ಮೈಕ್ರೋವೇವ್ ಉತ್ತಮವಾಗಿ ಕಾರ್ಯ ನಿರ್ವಹಿಸಲು ಇಲ್ಲಿವೆ ಮೈಂಟೈನೆನ್ಸ್ ಟಿಪ್ಸ್

First Published | Mar 22, 2021, 6:06 PM IST

ಅಡುಗೆ ಮಾಡಲು ಇಷ್ಟಪಡುತ್ತೀರಾ, ಬೇರೆ ಬೇರೆ ರೀತಿಯ ಅಡುಗೆ ಬೇಗನೆ ಮಾಡುವಂತಾಗಲು ಮೈಕ್ರೋವೇವ್ ಸಹಾಯ ಮಾಡುತ್ತದೆ. ಅಡುಗೆ ಮನೆಯಲ್ಲಿ ಮೈಕ್ರೋವೇವ್ಗಳು ಕೆಲಸವನ್ನು ಸುಲಭಗೊಳಿಸುತ್ತವೆ. ಕಾಲಕ್ರಮೇಣ ಅವುಗಳ ಆರೈಕೆ ಮಾಡುವುದು ಅಗತ್ಯ. ಇಲ್ಲವಾದರೆ ಅದು ಬೇಗನೆ ಹಾಳಾಗುತ್ತದೆ. ಆದುದರಿಂದ ಅವುಗಳ ಆರೈಕೆ ಹೇಗೆ ಮಾಡೋದು ತಿಳಿಯಿರಿ.. 

ಮೈಕ್ರೋವೇವ್ ಆರೋಗ್ಯ ಕಾಪಾಡಲು ಈ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿ....
ಮೈಕ್ರೋವೇವ್ ಬಾಗಿಲನ್ನು ಆರಾಮವಾಗಿ ಮುಚ್ಚಿ ಮೈಕ್ರೋವೇವ್ ಬಾಗಿಲು ತುಂಬಾ ಸೂಕ್ಷ್ಮವಾಗಿರುತ್ತದೆ, ಜೋರಾಗಿ ಮುಚ್ಚಿದಾಗ ಅದು ಮುರಿಯಬಹುದು. ಅಲ್ಲದೆ, ಮೈಕ್ರೋವೇವ್ ಅನ್ನು ಚಲಾಯಿಸುವಾಗ ಬಾಗಿಲು ತೆರೆದರೆ ಅದು ಸ್ಫೋಟಗೊಳ್ಳುವ ಸಾಧ್ಯತೆ ಇರುತ್ತದೆ.
Tap to resize

