ತುಂಬಾ ತೆಳ್ಳಗಿನ ವ್ಯಕ್ತಿ ಸಹ ಕೇವಲ 15 ದಿನಗಳಲ್ಲಿ ದಪ್ಪ ಆಗ್ಬಹುದು… ಹೇಗೆ ನೋಡಿ

First Published | Nov 16, 2022, 1:39 PM IST

ಸ್ಥೂಲಕಾಯದ ಜನರು ಜಿಮ್ ನಲ್ಲಿ ವ್ಯಾಯಾಮ ಮಾಡುವ ಮೂಲಕ ತೂಕ ಕಳೆದುಕೊಳ್ಳುತ್ತಾರೆ, ಆದರೆ ತೆಳ್ಳಗಿನ ಜನರು ದಪ್ಪಗಾಗಲು ಸಾಕಷ್ಟು ಹೆಣಗಾಡಬೇಕಾಗುತ್ತೆ. ಆದರೂ ಕೂಡ ಆರೋಗ್ಯಕರ ರೀತೀಲಿ ದಪ್ಪಗಾಗೋದು ಸ್ವಲ್ಪ ಕಷ್ಟವೇ. ಹಾಗಾಗಿ, ತೂಕವನ್ನು ತ್ವರಿತವಾಗಿ ಹೆಚ್ಚಿಸುವಂತಹ ವಿಧಾನಗಳನ್ನು ಇಲ್ಲಿ ಹೇಳಲಾಗಿದೆ.ಈ ಟಿಪ್ಸ್ಗಳನ್ನು ನೀವು ಅಳವಡಿಸಿಕೊಂಡು ದಪ್ಪ ಆಗ್ಬಹುದು

ಯಾವ ಮನುಷ್ಯನೂ ಪರ್ಫೆಕ್ಟ್ ಅಲ್ಲ. ದೈಹಿಕವಾಗಿ, ಕೆಲವರು ದಪ್ಪಗಿರ್ತ್ತಾರೆ, ಇನ್ನೂ ಕೆಲವರು ತುಂಬಾ ತೆಳ್ಳಗಿರ್ತ್ತಾರೆ(Thin).ಪರ್ಫೆಕ್ಟ್ ಬಾಡಿ ಶೇಪ್ ಪಡೆಯಲು ಏನು ಮಾಡಬೇಕೆಂದು ಯಾವ ವ್ಯಕ್ತಿಗೆ ತಿಳಿದಿರೋದಿಲ್ಲ. ತೆಳ್ಳಗಿನ ಜನರು ಅನಾರೋಗ್ಯಕರ ರೀತಿಯಲ್ಲಿ ತಮ್ಮ ತೂಕವನ್ನು ಹೆಚ್ಚಿಸಲು ಪ್ರಯತ್ನಿಸುತ್ತಾರೆ, ಇದು ಅವರಿಗೆ ಹೆಚ್ಚು ಹಾನಿಕಾರಕವಾಗಬಹುದು. ಇದರಿಂದಾಗಿ ಅವರ ದೇಹದಲ್ಲಿ ಹೆಚ್ಚಿನ ದೌರ್ಬಲ್ಯ ಉಂಟಾಗಬಹುದು, ಅವರ ಸ್ಟ್ಯಾಮಿನ  ಕಡಿಮೆ ಮಾಡಬಹುದು ಮತ್ತು ಇದು ಅವರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಹಾಗಾಗಿ ಇಲ್ಲಿ ಆರೋಗ್ಯಯುತ ಮಾರ್ಗಗಳ ಬಗ್ಗೆ ಹೇಳಲಾಗಿದೆ, ಇವುಗಳ ಮೂಲಕ ನೀವು ನಿಮ್ಮ ತೂಕವನ್ನು ವೇಗವಾಗಿ ಹೆಚ್ಚಿಸಬಹುದು, ಅದೂ ಸಹ ಯಾವುದೇ ಹಾನಿಯಿಲ್ಲದೆ...

ಬೆಳಿಗ್ಗೆ ಪ್ರಾರಂಭಿಸೋದು ಹೇಗೆ? 
ತೆಳ್ಳಗಿನ ವ್ಯಕ್ತಿ ಪ್ರತಿದಿನ ಬೆಳಿಗ್ಗೆ ಬ್ರೇಕ್ ಫಾಸ್ಟ್ ಗೆ ಒಂದು ಬಟ್ಟಲು ಸಾಬುದಾನ (Sago) ಖೀರ್ ಸೇವಿಸಿದರೆ, ಅವರ ತೂಕವು ವೇಗವಾಗಿ ಹೆಚ್ಚಾಗುತ್ತೆ. ತೂಕ ಹೆಚ್ಚಿಸಲು ಇದು ತುಂಬಾ ಪರಿಣಾಮಕಾರಿ ಮಾರ್ಗವಾಗಿದೆ, ಆದರೆ ನೀವು ಸಕ್ಕರೆಯನ್ನು ತಪ್ಪಿಸಲು ಬಯಸಿದರೆ ಬೆಲ್ಲ ಬಳಸಬಹುದು. ಇದು ಆರೋಗ್ಯಕರವಾಗಿದೆ.
 

