ಗರ್ಭಾವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುವ ಹಾರ್ಮೋನುಗಳು
ಈಸ್ಟ್ರೊಜೆನ್ (Estrogen)
ಈಸ್ಟ್ರೊಜೆನ್ ಎಸ್ಟ್ರಾಡಿಯೋಲ್, ಎಸ್ಟ್ರೋನ್ ಮತ್ತು ಎಸ್ಟ್ರಿಯೋಲ್ ಸೇರಿದಂತೆ ಕೆಲವು ಹಾರ್ಮೋನುಗಳ ಗುಂಪಾಗಿದೆ. ಇದು ಗರ್ಭಾಶಯ, ಫೆಲೋಪಿಯನ್ ನಾಳಗಳು ಮತ್ತು ಯೋನಿಯಂತಹ ಸಂತಾನೋತ್ಪತ್ತಿ ಅಂಗಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಇಡೀ ಋತುಚಕ್ರದ ಸಮಯದಲ್ಲಿ, ಮಹಿಳೆಯ ಈಸ್ಟ್ರೊಜೆನ್ ಮಟ್ಟವು ಸ್ವಾಭಾವಿಕವಾಗಿ ಹೆಚ್ಚಾಗುತ್ತದೆ. ಈಸ್ಟ್ರೊಜೆನ್ ನ ಈ ಹೆಚ್ಚಳವು ಅಂಡಾಶಯಗಳಿಂದ ಅಂಡಾಣುಗಳ ಬೆಳವಣಿಗೆ ಮತ್ತು ಬಿಡುಗಡೆಗೆ ಅವಶ್ಯಕವಾಗಿದೆ. ಬಿಡುಗಡೆಯಾದ ನಂತರ, ಅಂಡಾಣು ವೀರ್ಯಾಣುವಿನ ಫಲೀಕರಣಕ್ಕೆ ಕಾರಣವಾಗುತ್ತೆ. ಇದಲ್ಲದೆ, ಋತುಚಕ್ರವನ್ನು ನಿಯಂತ್ರಿಸುವಲ್ಲಿ ಈಸ್ಟ್ರೊಜೆನ್ ಸಹ ಪಾತ್ರ ವಹಿಸುತ್ತದೆ.