Moon Gazing: ಆರೋಗ್ಯದ ಮೇಲೆ ಜಾದೂ ಮಾಡುತ್ತೆ, ಮನಸ್ಸಿಗೂ ಮುದ ನೀಡುತ್ತಾನೆ ಶಶಿ

First Published Sep 6, 2022, 5:15 PM IST

ಧ್ಯಾನ ಮಾಡುವ ಹಲವಾರು ವಿಧಗಳ ಬಗ್ಗೆ ನೀವು ಕೇಳಿರಬಹುದು, ನೋಡಿರಬಹುದು, ಅದರಲ್ಲಿ ಮೂನ್ ಗೇಜಿಂಗ್ ಕೂಡ ಒಂದು. ಮೂನ್ ಗೇಜಿಂಗ್ ಹೊಸದೇನೂ ಅಲ್ಲ, ಇದು ಒಂದು ರೀತಿಯ ಧ್ಯಾನ (Meditation). ಇದು ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ (Positive Effect) ಬೀರುತ್ತದೆ. ಅಂದ್ರೆ ನಿಮಗೆ ಉತ್ತಮ ಆರೊಗ್ಯ ಪಡೆಯಲು ಸಹಾಯ ಮಾಡುತ್ತೆ. ಅಲ್ಲದೆ ಏಕಾಗ್ರತೆಯನ್ನು (Concentration) ಹೆಚ್ಚಿಸುವುದು, ದೃಷ್ಟಿ ದೋಷ (Eye Sight) ನಿವಾರಿಸುವುದು, ಹೀಗೆ ಮೂನ್ ಗೇಜಿಂಗ್ ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ಈ ಮೂನ್ ಗೇಜಿಂಗ್ ಬಗ್ಗೆ ವಿವರವಾಗಿ ತಿಳಿಯೋಣ.

ಮೂನ್ ಗೇಜಿಂಗ್ (Moon gazing) ಎಂದರೆ ಏಕಾಗ್ರತೆ, ಒಂದೇ ಕಡೆಗೆ ಗಮನ ಹರಿಸೋದು ಎಂದು ಅರ್ಥ. ಮೇಣದ ಬತ್ತಿಯ ಜ್ವಾಲೆಯ ಮೇಲೆ ನಾವು ಹೇಗೆ ಮನಸ್ಸನ್ನು ಕೇಂದ್ರೀಕರಿಸುತ್ತೇವೆಯೋ, ಹಾಗೆ ಚಂದ್ರನ (Moon) ಮೇಲೆ  ಮನಸ್ಸನ್ನು ಕೇಂದ್ರೀಕರಿಸೋದನ್ನು ಮೂನ್ ಗೇಜಿಂಗ್ ಎಂದು ಕರೆಯಲಾಗುತ್ತೆ. ಚಂದ್ರನ ಧ್ಯಾನವು (Moon Meditation) ದೇಹವನ್ನು ವಿಶ್ರಾಂತಿಗೊಳಿಸಲು ಅಥವಾ ಮಾನಸಿಕ ಒತ್ತಡವನ್ನು (Mental stress) ಕಡಿಮೆ ಮಾಡಲು ತುಂಬಾ ಪ್ರಯೋಜನ.

ಶಾಂತ ಸ್ಥಳದಲ್ಲಿ ಕುಳಿತು ಚಂದ್ರನನ್ನು ದಿಟ್ಟಿಸಿ ನೋಡೋದು ನಿಮ್ಮ ಮನಸ್ಸನ್ನು ಶಾಂತಗೊಳಿಸುತ್ತೆ. ನೀವು ಇದನ್ನು ಚಂದ್ರನ ಸ್ನಾನ (Moon Bath) ಎಂದೂ ಕರೆಯಬಹುದು. ಚಂದ್ರ ಸ್ನಾನವನ್ನು ಆಯುರ್ವೇದದಲ್ಲಿ (Ayurveda) ಸಹ ಸೇರಿಸಲಾಗಿದೆ, ಇದನ್ನು ಭಾರತದಲ್ಲಿ ಉತ್ತಮ ಔಷಧಿ (Medicine) ಎಂದು ಪರಿಗಣಿಸಲಾಗುತ್ತೆ. ಈ ಧ್ಯಾನವು(Meditation) ತುಂಬಾ ಸುಲಭ. ಈ ಕುರಿತು ಪ್ರಮುಖ ವಿಷಯಗಳನ್ನು ತಿಳಿದುಕೊಳ್ಳಿ. 

