ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ ಎಂದಿಗೂ ವಯಸ್ಸಾಗದಂತೆ ಮಾಡುವ ಜೀವನಾಮೃತ

First Published | Feb 5, 2024, 5:19 PM IST

ವಿಜ್ಞಾನಿಗಳು ಒಂದು ಜೀವನಾಮೃತವನ್ನು ಕಂಡು ಹಿಡಿದಿದ್ದಾರೆ. ಅದನ್ನು ಬಳಸಿದ್ರೆ ಸೆಲ್ಸ್ ಡ್ರೈ ಆಗೋದೆ ಇಲ್ಲವಂತೆ. ಅಂದರೆ ಮನುಷ್ಯ ಯಾವಾಗಲೂ ಯಂಗ್ ಆಗಿರಲು ಇದು ಸಹಾಯ ಮಾಡುತ್ತದೆ. 
 

ವಯಸ್ಸಾಗುವಿಕೆ (ageing) ಪ್ರಕೃತಿಯ ನಿಯಮ. ನಾವು ವಯಸ್ಸಾದಂತೆ, ನಮ್ಮ ಮುಖದ ಮೇಲೆ ಸುಕ್ಕುಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ರೋಗಗಳು ದಾಳಿ ಮಾಡಲು ಪ್ರಾರಂಭಿಸುತ್ತಾರೆ. ಜೀವಕೋಶಗಳು (Cells) ಒಣಗಲು ಪ್ರಾರಂಭಿಸುತ್ತವೆ. ಆದರೆ ಇನ್ನು ಮುಂದೆ ಅದನ್ನು ತಡೆಯಬಹುದು. ಯಾಕಂದ್ರೆ ವಿಜ್ಞಾನಿಗಳು ತಾವು 'ಜೀವನದ ಅಮೃತ'ವನ್ನು ಕಂಡುಕೊಂಡಿದ್ದೇವೆ ಎಂದು ಹೇಳಿದ್ದಾರೆ. ಈಗ ಒಂದೇ ಚಿಕಿತ್ಸೆಯ (Treatment) ನಂತರ, ದೇಹವು ಎಷ್ಟು ಶಕ್ತಿಯನ್ನು ಪಡೆಯುತ್ತದೆ ಎಂದರೆ ಜೀವಕೋಶಗಳು ಎಂದಿಗೂ ಒಣಗುವುದಿಲ್ಲ(cells never get dry). ಇದರಿಂದ ದೇಹಕ್ಕೆ ಯಾವ ರೋಗವೂ ಅಂಟಿಕೊಳ್ಳೋದಿಲ್ಲ. ಜೊತೆಗೆ ನೀವು ಯಂಗ್ (Young) ಆಗಿರುವಿರಿ. 
 

ನ್ಯೂಯಾರ್ಕ್ನ ಕೋಲ್ಡ್ ಸ್ಪ್ರಿಂಗ್ ಹಾರ್ಬರ್ ಲ್ಯಾಬೊರೇಟರಿಯ ಸಂಶೋಧಕರು ಬಿಳಿ ರಕ್ತ ಕಣವನ್ನು ಮರುಪ್ರೊಗ್ರಾಮ್ ಮಾಡಲು ಒಂದು ಮಾರ್ಗವನ್ನು ಕಂಡುಹಿಡಿದಿದ್ದಾರೆ ಎಂದು ಮಿರರ್ ವರದಿ ಮಾಡಿದೆ. ಅವುಗಳನ್ನು ಟಿ-ಸೆಲ್ (T Cell) ಎಂದು ಹೆಸರಿಸಲಾಗಿದೆ. ಸಾಮಾನ್ಯವಾಗಿ, ನಮ್ಮ ದೇಹದಲ್ಲಿ ಟಿ ಸೆಲ್ಸ್ ಹಾಕಿದರೆ, ಅದರಿಂದ ರೋಗನಿರೋಧಕ ಶಕ್ತಿ (immunity power) ಸುಧಾರಿಸುತ್ತವೆ, ಇದರಿಂದಾಗಿ ನಮ್ಮ ದೇಹವು ರೋಗಗಳೊಂದಿಗೆ ಹೋರಾಡುತ್ತದೆ.   
 

