ಕಂಪ್ಯೂಟರ್ ವಿಷನ್ ಸಿಂಡ್ರೋಮ್ ಎಂದರೇನು? ಅದರ ಲಕ್ಷಣ, ಕಾರಣಗಳ ಬಗ್ಗೆ ಇಲ್ಲಿದೆ ಮಾಹಿತಿ

First Published | Nov 30, 2022, 5:13 PM IST

Computer Vision Syndrome: ನೀವು ಸಹ ಕಂಪ್ಯೂಟರ್ ಪರದೆಯ ಮುಂದೆ ಗಂಟೆಗಳ ಕಾಲ ಕುಳಿತುಕೊಂಡರೆ ಅಥವಾ ಗಂಟೆಗಳ ಕಾಲ ಮೊಬೈಲ್ ಬಳಸಿದರೆ, ನೀವು ಕಂಪ್ಯೂಟರ್ ವಿಷನ್ ಸಿಂಡ್ರೋಮ್ ಅನ್ನು ಸಹ ಹೊಂದಬಹುದು. ಏನಿದು ಸಮಸ್ಯೆ ಅನ್ನೋ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ನೀವು ಇದನ್ನು ಪೂರ್ತಿಯಾಗಿ ಓದಿ.

ಕಣ್ಣುಗಳು ನಮ್ಮ ದೇಹದ ಅತ್ಯಂತ ಮೃದುವಾದ ಭಾಗವಾಗಿದೆ. ಆದರೆ ಕಣ್ಣುಗಳ ಮೇಲೆ, ಒಂದಲ್ಲ ಒಂದು ಕಾರಣದಿಂದ ಹೆಚ್ಚಿನ ಪರಿಣಾಮ ಬೀರುತ್ತದೆ. ಧೂಳು, ಮಣ್ಣು, ಮಾಲಿನ್ಯ, ಕಂಪ್ಯೂಟರ್ ಸ್ಕ್ರೀನ್, ಟ್ಯಾಬ್ ಗಳು, ಮೊಬೈಲ್ ಫೋನ್ ಗಳ ಮುಂದೆ ಗಂಟೆಗಟ್ಟಲೆ ಕುಳಿತುಕೊಳ್ಳುವುದು ಕಣ್ಣುಗಳನ್ನು ದುರ್ಬಲಗೊಳಿಸುತ್ತದೆ ಮತ್ತು ಅನೇಕ ಸಂದರ್ಭಗಳಲ್ಲಿ ಇದು ಕಂಪ್ಯೂಟರ್ ವಿಷನ್ ಸಿಂಡ್ರೋಮ್ ಆಗಿ ಬದಲಾಗುತ್ತದೆ. ಕಂಪ್ಯೂಟರ್ ವಿಷನ್ ಸಿಂಡ್ರೋಮ್ (CVS: Computer Vision Syndrome) ಎಂದರೇನು ಎಂದು ಈಗ ನೀವು ಆಶ್ಚರ್ಯ ಪಡುತ್ತಿರಬಹುದು? ಬನ್ನಿ ಕಂಪ್ಯೂಟರ್ ವಿಷನ್ ಸಿಂಡ್ರೋಮ್, ಅದರ ರೋಗಲಕ್ಷಣಗಳು ಯಾವುವು ಮತ್ತು ಅದನ್ನು ಹೇಗೆ ತಡೆಗಟ್ಟಬಹುದು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ.
 

ಕಂಪ್ಯೂಟರ್ ವಿಷನ್ ಸಿಂಡ್ರೋಮ್ ಎಂದರೇನು?: ಕಂಪ್ಯೂಟರ್ ವಿಷನ್ ಸಿಂಡ್ರೋಮ್ ಎಲ್ಲಾ ಡಿಜಿಟಲ್ ಎಕ್ಸ್ ಪೋಶರ್ ಗಳ (digital exposure) ಫಲಿತಾಂಶವಾಗಿದೆ, ಎಲ್ಲಾ ಡಿಜಿಟಲ್ ಸ್ಕ್ರೀನ್ ಗಳ ಮೇಲೆ ನಾವು ದೀರ್ಘಕಾಲದವರೆಗೆ ನಮ್ಮ ಕಣ್ಣುಗಳನ್ನು ಇರಿಸುತ್ತೇವೆ. ಅಂದರೆ ಅವುಗಳನ್ನು ಹೆಚ್ಚು ಸಮಯ ನೋಡುತ್ತೇವೆ. ಇದನ್ನು ಸಾಮಾನ್ಯವಾಗಿ ಡಿಜಿಟಲ್ ಕಣ್ಣಿನ ಸ್ಟ್ರೈನ್ ಎಂದೂ ಕರೆಯಲಾಗುತ್ತದೆ.

