ಬಳಸಿದ ಎಣ್ಣೆಯನ್ನೆ ಮತ್ತೆ ಮತ್ತೆ ಬಳಸ್ತಿದೀರಾ? ಆರೋಗ್ಯಕ್ಕೆ ಅಪಾಯವಿದೆ ಎಚ್ಚರ

First Published Sep 5, 2022, 4:58 PM IST

ಯಾವುದೇ ಭಾರತೀಯ ತಿಂಡಿಗಳ ಬಗ್ಗೆ ಗಮನ ಹರಿಸಿದ್ರೆ ಅದರಲ್ಲಿ ನಾವು ಹೆಚ್ಚಾಗಿ ಬಳಕೆ ಮಾಡೋದು ಅಂದ್ರೆ ಎಣ್ಣೆ. ಆಹಾರದಲ್ಲಿ ಎಣ್ಣೆಯ ಬಳಕೆ ಆಹಾರದ ರುಚಿಯನ್ನು ಹೆಚ್ಚಿಸುತ್ತೆ. ಅದಕ್ಕಾಗಿಯೇ ಜನರು ವಿವಿಧ ರೀತಿಯ ಅಡುಗೆ ಎಣ್ಣೆ ಬಳಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಪ್ಯಾಕ್ ಮಾಡಿದ ಎಣ್ಣೆಯ ಟ್ರೆಂಡ್ ಹೆಚ್ಚಾಗಿದೆ, ಆದ್ದರಿಂದ ಜನರು ಭಾರತೀಯ ಆಹಾರಕ್ಕಾಗಿ (Indian Food) ಅತ್ಯುತ್ತಮ ಅಡುಗೆ ಎಣ್ಣೆಯನ್ನು (Edible Oil) ಬಳಸುತ್ತಾರೆ. ಆದರೆ ಒಮ್ಮೆ ಬಳಕೆ ಮಾಡಿದ ಎಣ್ಣೆಯನ್ನು ಪದೇ ಪದೇ ಬಳಕೆ ಮಾಡೋದು ಸರಿಯೇ?

ಜನರು ಅಡುಗೆಗೆ ಅನೇಕ ರೀತಿಯ ಅಡುಗೆ ಎಣ್ಣೆ ಬಳಸುತ್ತಾರೆ. ಅವುಗಳಲ್ಲಿ ಪ್ರಮುಖವಾದುವು
ಕಡಲೆಕಾಯಿ ಎಣ್ಣೆ (peanut oil)
ಆಲಿವ್ ಎಣ್ಣೆ (olive oil)
ಸಾಸಿವೆ ಎಣ್ಣೆ (mustard oil)
ತೆಂಗಿನೆಣ್ಣೆ (coconut oil)
ಇತ್ಯಾದಿ. ಈ ಎಣ್ಣೆಗಳಲ್ಲಿ ಕೆಲವು ದೇಹಕ್ಕೆ ವಿವಿಧ ರೀತಿಯಲ್ಲಿ ಪ್ರಯೋಜನಕಾರಿಯಾಗುತ್ತವೆ, ಕೆಲವು ತೈಲಗಳು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತವೆ.
 

ಎಣ್ಣೆಗಳನ್ನು ಬಳಸೋದು ಸರಿ. ಆದರೆ ಒಮ್ಮೆ ಬಳಸಿದ ಎಣ್ಣೆಯನ್ನು ಮರು ಬಳಕೆ ಮಾಡೋದು ಸರೀನಾ? ಎಣ್ಣೆಗಳ ಮರುಬಳಕೆಯು (Reheat oil) ಆರೋಗ್ಯಕ್ಕೆ ಅನೇಕ ರೀತಿಯಲ್ಲಿ ಹಾನಿಯನ್ನುಂಟು ಮಾಡುತ್ತದೆ. ಆದರೆ, ಅಡುಗೆ ಎಣ್ಣೆಯನ್ನು ಡೀಪ್ ಫ್ರೈ ಮಾಡಲು ಅಥವಾ ಪ್ಯಾನ್ ಫ್ರೈ ಮಾಡಲು ಎಷ್ಟು ಬಾರಿ ಬಿಸಿ ಮಾಡಲಾಗಿದೆ ಎಂದು ನೀವು ಗಮನಿಸಿದ್ದೀರಾ?

