸ್ತನಗಳ ಮೃದುತ್ವ ಅಥವಾ ನೋವು ಅಥವಾ ಹಿಗ್ಗುವಿಕೆಗೆ ಕಾರಣವಾಗಬಹುದು.
ಹಾರ್ಮೋನುಗಳ ಮಟ್ಟವನ್ನು ಬದಲಾಯಿಸುವುದರಿಂದ ಮನಸ್ಥಿತಿಯ ಮೇಲೆ ಪರಿಣಾಮ ಬೀರಬಹುದು, ಕೆಲವು ಮಹಿಳೆಯರಲ್ಲಿ ಭಾವನಾತ್ಮಕ ಬದಲಾವಣೆಗಳಿಗೆ ಕಾರಣವಾಗಬಹುದು.
 

ಹಾರ್ಮೋನುಗಳ ಜನನ ನಿಯಂತ್ರಣದ ಅಡ್ಡಪರಿಣಾಮವಾಗಿ ಕೆಲವರು ವಾಕರಿಕೆಯನ್ನು ಅನುಭವಿಸಬಹುದು, ವಿಶೇಷವಾಗಿ ನಿಯಮಾವಳಿಯನ್ನು ಪ್ರಾರಂಭಿಸುವಾಗ ಅಥವಾ ಬದಲಾಯಿಸುವಾಗ.
ಹಾರ್ಮೋನುಗಳ ಬದಲಾವಣೆಗಳು (hormonal changes (ಕೆಲವು ಮಹಿಳೆಯರಲ್ಲಿ ತಲೆನೋವಿಗೆ ಕಾರಣವಾಗಬಹುದು. ಹಾರ್ಮೋನುಗಳ ಜನನ ನಿಯಂತ್ರಣದ ಸಂಭಾವ್ಯ ಅಡ್ಡಪರಿಣಾಮವೆಂದರೆ ಲೈಂಗಿಕ ಚಟುವಟಿಕೆಯಲ್ಲಿ (Sex activity) ಆಸಕ್ತಿ ಕಡಿಮೆಯಾಗುವುದು.
 

Latest Videos

click me!