Tap to resize

ಜಾಗತಿಕವಾಗಿ, ಕಂಪ್ಯೂಟರ್ ವಿಷನ್ ಸಿಂಡ್ರೋಮ್ ಸುಮಾರು 60 ಮಿಲಿಯನ್ ಜನರನ್ನು ಬಾಧಿಸುತ್ತದೆ. ನಾವು ದೀರ್ಘಕಾಲದವರೆಗೆ ನಮ್ಮ ಕಣ್ಣುಗಳ ಮೇಲೆ ಒತ್ತಡ ಹೇರುವುದನ್ನು ಮುಂದುವರಿಸಿದರೆ, ಅದು ಮುಂದೆ ಕಣ್ಣಿನ ತೊಂದರೆಗಳಿಗೆ (eye problem) ಕಾರಣವಾಗಬಹುದು. ವಯಸ್ಕರು ಮಾತ್ರವಲ್ಲ, ದೀರ್ಘಕಾಲದವರೆಗೆ ಟ್ಯಾಬ್ ಗಳು ಅಥವಾ ಕಂಪ್ಯೂಟರ್ ನೋಡುತ್ತಿರುವ ಮಕ್ಕಳೂ ಸಹ ಈ ಸಮಸ್ಯೆಗಳನ್ನು ಅನುಭವಿಸಬಹುದು. 

ಕಂಪ್ಯೂಟರ್ ಗಳು ಕಣ್ಣುಗಳ ಮೇಲೆ ಹೇಗೆ ಪರಿಣಾಮ ಬೀರುತ್ತವೆ?: ನೀವು ನಿರಂತರವಾಗಿ ಕಂಪ್ಯೂಟರ್ ಗಳು ಅಥವಾ ಇತರ ಗ್ಯಾಜೆಟ್ ಗಳನ್ನು ನೋಡುತ್ತಿರುವಾಗ, ನಿಮ್ಮ ಕಣ್ಣುಗಳು ಕಂಪ್ಯೂಟರಿನಿಂದ ನೀವು ಓದಬೇಕಾದ ಅಥವಾ ಬರೆಯಬೇಕಾದ ಇತರ ವಿಷಯಗಳ ಜೊತೆಗೆ ಹಿಂದೆ ಮುಂದೆ ಚಲಿಸುತ್ತವೆ. ಈ ಸಮಯದಲ್ಲಿ ಕಣ್ಣಿನ ಸ್ನಾಯುಗಳಿಂದ (muscles of eyes)  ಸಾಕಷ್ಟು ಪ್ರಯತ್ನದ ಅಗತ್ಯವಿರುತ್ತದೆ. 

ಕಣ್ಣುಗಳು ಸ್ಕ್ರೀನ್ ಮೇಲೆ ಹೆಚ್ಚು ಸಮಯ ಚಲಿಸೋದರಿಂದ ಕಣ್ಣುಗಳ ಮೇಲೆ ಹೆಚ್ಚು ಒತ್ತಡ ಬೀರುವ ಸಾಧ್ಯತೆ ಇದೆ. ಇದರಿಂದ ಕಣ್ಣಿನ ಇತರ ಸಮಸ್ಯೆಗಳು ಸಹ ಉಂಟಾಗಬಹುದು. ಇದಕ್ಕೆ ಕಂಪ್ಯೂಟರ್ ವಿಷನ್ ಸಿಂಡ್ರೋಮ್ ಎಂದು ಕರೆಯಲಾಗುತ್ತದೆ. ಇದಕ್ಕೆ ಕಾರಣ ಏನು? ಮತ್ತು ಲಕ್ಷಣಗಳೇನು ಅನ್ನೋದನ್ನು ತಿಳಿಯೋಣ.

ಕಂಪ್ಯೂಟರ್ ವಿಷನ್ ಸಿಂಡ್ರೋಮ್ ನ ಕಾರಣಗಳು (Reasons for CVS) :
ಕಂಪ್ಯೂಟರ್ ವಿಷನ್ ಸಿಂಡ್ರೋಮ್ ನ ಕೆಲವು ಸಾಮಾನ್ಯ ಕಾರಣಗಳೆಂದರೆ-
- ಕಂಪ್ಯೂಟರ್ ಕನ್ನಡಕಗಳನ್ನು ನಿಯಮಿತವಾಗಿ ಬಳಸದಿರುವುದು
- ಹೆಚ್ಚುತ್ತಿರುವ ವಯಸ್ಸು
- ಮಾರ್ಪಡಿಸದ ಅಕ್ಯುಲರ್ (ದೃಷ್ಟಿ) ಅಟಿಯೋಲಜಿ
- ತುಂಬಾ ಕಡಿಮೆ ಬೆಳಕು
- ನಿಮ್ಮ ಡಿಜಿಟಲ್ ಪರದೆಯ ಮೇಲೆ ಅತಿಯಾದ ಬೆಳಕು

