ಈ ಹಾಲು ಕುಡಿದ್ರೆ ಕ್ಯಾನ್ಸರ್ ದೂರ, ಹೆಚ್ಚುತ್ತೆ ಇಮ್ಯೂನ್ ಸಿಸ್ಟಮ್, ಆರೋಗ್ಯಕ್ಕೆ ಜೈ ಎನ್ನಿ!

First Published | Feb 7, 2024, 7:00 AM IST

ವಾಲ್ನಟ್ ನೀವು ಬೇರೆ ಬೇರೆ ರೀತಿಯಲ್ಲಿ ತಿಂದಿರಬಹುದು. ಆದರೆ, ಯಾವತ್ತಾದರೂ ವಾಲ್ನಟ್ ಹಾಲು ಕುಡಿಯೋದರಿಂದ ಏನೆಲ್ಲಾ ಪ್ರಯೋಜನಗಳಿವೆ ಅನ್ನೋದನ್ನು ತಿಳಿಯೋಣ. 
 

ಜನರು ಆರೋಗ್ಯವಾಗಿರಲು ಡ್ರೈ ಫ್ರುಟ್ಸ್ (dry fruits) ಸೇವಿಸುತ್ತಾರೆ. ಅವುಗಳಲ್ಲಿ ವಾಲ್ ನಟ್  ಕೂಡ ಒಂದು. ಇದು ರೋಗನಿರೋಧಕ ಶಕ್ತಿಯನ್ನು (Immunity Power) ಹೆಚ್ಚಿಸುವ ಮೂಲಕ ಗಂಭೀರ ಕಾಯಿಲೆಗಳಿಂದ ನಮ್ಮನ್ನು ರಕ್ಷಿಸುತ್ತದೆ. ಆದರೆ, ವಾಲ್ನಟ್ ಹಾಲು ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ ಎಂದು ನಿಮಗೆ ತಿಳಿದಿದೆಯೇ? ಹೌದು, ವಾಲ್ನಟ್ ಹಾಲು ಕುಡಿಯುವುದರಿಂದ ದುರ್ಬಲ ಮೂಳೆಗಳಿಗೆ ಜೀವ ಬರುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹ ಸಹಾಯ ಮಾಡುತ್ತದೆ.

ವಾಲ್ನಟ್ (walnut milk) ಹಾಲು ಸಸ್ಯ ಆಧಾರಿತ ಹಾಲಿಗೆ ಪರ್ಯಾಯ, ಇದನ್ನು ವಾಲ್ನಟ್ ಮತ್ತು ನೀರಿನಿಂದ ತಯಾರಿಸಲಾಗುತ್ತದೆ. ಹಾಲು ಕುಡಿಯಲು ಇಷ್ಟಪಡದವರಿಗೆ ಅಥವಾ ಲ್ಯಾಕ್ಟೋಸ್ (Lactose) ಅಸಹಿಷ್ಣುತೆ ಇರುವವರಿಗೆ ವಾಲ್ನಟ್ ಹಾಲು ಉತ್ತಮ ಆಯ್ಕೆ. ವಾಲ್ನಟ್ ಹಾಲಿನಿಂದ ಏನೆಲ್ಲ ಪ್ರಯೋಜನಗಳಿವೆ ಅನ್ನೋದನ್ನು ತಿಳಿಯೋಣ. 

Tap to resize

ರಕ್ತದ ಸಕ್ಕರೆಯನ್ನು ನಿಯಂತ್ರಿಸುತ್ತದೆ (Control Blood Sugar): ವಾಲ್ನಟ್ ಹಾಲಿನಲ್ಲಿ ಫೈಬರ್ (Fibre) ಸಮೃದ್ಧವಾಗಿದೆ ಮತ್ತು ಇದು ಕಡಿಮೆ ಗ್ಲೈಸೆಮಿಕ್ ಆಹಾರ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಇದು ಅತ್ಯುತ್ತಮ ಆಹಾರ ಪದಾರ್ಥಗಳಲ್ಲಿ ಒಂದಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಹಾಲಿನಲ್ಲಿ ವಾಲ್ನಟ್ ಹಾಕಿ ಸೇವಿಸೋದು ನಿಮ್ಮ ದಿನದ ಆರೋಗ್ಯಕರ ಆರಂಭಕ್ಕೆ ಉತ್ತಮ ಆಯ್ಕೆಯಾಗಿದೆ.  
 

ಜ್ಞಾಪಕ ಶಕ್ತಿಯನ್ನು (Memory Power) ಹೆಚ್ಚಿಸುತ್ತೆ: ವಾಲ್ನಟ್ ಒಂದು ಒಣ ಹಣ್ಣು, ಇದು ಮೆದುಳಿನ ಶಕ್ತಿಯನ್ನು (Brain Power) ಹೆಚ್ಚಿಸಲು ಸಹಾಯ ಮಾಡುತ್ತದೆ. ಪೋಷಕರು ತಮ್ಮ ಮಕ್ಕಳ ಜ್ಞಾಪಕ ಶಕ್ತಿಯನ್ನು (memory power)ಹೆಚ್ಚಿಸಲು ಬಾಲ್ಯದಿಂದಲೂ ವಾಲ್ನಟ್ಗಳನ್ನು ತಿನ್ನಿಸುತ್ತಾರೆ. ವಾಲ್ನಟ್ ಹಾಲು ನಮ್ಮ ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆ. ನೀವು ವಿಷಯಗಳನ್ನು ಬೇಗನೆ ಮರೆತರೆ ನೀವು ವಾಲ್ನಟ್ ಹಾಲನ್ನು ಸೇವಿಸಬೇಕು. 
 

