Fat Burning Vegetables: ಹೊಟ್ಟೆಯ ಕೊಬ್ಬು ಇಳಿಸೋ ತಲೆ ಬಿಸಿ ಬೇಡ… ಈ ತರಕಾರಿ ತಿನ್ನಿ ಸಾಕು

Published : Jun 09, 2025, 05:07 PM IST

ನೀವು ಕೂಡ ಹೊಟ್ಟೆಯ ಕೊಬ್ಬನ್ನು ನಿವಾರಿಸಿಕೊಳ್ಳಲು ಏನೇನೊ ವಿಧಾನ ಟ್ರೈ ಮಾಡ್ತೀರಾ? ಹಾಗಿದ್ರೆ ಈ ತರಕಾರಿ ತಿನ್ನಿ, ಹೆಚ್ಚು ಕಷ್ಟ ಇಲ್ಲದೇ ನ್ಯಾಚುರಲ್ ಆಗಿ ಸೊಂಟ ಸಣ್ಣದಾಗುತ್ತೆ.

PREV
17

ಹೊಟ್ಟೆಯ ಕೊಬ್ಬಿನಿಂದಾಗಿ  (belly fat) ಯಾವುದೇ ಬಟ್ಟೆಯನ್ನು ಧರಿಸಿದ್ರೂ ಕೆಟ್ಟದಾಗಿ ಕಾಣಿಸುತ್ತೆ ಎಂದು ಹಲವು ಜನ ದೂರು ನೀಡುತ್ತಾರೆ. ನೀವು ಕೂಡ ಹೊಟ್ಟೆಯ ಕೊಬ್ಬಿನಿಂದ ತೊಂದರೆಗೀಡಾಗಿದ್ದು, ಸಮಸ್ಯೆ ನಿವಾರಣೆಗೆ ಎಲ್ಲಾ ರೀತಿಯ ಕಸರತ್ತು ಮಾಡ್ತಿದ್ದೀರಾ? ಹಾಗಿದ್ರೆ ಈ ತರಕಾರಿಯನ್ನು ನೀವು ದಿನನಿತ್ಯ ಸೇವನೆ ಮಾಡಬೇಕು.

27

ಅಂದ ಹಾಗೇ ಯಾವ ತರಕಾರಿ ಸಹ ನೇರವಾಗಿ ಕೊಬ್ಬನ್ನು ನಿವಾರಣೆ ಮಾಡಲು ನೆರವಾಗೋದಿಲ್ಲ. ಇದರ ಜೊತೆಗೆ ಕ್ಯಾಲರಿಯ ಕಡಿಮೆ ಸೇವನೆ ಹಾಗೂ ನಿಮ್ಮ ಒಟ್ಟಾರೆ ಜೀವನ ಶೈಲಿ (lifestyle) ಕೂಡ ಮುಖ್ಯವಾಗಿದೆ. ಆದರೆ ಕೆಲವು ತರಕಾರಿಗಳಲ್ಲಿ ಕ್ಯಾಲರಿ ಪ್ರಮಾಣ ಕಡಿಮೆ ಇದ್ದು, ಅವು ತೂಕ ಇಳಿಕೆ ಮಾಡಲು ಸಹಾಯ ಮಾಡುತ್ತೆ. ಇವುಗಳಲ್ಲಿ ಫೈಬರ್ ಮತ್ತು ನ್ಯೂಟ್ರಿಯೆಂಟ್ಸ್ ಹೆಚ್ಚಾಗಿತ್ತು, ದಿನವಿಡೀ ಹೊಟ್ಟೆ ತುಂಬಿದಂತಿರಲು ಸಹಾಯ ಮಾಡುತ್ತೆ.