ಕಂಪ್ಯೂಟರ್ ವಿಷನ್ ಸಿಂಡ್ರೋಮ್ ನ ಲಕ್ಷಣಗಳು (symptoms of CVS)
ಕಂಪ್ಯೂಟರ್ ವಿಷನ್ ಸಿಂಡ್ರೋಮ್ ಗೆ ಸಂಬಂಧಿಸಿದ ಸಾಮಾನ್ಯ ಚಿಹ್ನೆಗಳು ಮತ್ತು ರೋಗಲಕ್ಷಣಗಳೆಂದರೆ-
- ಮಸುಕಾದ ಅಥವಾ ದ್ವಂದ್ವ ದೃಷ್ಟಿ
- ಕಣ್ಣಿನ ಆಯಾಸ
- ಬ್ಲರ್ ವಿಷನ್
- ಕಣ್ಣುಗಳಲ್ಲಿ ಕಿರಿಕಿರಿ ಅನುಭವಿಸುವುದು
- ಶುಷ್ಕ ಕಣ್ಣುಗಳು
- ನೀರು ತುಂಬಿದ ಕಣ್ಣುಗಳು
-ತಲೆನೋವು
- ಬೆನ್ನು ಅಥವಾ ಕುತ್ತಿಗೆ ನೋವು

CVS ಗೆ ಚಿಕಿತ್ಸೆ ನೀಡುವುದು ಹೇಗೆ?
- ಮೊದಲಿಗೆ ನೀವು ವೈದ್ಯರನ್ನು ಸಂಪರ್ಕಿಸಬೇಕು. ವೈದ್ಯಕೀಯ ಸಮಾಲೋಚನೆಯ ನಂತರ ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ನೀವು ಕನ್ನಡಕ ಅಥವಾ ಕಾಂಟ್ಯಾಕ್ಟ್ ಲೆನ್ಸ್ ಗಳನ್ನು ಧರಿಸಬಹುದು. ಇದನ್ನು ಸಿಂಗಲ್, ಬೈಫೋಕಲ್ ಲೆನ್ಸ್ ಗಳು ಅಥವಾ ಟಿಂಟೆಡ್ ಲೆನ್ಸ್ ಗಳೊಂದಿಗೆ ಅಳವಡಿಸಬಹುದು.

- ನಿಮ್ಮ ಡೆಸ್ಕ್ ಅನ್ನು ನಿಮ್ಮ ಕಣ್ಣಿನ ಮಟ್ಟಕ್ಕಿಂತ ಸ್ವಲ್ಪ ಕೆಳಗೆ ಮತ್ತು ನಿಮ್ಮ ಮುಖದಿಂದ 20-28 ಇಂಚುಗಳಷ್ಟು ದೂರದಲ್ಲಿ ಇರಿಸಿ.

- 20-20-20 ನಿಯಮವನ್ನು ಅಳವಡಿಸಿಕೊಳ್ಳಿ. ಅಂದರೆ, ಪ್ರತಿ 20 ನಿಮಿಷಗಳಿಗೊಮ್ಮೆ 20 ಸೆಕೆಂಡುಗಳ ಕಾಲ ಕನಿಷ್ಠ 20 ಅಡಿ ದೂರವನ್ನು ನೋಡುವ ಮೂಲಕ ನಿಮ್ಮ ಕಣ್ಣುಗಳಿಗೆ ವಿಶ್ರಾಂತಿ ನೀಡಿ.

- ಕಂಪ್ಯೂಟರಿನ ಫಾಂಟ್ ಗಾತ್ರ ಮತ್ತು ಬ್ರೈಟ್ ನೆಸ್ ಬದಲಿಸಿ (brighness of screen), ಹೆಚ್ಚು ಅಲ್ಲದ, ಕಡಿಮೆಯೂ ಅಲ್ಲದ ಬ್ರೈಟ್ ನೆಸ್ ಇರಲಿ. ಇದರಿಂದ ನೀವು ನಿಮ್ಮ ಕಣ್ಣುಗಳ ಮೇಲೆ ಹೆಚ್ಚು ಒತ್ತು ಉಂಟಾಗೋದಿಲ್ಲ.

- ನಿಮ್ಮ ಕಣ್ಣುಗಳು ಆಗಾಗ್ಗೆ ಒಣಗಿದಂತೆ ಭಾಸವಾಗುತ್ತಿದ್ದರೆ, ಅವುಗಳನ್ನು ನಯಗೊಳಿಸಲು ಐ ಡ್ರಾಪ್ಸ್ ಬಳಸಿ. ಇಲ್ಲವಾದರೆ ಒಂದು ಗಂಟೆಗೊಮ್ಮೆ ನಿಮ್ಮ ಮುಖವನ್ನು ತಣ್ಣೀರಿನಿಂದ ತೊಳೆಯೋದನ್ನು ಮರೆಯಬೇಡಿ.

Latest Videos

click me!