ಸಾಮಾನ್ಯವಾಗಿ ಅಂಗಡಿಯಲ್ಲಾಗಲಿ, ಅಥವಾ ಮನೆಯಲ್ಲಿಯೇ ಆಗಿರಲಿ ನಾವು ಅದೇ ಎಣ್ಣೆಯನ್ನು ಮತ್ತೆ ಮತ್ತೆ ಬಿಸಿ ಮಾಡುವ ಮೂಲಕ ಬಳಸುತ್ತೇವೆ. ಆದ್ರೆ ಹೀಗೆ ಮಾಡೋದು ಆರೋಗ್ಯಕ್ಕೆ ತುಂಬಾ ಡೇಂಜರಸ್. ಈ ಎಣ್ಣೆಯಲ್ಲಿ ತಯಾರಿಸಿದ ಆಹಾರವನ್ನು ನೀವೇನೋ ಬಾಯಿ ಚಪ್ಪರಿಸಿಕೊಂಡು ತಿಂತೀರಿ, ಆದ್ರೆ ಇದರಿಂದ ಆರೋಗ್ಯಕ್ಕೆ ಭಾರಿ ಪೆಟ್ಟು ಬೀಳುತ್ತೆ.

ತೈಲದ ಲಿಪಿಡ್ ಗಳ ಆಕ್ಸಿಡೇಟಿವ್ ಕ್ಷಣ (Oxidative degradation) ತಾಪನದ ಹೆಚ್ಚಾದಷ್ಟೂ ವೇಗವರ್ದಿಸುತ್ತದೆ ಮತ್ತು ಅಪಾಯಕಾರಿ ಪ್ರತಿಕ್ರಿಯಾತ್ಮಕ ಆಮ್ಲಜನಕ (Hazardous reactive oxygen species) ಪ್ರಭೇದಗಳನ್ನು ಸೃಷ್ಟಿಸುತ್ತದೆ. ಇದರಿಂದ ಅಡುಗೆ ಎಣ್ಣೆಯ ಆಂಟಿ ಆಕ್ಸಿಡೆಂಟ್ ಗುಣ ಕಡಿಮೆಯಾಗುತ್ತೆ.

ಮರುಬಳಕೆ ಎಣ್ಣೆಯಿಂದ ತಯಾರಿಸಿದ ಆಹಾರ ನಿಮ್ಮ ಬಾಯಿಗೆ ರುಚಿ ನೀಡಬಹುದು ನಿಜಾ. ಆದರೆ ಎಣ್ಣೆಯ ಮರುಬಳಕೆಯಿಂದ ತಯಾರಿಸಿದ ಆಹಾರಗಳ ದೀರ್ಘಕಾಲದ ಬಳಕೆಯು ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಉರಿಯೂತದಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಆದುದರಿಂದ ಇವುಗಳ ಬಳಕೆ ಕಡಿಮೆ ಮಾಡೋದು ಉತ್ತಮ. 

ಅಡುಗೆ ಎಣ್ಣೆಯನ್ನು ಮತ್ತೆ ಮತ್ತೆ ಬಿಸಿ ಮಾಡುವುದರಿಂದ ಹಾನಿಕಾರಕ ವಿಷ ಬಿಡುಗಡೆಯಾಗುವ ಸಾಧ್ಯತೆ ಇದೆ, ಅದರಲ್ಲಿನ ಟ್ರಾನ್ಸ್-ಫ್ಯಾಟ್ ಪ್ರಮಾಣ ಸಹ ಹೆಚ್ಚುತ್ತದೆ, ಇದು ಫ್ರೀ ರಾಡಿಕಲ್ಸ್‌ಗೆ ಕಾರಣವಾಗುತ್ತದೆ.  ಅತ್ಯಂತ ಹಾನಿಕಾರಕ ಪ್ರತಿಕ್ರಿಯೆಗಳಿಗೆ ಕಾರಣವಾಗುತ್ತದೆ ಎಂದು ಹಲವಾರು ಅಧ್ಯಯನಗಳು ಹೇಳುತ್ತವೆ. 

ಎಣ್ಣೆಯ ಮರುಬಳಕೆಯಿಂದ ಏನಾಗುತ್ತೆ?

ಎಣ್ಣೆಯನ್ನು ಹೆಚ್ಚು ಕ್ಯಾನ್ಸರ್ ಕಾರಕವಾಗಿಸುತ್ತದೆ.

ಕ್ಯಾನ್ಸರ್ ಕಾರಕವಾದ ಯಾವುದೇ ವಸ್ತು ಕ್ಯಾನ್ಸರ್ (cancer) ಉಂಟುಮಾಡುವ ಸಾಮರ್ಥ್ಯವನ್ನು ಹೊಂದಿದೆ. ನೀವು ಎಣ್ಣೆಯನ್ನು ಮತ್ತೆ ಬಿಸಿ ಮಾಡಿದಾಗ ಆಲ್ಡಿಹೈಡ್‌ಗಳು, ವಿಷಕಾರಿ ಅಂಶಗಳು ಹೇಗೆ ಉತ್ಪತ್ತಿಯಾಗುತ್ತವೆ ಎಂಬುದನ್ನು ಹೆಚ್ಚು ಹೆಚ್ಚು ಸಂಶೋಧನೆಗಳು ವಿವರಿಸಿವೆ.

