ಈ ದಿನಗಳಲ್ಲಿ ಮಕ್ಕಳಿಂದ ಹಿಡಿದು, ವೃದ್ಧರವರೆಗೆ ಜನರು ತಮ್ಮ ತಮ್ಮ ಕೆಲಸ ಕಾರ್ಯಗಳಲ್ಲಿ ಎಷ್ಟೊಂದು ಬ್ಯುಸಿಯಾಗಿದ್ದಾರೆ ಅಂದರೆ, ಅವರಿಗೆ ತಮ್ಮ ಆರೋಗ್ಯವನ್ನು ಸರಿಯಾಗಿ ನೋಡಿಕೊಳ್ಳಲು ಸಹ ಸಮಯ ಇರೋದಿಲ್ಲ. ಹೆಚ್ಚುತ್ತಿರುವ ಕೆಲಸದ ಹೊರೆ ಮತ್ತು ಇತರ ಜವಾಬ್ದಾರಿಗಳಿಂದಾಗಿ, ಇತ್ತೀಚಿನ ದಿನಗಳಲ್ಲಿ ಜನರ ಜೀವನಶೈಲಿ (lifestyle) ಸಾಕಷ್ಟು ಬದಲಾಗಿದೆ. ಅದು ತಿನ್ನುವ ವಿಧಾನವಾಗಿರಲಿ ಅಥವಾ ಮಲಗುವ ಅಭ್ಯಾಸವಾಗಿರಲಿ, ನಿರಂತರ ಬದಲಾವಣೆಗಳಿಂದಾಗಿ, ಜನರು ಅನೇಕ ರೀತಿಯ ಸಮಸ್ಯೆಗಳಿಗೆ ಬಲಿಯಾಗುತ್ತಿದ್ದಾರೆ.
ದಿನವಿಡೀ ಕೆಲಸ ಮಾಡಿದ ನಂತರ, ತುಂಬಾನೆ ಆಯಾಸಗೊಂಡಿರೋದರಿಂದ ಜನರು ಹೆಚ್ಚಾಗಿ ಆಹಾರವನ್ನು ಸೇವಿಸಿದ ನಂತರ ನಿದ್ರೆ ಮಾಡ್ತಾರೆ. ಆದರೆ, ರಾತ್ರಿ ಊಟದ ನಂತರ ನೇರವಾಗಿ ಮಲಗುವುದು ಆರೋಗ್ಯಕ್ಕೆ ಹಾನಿಕಾರಕ (effect on health). ನಿದ್ರೆ ಮಾತ್ರವಲ್ಲ, ರಾತ್ರಿಯ ಊಟದ ನಂತರ ನೀವು ಮಾಡುವಂತಹ ಅನೇಕ ಅಭ್ಯಾಸಗಳು, ನಿಮ್ಮನ್ನು ಅನಾರೋಗ್ಯಕ್ಕೆ ದೂಡುತ್ತದೆ. ನೀವು ಸಹ ಈ ಯಾವುದೇ ಅಭ್ಯಾಸಗಳಿಗೆ ಬಲಿಯಾಗಿದ್ದರೆ, ಅದನ್ನು ತಕ್ಷಣ ಬದಲಾಯಿಸಿ.
ರಾತ್ರಿ ತಡವಾಗಿ ತಿನ್ನುವುದು (Late Night Eating): ಹೆಚ್ಚಿನ ಜನರು ತಮ್ಮ ಕೆಲಸ ಮುಗಿಸಿದ ನಂತರ ತುಂಬಾ ದಣಿದಿರುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಜನರು ಹೆಚ್ಚಾಗಿ ತಡವಾಗಿ ಊಟ ಮಾಡುತ್ತಾರೆ. ಅದರೆ ಈ ರೀತಿ, ರಾತ್ರಿ ತಡವಾಗಿ ತಿನ್ನುವುದು ತಪ್ಪು ಅಭ್ಯಾಸವಾಗಿದೆ. ರಾತ್ರಿ ತಡವಾಗಿ ಎದ್ದೇಳುವುದು ಮತ್ತು ತಡವಾಗಿ ಆಹಾರ ಸೇವಿಸುವುದು ದೇಹದಲ್ಲಿರುವ ವಿವಿಧ ಹಾರ್ಮೋನುಗಳಲ್ಲಿ ಬದಲಾವಣೆಗಳಿಗೆ ಕಾರಣವಾಗುತ್ತದೆ, ಇದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಈ ಕಾರಣದಿಂದಾಗಿ, ಜೀರ್ಣಕ್ರಿಯೆ ಹದಗೆಡಬಹುದು. ಅಲ್ಲದೆ, ನಿಮ್ಮ ಚಯಾಪಚಯ ಕ್ರಿಯೆಯು ನಿಧಾನವಾಗಬಹುದು, ಇದರಿಂದಾಗಿ ನೀವು ಬೊಜ್ಜಿನ ಸಮಸ್ಯೆಗೆ ಬಲಿಯಾಗಬಹುದು.
