ತಾಯಿಯಾಗೋದು ಅಂದ್ರೆ, ಪ್ರತಿ ಹೆಣ್ಣು ಮಗುವಿಗೂ ಅತ್ಯಂತ ಖುಷಿ ಕೊಡುವ ಸಂದರ್ಭವಾಗಿದೆ. ಆದರೆ ಮಗುವನ್ನು ಬೆಳೆಸೋದು ಮಾತ್ರ ಅಂದುಕೊಂಡಷ್ಟು ಸುಲಭ ಅಲ್ಲ. ಯಾಕಂದ್ರೆ ಈ ಸಂದರ್ಭದಲ್ಲಿ ಹೊಸ ತಾಯಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹೆಚ್ಚಾಗಿ ಮಕ್ಕಳು ರಾತ್ರಿಯಲ್ಲಿ ಎಚ್ಚರಗೊಳ್ಳುತ್ತಾರೆ, ಅಂತಹ ಪರಿಸ್ಥಿತಿಯಲ್ಲಿ, ತಾಯಿ ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಮಗುವನ್ನು ರಾತ್ರಿಯಲ್ಲಿ ಮಲಗಿಸಲು 'ಡ್ರೀಮ್ ಫೀಡಿಂಗ್' (dream feeding) ಉತ್ತಮ ಆಯ್ಕೆಯಾಗಿದೆ. ಅದರ ಬಗ್ಗೆ ತಿಳಿದುಕೊಳ್ಳೋಣ ...
ಮಗುವಿನ ಬಗ್ಗೆ ಈಗಷ್ಟೇ ತಾಯಿಯಾದವಳ ಮನಸ್ಸಿನಲ್ಲಿ ಅನೇಕ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಮಗುವಿಗೆ ಸ್ನಾನ ಮಾಡುವುದರಿಂದ ಹಿಡಿದು ಸ್ತನ್ಯಪಾನ ಮಾಡುವವರೆಗೆ, ಹೊಸ ತಾಯಿ ಅನೇಕ ಸವಾಲುಗಳನ್ನು (challenges of new mom) ಎದುರಿಸಬೇಕಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ರಾತ್ರಿಯಲ್ಲಿ ಮಗುವಿಗೆ ಹಾಲುಣಿಸುವುದು ತುಂಬಾನೇ ಕಷ್ಟವಾಗುತ್ತೆ. ಕೆಲವೊಮ್ಮೆ ನವಜಾತ ಶಿಶುಗಳು ರಾತ್ರಿಯಲ್ಲಿ ಎಚ್ಚರಗೊಳ್ಳುತ್ತವೆ, ಆ ಸಂದರ್ಭದಲ್ಲಿ ತಾಯಿ ಮಗುವಿಗೆ ಹಾಲುಣಿಸುತ್ತಾಳೆ.
ಮಗುವಿಗೆ ರಾತ್ರಿಯಲ್ಲಿ ಶಾಂತಿಯುತವಾಗಿ ಮಲಗಲು ಸಹಾಯ ಮಾಡಲು 'ಡ್ರೀಮ್ ಫೀಡ್' ಉತ್ತಮ ಆಯ್ಕೆಯಾಗಿದೆ. ಏನಿದು ಡ್ರೀಮ್ ಫೀಡಿಂಗ್?, ಅದನ್ನು ಹೇಗೆ ಮಾಡಬೇಕು ಮತ್ತು ಅದನ್ನು ಯಾವಾಗ ಮಾಡಬೇಕು ಎಂದು ತಿಳಿಯೋಣ. ಇದರಿಂದ ಮಗುವಿಗೆ ಮತ್ತು ತಾಯಿಗೆ ಯಾವ ರೀತಿ ಪ್ರಯೋಜನ ಆಗುತ್ತೆ ಅನ್ನೋದನ್ನು ಸಹ ತಿಳಿಯೋಣ.
ಡ್ರೀಮ್ ಫೀಡಿಂಗ್ ಎಂದರೇನು?: ಡ್ರೀಮ್ ಫೀಡಿಂಗ್ ಎಂದರೆ ನಿದ್ರೆಯಲ್ಲಿ ಮಗುವಿಗೆ ಸ್ತನ್ಯಪಾನ (breast feeding) ಮಾಡುವುದು. ಡ್ರೀಮ್ ಫೀಡ್ ಅನ್ನು ಸಾಮಾನ್ಯವಾಗಿ ರಾತ್ರಿ 10 ಅಥವಾ 11 ಗಂಟೆಗೆ ಮಲಗುವ ಮೊದಲು ಮಾಡಬೇಕು, ಇದು ಮಗುವಿನ ಹೊಟ್ಟೆಯನ್ನು ತುಂಬಿಸುತ್ತದೆ ಮತ್ತು ಮಗು ದೀರ್ಘಕಾಲ ಶಾಂತಿಯುತವಾಗಿ ಮಲಗಬಹುದು.
