ತೂಕ ಇಳಿಕೆ ಗ್ಯಾರಂಟಿಸಸ್ಯಾಹಾರವು ತೂಕ ಕಡಿಮೆ ಮಾಡುತ್ತದೆ ಎಂದು ನಂಬಲಾಗಿದೆ. ಆಲೂಗಡ್ಡೆ ಚಿಪ್ಸ್‌ನಿಂದಹಿಡಿದು ಕುಕ್ಕೀಸ್‌ವರೆಗೆಮತ್ತು ಕೊಬ್ಬು ಇರುವ ಇನ್ನೂ ಅನೇಕ ವಸ್ತುಗಳು ಸಸ್ಯಾಹಾರದಲ್ಲಿವೆ.ಸಸ್ಯಹಾರದಲ್ಲಿಯೂ ಕರಿದ ಹಲವು ತಿನಿಸುಗಳನ್ನು ಮಾಡಲಾಗುತ್ತದೆ. ಎಣ್ಣೆ ಪದಾರ್ಥಗಳು ತೂಕ ಹೆಚ್ಚಿಸಲೂ ಸಹಾಯ ಮಾಡುತ್ತದೆ. ಆದುದರಿಂದ ಸಸ್ಯಾಹಾರವು ತೂಕ ಕಡಿಮೆ ಮಾಡುತ್ತದೆ ಎಂದು ಹೇಳಲು ಸಾಧ್ಯವಿಲ್ಲ.
ಹಣ್ಣುಗಳಲ್ಲಿ ಹಾನಿಕಾರಕ ಸಕ್ಕರೆ ಅಂಶಸಸ್ಯಾಹಾರದಲ್ಲಿ ಹಣ್ಣು ಮತ್ತು ತರಕಾರಿಗಳನ್ನು ತೆಗೆದುಕೊಳ್ಳುವುದು ಮುಖ್ಯ ಎಂದು ಸೂಚಿಸುತ್ತದೆ. ಹಣ್ಣು ಮತ್ತು ತರಕಾರಿಗಳನ್ನು ನಾರು, ವಿಟಮಿನ್ ಗಳು ಮತ್ತು ಖನಿಜಗಳನ್ನು ಪೂರೈಸಲು ಬಳಸಲಾಗುತ್ತದೆ. ಆದರೆ ಹಣ್ಣುಗಳಲ್ಲಿ ಹೆಚ್ಚಿನ ಪ್ರಮಾಣದ ಸಕ್ಕರೆ ಇದೆ, ಇದು ಆರೋಗ್ಯಕ್ಕೆ ಉತ್ತಮವಲ್ಲ ಎಂದು ಹೇಳಲಾಗುತ್ತದೆ. ಆದರೆ ಅದು ಹಾನಿಕಾರಕವಲ್ಲ.
ಸಕ್ಕರೆಯನ್ನು ಕ್ಯಾಂಡಿಗಳು ಅಥವಾ ಸಿಹಿ ಪದಾರ್ಥಗಳಿಗೆ ಸೇರಿಸಲಾಗುತ್ತದೆ, ಆದರೆ ಹಣ್ಣುಗಳು ನೈಸರ್ಗಿಕವಾಗಿ ಸಕ್ಕರೆಯ ಅಂಶಗಳಾಗಿವೆ, ಇದರಲ್ಲಿ ನಾರಿನಂಶ ಮತ್ತು ಖನಿಜಾಂಶಗಳು ಇರುತ್ತವೆ, ಆದ್ದರಿಂದ ಹಣ್ಣುಗಳು ಹಾನಿಕಾರಕವಲ್ಲ.
