ಮನೆಯಲ್ಲಿ ಬೇಯಿಸಿದ ಆಹಾರ ಕೆಲವೊಮ್ಮೆ ಉಳಿಯುತ್ತೆ, ಅದನ್ನು ನಾವು ಫ್ರಿಜ್ನಲ್ಲಿ ಇರಿಸಿ ಮತ್ತೆ ಸೇವಿಸುತ್ತೇವೆ. ಆದರೆ ಅನ್ನದ (Rice) ವಿಷಯಕ್ಕೆ ಬಂದಾಗ, ತಂಗಳ ಅನ್ನ ತಿನ್ನಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಆಗಾಗ್ಗೆ ಚರ್ಚೆ ನಡೆಯುತ್ತದೆ. ಇಂದಿನ ವೇಗದ ಜೀವನದಲ್ಲಿ, ಜನರಿಗೆ ಕುಳಿತು ಸರಿಯಾಗಿ ತಿನ್ನಲು ಸಹ ಸಮಯ ಇರೋದಿಲ್ಲ, ಪ್ರತಿದಿನ ಅಡುಗೆ ಮಾಡುವುದು ಸಹ ಒಂದು ದೊಡ್ಡ ಕೆಲಸವೆಂದು ತೋರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಅನೇಕ ಜನರು ಕೆಲವು ಆಹಾರಗಳನ್ನು ಮುಂಚಿತವಾಗಿ ತಯಾರಿಸುತ್ತಾರೆ ಮತ್ತು ಸಮಯವನ್ನು ಉಳಿಸಲು ಅವುಗಳನ್ನು ಫ್ರಿಡ್ಜ್ನಲ್ಲಿ ಇಡುತ್ತಾರೆ.