ಮೂಳೆಗಳನ್ನು (Bone) ಬಲಪಡಿಸುತ್ತದೆ: ಹಾಲಿನಲ್ಲಿ ಕ್ಯಾಲ್ಸಿಯಂ ಹೇರಳವಾಗಿ ಕಂಡುಬರುತ್ತದೆ. ವಾಲ್ನಟ್ ಹಾಲು ಸಾಮಾನ್ಯ ಹಾಲಿಗಿಂತ ಉತ್ತಮವಾಗಿದೆ ಮತ್ತು ಇದು ನಮ್ಮ ಮೂಳೆಗಳನ್ನು (strong bone) ಬಲಪಡಿಸುತ್ತದೆ. ವಾಲ್ನಟ್ ಹಾಲಿನ ಸೇವನೆಯು ಕೀಲು ನೋವನ್ನು ಸಹ ಕಡಿಮೆ ಮಾಡುತ್ತದೆ. 

ಮಧುಮೇಹದಲ್ಲಿ (Diabetic) ಪ್ರಯೋಜನಕಾರಿ: ಮಧುಮೇಹವು (diabetes) ಗುಣಪಡಿಸಲಾಗದ ಕಾಯಿಲೆ. ನಿಮ್ಮ ಆಹಾರವನ್ನು ಬದಲಾಯಿಸುವ ಮೂಲಕ ಇದನ್ನು ಸ್ವಲ್ಪ ಮಟ್ಟಿಗೆ ನಿಯಂತ್ರಿಸಬಹುದು. ವಾಲ್ನಟ್ ಹಾಲು ಮಧುಮೇಹಕ್ಕೆ ತುಂಬಾ ಪ್ರಯೋಜನಕಾರಿ. ಇದರ ಅನೇಕ ಔಷಧೀಯ ಗುಣಗಳು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುತ್ತವೆ. 

ಜೀರ್ಣಾಂಗ ವ್ಯವಸ್ಥೆಯನ್ನು (Digestive System) ಸುಧಾರಿಸುತ್ತದೆ: ಈ ಹಾಲಿನಲ್ಲಿರುವ ಹೆಚ್ಚಿನ ಫೈಬರ್ ಅಂಶವು ಕರುಳಿನ ಚಲನೆಗೆ ಸಹಾಯ ಮಾಡುತ್ತದೆ, ಇದು ಮಲಬದ್ಧತೆಯನ್ನು ನಿವಾರಿಸುತ್ತದೆ ಮತ್ತು ಇತರ ಜೀರ್ಣಕಾರಿ ಸಮಸ್ಯೆಗಳನ್ನು (digestion problems) ನಿವಾರಿಸುತ್ತದೆ. ಆಹಾರದ ಫೈಬರ್ ಕರುಳನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ

ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ: ವಾಲ್ನಟ್ ಹಾಲು ಕ್ಯಾನ್ಸರ್‌ನಂಥ ಮಾರಣಾಂತಿಕ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ವಾಲ್‌ನಟ್ಸ್ ಕ್ಯಾನ್ಸರ್ ವಿರೋಧಿ ಗುಣಲಕ್ಷಣಗಳನ್ನು ಹೊಂದಿವೆ ಮತ್ತು ಕ್ಯಾನ್ಸರ್ ಕೋಶಗಳು ಬೆಳೆಯದಂತೆ ತಡೆಯುತ್ತವೆ.

ಹೃದಯಕ್ಕೆ ಪ್ರಯೋಜನಕಾರಿ: ನೀವು ಹೃದ್ರೋಗದಿಂದ ಬಳಲುತ್ತಿದ್ದರೆ ವಾಲ್ನಟ್ ಹಾಲು ನಿಮಗೆ ಪ್ರಯೋಜನಕಾರಿ. ವಾಲ್‌ನಟ್ಸ್ ಹೃದಯ-ರಕ್ಷಣಾತ್ಮಕ ಅಂಶಗಳನ್ನು ಹೊಂದಿರುತ್ತವೆ, ಇದು ಹೃದಯದ ಆರೋಗ್ಯಕ್ಕೆ ಒಳ್ಳೆಯದು. ವಾಲ್ನಟ್ ಹಾಲು ರಕ್ತದೊತ್ತಡವನ್ನು ಸಹ ನಿಯಂತ್ರಿಸುತ್ತದೆ. ನೀವು ಇದನ್ನು ನಿಯಮಿತವಾಗಿ ಬಳಸಿದರೆ ರೋಗಗಳ ಅಪಾಯ ತಪ್ಪಿಸಬಹುದು.  

Latest Videos

click me!