ಸಸ್ಯಾಹಾರದಿಂದ ಮಸಲ್ ಬಿಲ್ಡ್ ಮಾಡುವುದು ಕಷ್ಟಮಾಂಸವಿಲ್ಲದೆ ಬಲಿಷ್ಠ ಮಾಂಸಖಂಡಗಳನ್ನು ನಿರ್ಮಿಸಲಾಗದು ಎಂಬುದೂ ಒಂದು ಮಿಥ್ಯ. ಸಸ್ಯಾಹಾರದಲ್ಲಿಯೂ ಸದೃಢವಾದ ದೇಹವನ್ನು ಸೃಷ್ಟಿಸುವ ಅನೇಕ ಅಂಶಗಳಿವೆ. ವಿಟಮಿನ್‌ಗಳು, ಖನಿಜಗಳು ಮತ್ತು ಆಂಟಿ ಆಕ್ಸಿಡೆಂಟ್‌ಗಳ ಜೊತೆಗೆ, ಪ್ರೋಟೀನ್ ಸಸ್ಯಾಹಾರದಲ್ಲಿ ಇರುತ್ತದೆ.
ಆದರೆ ತರಕಾರಿಯನ್ನು ಸೇವಿಸುವಾಗ ಮಸಲ್ ಬಿಲ್ಡ್ ಮಾಡಲು ಬಯಸುವವರು ಒಂದು ಯೋಜನೆ ರೂಪಿಸಬೇಕು. ಸರಿಯಾದ ಡಯಟ್ ಕ್ರಮವನ್ನು ಅನುಸರಿಸುತ್ತಾ ಬಂದರೆ, ಹಂತ ಹಂತವಾಗಿಆಹಾರ ಕ್ರಮ ಅಳವಡಿಸಿಕೊಂಡರೆ ಸ್ನಾಯುಗಳು ಬಲಗೊಳ್ಳುತ್ತವೆ.
ಸೋಯಾ ಪ್ರೋಟೀನು ಹಾನಿಕಾರಕಸೋಯಾದಲ್ಲಿ ಒಂಬತ್ತು ಅಮಿನೋ ಆಮ್ಲಗಳಿವೆ. ಇದರಲ್ಲಿರುವ ಪ್ರೋಟೀನ್ ದೇಹಕ್ಕೆ ಹಾನಿಯುಂಟು ಮಾಡುತ್ತದೆ ಎಂಬ ಗೊಂದಲ ತಪ್ಪು. ಪೂರ್ಣ ಪ್ರೋಟೀನ್‌ಗಾಗಿ ಸೋಯಾವನ್ನು ಬಳಸುವುದು ಮುಖ್ಯ. ಸೋಯಾ ಪದಾರ್ಥಗಳನ್ನು ತಿನ್ನುವ ಮೂಲಕ ಸ್ತನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ.
ಮಕ್ಕಳು ವೇಗನ್ ಆಗುವುದು ಸುರಕ್ಷಿತವಲ್ಲಸಸ್ಯಾಹಾರ ಮಕ್ಕಳಿಗೆ ಹಾನಿಕಾರಕವಲ್ಲ, ಆದರೆ ಅವರು ಸರಿಯಾದ ಪ್ರಮಾಣದಲ್ಲಿ ಖನಿಜಗಳು, ವಿಟಮಿನ್‌ಗಳು ಮತ್ತು ಪ್ರೋಟೀನ್ಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಆದಾಗ್ಯೂ, ಅವರು ಎಷ್ಟು ವಿಟಮಿನ್ ಮತ್ತು ಪ್ರೋಟೀನ್ಗಳನ್ನು ತೆಗೆದು ಕೊಳ್ಳಬೇಕಾಗುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ತುಂಬಾ ಮುಖ್ಯ. ಮಗುವಿನ ಅಗತ್ಯಕ್ಕೆ ತಕ್ಕಂತೆ ಸಮತೋಲಿತ ಆಹಾರ ನೀಡಿ.
