ತರಕಾರಿ ಸೇವಿಸಬೇಕು
ತರಕಾರಿಗಳಲ್ಲಿ ಅಗತ್ಯ ವಿಟಮಿನ್‌ಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಪೋಷಕಾಂಶಗಳ ಕೊರತೆಯನ್ನು ಪೂರೈಸಲು ವಿವಿಧ ಬಣ್ಣಗಳ ವಿವಿಧ ತರಕಾರಿಗಳನ್ನು ತಿನ್ನುವುದನ್ನು ಅಭ್ಯಾಸಮಾಡಿ. ಪಾಲಕ್, ಕೆಲ್, ಹಸಿರು ಬೀನ್ಸ್, ಬ್ರೋಕೋಲಿಯಂತಹ ಪೋಷಕಾಂಶಗಳಿಂದ ಸಮೃದ್ಧವಾದ ತರಕಾರಿಯನ್ನು ಆಹಾರದಲ್ಲಿ ಸೇರಿಸಬೇಕು. ಈ ತರಕಾರಿಗಳನ್ನು ಇಷ್ಟಪಡದಿದ್ದರೆ, ಪರ್ಯಾಯವಾಗಿ ಸೂಪ್, ಸಲಾಡ್, ಪ್ಯೂರಿ, ರಸಗಳು ಮತ್ತು ಸ್ಮೂಥಿಗಳಾಗಿ ತಿನ್ನಬಹುದು.