ರೋಗನಿರೋಧಕ ಶಕ್ತಿ ಕಡಿಮೆ

ಅಡುಗೆ ಎಣ್ಣೆಯನ್ನು ಮರುಬಳಕೆ ಮಾಡುವ ಮೂಲಕ ಅಡುಗೆ ಮಾಡೋದ್ರಿಂದ ದೇಹದಲ್ಲಿ ಫ್ರೀ-ರಾಡಿಕಲ್ಸ್ ಸಹ ಹೆಚ್ಚಿಸಬಹುದು, ಇದು ಉರಿಯೂತಕ್ಕೆ ಕಾರಣವಾಗಬಹುದು, ಬೊಜ್ಜು, ಹೃದ್ರೋಗ ಮತ್ತು ಮಧುಮೇಹ ಸೇರಿ ಹೆಚ್ಚಿನ ರೋಗಗಳಿಗೆ ಕಾರಣವಾಗಬಹುದು. ದೇಹದಲ್ಲಿನ ಅತಿಯಾದ ಉರಿಯೂತವು ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತದೆ ಮತ್ತು ಸೋಂಕಿಗೆ ಕಾರಣವಾಗಬಹುದು.

ಇದು ಎಲ್ಡಿಎಲ್ ಕೊಲೆಸ್ಟ್ರಾಲ್ ಹೆಚ್ಚಿಸುತ್ತೆ

ಕಪ್ಪು ಹೊಗೆಯನ್ನು ಹೊರಸೂಸುವ ಎಣ್ಣೆ ಬಳಸೋದ್ರಿಂದ ದೇಹದಲ್ಲಿ ಎಲ್ಡಿಎಲ್ ಅಥವಾ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು (Cholesterol Level) ಹೆಚ್ಚಿಸುತ್ತದೆ. ಹೆಚ್ಚಿನ ಮಟ್ಟದ ಎಲ್ಡಿಎಲ್ ಕೊಲೆಸ್ಟ್ರಾಲ್ ಹೃದ್ರೋಗ, ಪಾರ್ಶ್ವವಾಯು ಮತ್ತು ಎದೆ ನೋವಿನ ಅಪಾಯವನ್ನು ಹೆಚ್ಚಿಸುತ್ತದೆ. ಕೊಲೆಸ್ಟ್ರಾಲ್ ಸಂಬಂಧಿತ ಸಮಸ್ಯೆಗಳನ್ನು ತಪ್ಪಿಸಲು ಅಡುಗೆ ಎಣ್ಣೆ ಮರುಬಳಕೆ ಮಾಡೋದನ್ನು ತಪ್ಪಿಸಿ. 

ಗ್ಯಾಸ್ಟ್ರಿಕ್ ಉಂಟಾಗುತ್ತೆ

ನಿಮ್ಮ ಹೊಟ್ಟೆ ಮತ್ತು ಗಂಟಲಿನಲ್ಲಿ ಕಿರಿಕಿರಿಯು ಹಿಂದೆಂದಿಗಿಂತಲೂ ಹೆಚ್ಚಾಗಿದ್ದರೆ, ಅದರ ಹಿಂದಿನ ಕಾರಣವೆಂದರೆ ಅಡುಗೆ ಎಣ್ಣೆಯನ್ನು ಮತ್ತೆ ಬಿಸಿ ಮಾಡುವುದು. ನೀವು ಸಾಮಾನ್ಯಕ್ಕಿಂತ ಹೆಚ್ಚು ಗ್ಯಾಸ್ಟ್ರಿಕ್ ಅನುಭವಿಸಿದರೆ ರಸ್ತೆ ಬದಿಯಲ್ಲಿ ಜಂಕ್ ಮತ್ತು ಡೀಪ್ ಫ್ರೈ ಆಹಾರ (deep fry food) ತಿನ್ನೋದನ್ನು ಸಾಧ್ಯವಾದಷ್ಟು ಅವಾಯ್ಡ್ ಮಾಡಿ. 
 

ಇತರ ಹಾನಿ

ಅಡುಗೆ ಎಣ್ಣೆಯನ್ನು ಪದೇ ಪದೇ ಬಿಸಿ ಮಾಡುವ ಮೂಲಕ ಅದನ್ನು ತಿನ್ನೋದು ಈ ಕೆಳಗಿನ ಇತರ ಅನಾನುಕೂಲತೆಗಳಿಗೆ ಕಾರಣವಾಗಬಹುದು. ಅವುಗಳೆಂದರೆ

ಸ್ಥೂಲಕಾಯತೆ (obesity)
ತೂಕ ಹೆಚ್ಚಳ (obesity)
ಮಧುಮೇಹ (diabetes)
ಹೃದ್ರೋಗ (heart problem)

click me!