37

ಹಸಿರು ಎಲೆ ತರಕಾರಿಗಳು (green leafy vegetables) : ಪಾಲಕ್, ಮೆಂತೆ ಸೊಪ್ಪು, ಬಸಳೆ ಹೀಗೆ ಬೇರೆ ಬೇರೆ ವಿಧದ ಸೊಪ್ಪುಗಳನ್ನು ಸೇವಿಸುವ ಮೂಲಕ ನೀವು ಬೆಲ್ಲಿ ಫ್ಯಾಟ್ ಇಳಿಸಬಹುದು. ಇದರಲ್ಲಿ ಕಡಿಮೆ ಕ್ಯಾಲರಿ ಇದೆ, ಹೆಚ್ಚಿನ ಫೈಬರ್ ಇದೆ. ಇದರಲ್ಲಿ ವಿಟಮಿನ್ ಎ, ಸಿ ಮತ್ತು ಕೆ ಇದೆ. ಜೀರ್ಣಕ್ರಿಯೆಗೆ ಉತ್ತಮವಾಗಿದೆ.

47

ಬ್ರೋಕೊಲಿ, ಕಾಲಿಫ್ಲವರ್, ಕ್ಯಾಬೇಜ್ ಮತ್ತು ಮೊಳಕೆ ಬಂದ ಕಾಳುಗಳನ್ನು ಸೇವಿಸೋದು ಸಹ ಉತ್ತಮ. ಇವುಗಳಲ್ಲಿ ನೀರಿನ ಅಂಶ ಹೆಚ್ಚಾಗಿದ್ದು, ಫೈಬರ್ ಕೂಡ ಹೆಚ್ಚಾಗಿದೆ. ಇದನ್ನು ಸೇವಿಸಿದ್ರೆ ಮೆಟಬಾಲಿಸಂಗೂ ಉತ್ತಮ, ಹೊಟ್ಟೆ ತುಂಬಿದಂತೆ ಕೂಡ ಇರುತ್ತೆ.

57

ಸೌತೆಕಾಯಿ (Cucumber) : ಇದರಲ್ಲಿ ನೀರಿನ ಅಂಶ ಹೆಚ್ಚಾಗಿದೆ. ಇದರಲ್ಲಿ ಕ್ಯಾಲರಿ ಕೂಡ ಕಡಿಮೆ ಇತ್ತು. ಇದನ್ನು ತಿನ್ನೋದ್ರಿಂದ ಹೈಡ್ರೇಟ್ ಆಗಿರುತ್ತೆ. ಇದರಿಂದಾ ಹೊಟ್ಟೆ ಕೂಡ ಫುಲ್ ಆಗಿರುತ್ತೆ.

67

ಬೇಲ್ ಪೆಪ್ಪರ್ (Bell Pepper) : ಇದರಲ್ಲಿ ಕ್ಯಾಲರಿ ಕಡಿಮೆ ಇದೆ, ಆದರೆ ಫೈಬರ್ ಜಾಸ್ತಿ ಇದೆ. ಇದು ಮೆಟಬಾಲಿಸಂ ನ್ನು ಕೂಡ ಹೆಚ್ಚಿಸುತ್ತೆ. ಬೇಗನೆ ಹೊಟ್ಟೆಯ ಕೊಬ್ಬನ್ನು ನೀವು ನಿವಾರಿಸಬಹುದು.

77

ಮಶ್ರೂಮ್ (Mushroom) : ಇದರಲ್ಲೂ ಕೂಡ ಕ್ಯಾಲರಿ ಕಡಿಮೆ ಇದೆ, ಆದರೆ ಫೈಬರ್ ಅಧಿಕವಾಗಿದೆ. ಇದನ್ನು ತಿನ್ನೋದ್ರಿಂದ ಹೊಟ್ಟೆ ಫುಲ್ ಆಗಿರುತ್ತೆ, ಹಾಗಾಗಿ ಬೇಗನೆ ಹೊಟ್ಟೆಯ ಕೊಬ್ಬನ್ನು ಕರಗಿಸೋದಕ್ಕೂ ಇದು ಸಹಾಯ ಮಾಡುತ್ತೆ.

Read more Photos on
click me!

Recommended Stories