ಡ್ರೀಮ್ ಫೀಡಿಂಗ್ ಹೇಗೆ ಮಾಡುವುದು?: ಡ್ರೀಮ್ ಫೀಡಿಂಗ್ ಮಾಡಲು, ಮಗುವನ್ನು ಪ್ರತಿದಿನ ಒಂದೇ ಸಮಯದಲ್ಲಿ ಮಲಗಿಸಿ. ರಾತ್ರಿ 10 ಅಥವಾ 11 ಗಂಟೆಗೆ, ಮಗುವನ್ನು ಎತ್ತದೆ, ಮಲಗಿದಲ್ಲೇ ಮಗುವಿಗೆ ಹಾಲುಣಿಸಬಹುದು. ಮಗುವು ತಾನಾಗಿಯೇ ಹಾಲು ಕುಡಿಯಲು ಪ್ರಾರಂಭಿಸುತ್ತದೆ. ಮಗುವನ್ನು ಎತ್ತುವಾಗ ಲೈಟ್ ಆನ್ ಮಾಡಬೇಡಿ. ಇದರಿಂದ ಮಗುವಿನ ನಿದ್ರೆ ಹಾಳಾಗುತ್ತೆ. ಅಷ್ಟೇ ಅಲ್ಲ ಅಗತ್ಯವಿಲ್ಲದಿದ್ದರೆ, ಡೈಪರ್ ಸಹ ಚೇಂಜ್ ಮಾಡಬೇಡಿ.
ಡ್ರೀಮ್ ಫೀಡ್ ಯಾವಾಗಲೂ ಯಶಸ್ವಿಯಾಗುತ್ತೆ ಎಂದು ಹೇಳಲು ಸಾಧ್ಯವಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಸ್ವಲ್ಪ ಸಮಯವನ್ನು ನೀಡಿ ಮತ್ತು ಮಗುವು ಅದಕ್ಕೆ ಒಗ್ಗಿಕೊಳ್ಳುವವರೆಗೆ ಡ್ರೀಮ್ ಫೀಡಿಂಗ್ ಮತ್ತೆ ಮತ್ತೆ ಪ್ರಯತ್ನಿಸುತ್ತಲೇ ಇರಿ. ಅನೇಕ ಬಾರಿ ಮಕ್ಕಳು ಡ್ರೀಮ್ ಫೀಡಿಂಗ್ (dream feeding) ಸಮಯದಲ್ಲಿ ಹಾಲು ಕುಡಿಯುತ್ತಾರೆ ಮತ್ತು ಬೆಳಿಗ್ಗೆಯವರೆಗೆ ಮಲಗುತ್ತಾರೆ.
ಕೆಲವು ಮಕ್ಕಳು ಡ್ರೀಮ್ ಫೀಡಿಂಗ್ ನಂತರವೂ ರಾತ್ರಿಯಲ್ಲಿ ಅನೇಕ ಬಾರಿ ಎಚ್ಚರಗೊಳ್ಳುತ್ತಾರೆ. ಅನೇಕ ಬಾರಿ ಡ್ರೀಮ್ ಫೀಡಿಂಗ್ ಆಹಾರದ ಸಮಯದಲ್ಲಿ ಎಚ್ಚರಗೊಳ್ಳುತ್ತಾರೆ ಮತ್ತು ನಂತರ ದೀರ್ಘಕಾಲ (healthy sleep)ಎಚ್ಚರವಾಗಿರುತ್ತಾರೆ. ಈ ವಿಧಾನದಿಂದ ಕೆಲವು ಮಕ್ಕಳನ್ನು ಮಾತ್ರ ನಿದ್ರೆ ಮಾಡಿಸಬಹುದು. ಕೆಲವೊಮ್ಮೆ ಹೀಗೆ ಮಾಡೋದರಿಂದ ಮಗುವಿಗೆ ಅನಾರೋಗ್ಯ ಸಹ ಉಂಟಾಗಬಹುದು. ಹಾಗಾಗಿ ವೈದ್ಯರ ಬಳಿ ಮಾಹಿತಿ ತಿಳಿದುಕೊಂಡರೆ ಉತ್ತಮ.
ಡ್ರೀಮ್ ಫೀಡಿಂಗ್ ಪ್ರಯೋಜನಗಳು ಇವು: ಇದು ಮಗುವನ್ನು ದೀರ್ಘಕಾಲ ಮಲಗುವಂತೆ ಮಾಡುತ್ತದೆ. ಕೆಲವೊಮ್ಮೆ ಡ್ರೀಮ್ ಫೀಡಿಂಗ್ ಫಲವಾಗಿ ಮಗು ರಾತ್ರಿ ಮಲಗಿದರೆ, ಮರುದಿನವೇ ಎಚ್ಚರವಾಗೋದು. ಇದರಿಂದ ಮಗುವಿಗೆ ಉತ್ತಮ ನಿದ್ರೆಯೂ ಸಿಗುತ್ತೆ. ಡ್ರೀಮ್ ಫೀಡಿಂಗ್ ತಾಯಿ ಮತ್ತು ಮಗು ಇಬ್ಬರೂ ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ.