RO ನೀರು ಕುಡಿತಿದೀರಾ? ರಕ್ತಹೀನತೆಗೆ ಕಾರಣವಾಗಬಹುದು ಎಚ್ಚರ

First Published | Apr 27, 2023, 4:36 PM IST

ನೀವು RO ನೀರು ಕುಡಿಯುತ್ತೀರಾ? ಅದರಲ್ಲೂ ನೀವು ಸಸ್ಯಾಹಾರಿಗಳಾಗಿದ್ರೆ, ನಿಮಗೆ ವಿಟಮಿನ್ ಬಿ 12 ನ ತೀವ್ರ ಕೊರತೆ ಉಂಟಾಗಬಹುದು. ಇದು ಒಂದು ಅಧ್ಯಯನದಲ್ಲಿ ಕಂಡುಬಂದಿದೆ. ಹಾಗಿದ್ರೆ ಅತ್ಯುತ್ತಮ ವಿಟಮಿನ್ ಬಿ 12 ಆಹಾರಗಳು ಯಾವುವು ಎಂದು ತಿಳಿಯೋಣ?
 

ಕುಡಿಯುವ ನೀರು ದೇಹದ ಅತಿದೊಡ್ಡ ಅಗತ್ಯಗಳಲ್ಲಿ ಒಂದು. ಆದರೆ ಕೊಳಕು ಮತ್ತು ಕಲುಷಿತ ನೀರು ಅನೇಕ ರೋಗಗಳಿಗೆ ಕಾರಣವಾಗಬಹುದು. ಅದಕ್ಕಾಗಿಯೇ ಜನರು RO ನೀರನ್ನು (RO water) ಕುಡಿಯಲು ಪ್ರಾರಂಭಿಸಿದ್ದಾರೆ. RO ನ ಪೂರ್ಣ ಹೆಸರು ರಿವರ್ಸ್ ಆಸ್ಮೋಸಿಸ್ (Reverse Osmosis), ಇದು ನೀರನ್ನು ಸ್ವಚ್ಛಗೊಳಿಸುವ ಸುಧಾರಿತ ತಂತ್ರ.

RO  ನೀರನ್ನು ಶುದ್ಧೀಕರಿಸಿ, ನಿಮಗೆ ಸ್ವಚ್ಚವಾದ ನೀರನ್ನು ಕೊಡುತ್ತೆ ಎಂದು ನೀವು ಅಂದುಕೊಂಡಿದ್ದೀರಿ ಅಲ್ವಾ? ಆದರೆ RO ನೀರು ದೇಹದಲ್ಲಿ ವಿಟಮಿನ್ ಬಿ 12 ಕೊರತೆಗೆ ಕಾರಣವಾಗಬಹುದು. ಅಧ್ಯಯನ ಒಂದರಲ್ಲಿ ಈ ಅಪಾಯವನ್ನು ಕಂಡುಹಿಡಿಯಲಾಗಿದೆ. ವರದಿಯ ಪ್ರಕಾರ,  RO ನೀರನ್ನು ಕುಡಿಯುವ ಜನರು ಈ ಪೋಷಕಾಂಶದ ಕೊರತೆಯ ಹೆಚ್ಚಿನ ಅಪಾಯದಲ್ಲಿದ್ದಾರೆ.

Tap to resize

ನೀರಿನಿಂದ ವಿಟಮಿನ್ ಬಿ 12 ಅನ್ನು ತೆಗೆದುಹಾಕುತ್ತದೆ
ಅಧ್ಯಯನದಲ್ಲಿ, ನೀರನ್ನು ಸ್ವಚ್ಛಗೊಳಿಸುವಾಗ RO ಕೋಬಾಲ್ಟ್ ಅನ್ನು ಸಹ ಬೇರ್ಪಡಿಸುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಇದು ವಿಟಮಿನ್ ಬಿ 12 ನ ಅತ್ಯಗತ್ಯ ಅಂಶವಾಗಿದೆ. RO ನೀರು ಕುಡಿದವರಲ್ಲಿ ವಿಟಮಿನ್ ಬಿ 12 (Vitamin B 12)ಸಾಮಾನ್ಯ ಮಟ್ಟಕ್ಕಿಂತ ಕಡಿಮೆ ಇದೆ ಎಂದು ಅಧ್ಯಯನವು ಕಂಡುಹಿಡಿದಿದೆ.

