ಮಧುಮೇಹ ರೋಗಿಗಳಿಗೆ ರಾಗಿ ದಿವ್ಯೌಷಧಿ: ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ?

First Published | Nov 29, 2022, 5:22 PM IST

ರಾಗಿಯು ಒರಟಾದ ಧಾನ್ಯವಾಗಿದೆ. ಇದನ್ನು ಭಾರತವೂ ಸೇರಿದಂತೆ ವಿಶ್ವದ ಅನೇಕ ದೇಶಗಳಲ್ಲಿ ಬೆಳೆಯಲಾಗುತ್ತದೆ. ಆದರೆ ರಾಗಿ, ಒರಟಾದ ಧಾನ್ಯವಾಗಿರುವುದರಿಂದ, ರಾಗಿ ಕೃಷಿ ಇತ್ತೀಚಿನ ದಿನಗಳಲ್ಲಿ ತುಂಬಾ ಕಡಿಮೆಯಾಗಿದೆ. ರಾಗಿ ತಿನ್ನೋದ್ರಿಂದ ಮಧುಮೇಹ ರೋಗಿಗಳಿಗೆ ಏನೆಲ್ಲಾ ಪ್ರಯೋಜನಗಳಿವೆ ಅನ್ನೋದನ್ನು ನೊಡೋಣ.

ದೇಹದಲ್ಲಿ ಸಕ್ಕರೆಯನ್ನು ನಿಯಂತ್ರಿಸುವುದು (sugar control) ಮಧುಮೇಹ ರೋಗಿಗಳಿಗೆ ಕಠಿಣ ಕೆಲಸವಾಗಿದೆ. ಇದಕ್ಕಾಗಿ, ಆಹಾರ ಮತ್ತು ಜೀವನಶೈಲಿಯ ಮೇಲೆ ಸರಿಯಾದ ನಿಗಾ ಇಡೋದು ಮುಖ್ಯ. ಸ್ವಲ್ಪ ನಿರ್ಲಕ್ಷ ಮಾಡೋದ್ರಿಂದ ಸಕ್ಕರೆ ಮಟ್ಟ ಹೆಚ್ಚುತ್ತದೆ. ಆರೋಗ್ಯ ತಜ್ಞರ ಪ್ರಕಾರ, ತಪ್ಪು ಆಹಾರ ಮತ್ತು ಕಳಪೆ ದಿನಚರಿಯಿಂದಾಗಿ, ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾಗಲು ಪ್ರಾರಂಭಿಸುತ್ತದೆ. ಇದಕ್ಕಾಗಿ, ಮಧುಮೇಹ ರೋಗಿಗಳು ಸಿಹಿ ಆಹಾರಗಳನ್ನು ತಪ್ಪಿಸೋದು ಮುಖ್ಯ. ನೀವೂ ಸಹ ಮಧುಮೇಹದ ರೋಗಿಯಾಗಿದ್ದರೆ ಮತ್ತು ಸಕ್ಕರೆಯನ್ನು ನಿಯಂತ್ರಣದಲ್ಲಿಡಲು ಬಯಸಿದರೆ, ಪ್ರತಿದಿನ ಸಮತೋಲಿತ ಆಹಾರ ಸೇವಿಸಿ, ವ್ಯಾಯಾಮ ಮಾಡಿ, ಸಾಕಷ್ಟು ನಿದ್ರೆ ಮಾಡಿ, ಒತ್ತಡದಿಂದ ದೂರವಿರಿ ಮತ್ತು ಮುಖ್ಯವಾಗಿ ಸಕ್ಕರೆಯನ್ನು ಸೇವಿಸಬೇಡಿ. ಇದಲ್ಲದೆ, ಆಹಾರದಲ್ಲಿ ರಾಗಿಯನ್ನು ಸೇರಿಸಿ. 

ರಾಗಿಯ ಸೇವನೆಯು ದೇಹದಲ್ಲಿ ಹೆಚ್ಚುತ್ತಿರುವ ಸಕ್ಕರೆಯನ್ನು ನಿಯಂತ್ರಿಸಲು (sugar control) ಸಹಾಯ ಮಾಡುತ್ತದೆ. ಹೆಚ್ಚುತ್ತಿರುವ ಸಕ್ಕರೆಯನ್ನು ನಿಯಂತ್ರಿಸುವಲ್ಲಿ ರಾಗಿ ಸಹಾಯಕವಾಗಿದೆ ಎಂದು ಅನೇಕ ಸಂಶೋಧನೆಗಳು ಬಹಿರಂಗಪಡಿಸಿವೆ. ಇದು ಮಧುಮೇಹ ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ. ಇದರಿಂದ ಏನೆಲ್ಲಾ ಪ್ರಯೋಜನಗಳಿವೆ ಅನ್ನೋದನ್ನು ತಿಳಿಯಲು ಮುಂದೆ ಓದಿ.  