Tap to resize

ಬೆಳಗಿನ ಉಪಾಹಾರದಲ್ಲಿ ಇವುಗಳನ್ನು ಸೇರಿಸಿ 
ನಿಮ್ಮ ತೆಳ್ಳಗಿನ ದೇಹದಿಂದ ನೀವು ತೊಂದರೆಗೀಡಾಗಿದ್ದರೆ ಮತ್ತು ವೇಗವಾಗಿ ತೂಕ ಹೆಚ್ಚಿಸಲು ಬಯಸಿದರೆ, ಆರೋಗ್ಯಕರ ಉಪಾಹಾರ ಸೇವಿಸಬೇಕು. ಅದಕ್ಕಾಗಿ ಬ್ರೇಕ್ ಫಾಸ್ಟ್ ಗೆ ಬೇಯಿಸಿದ ಆಲೂಗಡ್ಡೆ (Potato), 4 ಒಣದ್ರಾಕ್ಷಿ, 4 ಬಾದಾಮಿ, 4 ಗೋಡಂಬಿ, ಕೆಲವು ಮಖಾನಾ ಮತ್ತು ಎರಡರಿಂದ ನಾಲ್ಕು ಮೊಟ್ಟೆ ಸೇರಿಸಿ. ಈ ಆರೋಗ್ಯಕರ ಉಪಾಹಾರ ತ್ವರಿತ ತೂಕ ಹೆಚ್ಚಳಕ್ಕೆ ಸಹಾಯ ಮಾಡುತ್ತೆ.

ಹಾಲು ಮತ್ತು ಬಾಳೆಹಣ್ಣು ತಿನ್ನಿ 
ಹಾಲು ಮತ್ತು ಬಾಳೆಹಣ್ಣು ತ್ವರಿತ ತೂಕ ಹೆಚ್ಚಳಕ್ಕೆ ಸಹಾಯ ಮಾಡುತ್ತೆ. ಇದಕ್ಕಾಗಿ, ಬಾಳೆಹಣ್ಣಿನ ಶೇಕ್ (Banana Shake) ತಯಾರಿಸಬಹುದು ಮತ್ತು ಅದನ್ನು ಕುಡಿಯಬಹುದು. ಆದರೆ ಅದರಿಂದ ನಿಮಗೆ ಶೀತದ ಸಮಸ್ಯೆ ಉಂಟಾದ್ರೆ, ಅದಕ್ಕಾಗಿ ಒಂದು ಲೋಟ ಬೆಚ್ಚಗಿನ ಹಾಲು ಕುಡಿದ ನಂತರ 5 ರಿಂದ 10 ನಿಮಿಷಗಳ ಗ್ಯಾಪ್ ಬಿಟ್ಟು ಎರಡರಿಂದ ಮೂರು ಬಾಳೆಹಣ್ಣನ್ನು ಸೇವಿಸಿ. 

ಪ್ರೋಟೀನ್ ಭರಿತ ಆಹಾರ ತಿನ್ನಿ 
ತೂಕ ಹೆಚ್ಚಳಕ್ಕೆ ಪ್ರೋಟೀನ್ ಅತ್ಯಗತ್ಯ. ನೀವು ಮಾಂಸಾಹಾರಿಯಾಗಿದ್ದಲ್ಲಿ, ರೆಡ್ ಮೀಟ್ (Red meat) ನಿಮ್ಮ ತೂಕ ಹೆಚ್ಚಿಸಲು ಸಹಾಯ ಮಾಡುತ್ತೆ. ಹಾಗೇ, ಸಾಲ್ಮನ್ ಮೀನು ಕ್ಯಾಲೋರಿ ಮತ್ತು ಆರೋಗ್ಯಕರ ಕೊಬ್ಬುಗಳಿಂದ ಸಮೃದ್ಧವಾಗಿದೆ, ಇದು ತೂಕ ಹೆಚ್ಚಿಸಲು ಸಹಾಯ ಮಾಡುತ್ತೆ.

ನೀವು ಸಸ್ಯಾಹಾರಿಯಾಗಿದ್ದರೆ, ಮೊಸರು (Curd) ಹೆಚ್ಚಿನ ಪ್ರಮಾಣದ ಪ್ರೋಟೀನ್ ಹೊಂದಿದೆ. ಇದನ್ನು ನಿಯಮಿತವಾಗಿ ಸೇವಿಸಬಹುದು. ಅಲ್ಲದೆ ಕಾಳುಗಳು ಪ್ರೋಟೀನ್ ಮತ್ತು ಸ್ಟಾರ್ಚ್ ನ ಉತ್ತಮ ಮೂಲವಾಗಿದೆ. ಆಹಾರದಲ್ಲಿ ಕಡಲೆ, ರಾಜ್ಮಾ, ಬೇಳೆಕಾಳುಗಳನ್ನು ನಿಯಮಿತವಾಗಿ ಸೇರಿಸಬೇಕು.

ಡೇಟ್ಸ್ ಹಾಲು (Dates milk)
ತೆಳ್ಳಗಿನ ವ್ಯಕ್ತಿಯು ತನ್ನ ತೂಕವನ್ನು ಹೆಚ್ಚಿಸಲು ಬಯಸಿದರೆ, ರಾತ್ರಿಯಲ್ಲಿ ಸಾಮಾನ್ಯ ಹಾಲಿನ ಬದಲು 5-6 ಡೇಟ್ಸ್ಗಳನ್ನು ಹಾಲಿನಲ್ಲಿ ಕುದಿಸಿ ಮತ್ತು ಅದನ್ನು ಸೇವಿಸಿ. ಇದು ವೇಗವಾಗಿ ತೂಕ ಹೆಚ್ಚಳಕ್ಕೆ ಕಾರಣವಾಗುತ್ತೆ. ಖರ್ಜೂರವನ್ನು ಪ್ರತಿದಿನ ಹಾಗೆ ತಿಂದರೂ ಸಹ ತೂಕ ಹೆಚ್ಚಿಸಲು ಸಹಾಯ ಮಾಡುತ್ತೆ.

Latest Videos

click me!