ಗರ್ಭಾವಸ್ಥೆಯಲ್ಲಿ ಮಹಿಳೆಯರಿಗೆ ವೆಜ್ ಆಹಾರವು ಸರಿಯಲ್ಲಯೋಜಿತ ಸಸ್ಯಾಹಾರವು ಗರ್ಭಿಣಿ ಮಹಿಳೆಯರ ಪೌಷ್ಟಿಕ ಅಗತ್ಯಗಳನ್ನು ಪೂರೈಸಬಲ್ಲದು. ಉದಾಹರಣೆಗೆ ಗರ್ಭಿಣಿಯರಿಗೆ ಕಬ್ಬಿಣಾಂಶದಅವಶ್ಯಕತೆ ಇದೆ. ಇದನ್ನು ಹೆಚ್ಚಿಸಲು ವಿಟಮಿನ್ ಸಿಯನ್ನು ಸೇರಿಸಬೇಕು. ದ್ವಿದಳ ಧಾನ್ಯಗಳು ಮೊದಲಾದ ಆಹಾರಗಳಿಂದ ಕಬ್ಬಿಣ ಮತ್ತು ವಿಟಮಿನ್‌ಗಳ ಸಂಯೋಜನೆಯನ್ನು ಹೆಚ್ಚಿಸಬಹುದು. ವೆಜ್ ಡಯಟ್ ಗರ್ಭಿಣಿ ಮಹಿಳೆಯರಿಗೆ ತೊಂದರೆ ನೀಡುವುದಿಲ್ಲ
ಸಸ್ಯಾಹಾರ ಎಂದರೆ ಆರೋಗ್ಯಕರ ಆಹಾರವೆಜ್ ತಿನ್ನುವುದೆಂದರೆ ಸಂಪೂರ್ಣ ಆರೋಗ್ಯಕರ ಎಂದು ಸಹ ಹೇಳುವಂತಿಲ್ಲ. ಆಲೂಗಡ್ಡೆ, ಚಿಪ್ಸ್ ಮತ್ತು ಕರಿದ ಪದಾರ್ಥಗಳು ಕೂಡ ವೆಜ್‌ನಲ್ಲಿ ಬರುತ್ತವೆ, ಆದರೆ ಇದು ಆರೋಗ್ಯಕರ ದೇಹಕ್ಕೆ ಒಳ್ಳೆಯದಲ್ಲ. ಕೊಬ್ಬು, ಸಕ್ಕರೆ ಮತ್ತು ಸೋಡಿಯಂ ಇತ್ಯಾದಿಗಳ ಪ್ರಮಾಣನೋಡಿದ ನಂತರವೇ ಆಹಾರ ಕ್ರಮದಲ್ಲಿ ಈ ಅಂಶಗಳನ್ನು ಸೇರಿಸಿಕೊಳ್ಳಬೇಕು. ವೆಜ್ ಹೆಸರಿನಲ್ಲಿ ಏನೇನೋ ಸೇವಿಸುವುದು ಒಳಿತಲ್ಲ.
ವೆಜ್ ತಿಂದರೆ ಹಸಿವು ಜಾಸ್ತಿಸಸ್ಯಾಹಾರದಿಂದ ಹಸಿವು ಜಾಸ್ತಿ ಎನ್ನುತ್ತಾರೆ. ಸಸ್ಯಾಹಾರದಲ್ಲಿರುವ ನಾರಿನಂಶಹೊಟ್ಟೆಯನ್ನು ತುಂಬಿಸುತ್ತದೆ, ಫೈಬರ್ ಯುಕ್ತ ಆಹಾರವನ್ನು ತಿಂದರೆ ಮತ್ತೆ ಹಸಿವೆಯಾಗುವುದಿಲ್ಲ. ಅಲ್ಲದೇ ರಕ್ತದಲ್ಲಿರುವ ಸಕ್ಕರೆಪ್ರಮಾಣವನ್ನು ತಡೆಯಲು ಇದು ಸಹಾಯ ಮಾಡುತ್ತದೆ. ಫೈಬರ್, ಕೊಬ್ಬು ಮತ್ತು ಪ್ರೋಟೀನ್‌ಗಳು ಸಾಕಷ್ಟು ಪ್ರಮಾಣದಲ್ಲಿ ದೊರೆಯದಿದ್ದಾಗ ಹಸಿವೆಯಿಂದ ಕೂಡಿರುತ್ತವೆ.