Tap to resize

ರಾಗಿ ಎಂದರೇನು?: ರಾಗಿಯು ಒರಟಾದ ಧಾನ್ಯವಾಗಿದೆ. ಇದನ್ನು ಭಾರತವೂ ಸೇರಿದಂತೆ ವಿಶ್ವದ ಅನೇಕ ದೇಶಗಳಲ್ಲಿ ಬೆಳೆಯಲಾಗುತ್ತದೆ.  ಇದು ಅಗತ್ಯ ಪೋಷಕಾಂಶವಾದ ಅಮೈನೋ ಆಮ್ಲ ಮಿಥನೈನ್ ಅನ್ನು ಹೊಂದಿರುತ್ತದೆ. ಇದನ್ನು ಸೇವಿಸೋದರಿಂದ ಉತ್ತಮ ಆರೋಗ್ಯ ನಿಮ್ಮದಾಗುತ್ತದೆ. 

ನೀವು ಎಂದಾದರೂ ರಾಗಿ ಹಿಟ್ಟನ್ನು ಟ್ರೈ ಮಾಡಿದ್ದೀರಾ?: ಸಾಮಾನ್ಯವಾಗಿ, ನಾವು ದೈನಂದಿನ ಆಹಾರದಲ್ಲಿ ಗೋಧಿ ಹಿಟ್ಟನ್ನು ಬಳಸುತ್ತೇವೆ, ಆದರೆ ಮಧುಮೇಹ ರೋಗಿಗಳು ರಾಗಿ ಹಿಟ್ಟನ್ನು ಟ್ರೈ ಮಾಡಬೇಕು. ಇದು ಮಧುಮೇಹವನ್ನು ತೊಡೆದುಹಾಕುವುದು ಮಾತ್ರವಲ್ಲದೆ, ಬೊಜ್ಜು, ಅಧಿಕ ರಕ್ತದೊತ್ತಡ (high BP)  ಮೊದಲಾದ ಎಲ್ಲಾ ರೋಗಗಳನ್ನು ಸಹ ತೊಡೆದುಹಾಕುತ್ತದೆ.  
 

ಮಧುಮೇಹ ರೋಗಿಗಳಿಗೆ (diabetes patients) ದೊಡ್ಡ ಸಮಸ್ಯೆಯೆಂದರೆ ಅವರ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೇಗೆ ಕಾಪಾಡಿಕೊಳ್ಳುವುದು ಅನ್ನೋದು ತಿಳಿದಿರೋದಿಲ್ಲ. ಆಹಾರದ ಸಣ್ಣ ನಿರ್ಲಕ್ಷ್ಯವು ಸಹ ಮಧುಮೇಹ ರೋಗಿಗಳಿಗೆ ಅಪಾಯ ತಂದೊಡ್ಡಬಹುದು. ಅಂತಹ ಪರಿಸ್ಥಿತಿಯಲ್ಲಿ, ಹೆಚ್ಚಿನ ಆರೋಗ್ಯ ತಜ್ಞರು ರಾಗಿ ಹಿಟ್ಟನ್ನು ತಿನ್ನಲು ಶಿಫಾರಸು ಮಾಡುತ್ತಾರೆ.

ಶುಗರ್ ಕಂಟ್ರೋಲ್ ಮಾಡಲು: ಆರೋಗ್ಯ ತಜ್ಞರು ಯಾವಾಗಲೂ ಮಧುಮೇಹ ರೋಗಿಗಳಿಗೆ ಫೈಬರ್ ಭರಿತ ಆಹಾರ (fiber food) ಸೇವಿಸಲು ಸಲಹೆ ನೀಡುತ್ತಾರೆ. ನಾರಿನಂಶ ಹೆಚ್ಚಿರುವ ಆಹಾರವು ತಡವಾಗಿ ಜೀರ್ಣವಾಗುತ್ತದೆ. ಈ ಕಾರಣದಿಂದಾಗಿ, ಹೊಟ್ಟೆ ದೀರ್ಘಕಾಲದವರೆಗೆ ತುಂಬಿರುತ್ತದೆ. ಅಲ್ಲದೆ, ಜೀರ್ಣಾಂಗ ವ್ಯವಸ್ಥೆಯು ಬಲವಾಗುತ್ತೆ. ಹಾಗಾಗಿ ರಾಗಿ ರೊಟ್ಟಿ ತಿನ್ನೋದು ಉತ್ತಮವಾಗಿದೆ. 
 