Tap to resize

ದೇಹದ ತೂಕವನ್ನು ಕಡಿಮೆ (weight loss) ಮಾಡುವುದು ಅಥವಾ ಜೀರ್ಣಕ್ರಿಯೆಯನ್ನು (Digestive System) ಸುಧಾರಿಸುವಲ್ಲಿ, ಈ ಟಿ-ಸೆಲ್ ಯಾವಾಗಲೂ ಉಪಯುಕ್ತ. ಇದು ಮಾತ್ರವಲ್ಲ, ಅವು ಅನೇಕ ರೀತಿಯ ರೋಗಗಳಿಗೆ ಕಾರಣವಾದ ಸಂವೇದನಾಶೀಲ ಕೋಶಗಳ ಮೇಲೂ ದಾಳಿ ಮಾಡುತ್ತವೆ. ನಂತರ ನಾವು ನಮ್ಮ ಜೀವನದುದ್ದಕ್ಕೂ ಅದರೊಂದಿಗೆ ಹೋರಾಡುತ್ತೇವೆ. ಆದರೆ ವಯಸ್ಸಾದಂತೆ, ವಯಸ್ಸಾದ ಜೀವಕೋಶಗಳು ನಮ್ಮ ದೇಹದಲ್ಲಿ ಪುನರಾವರ್ತನೆಯಾಗುವುದನ್ನು ಮತ್ತು ಬೆಳೆಯುವುದನ್ನು ನಿಲ್ಲಿಸುತ್ತವೆ. ಇದರ ನಂತರವೇ, ದೇಹದ ಅವನತಿ ಪ್ರಾರಂಭವಾಗುತ್ತದೆ. ಊತ ಪ್ರಾರಂಭವಾಗುತ್ತದೆ ಮತ್ತು ರೋಗಗಳು ಸುತ್ತುವರಿಯುತ್ತವೆ. 
 

ಇಲಿಗಳ ಮೇಲೆ ಪ್ರಯೋಗ, ಫಲಿತಾಂಶಗಳು ಆಘಾತಕಾರಿ
ವಿಜ್ಞಾನಿಗಳು ಈ ಟಿ-ಸೆಲ್ ಗಳನ್ನು ಸಿಎಆರ್ (ಚಿಮೆರಿಕ್ ಆಂಟಿಜೆನ್ ರಿಸೆಪ್ಟರ್) ಟಿ-ಕೋಶಗಳಾಗಿ ಮಾರ್ಪಡಿಸಿದ್ದಾರೆ, ಇದು ಈ ವಯಸ್ಸಾದ ಕೋಶಗಳ ಮೇಲೆ ದಾಳಿ ಮಾಡುತ್ತದೆ ಮತ್ತು ಅವುಗಳನ್ನು ಸರಿಪಡಿಸುತ್ತದೆ. ಮೊದಲ ಪ್ರಯೋಗವನ್ನು ಇಲಿಗಳ ಮೇಲೆ ಮಾಡಲಾಯಿತು. ಅದರ ಫಲಿತಾಂಶ ಮಾತ್ರ ಶಾಕಿಂಗ್ ಆಗಿತ್ತು.

