ರೋಗನಿರೋಧಕ ಶಕ್ತಿ:
ನಡಿಗೆ ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಸೋಂಕಿನಿಂದ ರಕ್ಷಿಸುತ್ತದೆ. ಋತುಮಾನದ ಸಮಯದಲ್ಲಿ ಬರುವ ಶೀತ, ಜ್ವರ ಮುಂತಾದವುಗಳಿಂದ ನಡಿಗೆ ನಿಮ್ಮನ್ನು ರಕ್ಷಿಸುತ್ತದೆ. ಸಾವಿರಕ್ಕೂ ಹೆಚ್ಚು ಜನರ ಮೇಲೆ ನಡೆಸಿದ ಅಧ್ಯಯನದಲ್ಲಿ ವಾರಕ್ಕೆ ಕನಿಷ್ಠ ಐದು ದಿನಗಳು, ಪ್ರತಿದಿನ ಕನಿಷ್ಠ 20 ನಿಮಿಷ ನಡೆಯುವವರು ವಾರಕ್ಕೊಮ್ಮೆ ಅಥವಾ ಅದಕ್ಕಿಂತ ಕಡಿಮೆ ವ್ಯಾಯಾಮ ಮಾಡುವವರಿಗಿಂತ ಶೇ.43 ರಷ್ಟು ಕಡಿಮೆ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಅವರ ರೋಗನಿರೋಧಕ ಶಕ್ತಿ ಬಲವಾಗಿದೆ ಎಂಬುದಕ್ಕೆ ಈ ಅಧ್ಯಯನದ ಫಲಿತಾಂಶಗಳೇ ಸಾಕ್ಷಿ. ಅವರಿಗೆ ಯಾವುದೇ ರೋಗಗಳು ಬಂದರೂ ಅವು ಕಡಿಮೆ ಅವಧಿಗೆ ಮಾತ್ರ ಪರಿಣಾಮ ಬೀರಿವೆ. ಅದರಿಂದ ಅವರು ಬೇಗನೆ ಚೇತರಿಸಿಕೊಂಡಿದ್ದಾರೆ.
ಆರೋಗ್ಯಕರ ಜೀವನಕ್ಕಾಗಿ ಪ್ರತಿದಿನ ನಡೆಯುವ ಅಭ್ಯಾಸ ಮಾಡಿಕೊಳ್ಳುವುದು ಒಳ್ಳೆಯದು. ಇಂದಿನಿಂದಲೇ ಪ್ರಾರಂಭಿಸಿ.