ಊಟ ಮಾಡಿದ ತಕ್ಷಣ ಮಲಗೋದು (Sleeping immediately after eating): ಅನೇಕ ಜನರು ಊಟ ಮಾಡಿದ ತಕ್ಷಣ ಮಲಗುವ ಅಭ್ಯಾಸವನ್ನು ಹೊಂದಿದ್ದಾರೆ. ಆದರೆ, ನಿಮ್ಮ ಈ ಸ್ಥಿತಿಯು ನಿಮ್ಮ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ತಿಂದ ತಕ್ಷಣ ಮಲಗೋದರಿಂದ ಆಹಾರವನ್ನು ಜೀರ್ಣಿಸಿಕೊಳ್ಳಲು ಅಗತ್ಯವಾದ ಕಿಣ್ವಗಳನ್ನು ಬಿಡುಗಡೆ ಮಾಡುವುದಿಲ್ಲ, ಇದು ಅನೇಕ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಊಟ ಮಾಡಿದ ತಕ್ಷಣ ಮಲಗುವ ಅಭ್ಯಾಸವನ್ನು ಬದಲಾಯಿಸುವುದು ಉತ್ತಮ. ರಾತ್ರಿ ಆಹಾರವನ್ನು ಸೇವಿಸಿದ ನಂತರ ಸುಮಾರು ಒಂದು ಗಂಟೆಯವರೆಗೆ ಮಲಗದಿರಲು ಪ್ರಯತ್ನಿಸಿ.
ಊಟದ ನಂತರ ಮೊಬೈಲ್ ಬಳಸೋದು (screen time after food): ಇತ್ತೀಚಿನ ದಿನಗಳಲ್ಲಿ ಮೊಬೈಲ್ ಗಳು, ಲ್ಯಾಪ್ ಟಾಪ್ ಗಳು ಇತ್ಯಾದಿಗಳು ನಮ್ಮ ಜೀವನದ ಒಂದು ಭಾಗವಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಜನರು ಹೆಚ್ಚಾಗಿ ತಮ್ಮ ಹೆಚ್ಚಿನ ಸಮಯವನ್ನು ಸ್ಕ್ರೀನ್ ಜೊತೆಗೆ ಕಳೆಯುತ್ತಾರೆ, ಆದರೆ ಆಹಾರವನ್ನು ಸೇವಿಸಿದ ತಕ್ಷಣ ಮೊಬೈಲ್ ನೋಡುವವರಲ್ಲಿ ನೀವೂ ಒಬ್ಬರಾಗಿದ್ದರೆ, ಜಾಗರೂಕರಾಗಿರಿ. ಮಲಗುವಾಗ ಸ್ಕ್ರೀನ್ ನೋಡುವುದು ಜೈವಿಕ ಗಡಿಯಾರದಲ್ಲಿ ತೊಂದರೆಗಳನ್ನು ಉಂಟುಮಾಡುತ್ತದೆ. ಈ ಕಾರಣದಿಂದಾಗಿ, ಕಾರ್ಟಿಸೋಲ್ ಹಾರ್ಮೋನ್ ಬಿಡುಗಡೆಯಾಗುತ್ತದೆ, ಇದು ಒತ್ತಡ ಮತ್ತು ಖಿನ್ನತೆಯ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಇದು ನಿದ್ರೆಯ ಚಕ್ರವನ್ನು ಸಹ ಹಾಳು ಮಾಡುತ್ತದೆ.
ಊಟದ ನಂತರ ನಡೆಯದಿರುವುದು (Not walking after food): ಊಟದ ನಂತರ ಸ್ವಲ್ಪ ಸಮಯ ನಡೆಯುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ, ಆದರೆ ನೀವು ಹಾಗೆ ಮಾಡುವ ಬದಲು ಊಟ ಮಾಡಿದ ತಕ್ಷಣ ನಿದ್ರೆಗೆ ಜಾರಿದರೆ, ಅದು ತಪ್ಪು. ನೀವು ಸದೃಢ ಮತ್ತು ಆರೋಗ್ಯವಾಗಿರಲು ಬಯಸಿದರೆ, ರಾತ್ರಿ ಊಟದ ನಂತರ ಪ್ರತಿದಿನ ಸುಮಾರು 10 ನಿಮಿಷಗಳ ಕಾಲ ನಡೆಯುವ ಅಭ್ಯಾಸವನ್ನು ಮಾಡಿಕೊಳ್ಳಿ.
ಧೂಮಪಾನ ಮತ್ತು ಮದ್ಯಪಾನ (smoking and drinking): ಸಿಗರೇಟ್ ಮತ್ತು ಆಲ್ಕೋಹಾಲ್ ಎಲ್ಲಾ ರೀತಿಯಲ್ಲಿ ಆರೋಗ್ಯಕ್ಕೆ ಹಾನಿ ಮಾಡುತ್ತದೆ, ಆದರೆ ನೀವು ರಾತ್ರಿ ತಿಂದ ನಂತರ ಅವುಗಳನ್ನು ಕುಡಿದರೆ, ತಕ್ಷಣ ಈ ಅಭ್ಯಾಸವನ್ನು ಬದಲಾಯಿಸಿ. ಇದನ್ನು ಮಾಡುವುದರಿಂದ, ನೀವು ಅನೇಕ ರೀತಿಯ ರೋಗಗಳಿಗೆ ಬಲಿಯಾಗಬಹುದು. ರಾತ್ರಿ ಊಟದ ನಂತರ ಸಿಗರೇಟ್ ಮತ್ತು ಆಲ್ಕೋಹಾಲ್ ಕುಡಿಯುವುದರಿಂದ ಆಸಿಡ್ ರಿಫ್ಲಕ್ಸ್, ಹಾರ್ಟ್ ಬರ್ನಿಂಗ್, ಹೊಟ್ಟೆಯಲ್ಲಿ ಅಜೀರ್ಣದಂತಹ ಸಮಸ್ಯೆಗಳು ಉಂಟಾಗಬಹುದು. ಇದು ಮಾತ್ರವಲ್ಲ, ಇದನ್ನು ದೀರ್ಘಕಾಲದವರೆಗೆ ಮಾಡುವುದರಿಂದ ಅನೇಕ ಗಂಭೀರ ಕಾಯಿಲೆಗಳು ಸಹ ಉಂಟಾಗಬಹುದು.