ದೇಹದಲ್ಲಿ ರಕ್ತದ ಕೊರತೆ
ವಿಟಮಿನ್ ಬಿ 12 ಕೊರತೆಯು ರಕ್ತಹೀನತೆಗೆ ಕಾರಣವಾಗಬಹುದು. ಈ ಕಾರಣದಿಂದಾಗಿ, ದೇಹದಲ್ಲಿ ರಕ್ತದ ಭಾರಿ ಕೊರತೆ ಉಂಟಾಗುತ್ತೆ. ಈ ಪೋಷಕಾಂಶವು ಕೆಂಪು ರಕ್ತ ಕಣಗಳ (red blood cell) ಉತ್ಪಾದನೆಯಂತಹ ದೇಹದ ಅನೇಕ ಕಾರ್ಯಗಳಿಗೆ ಸಹಾಯ ಮಾಡುತ್ತದೆ.

ನೀವು ಸಹ RO  ನೀರು ಕುಡಿಯುವವರಾಗಿದ್ದರೆ? ವಿಟಮಿನ್ ಬಿ 12 ಆಹಾರಗಳನ್ನು ನೀವು ನಿಯಮಿತವಾಗಿ ಸೇವಿಸಲೇಬೇಕು. ಹಾಗಿದ್ರೆ ವಿಟಮಿನ್ ಬಿ 12 ಆಹಾರಗಳು ಯಾವುವು ಅನ್ನೋದನ್ನು ನೋಡೋಣ.
ಮಾಂಸ
ಮೀನು
ಕೋಳಿ 
ಮೊಟ್ಟೆಗಳು
ಡೈರಿ ಉತ್ಪನ್ನಗಳು (diary product)

ಈ ಜನರು ಹೆಚ್ಚು ಅಪಾಯದಲ್ಲಿದ್ದಾರೆ
ಸಸ್ಯಾಹಾರಿಗಳು ಮತ್ತು ಹಾಲು ಅಥವಾ ಅದರ ಉತ್ಪನ್ನಗಳಿಂದ ದೂರ ಉಳಿಯುವವರು ವಿಟಮಿನ್ ಬಿ 12 ಕೊರತೆಯ ಹೆಚ್ಚು ಅಪಾಯದಲ್ಲಿದ್ದಾರೆ ಎಂದು ಅಧ್ಯಯದಲ್ಲಿ ತಿಳಿದು ಬಂದಿದೆ. ಏಕೆಂದರೆ, ಸಸ್ಯಾಹಾರಿಗಳಿಗೆ, ವಿಟಮಿನ್ ಬಿ 12 ಮೂಲಗಳು ತುಂಬಾ ಕಡಿಮೆ. ಇದರಿಂದ ಅವರಿಗೆ ಅಪಾಯ ಹೆಚ್ಚು. 
 

ವಿಟಮಿನ್ ಬಿ 12 ಕೊರತೆಯ ಇತರ ಲಕ್ಷಣಗಳು
ಯಾವಾಗಲೂ ತಲೆನೋವು ಇರುತ್ತದೆ (headache)
ದುಃಖ, ಅಸಹಾಯಕತೆಯಂತಹ ಖಿನ್ನತೆಯ ಲಕ್ಷಣಗಳು
ಗ್ಯಾಸ್, ಮಲಬದ್ಧತೆ, ಹೊಟ್ಟೆಯುಬ್ಬರದಂತಹ ಹೊಟ್ಟೆಯ ಕೆಟ್ಟ ಲಕ್ಷಣಗಳು
ಆಲೋಚನಾ ಸಾಮರ್ಥ್ಯ ಕಡಿಮೆಯಾಗುವುದು
ಬಾಯಿ ಮತ್ತು ನಾಲಿಗೆಯಲ್ಲಿ ನೋವು ಮತ್ತು ಊತ
ಕೈ ಮತ್ತು ಕಾಲುಗಳಲ್ಲಿ ಚುಚ್ಚುವುದು
ಸ್ನಾಯು ಸೆಳೆತ
ದುರ್ಬಲ ದೃಷ್ಟಿ, ಇತ್ಯಾದಿ.

Latest Videos

click me!