ನೇಚರ್ ಏಜಿಂಗ್ ಜರ್ನಲ್‌ನಲ್ಲಿ (nature ageing journal) ಪ್ರಕಟವಾದ ಅಧ್ಯಯನದ ಪ್ರಕಾರ, ಈ ಟಿ ಸೆಲ್ ಗಳನ್ನು ನೀಡಿದ ಬಳಿಕ ಇಲಿಗಳು (Rats) ಆರೋಗ್ಯಕರ ಜೀವನವನ್ನು (Healthy Life) ನಡೆಸಿದವು. ಅದರ ದೇಹದ ತೂಕ ಕಡಿಮೆಯಾಯಿತು. ಜೀರ್ಣಕ್ರಿಯೆ ಉತ್ತಮವಾಯಿತು. ದೇಹವು ಸಹ ಸಕ್ಕರೆಯನ್ನು (Sugar) ಚೆನ್ನಾಗಿ ನಿಯಂತ್ರಿಸಲು ಪ್ರಾರಂಭಿಸಿತು. ಪರಿಣಾಮವಾಗಿ, ಇಲಿಗಳ ದೇಹವು ಎಳೆಯ ಇಲಿಗಳಂತೆ ಕಾರ್ಯನಿರ್ವಹಿಸಲು ಪ್ರಾರಂಭಿಸಿತು.

ವಯಸ್ಸಾದ ಇಲಿಗಳು ಮತ್ತೆ ಚಿಕ್ಕವರಂತೆ ಕಾಣುತ್ತಿದ್ದವು
ಇಲಿಗಳಿಗೆ ಟಿ ಸೆಲ್ ನೀಡಿದ ಬಳಿಕ ಅವು ಯಂಗ್ ಆಗಿ ಕಾಣಲು ಆರಂಭಿಸಿದವು. ಅವು ಮತ್ತೆ ಚಿಕ್ಕವರಂತೆ ಕಾಣುತ್ತವೆ ಎಂದು ಸಹಾಯಕ ಪ್ರಾಧ್ಯಾಪಕ ಮತ್ತು ಸಂಶೋಧನಾ ತಂಡದ ಸದಸ್ಯೆ ಕೊರಿನ್ನಾ ಅಮೋರ್ ವೇಗಾಸ್ ಹೇಳಿದರು. ನಾವು ಟಿ ಸೆಲ್ ಗಳನ್ನು ಎಳೆಯ ಇಲಿಗಳಿಗೆ ನೀಡಿದರೆ, ಅವುಗಳ ಜೀವಿತಾವಧಿ (Life Time) ಕಡಿಮೆಯಾಗುತ್ತದೆ. ಇಲ್ಲಿಯವರೆಗೆ ಅಂತಹ ಯಾವುದೇ ಚಿಕಿತ್ಸೆ ಇರಲಿಲ್ಲ. 
 

ಇದು ಅಚ್ಚರಿಯ ಚಿಕಿತ್ಸೆಯಾಗಲಿದೆ ಮತ್ತು ಖಂಡಿತವಾಗಿಯೂ ಕೇವಲ ಒಂದು ಚಿಕಿತ್ಸೆಯಲ್ಲಿ ನೀವು ಯಂಗ್ ಆಗಿ ಕಾಣುವಿರಿ. ವಿಶೇಷವೆಂದರೆ ಪ್ರತಿದಿನ ಔಷಧಿಗಳನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ, ಏಕೆಂದರೆ ಟಿ-ಸೆಲ್ಸ್ ಜೀವಿತಾವಧಿ ಬಹಳ ದೀರ್ಘವಾಗಿದೆ. ಅದು ತನ್ನ ಆಹಾರವನ್ನು ದೇಹದಿಂದಲೇ ತೆಗೆದುಕೊಳ್ಳುತ್ತದೆ. ಇದು ಬೊಜ್ಜು ಮತ್ತು ಸಕ್ಕರೆ ರೋಗಿಗಳಿಗೆ ರಾಮಬಾಣವಾಗಬಹುದು. ಟಿ ಸೆಲ್ಸ್ ಮೆಮೊರಿಯನ್ನು ಅಭಿವೃದ್ಧಿಪಡಿಸುವ ಮತ್ತು ನಿಮ್ಮ ದೇಹದಲ್ಲಿ ಶಕ್ತಿ ದೀರ್ಘಕಾಲ ಉಳಿಯುವಂತೆ ಮಾಡುತ್ತದೆ. 

Latest Videos

click me!