ಅನೇಕ ಬಾರಿ ಸಮಯದ ಕೊರತೆಯಿಂದಾಗಿ, ಕೆಲಸದಲ್ಲಿ ಬ್ಯುಸಿಯಾಗಿರೋದರಿಂದ ಅಥವಾ ಶೌಚಾಲಯದ ಕೊರತೆಯಿಂದಾಗಿ, ಜನರು ಆಗಾಗ್ಗೆ ಮೂತ್ರವನ್ನು (holding pee) ದೀರ್ಘಕಾಲದವರೆಗೆ ತಡೆದಿರುತ್ತಾರೆ. ನೀವು ಸಹ ಇದನ್ನು ಮಾಡಿದರೆ, ಇಂದಿನಿಂದ ಆ ಅಭ್ಯಾಸ ಬಿಟ್ಟು ಬಿಡೋದು ಉತ್ತಮ. ಏಕೆಂದರೆ ಇದು ನಿಮ್ಮ ಮೂತ್ರಪಿಂಡಗಳಿಗೆ ಮಾತ್ರವಲ್ಲದೆ ದೇಹದ ಇತರ ಭಾಗಗಳಿಗೂ ದೊಡ್ಡ ಹಾನಿಯನ್ನುಂಟು ಮಾಡುತ್ತದೆ.