ರಾಗಿಯಲ್ಲಿ ಕಾರ್ಬೋಹೈಡ್ರೇಟ್ ಗಳು ಮತ್ತು ಕ್ಯಾಲೋರಿಗಳು ಹೆಚ್ಚಿನ ಪ್ರಮಾಣದಲ್ಲಿವೆ, ತ್ವರಿತ ಶಕ್ತಿಗಾಗಿ ರಾಗಿಯನ್ನು ಸೇವಿಸಲು ಮರೆಯಬೇಡಿ.  ಇತರ ಸಿರಿಧಾನ್ಯಗಳಿಗೆ ಹೋಲಿಸಿದರೆ ರಾಗಿಯು ಮಧುಮೇಹ ಹೊಂದಿರುವ ಜನರ ರಕ್ತದಲ್ಲಿನ ಸಕ್ಕರೆಯ ಮಟ್ಟದ (blood sugar level) ಮೇಲೆ ಕಡಿಮೆ ಪರಿಣಾಮ ಬೀರುತ್ತದೆ. ನಿಮಗೆ ಮಧುಮೇಹ ಇಲ್ಲದಿದ್ದರೂ ಸಹ ರಾಗಿಯನ್ನು ತಿನ್ನುವುದು ಅದನ್ನು ತಡೆಗಟ್ಟಲು ನಿಮಗೆ ಸಹಾಯ ಮಾಡುತ್ತದೆ. 

ರಾಗಿಯ ಇತರ ಪ್ರಯೋಜನಗಳ ಬಗ್ಗೆ ತಿಳಿಯೋಣ
ರಕ್ತಹೀನತೆ (Anemia): ಕಬ್ಬಿಣದ ಸಮಸ್ಯೆ ಇದ್ದರೆ ರಾಗಿಯ ಸೇವನೆಯು ಪ್ರಯೋಜನಕಾರಿಯಾಗಿದೆ. ರಾಗಿಯನ್ನು ಕಬ್ಬಿಣದ ಉತ್ತಮ ಮೂಲವೆಂದು ಪರಿಗಣಿಸಲಾಗಿದೆ. ರಕ್ತಹೀನತೆಯ ರೋಗಿಗಳಿಗೆ ಕಡಿಮೆ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಲು ಇದು ಸಹಾಯ ಮಾಡುತ್ತದೆ. 

ಕ್ಯಾಲ್ಸಿಯಂ (Calcium): ರಾಗಿ ಕ್ಯಾಲ್ಸಿಯಂನ ಉತ್ತಮ ಮೂಲವಾಗಿದೆ. ರಾಗಿ ಸೇವಿಸುವ ಮೂಲಕ ಕ್ಯಾಲ್ಸಿಯಂ ಕೊರತೆಯನ್ನು ನಿವಾರಿಸಬಹುದು. ಮೂಳೆಗಳು ಮತ್ತು ಹಲ್ಲುಗಳಿಗೆ ಕ್ಯಾಲ್ಸಿಯಂ ಬಹಳ ಮುಖ್ಯ. ಆಸ್ಟಿಯೊಪೊರೋಸಿಸ್ ತಡೆಗಟ್ಟಲು ಕ್ಯಾಲ್ಸಿಯಂ ಸಹ ಅಗತ್ಯವೆಂದು ಪರಿಗಣಿಸಲಾಗಿದೆ. 

ತೂಕ ಇಳಿಕೆ (Weight Loss): ತೂಕ ಇಳಿಸಿಕೊಳ್ಳಲು ರಾಗಿ ಸೇವಿಸುವುದು ಪ್ರಯೋಜನಕಾರಿ.  ರಾಗಿಯಲ್ಲಿ ಹೆಚ್ಚಿನ ಪ್ರಮಾಣದ ನಾರಿನಂಶವಿದೆ. ಇದನ್ನು ತಿಂದ ನಂತರ, ಹೊಟ್ಟೆಯು ದೀರ್ಘಕಾಲದವರೆಗೆ ತುಂಬಿರುತ್ತದೆ. ಇದು ಹಸಿವನ್ನು ಕಡಿಮೆ ಮಾಡುತ್ತದೆ ಮತ್ತು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.

ಒತ್ತಡ: ಪ್ರತಿದಿನ ರಾಗಿ ಸೇವಿಸುವ ಮೂಲಕ, ಆತಂಕ, ಒತ್ತಡವನ್ನು ನಿವಾರಿಸಬಹುದು. ವಾಸ್ತವವಾಗಿ, ಇದು ಅಮೈನೋ ಆಮ್ಲಗಳು, ಆಂಟಿ-ಆಕ್ಸಿಡೆಂಟ್ಗಳನ್ನು ಹೊಂದಿರುತ್ತದೆ, ಇದು ನೈಸರ್ಗಿಕ ರೀತಿಯಲ್ಲಿ ನಿಮ್ಮನ್ನು ಒತ್ತಡ ಮುಕ್ತವಾಗಿರಿಸಲು (stress free) ಸಹಾಯ ಮಾಡುತ್ತದೆ.

Latest Videos

click me!