ಎಂದಿಗೂ ಮೈಕ್ರೋವೇವ್ ಏನು ಇಡದೆ ಬಿಸಿ ಮಾಡಬೇಡಿ. ಇದು ಅತಿಬಿಸಿಗೆ ಕಾರಣವಾಗುತ್ತದೆ ಮತ್ತು ಮೈಕ್ರೋವೇವ್ನ ಮ್ಯಾಗ್ನೆಟ್ರಾನ್ನಲ್ಲಿ ತೊಂದರೆಯನ್ನು ಉಂಟುಮಾಡಬಹುದು.
ಮೈಕ್ರೋವೇವ್ ಮ್ಯಾಗ್ನೆಟ್ರಾನ್ ಅನ್ನು ಹಾಳಾದರೆ ಆಹಾರವನ್ನು ಬಿಸಿ ಮಾಡಲು ಸಾಧ್ಯವಿಲ್ಲ, ಆದುದರಿಂದ ಬಳಕೆ ಮಾಡುವಾಗ ಉತ್ತಮವಾಗಿ ಬಳಸಿ
ಸುರಕ್ಷಿತ ಡಿಶ್ ವೇರ್ ಬಳಸಿ - ಮೈಕ್ರೋವೇವ್ ಒಳಗೆ ಮೈಕ್ರೋವೇವ್ ಸುರಕ್ಷಿತವಾಗಿರುವ ಪಾತ್ರೆಗಳನ್ನು ಮಾತ್ರ ಬಳಸಿ. ಮೈಕ್ರೋವೇವ್ ಒಳಗೆ ಯಾವುದೇ ರೀತಿಯ ಲೋಹ ಅಥವಾ ಚಿನ್ನ-ಬೆಳ್ಳಿ ಪ್ಲೇಟಿಂಗ್ ಪಾತ್ರೆಗಳನ್ನು ಬಳಸಬೇಡಿ. ಅನೇಕ ಗಾಜಿನ ಪಾತ್ರೆಗಳು ಸಹ ಮೈಕ್ರೋವೇವ್‌ಗೆ ಸುರಕ್ಷಿತವಲ್ಲ.
ಮೈಕ್ರೋವೇವ್‌ನಲ್ಲಿ ಇದ್ದಿಲು ಫಿಲ್ಟರ್‌ಗಳಿದ್ದರೆ-ಮೈಕ್ರೋವೇವ್ ನಲ್ಲಿ ಇದ್ದಿಲು ಫಿಲ್ಟರ್‌ಗಳು ಮತ್ತು ವೆಂಟಿಲೇಟರ್‌ಗಳನ್ನು ಸಮಯಕ್ಕೆ ಸರಿಯಾಗಿ ಬದಲಾಯಿಸುತ್ತಲೇ ಇರಿ, ಪ್ರತಿ ತಿಂಗಳು ಅದನ್ನು ಪರಿಶೀಲಿಸಿ. ಗ್ರೀಸ್ ಅದರ ಮೇಲೆ ಶೇಖರವಾಗುತ್ತಿದ್ದರೆ, ಕೂಡಲೇ ಬದಲಾಯಿಸಿ. ಅಲ್ಲದೇ ಮೈಕ್ರೋವೇವ್ ವೆಂಟ್ ಅನ್ನು ಸರಿಯಾದ ಸಮಯಕ್ಕೆ ಸ್ವಚ್ಛಗೊಳಿಸಿ ಮೈಕ್ರೋವೇವ್ ಒಳಗೆ ಗಾಳಿ, ಬೆಳಕು ಸರಿಯಾಗಿ ಹೋಗುವುದರಿಂದ ಮೈಕ್ರೋವೇವ್‌ನಲ್ಲಿ ಯಾವುದೇ ಕೆಟ್ಟ ವಾಸನೆ ಬರುವುದಿಲ್ಲ.
ಮೈಕ್ರೋವೇವ್ಒಳಭಾಗವು ಹೆಚ್ಚು ಬಿಸಿಯಾಗುತ್ತದೆ . ಇದರ ಜೊತೆಗೆ ಆಹಾರ ಸುಡುವ ಮತ್ತು ಬೆಂಕಿ ಹಿಡಿಯುವ ಸಾಧ್ಯತೆಯೂ ಇದೆ. ಮೈಕ್ರೋವೇವ್ ಅನ್ನು ಸುಲಭವಾಗಿ ಸ್ವಚ್ಛಗೊಳಿಸಬಹುದಾದ ಸ್ಟೈನ್ ಲೆಸ್ ಸ್ಟೀಲ್ ಇಂಟೀರಿಯರ್ ಇರುವ ಮೈಕ್ರೋವೇವ್ ಅನ್ನು ಖರೀದಿಸಿ.
ಮೈಕ್ರೋವೇವ್ ನ ಒಳಭಾಗವನ್ನು ಈ ಕೆಳಗಿನಂತೆ ಸ್ವಚ್ಛಗೊಳಿಸಿಮೈಕ್ರೋವೇವ್ ಅನ್ನು ನೀರು ಮತ್ತು ಕ್ಲೀನರ್ ಗಳಿಂದ ಒಳ ಮತ್ತು ಹೊರಭಾಗದಿಂದ ಸ್ವಚ್ಛವಾಗಿಡಿ.
ಒಂದು ಬೌಲ್‌ನಲ್ಲಿ 4 ಟೀ ಚಮಚ ವಿನೆಗರ್ ಅನ್ನು 2 ಕಪ್ ನೀರಿನೊಂದಿಗೆ ಬೆರೆಸಿ ಮೈಕ್ರೋವೇವ್ ಒಳಗೆ ಐದು ನಿಮಿಷ ಬಿಸಿ ಮಾಡಿ. ನೀರು ಬೀಳದಂತೆ ನೀರಿನಲ್ಲಿ ಒಂದು ಟೂತ್ ಪಿಕ್ ಹಾಕಿ.
ಮೈಕ್ರೋವೇವ್ ಅನ್ನು ಹಬೆಯ ಮೂಲಕ ಸ್ವಚ್ಛಗೊಳಿಸಲಾಗುತ್ತದೆ. 3-4 ನಿಮಿಷಗಳ ಕಾಲ ಬೌಲ್ ಇರಲಿ. ನಂತರ ಮೈಕ್ರೋವೇವ್ ಅನ್ನು ಬಟ್ಟೆ ಅಥವಾ ಸ್ಪಾಂಜ್ ನಿಂದ ಒರೆಸಿ.

Latest Videos

click me!