Latest Videos


ಮೂನ್ ಗೇಜಿಂಗ್ ಪ್ರಯೋಜನಗಳು

 ಮೂನ್ ಗೇಜಿಂಗ್ ಆತಂಕ ಮತ್ತು ಒತ್ತಡವನ್ನು(Stress) ನಿವಾರಿಸುತ್ತೆ ಮತ್ತು ದೇಹವನ್ನು ವಿಶ್ರಾಂತಿಗೊಳಿಸುತ್ತೆ. ಆಯುರ್ವೇದ ಔಷಧದಲ್ಲಿ, ಮೂನ್ ಗೇಜಿಂಗ್ ಮನಸ್ಸು ಮತ್ತು ದೇಹದ ಎಲ್ಲಾ ಸಮಸ್ಯೆಗಳನ್ನು ಗುಣಪಡಿಸಲು ಮತ್ತು ಶಾಂತಗೊಳಿಸಲು ಸಹಾಯ ಮಾಡುತ್ತೆ ಎಂದು ನಂಬಲಾಗಿದೆ.

ಮೂನ್ ಗೇಜಿಂಗ್ ನಮ್ಮ ದೇಹ ಮತ್ತು ಮನಸ್ಸಿನ ಮೇಲೆ ಸಕಾರಾತ್ಮಕ(Positivity) ಪರಿಣಾಮ ಬೀರುತ್ತೆ. ಇದರಿಂದ ನೀವು ತುಂಬಾ ಸಕ್ರಿಯರಾಗಿರಲು ಸಹಾಯವಾಗುತ್ತೆ. ಮೂನ್ ಗೇಜಿಂಗ್ ಧ್ಯಾನದ ಪರಿಣಾಮಗಳ ಬಗ್ಗೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲದಿದ್ದರೂ, ಇಂದು ಈ ಕುರಿತಂತೆ ಹೆಚ್ಚಿನ ಸಂಶೋಧನೆ (research) ನಡೆಯುತ್ತಿದೆ.

ಮೂನ್ ಗೇಜಿಂಗ್ ನಿಂದ ಅನೇಕ ಪ್ರಯೋಜನಗಳಿವೆ, ಅವುಗಳಲ್ಲಿ ಪ್ರಮುಖವಾದ ಪ್ರಯೋಜನಗಳ ಬಗ್ಗೆ ತಿಳಿಯೋಣ :
- ಏಕಾಗ್ರತೆಯ ಶಕ್ತಿಯನ್ನು ಸುಧಾರಿಸುತ್ತೆ 
- ಉತ್ತಮ ನಿದ್ರೆಗೆ(Sleep) ಸಹಾಯ ಮಾಡುತ್ತೆ 
–ಸ್ಟ್ರಾಂಗ್ ಸೆನ್ಸ್ ಬೆಳವಣಿಗೆ ಆಗುತ್ತೆ  
- ಭಾವನಾತ್ಮಕ ಅರಿವು ಹೆಚ್ಚುತ್ತೆ

ಪ್ರಮುಖ ವಿಷಯಗಳನ್ನು ತಿಳಿದುಕೊಳ್ಳಿ

ಈ ಧ್ಯಾನವನ್ನು ಮಾಡುವಾಗ, ನೀವು ಅದನ್ನು ಯಾವಾಗ ಮಾಡಲು ಪ್ರಾರಂಭಿಸಿದ್ದೀರಿ ಎಂಬುದರ ಬಗ್ಗೆ ಕಾಳಜಿ ವಹಿಸೋದು ಮತ್ತು ಚಂದ್ರನ ಇಳಿಕೆ ಮತ್ತು ಹೆಚ್ಚಳಕ್ಕೆ ಅನುಗುಣವಾಗಿ ನಿಮ್ಮ ಏಕಾಗ್ರತೆಯನ್ನು(Concentration) ಹೆಚ್ಚಿಸೋದು ಅಥವಾ ಕಡಿಮೆ ಮಾಡೋದು ಬಹಳ ಮುಖ್ಯ. ಹೀಗೆ ಮಾಡಿದರೆ ಮಾತ್ರ ನಿಮ್ಮ ಏಕಾಗ್ರತಾ ಶಕ್ತಿ ಹೆಚ್ಚಲು ಸಹಾಯವಾಗುತ್ತೆ. 
 

ಚಂದ್ರ ನಮ್ಮ ಆಲೋಚನೆ, ಭಾವನೆಗಳು (Feelings) ಮತ್ತು ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಾನೆ ಎಂದು ಹೆಚ್ಚಿನ ಜನರಿಗೆ ತಿಳಿದಿಲ್ಲ. ಆದ್ದರಿಂದ ನೀವು ಈ ಧ್ಯಾನವನ್ನು ಯಾವ ರಾತ್ರಿ ಪ್ರಾರಂಭಿಸುತ್ತಿದ್ದೀರಿ ಎಂಬುದನ್ನು ನೆನಪಿನಲ್ಲಿಡಿ. ಹುಣ್ಣಿಮೆ ರಾತ್ರಿಯಲ್ಲಿ ಮಾಡಿದಾಗ ನಿಮ್ಮ ಮನಸ್ಸು ಕೂಡ ನಿರಾಳವಾಗಿರುತ್ತೆ. ಪಾಸಿಟಿವ್ ಎನರ್ಜಿ (Positive Energy) ತುಂಬಿರುತ್ತೆ.

click me!